Dheemahi Yakshagana Kalakendra

Dheemahi Yakshagana Kalakendra Dheemahi Yakshagana Kalakendra Sirsi Trust (R) , based in Sirsi, Karnataka, is a perpetual Yakshagana learning center led by young artists.

Open to all ages, it promotes the art through innovative yet tradition-respecting methods.

ದಿನಾಂಕ 08/8/2026, ಶನಿವಾರದಂದು ಕಡಬಾಳದ ಶ್ರೀ‌ ಕದಂಬೇಶ್ವರ ದೇವಸ್ಥಾನದಲ್ಲಿ ನಡೆದ (ಏಕಾದಶೀ ತಾಳಮದ್ದಲೆ 02) ಉರಗಾಧ್ವರ ತಾಳಮದ್ದಲೆಯ ಕೆಲವು ಭ...
10/08/2026

ದಿನಾಂಕ 08/8/2026, ಶನಿವಾರದಂದು ಕಡಬಾಳದ ಶ್ರೀ‌ ಕದಂಬೇಶ್ವರ ದೇವಸ್ಥಾನದಲ್ಲಿ ನಡೆದ (ಏಕಾದಶೀ ತಾಳಮದ್ದಲೆ 02) ಉರಗಾಧ್ವರ ತಾಳಮದ್ದಲೆಯ ಕೆಲವು ಭಾವಚಿತ್ರಗಳು ✨


"ಏಕಾದಶೀ ತಾಳಮದ್ದಲೆ ಸರಣಿ 2026"ಯಕ್ಷಗಾನದ ಆಳವಾದ ಕಥಾ-ವಿಮರ್ಶೆ, ಪಾತ್ರಗಳ ಮನೋವಿಶ್ಲೇಷಣೆ ಹಾಗೂ ಧರ್ಮ–ಅಧರ್ಮಗಳ ತಾತ್ವಿಕ ಚಿಂತನೆಗಳನ್ನು ಜನರಿ...
05/08/2026

"ಏಕಾದಶೀ ತಾಳಮದ್ದಲೆ ಸರಣಿ 2026"

ಯಕ್ಷಗಾನದ ಆಳವಾದ ಕಥಾ-ವಿಮರ್ಶೆ, ಪಾತ್ರಗಳ ಮನೋವಿಶ್ಲೇಷಣೆ ಹಾಗೂ ಧರ್ಮ–ಅಧರ್ಮಗಳ ತಾತ್ವಿಕ ಚಿಂತನೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಧೀಮಹಿ ಯಕ್ಷಗಾನ ಕಲಾಕೇಂದ್ರ ಶಿರಸಿ ಟ್ರಸ್ಟ್ (ರಿ) ವತಿಯಿಂದ ಆಯೋಜಿಸಲಾಗಿರುವ ತಾಳಮದ್ದಲೆ‌ ಸರಣಿ!

ಈ ಸರಣಿಯಲ್ಲಿ ರಾಮಾಯಣ, ಮಹಾಭಾರತದ ಪ್ರಸಂಗಗಳನ್ನು ಆಯ್ಕೆ ಮಾಡಿ, ಅನುಭವೀ ಅರ್ಥಧಾರಿಗಳು ಹಾಗೂ ಪ್ರತಿಭಾವಂತ ಕಲಾವಿದರೊಂದಿಗೆ ತಾಳಮದ್ದಲೆ ನಡೆಸಲಾಗುತ್ತದೆ. ಇದು ಕೇವಲ ಮನರಂಜನೆಯ ಕಾರ್ಯಕ್ರಮವಲ್ಲ; ಅಧ್ಯಯನ, ಸಂವಾದ, ಸಂಸ್ಕಾರ ಮತ್ತು ಚಿಂತನೆಗೆ ವೇದಿಕೆಯಾಗಿದೆ.

ಯಕ್ಷಗಾನದ ಜ್ಞಾನಪರ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವುದು, ಹೊಸ ಕಲಾವಿದರಿಗೆ ಕಲಿಕೆಯ ಅವಕಾಶ ಕಲ್ಪಿಸುವುದು ಹಾಗೂ ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ಸಮಾಜದಲ್ಲಿ ಆಸಕ್ತಿ ಬೆಳೆಸುವುದು ಈ ಸರಣಿಯ ಪ್ರಮುಖ ಉದ್ದೇಶವಾಗಿದೆ.

ಆಸಕ್ತರಿಗೆ ಸ್ವಾಗತ 💐💐

ಏಕಾದಶೀ ತಾಳಮದ್ದಲೆ ಸರಣಿ 2026(ತಾಳಮದ್ದಲೆ 02)"ಉರಗಾಧ್ವರ" (ಹೊಸ್ತೋಟ ಮಂಜುನಾಥ ಭಾಗವತ ವಿರಚಿತ)ಕದ್ರು–ವಿನತೆಯ ವಾಗ್ವಾದ ಮತ್ತು ನಾಗರಿಗೆ ಬಿದ್...
01/08/2026

ಏಕಾದಶೀ ತಾಳಮದ್ದಲೆ ಸರಣಿ 2026
(ತಾಳಮದ್ದಲೆ 02)
"ಉರಗಾಧ್ವರ" (ಹೊಸ್ತೋಟ ಮಂಜುನಾಥ ಭಾಗವತ ವಿರಚಿತ)
ಕದ್ರು–ವಿನತೆಯ ವಾಗ್ವಾದ ಮತ್ತು ನಾಗರಿಗೆ ಬಿದ್ದ ಶಾಪದಿಂದ ಆರಂಭವಾಗಿ, ಪರೀಕ್ಷಿತನ ಮರಣದ ಕಾರಣವನ್ನು ಜನಮೇಜಯನಿಗೆ ತಿಳಿಸುವ ಉತ್ತಂಕನ ಪ್ರೇರಣೆಯಿಂದ ಸರ್ಪಯಾಗ ನಡೆಯುತ್ತದೆ. ತಕ್ಷಕನು ದೇವೇಂದ್ರನ ಆಶ್ರಯ ಪಡೆದರೂ ಯಾಗಾಗ್ನಿಯ ಸೆಳೆತದಿಂದ ತಪ್ಪಿಸಿಕೊಳ್ಳಲಾರನು. ಅಂತಿಮವಾಗಿ ಆಸ್ತೀಕನ ಪ್ರಜ್ಞೆ ಮತ್ತು ಧರ್ಮಬುದ್ಧಿಯಿಂದ ಸರ್ಪಯಾಗ ನಿಲ್ಲುತ್ತದೆ. ಇದೇ ಸಂದರ್ಭದಲ್ಲಿ ವೈಶಂಪಾಯನರ ಬಾಯಿಂದ ಮಹಾಭಾರತದ ಅಮರಗಾಥೆ ಆರಂಭವಾಗುತ್ತದೆ.

ಏಕಾದಶೀ ತಾಳಮದ್ದಲೆ‌ ಸರಣಿ 2026ಮೊದಲ ತಾಳಮದ್ದಲೆ "ಪುತ್ರಕಾಮೇಷ್ಟಿ" ಪ್ರಸಂಗದ ಕೆಲವು ಭಾವಚಿತ್ರಗಳು 💐ಯಕ್ಷಗಾನದ ಅಧ್ಯಯನ, ಅಭ್ಯಾಸ ಮತ್ತು ಚಿಂತನ...
27/07/2026

ಏಕಾದಶೀ ತಾಳಮದ್ದಲೆ‌ ಸರಣಿ 2026
ಮೊದಲ ತಾಳಮದ್ದಲೆ "ಪುತ್ರಕಾಮೇಷ್ಟಿ" ಪ್ರಸಂಗದ ಕೆಲವು ಭಾವಚಿತ್ರಗಳು 💐

ಯಕ್ಷಗಾನದ ಅಧ್ಯಯನ, ಅಭ್ಯಾಸ ಮತ್ತು ಚಿಂತನೆಯನ್ನು ಉತ್ತೇಜಿಸುವ ಉದ್ದೇಶದಿಂದ, ಧೀಮಹಿ, ತನ್ನ ಏಕಾದಶಿ ತಾಳಮದ್ದಲೆ ಸರಣಿಯನ್ನು ಆರಂಭಿಸುತ್ತಿದೆ.

📅 ಪ್ರಾರಂಭ: 25 ಜುಲೈ 2026 (ಏಕಾದಶಿ)
📍 ಸ್ಥಳ: ಕದಂಬೇಶ್ವರ ದೇವಸ್ಥಾನ, ಕದಬಾಳ

ಈ ಸರಣಿಯಲ್ಲಿ ರಾಮಾಯಣ ಹಾಗೂ ಮಹಾಭಾರತದ ಪ್ರಸಂಗಗಳ ತಾಳಮದ್ದಲೆ ಪ್ರದರ್ಶನ ನಡೆಯಲಿದೆ. ಯುವ ಕಲಾವಿದರಿಗೆ ರಂಗಾನುಭವ, ಕಲಾಭಿಮಾನಿಗಳಿಗೆ ಚಿಂತನಾತ್ಮಕ ಅನುಭವ ಮತ್ತು ಯಕ್ಷಗಾನದ ಸಾಹಿತ್ಯ–ಸಂವಾದ ಪರಂಪರೆಯನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಎಲ್ಲಾ ಯಕ್ಷಗಾನಾಭಿಮಾನಿಗಳಿಗೆ ಆತ್ಮೀಯ ಸ್ವಾಗತ. 🙏

ಏಕಾದಶೀ ತಾಳಮದ್ದಲೆ ಸರಣಿ 2026 ✨ತಾಳಮದ್ದಲೆ 01 - "ಪುತ್ರಕಾಮೇಷ್ಟಿ" (ಹೊಸ್ತೋಟ ಮಂಜುನಾಥ ಭಾಗವತ ವಿರಚಿತ)🙏💐 ಆಸಕ್ತರಿಗೆ ಸ್ವಾಗತ 💐🙏
21/07/2026

ಏಕಾದಶೀ ತಾಳಮದ್ದಲೆ ಸರಣಿ 2026 ✨
ತಾಳಮದ್ದಲೆ 01 - "ಪುತ್ರಕಾಮೇಷ್ಟಿ" (ಹೊಸ್ತೋಟ ಮಂಜುನಾಥ ಭಾಗವತ ವಿರಚಿತ)

🙏💐 ಆಸಕ್ತರಿಗೆ ಸ್ವಾಗತ 💐🙏

29/06/2026
Online & Offline ಚಂಡೆ ತರಗತಿಗಳು ಪ್ರಾರಂಭವಾಗಿದೆ! ಆಸಕ್ತರು ಸಂಪರ್ಕಿಸಿ 💐
23/06/2026

Online & Offline ಚಂಡೆ ತರಗತಿಗಳು ಪ್ರಾರಂಭವಾಗಿದೆ!
ಆಸಕ್ತರು ಸಂಪರ್ಕಿಸಿ 💐

20/05/2026

🙏💐
Your interest and dedication in coming all the way from Kerala to learn Yakshagana is truly inspiring. Mastering this art is not possible in just a few days, but the very first step you have taken is highly promising. May your practice and passion continue to grow. Heartfelt best wishes!

ಯಕ್ಷಗಾನ ಕಲಿಯಲು ಕೇರಳದಿಂದ ಬಂದಿರುವ ನಿಮ್ಮ ಆಸಕ್ತಿ ಮತ್ತು ಶ್ರಮ ನಿಜಕ್ಕೂ ಪ್ರೇರಣಾದಾಯಕ. ಕೆಲವೇ ದಿನಗಳಲ್ಲಿ ಕಲೆಯ ಸಂಪೂರ್ಣತೆ ಸಾಧ್ಯವಿಲ್ಲ, ಆದರೆ ನೀವು ಇಟ್ಟಿರುವ ಮೊದಲ ಹೆಜ್ಜೆ ಬಹಳ ಭರವಸೆಯಾಗಿದೆ. ಹೀಗೆ ಅಭ್ಯಾಸ ಮುಂದುವರಿಯಲಿ. ಹೃತ್ಪೂರ್ವಕ ಶುಭಾಶಯಗಳು!

2026-27ನೇ ಸಾಲಿನ ಯಕ್ಷಗಾನ ತರಗತಿಗೆ ಪ್ರವೇಶ ಪ್ರಾರಂಭವಾಗಿದೆ 💐ಆಸಕ್ತರಿಗೆ ತಲುಪಿಸಿ ✨
14/05/2026

2026-27ನೇ ಸಾಲಿನ ಯಕ್ಷಗಾನ ತರಗತಿಗೆ ಪ್ರವೇಶ ಪ್ರಾರಂಭವಾಗಿದೆ 💐
ಆಸಕ್ತರಿಗೆ ತಲುಪಿಸಿ ✨

Address

Sirsi
581402

Alerts

Be the first to know and let us send you an email when Dheemahi Yakshagana Kalakendra posts news and promotions. Your email address will not be used for any other purpose, and you can unsubscribe at any time.

Shortcuts

Share