ಕಲಾವಿದರು
2005ರ ಮೇ 12ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ವಸಂತ ರಂಗ ನಾಟಕೋತ್ಸವದ ಉದ್ಘಾಟನೆಯದಿನ ಕಲಾವಿದರುಹವ್ಯಾಸಿ ರಂಗತಂಡಗಳ ಒಕ್ಕೂಟ ಹುಟ್ಟಿಕೊಂಡಿತು. ಈ 12 ವರ್ಷದ ಅವಧಿಯಲ್ಲಿ ಒಕ್ಕೂಟದ ಅಧ್ಯಕ್ಷರಾಗಿಹೊ.ನ. ಸತ್ಯ, ಪ್ರೊ. ಎಸ್.ಸಿ. ಗೌರಿಶಂಕರ್, ಲಕ್ಷ್ಮೀನಾರಾಯಣ ರಾವ್ ಅವರು ಮಾರ್ಗದರ್ಶನ ಮಾಡುತ್ತಾ ನಡೆಸಿಕೊಂಡುಬಂದಿದ್ದಾರೆ. ಇಷ್ಟು ವರ್ಷಗಳ ಅವಧಿಯಲ್ಲಿ ಕಲಾವಿದರು ಒಕ್ಕೂಟವು ರಂಗಭೂಮಿಯ ನಿರಂತರತೆಯನ್ನು ಕಾಪಾಡುವ ದಿಸೆಯಲ್ಲಿಹಲವು ಚಟುವಟಿಕೆಗಳನ್ನು ನಡೆಸುತ್ತಲೇ ಬಂದಿದೆ.
ಹಾಲಿ ಡಾ. ಸಾಸ್ವೆಹಳ್ಳಿ ಸತೀಶ್ ಅವರು ಒಕ್ಕೂಟದ ಅಧ್ಯಕ್ಷರಾಗಿದ್ದು, ಹೊನ್ನಾಳಿಚಂದ್ರಶೇಖರ್ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಹಾಲಿ ನಗರದ 28 ರಂಗತಂಡಗಳು ಈ ಒಕ್ಕೂಟದ ಸದಸ್ಯ ತಂಡಗಳಾಗಿವೆ.
ಕಲಾವಿದರು ಒಕ್ಕೂಟವು ನಾಟಕೋತ್ಸವದ ಮೂಲಕವೇ ಉದ್ಘಾಟನೆಯಾಯಿತು.2005ರ ಮೇ12ರಿಂದ 16ರ ವರೆಗೆನಡೆಯ ಈ ನಾಟಕೋತ್ಸವದಲ್ಲಿ ಶಿವಮೊಗ್ಗದ ಐದು ತಂಡಗಳು ಐದು ನಾಟಕಗಳನ್ನು ಅಭಿನಯಿಸಿದವು. ಎಲ್ಲವೂ ಹೊಸನಾಟಕಗಳೇ. ಇದಾದ ನಂತರವೂ ಹಲವು ಕಾರ್ಯಕ್ರಮಗಳು ಕಲಾವಿದರುಒಕ್ಕೂಟದಿಂದ ಆಯೋಜನೆಯಾಗಿವೆ. ಪ್ರತಿ ವರ್ಷ ಮಾರ್ಚ್ ರಂದು ಕುವೆಂಪು ರಂಗಮಂದಿರದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮವನ್ನು ವಿಭಿನ್ನವಾಗಿಆಯೋಜಿಸಿದೆ. ಕುವೆಂಪು ರಂಗಮಂದಿರದ ವೇದಿಕೆಯ ಮೇಲೆ ರಂಗಗೀತೆ ಹಾಗೂ ನಾಟಕದ ತುಣುಕುಗಳ ಪ್ರದರ್ಶನ, ನಗರದಮುಖ್ಯ ರಸ್ತೆಗಳಲ್ಲಿ ಜಾಥಾ, ವಿವಿಧೆಡೆ ಬೀದಿ ನಾಟಕಗಳ ಪ್ರದರ್ಶನ, ರಂಗ ಸಂದೇಶ ವಾಚನ ಸೇರಿದಂತೆ ಹಲವು ವಿಭಿನ್ನಕಾರ್ಯಕ್ರಮಗಳನ್ನು ನಡೆಸಿದೆ. ಶಿವಮೊಗ್ಗ ರಂಗಾಯಣ ಆರಂಭವಾದಾಗಿನಿಂದ ರಂಗಾಯಣದ ಸಹಯೋಗದಲ್ಲಿಯೇ ಈಕಾರ್ಯಕ್ರಮ ಆಯೋಜಿಸಿರುವುದು ವಿಶೇಷ. ಪ್ರತಿ ವರ್ಷ ಶಿವಮೊಗ್ಗ ಮಹಾನಗರ ಪಾಲಿಕೆ ಆಯೋಜಿಸುವ ರಂಗದಸರಾ ಕಾರ್ಯಕ್ರಮದಲ್ಲಿ ಒಕ್ಕೂಟವು ಸಕ್ರೀಯವಾಗಿಪಾಲ್ಗೊಂಡು ನೆರವು ನೀಡಿದೆ. ಈ ಉತ್ಸವದ ಪ್ರತಿ ಹಂತದಲ್ಲಿಯೂ ನೆರವಾಗಿ ಯಶಸ್ವಿಗೊಳಿಸಿದೆ. ರಂಗಾಯಣ ಜತೆಗೂಡಿಹವ್ಯಾಸಿ ನಾಟಕೋತ್ಸವ ಸೇರಿದಂತೆ ಹಲವು ಕಾರ್ಯಕ್ರಮ ಆಯೋಜಿಸಿದೆ.