The Bharat Scouts and Guides, Shivamogga Local Association

The Bharat Scouts and Guides, Shivamogga Local Association Contact information, map and directions, contact form, opening hours, services, ratings, photos, videos and announcements from The Bharat Scouts and Guides, Shivamogga Local Association, Shimoga.

01/05/2021
ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಶಿವಮೊಗ್ಗ ಸ್ಥಳೀಯ ಸಂಸ್ಥೆವತಿಯಿಂದ ದಿನಾಂಕ 06/03/2021ರ ಶನಿವಾರದಂದು ನಮ್ಮ ತಾಲೂಕಿನ ಪ್ಲಾಕ್ ಲೀಡರ್, ...
08/03/2021

ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಶಿವಮೊಗ್ಗ ಸ್ಥಳೀಯ ಸಂಸ್ಥೆವತಿಯಿಂದ ದಿನಾಂಕ 06/03/2021ರ ಶನಿವಾರದಂದು ನಮ್ಮ ತಾಲೂಕಿನ ಪ್ಲಾಕ್ ಲೀಡರ್, ಗೈಡ್ ಕ್ಯಾಪ್ಟನ್, ರೇಂಜರ್ ಲೀಡರ್,ಮಹಿಳಾ ಕಬ್ ಮತ್ತು ಸ್ಕೌಟ್ ಮಾಸ್ಟರ್ಸ್ ರವರುಗಳಿಗೆ ವಿವಿಧ ಮನೋರಂಜನೀಯ ಆಟಗಳು, ಸಂವಾದ ವನ್ನು ಜಿಲ್ಲಾ ಸ್ಕೌಟ್ ಭವನದಲ್ಲಿ ಸಂಜೆ 3 ರಿಂದ 5 ಘಂಟೆಯವರೆಗೆ ಆಯೋಜಿಸಲಾಗಿತ್ತು. ಶ್ರೀಮತಿ ಶಕುಂತಲಾ ಚಂದ್ರಶೇಖರ್ ಜಿಲ್ಲಾ ಆಯುಕ್ತೆ (ಗೈಡ್) ಉದ್ಘಾಟಿಸಿದರು. ಶ್ರೀಮತಿ ಲಕ್ಷ್ಮಿ ರವಿ, ಜಿಲ್ಲಾ ಜಂಟಿ ಕಾರ್ಯದರ್ಶಿ, ಶ್ರೀಮತಿ ಭಾರತಿ ಡಾಯಸ್ ASOC, ಕುಮಾರಿ ಸುಮಲತಾ SGV, ಮತ್ತು ಹಲವಾರು ಶಿಕ್ಷಕಿಯರು ಭಾಗವಹಿಸಿದ್ದರು. ಶ್ರೀಮತಿ ಪೂರ್ಣಿಮಾ ಜಂಟಿ ಕಾರ್ಯದರ್ಶಿ, ಎಲ್ಲ ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ವಿಜಯ್ ಕುಮಾರ್ PRO, ಶ್ರೀ ದೀಪು ಖಜಾಂಜಿ, ಶ್ರೀ ಡಿ ಎನ್ ನೂರ್ ಅಹ್ಮದ್ ಕಾರ್ಯದರ್ಶಿ, ಶ್ರೀ ರಾಜೇಶ್ ಅವಲಕ್ಕಿ ಸಹ ಕಾರ್ಯದರ್ಶಿ ಉಪಸ್ಥಿತರಿದ್ದರು.
ನಮ್ಮ ಶಿವಮೊಗ್ಗ ಸ್ಥಳೀಯ ಸಂಸ್ಥೆಯ ಬೆನ್ನೆಲುಬಾದ ಸರ್ವ ಶಿಕ್ಷಕಿಯರಿಗೆ ಅಂತರ ರಾಷ್ಟ್ರೀಯ ಮಹಿಳಾ ದಿನದ ಹಾರ್ದಿಕ ಶುಭಾಶಯಗಳು....

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ರಾಜ್ಯ ಸಂಸ್ಥೆಯು ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯದ ಸ್ಕೌಟ್ ಗೈಡ್ ಮಕ್ಕಳು ರಜದ ಸಮಯದಲ್ಲೂ ...
01/03/2021

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ರಾಜ್ಯ ಸಂಸ್ಥೆಯು ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯದ ಸ್ಕೌಟ್ ಗೈಡ್ ಮಕ್ಕಳು ರಜದ ಸಮಯದಲ್ಲೂ ಕ್ರಿಯಾಶೀಲವಾಗಿ ಇರಲು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ಅವುಗಳಲ್ಲಿ ಗೀತಗಾಯನ ಮತ್ತು ಚಿತ್ರಕಲೆ ಸ್ಪರ್ಧೆಯು ಸಹ. ಈ ಸ್ಪರ್ಧೆಗಳಲ್ಲಿ ನಮ್ಮ ಶಿವಮೊಗ್ಗ ಸ್ಥಳೀಯ ಸಂಸ್ಥೆ ವತಿಯಿಂದಲೂ ಸಹ ಹಲವಾರು ಶಾಲೆ, ಮುಕ್ತದಳ ಗಳ ವಿದ್ಯಾರ್ಥಿಗಳು ಯಶಸ್ವಿಯಾಗಿ ಭಾಗವಹಿಸಿದ್ದಾರೆ, ಹಾಗೂ ರಾಜ್ಯ ಸಂಸ್ಥೆಯ ಅತ್ಯಾಕರ್ಷಕ ಪ್ರಮಾಣ ಪತ್ರ ಮತ್ತು ಪದಕ ಪಡೆದಿದ್ದಾರೆ. ಅವರೆಲ್ಲರಿಗೂ ಸ್ಥಳೀಯ ಸಂಸ್ಥೆಯ ಸರ್ವ ಪದಾದಿಕಾರಿಗಳ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.
ಈ ಮಕ್ಕಳೆಲ್ಲರು online ಚಟುವಟಿಕೆಯಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಿದ ಅವರ ಪೋಷಕರಿಗೂ ಸಂಸ್ಥೆಯ ವತಿಯಿಂದ ಧನ್ಯವಾದಗಳು.
ಹಾಗೆಯೇ ಈ ಮಕ್ಕಳೆಲ್ಲರನ್ನು ಸಂಪರ್ಕಿಸಿ, ಪೋಷಕರ ಒಪ್ಪಿಗೆ ಪಡೆದು , ಆ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಸ್ಪರ್ಧೆಗಳಲ್ಲಿ ಭಾಗವಹಿಸಲು ಉತ್ತೇಜಿಸಿದ ಎಲ್ಲ ದಳ ನಾಯಕ , ನಾಯಕಿಯರಿಗೂ ಸಹ ಸಂಸ್ಥೆಯ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು.
ಭಾಗವಹಿಸಲು ಮಾರ್ಗದರ್ಶನ, ಸಲಹೆ ಸೂಚನೆಗಳನ್ನು ನೀಡಿದ ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಹೆಚ್ ಡಿ ರಮೇಶ್ ಶಾಸ್ತ್ರಿ ಮತ್ತು ಜಿಲ್ಲಾ ಸಂಸ್ಥೆಯ ಎಲ್ಲ ಪದಾದಿಕಾರಿಗಳಿಗೆ ಧನ್ಯವಾದಗಳು.
ಹಾಗೆಯೇ ಈ ಸಂದರ್ಭದಲ್ಲಿ, ಮಕ್ಕಳನ್ನು ಹಲವಾರು ಚಟುವಟಿಕೆಯ ಮೂಲಕ ಕ್ರಿಯಾಶೀಲರನ್ನಾಗಿ ಮಾಡಿ, ರಾಜ್ಯ ಸಂಸ್ಥೆ ವತಿಯಿಂದ ಅತ್ಯಾಕರ್ಷಕ, ಮನಸ್ಸಿಗೆ ಮುದಕೊಡುವ ವರ್ಣರಂಜಿತ ಪ್ರಮಾಣ ಪತ್ರ ನೀಡಿದ ರಾಜ್ಯ ಮುಖ್ಯ ಆಯುಕ್ತರಾದ ಸನ್ಮಾನ್ಯ ಶ್ರೀ ಪಿ.ಜಿ.ಆರ್. ಸಿಂಧ್ಯಾ PGR Sindhia ಸರ್ ಮತ್ತು ಎಲ್ಲ ಪದಾದಿಕಾರಿಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ.
ವಂದನೆಗಳು.....

01/03/2021

National Science Day, 28th Feb 2021
Demonstration of Raman effect...

" ನಿಮ್ಮಲ್ಲಿರುವ ವಿಜ್ಞಾನದ ಕಿಡಿ ಯನ್ನು ಆರಿಸದಿರಿ " ಶ್ರೀ ಸಿ.ಎಸ್. ಚಿಕ್ಮಠಅವರು ದಿನಾಂಕ 28/02/2021, ಭಾನುವಾರದಂದು , ಭಾರತ್ ಸ್ಕೌಟ್ಸ್ ಮತ...
01/03/2021

" ನಿಮ್ಮಲ್ಲಿರುವ ವಿಜ್ಞಾನದ ಕಿಡಿ ಯನ್ನು ಆರಿಸದಿರಿ " ಶ್ರೀ ಸಿ.ಎಸ್. ಚಿಕ್ಮಠ
ಅವರು ದಿನಾಂಕ 28/02/2021, ಭಾನುವಾರದಂದು , ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಶಿವಮೊಗ್ಗ ಜಿಲ್ಲಾ ಮತ್ತು ಸ್ಥಳೀಯ ಸಂಸ್ಥೆ ಹಾಗೂ ಮಲ್ನಾಡ್ ಟೆಕ್ನಾಹೆಡ್ ಸೈಂಸ್ ಕ್ಲಬ್ಬಿನ ವತಿಯಿಂದ, ಜಿಲ್ಲಾ ಸ್ಕೌಟ್ ಭವನದಲ್ಲಿ ಆಯೋಜಿಸಲಾಗಿದ್ದ "ರಾಷ್ಟ್ರೀಯ ವಿಜ್ಞಾನ ದಿನ " ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಮಕ್ಕಳಿಗೆ ಹಿತವಚನ ನೀಡಿದರು.
ಮುಂದುವರೆಯುತ್ತ, ವಿಜ್ಞಾನವು ಮನುಕುಲದ ಹಲವಾರು ಪ್ರಶ್ನೆ, ಸವಾಲುಗಳಿಗೆ ಉತ್ತರ ನೀಡಿದೆ,ನೀಡುತ್ತಿದೆ ಹಾಗೂ ಉನ್ನತಿಗೆ ಕೊಡುಗೆ ನೀಡುತ್ತಿದೆ, ಹಾಗಾಗಿ ವಿದ್ಯಾರ್ಥಿಗಳು ಅದರಲ್ಲೂ ವಿಜ್ಞಾನದ ವಿದ್ಯಾರ್ಥಿಗಳು ತಮ್ಮ ವೈಜ್ಞಾನಿಕ ಕಿಡಿಯನ್ನು ಆರಿಸಿಕೊಳ್ಳದೆ ಉತ್ಸುಕತೆ ಇಂದ ಸಿಕ್ಕ ಅವಕಾಶವನ್ನು ಬಳಸಿಕೊಂಡು, ವಿಜ್ಞಾನದ ಬಗ್ಗೆ ಹೆಚ್ಚಿನ ಅಭ್ಯಾಸ ಮಾಡಿ ಮನುಕುಲಕ್ಕೆ ಕೊಡುಗೆಯನ್ನು ಕೊಡಿ ಎಂದರು. ಈ ಉತ್ಸಾಹ ಇದ್ದಿದ್ದರಿಂದಲೇ ಚಿತ್ರಕಲಾ ಶಿಕ್ಷಕನಾದರು ಸಹ ರಾಷ್ಟ್ರದ ಉದ್ದಗಲಕ್ಕೂ ವಿಜ್ಞಾನದ ಮೇಳಗಳಲ್ಲಿ, ಉಪನ್ಯಾಸದಲ್ಲಿ ಭಾಗವಹಿಸಲಾಯಿತು ಎಂದು ಹೇಳಿದರು.
ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಹೆಚ್ ಡಿ ರಮೇಶ್ ಶಾಸ್ತ್ರಿ ರವರ ಮಾರ್ಗದರ್ಶನದಂತೆ ನಡೆದ ಕಾರ್ಯಕ್ರಮವು ಸ್ಕೌಟ್ ಗೈಡ್ ಪ್ರಾರ್ಥನೆ ಯೊಂದಿಗೆ ಪ್ರಾರಂಭವಾಯಿತು. ಸ್ಥಳೀಯ ಸಂಸ್ಥೆ ಸಹ ಕಾರ್ಯದರ್ಶಿ ಶ್ರೀ ರಾಜೇಶ್ ಅವಲಕ್ಕಿ ರವರು ಸರ್ವರನ್ನು ಸ್ವಾಗತಿಸಿ ಸರ್ ಸಿ. ವಿ. ರಾಮನ್ ರವರ ಜೀವನದ ಬಗ್ಗೆ ಮಾಹಿತಿಯನ್ನು ನೀಡಿದರು. ಸೈನ್ಸ್ ಕ್ಲಬ್ ಪ್ರವರ್ತಕರಾದ ಶ್ರೀ ತಯ್ಯಬ ಮುಸಾಕ್ತ್ ಅಹ್ಮದ್ ರವರು ರಾಮನ್ ಎಫ್ಫೆಕ್ಟ್ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಕ್ಕಳಿಗೆ ತೋರಿಸಿಕೊಟ್ಟರು. ಶ್ರೀ ಡಿ.ಎನ್. ನೂರ್ ಅಹ್ಮದ್ , ಕಾರ್ಯದರ್ಶಿ, ಸ್ಥಳೀಯ ಸಂಸ್ಥೆ ಉಪಸ್ಥಿತರಿದ್ದರು. ಕಾರ್ಯಕ್ರಮ ದಲ್ಲಿ ಸೈಂಸ್ ಕ್ಲಬ್ ಸದಸ್ಯರು, ಸ್ಕೌಟ್ ಗೈಡ್ , ಕಬ್ ಬುಲ್ಬುಲ್ ಮಕ್ಕಳು ಹಾಜರಿದ್ದರು.
ಅತ್ಯಂತ ಅಚ್ಚುಕಟ್ಟಾಗಿ ಮೂಡಿಬಂದ ಕಾರ್ಯಕ್ರಮ ಸರ್ವರ ಪ್ರಶಂಸೆಗೆ ಪಾತ್ರವಾಯಿತು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಶಿವಮೊಗ್ಗ ಸ್ಥಳೀಯ ಸಂಸ್ಥೆ ವತಿಯಿಂದ, ಜಿಲ್ಲಾ ಸಂಸ್ಥೆಯ ಮಾರ್ಗದರ್ಶನ ದಂತೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷ...
25/02/2021

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಶಿವಮೊಗ್ಗ ಸ್ಥಳೀಯ ಸಂಸ್ಥೆ ವತಿಯಿಂದ, ಜಿಲ್ಲಾ ಸಂಸ್ಥೆಯ ಮಾರ್ಗದರ್ಶನ ದಂತೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಯೋಗದಲ್ಲಿ ದಿನಾಂಕ 24-02-2021, ಬುಧವಾರದಂದು ಶಿವಮೊಗ್ಗ ತಾಲ್ಲೂಕಿನ ಶಿಕ್ಷಕರಿಗೆ ಒಂದು ದಿನದ ಪ್ರಾರಂಭಿಕ ಶಿಬಿರವನ್ನು ಶಿವಮೊಗ್ಗ ಜಿಲ್ಲಾ ಸ್ಕೌಟ್ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರಾರ್ಥನೆ, ಸ್ವಾಗತ, ಸ್ವಪರಿಚಯ ದೊಂದಿಗೆ ಶಿಬಿರ ಪ್ರಾರಂಭವಾಯಿತು. ಶಿಬಿರದ ಉದ್ದೇಶಗಳನ್ನು ಶ್ರೀ ರಾಜೇಶ್ ಅವಲಕ್ಕಿ,
ALT(R) ತಿಳುಸಿದರು. ಸಂಸ್ಥಾಪಕರ ಮತ್ತು ಸಂಸ್ಥೆಯ ಇತಿಹಾಸವನ್ನು ಶ್ರೀ ಶಿವಶಂಕರ್ ALT(S) ತಿಳಿಸಿಕೊಟ್ಟರು. ಸ್ಕೌಟಿಂಗ್ ಗೈಡಿಂಗ್ ಎಂದರೇನು ಎಂದು ಶ್ರೀ ರಾಜೇಶ್ ರವರು ತಿಳಿಸಿದರು. ಶ್ರೀಮತಿ ಕಾತ್ಯಾಯಿನಿ ಸಿ ಎಸ್ ALT(G) ಜಿಲ್ಲಾ ತರಬೇತಿ ಆಯುಕ್ತೆ(ಗೈಡ್) ಪ್ರತಿಜ್ಞೆ,ನಿಯಮ, ವಿವಿಧ ವಿಭಾಗ ಮತ್ತು ನಾಲ್ಕು ಬಂಧಗಳ ಬಗ್ಗೆ ಹೇಳಿದರು. ಕುಮಾರಿ ಸುಮಲತಾ SGV ರವರು ಸಂಸ್ಥೆಯ ರಚನೆಬಗ್ಗೆ ಅರಿವು ಮೂಡಿಸಿದರು. ನಂತರ ಪ್ರಗತಿಪರ ಶಿಕ್ಷಣದ ಬಗ್ಗೆ ಮಾಹಿತಿ ನೀಡಲಾಯಿತು. ಶ್ರೀ ರಾಜೇಶ್ ರವರು ದಳ ನೋಂದಣಿ ಮಾಡಿ ದಳವನ್ನು ಹೇಗೆ ನಡೆಸಬೇಕು ಎಂದು ತಿಳಿಸಿದರು. ನಂತರ ಪ್ರಶ್ನೋತ್ತರ ವೇಳೆ. ಶಿಬಿರಾರ್ಥಿ ಗಳ ಪ್ರಶ್ನೆಗಳಿಗೆ ಉತ್ತರಿಸಲಾಯಿತು. ಈ ಸಂದರ್ಭದಲ್ಲಿ ಉಪಸ್ಥಿರಿದ್ದ ಶ್ರೀ ಹೆಚ್ ಡಿ ರಮೇಶ್ ಶಾಸ್ತ್ರಿ ಮಾನ್ಯ ಜಿಲ್ಲಾ ಮುಖ್ಯ ಆಯುಕ್ತರು ಸರ್ವರನ್ನು ಉದ್ದೇಶಿಸಿ ಮಾತನಾಡುತ್ತ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ದುಡಿಯುತ್ತಿರುವ ಸ್ಕೌಟ್ ಗೈಡ್ ಚಳುವಳಿಯ ಬಗ್ಗೆ ತಿಳಿಸಿಕೊಟ್ಟಿರುವ ಮಾಹಿತಿ ಯಂತೆ ಶಾಲೆಗಳಲ್ಲಿ ದಳಗಳನ್ನು ತೆರೆದು ಕಾರ್ಯನಿರ್ವಹಿಸಲು ಕರೆನೀಡಿ ಜಿಲ್ಲಾ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆಯ ಸಹಕಾರ ಸದಾ ನಿಮ್ಮೊಂದಿಗಿದೆ ಎಂದು ಹೇಳಿ ಸರ್ವರಿಗೂ ಶುಭ ಹಾರೈಸಿದರು. ವಂದನಾರ್ಪಣೆ ಯನ್ನು ರಾಜೇಶ್ ರವರು ಮಾಡಿದರು. ರಾಷ್ಟ್ರ ಗೀತೆ ಹಾಡುವುದರ ಮೂಲಕ ಶಿಬಿರ ಸಂಪನ್ನಗೊಂಡಿತು.
ವಿವಿಧ ಶಾಲೆಯ 33 ಶಿಕ್ಷಕ ಶಿಕ್ಷಕಿಯರು ಭಾಗವಹಿಸಿದ್ದ ಈ ಶಿಬಿರದ ನಾಯಕರಾಗಿ ಶ್ರೀ ರಾಜೇಶ್ ಅವಲಕ್ಕಿ ALT(R) ರವರು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಹೆಚ್ ಶಿವಶಂಕರ್, ಶ್ರೀಮತಿ ಕಾತ್ಯಾಯಿನಿ, ಕುಮಾರಿ ಸುಮಲತಾ, ಶ್ರೀ ಶ್ರೀಕಾಂತ್ ಗೋಸಾಯಿ ಕಾರ್ಯನಿರ್ವಹಿಸಿದರು. ಶ್ರೀ ಚುಡಾಮಣಿ ಪವಾರ್ ಕಾರ್ಯಾಧ್ಯಕ್ಷರು ಸ್ಥಳೀಯ ಸಂಸ್ಥೆ ಶಿಬಿರಕ್ಕೆ ಭೇಟಿ ನೀಡಿದ್ದರು. ಶ್ರೀ ಡಿ ಎನ್ ನೂರ್ ಅಹ್ಮದ್ ಕಾರ್ಯದರ್ಶಿ ಸ್ಥಳೀಯ ಸಂಸ್ಥೆ ಉಪಸ್ಥಿತರಿದ್ದು ಸರ್ವ ವ್ಯವಸ್ಥೆ ಮಾಡಿದ್ದರು. ಅವಕಾಶ ಒದಗಿಸಿಕೊಟ್ಟ ಸರ್ವರಿಗೂ ಧನ್ಯವಾದಗಳು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಶಿವಮೊಗ್ಗ ಜಿಲ್ಲಾ ಮತ್ತು ಸ್ಥಳೀಯ ಸಂಸ್ಥೆ ಗಳ ವತಿಯಿಂದ ಇಂದು ಸ್ಕೌಟ್ ಗೈಡ್ ಚಳುವಳಿಯ ಸಂಸ್ಥಾಪಕರಾದ ಲಾರ್ಡ್ ...
22/02/2021

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಶಿವಮೊಗ್ಗ ಜಿಲ್ಲಾ ಮತ್ತು ಸ್ಥಳೀಯ ಸಂಸ್ಥೆ ಗಳ ವತಿಯಿಂದ ಇಂದು ಸ್ಕೌಟ್ ಗೈಡ್ ಚಳುವಳಿಯ ಸಂಸ್ಥಾಪಕರಾದ ಲಾರ್ಡ್ ಬೇಡನ್ ಪೊವೆಲ್ ಮತ್ತು ಲೇಡಿ ಬೇಡನ್ ಪೊವೆಲ್ ರವರ 164ನೇ ಮತ್ತು 132ನೇ ಜನ್ಮದಿನಾಚಾರಣೆ ಅಂಗವಾಗಿ ಸಂಸ್ಥಾಪಕರ ದಿನ ಮತ್ತು ವಿಶ್ವ ಚಿಂತನಾ ದಿನವನ್ನು ಆಯೋಜಿಸಲಾಗಿತ್ತು. ಇದರ ಅಂಗವಾಗಿ ಬೆಳಿಗ್ಗೆ10-30ಕ್ಕೆ ಶಾಂತಿ ಜಾಥಾ ವನ್ನು ಆಯೋಜಿಸಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಜಾಥಾವನ್ನು ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಹೆಚ್ ಡಿ ರಮೇಶ್ ಶಾಸ್ತ್ರೀರವರು ಚಾಲನೆ ನೀಡಿದರು. ಜಿಲ್ಲಾ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ನಂತರ ಸಭಾ ಕಾರ್ಯಕ್ರಮ ಪ್ರಾರ್ಥನೆ ಯೊಂದಿಗೆ ಪ್ರಾರಂಭ ವಾಯಿತು. ಶ್ರೀ ಹೆಚ್ ಪರಮೇಶ್ವರ ಜಿಲ್ಲಾ ಕಾರ್ಯದರ್ಶಿ ಸರ್ವರನ್ನು ಸ್ವಾಗತಿಸಿದರು. ಶ್ರೀಮತಿ ಮತ್ತು ಶ್ರೀ ಬೇಡನ್ ಪೊವೆಲ್ ರವರಿಗೆ ಪುಷ್ಪನಮನ ಸಲ್ಲಿಸಲಾಯಿತು. ನಂತರ ಕುಮಾರ ಚೇತನ್ ಕುಮಾರ್, ಜ್ಞಾನದೀಪ ಶಾಲೆಯ ಸ್ಕೌಟ್ ವಿದ್ಯಾರ್ಥಿ BP ರವರ ಜೀವನ ಚರಿತ್ರೆ, ಹಾಗೂ ಕುಮಾರಿ ರಕ್ಷಾ ರೇಂಜರ್ ಮಲ್ನಾಡ್ ಒಪೆನ್ ಗ್ರೂಪ್ ಇವರು ಶ್ರೀಮತಿ ಲೇಡಿ BP ರವರ ಜೀವನವನ್ನು ಸಭೆಗೆ ತಿಳಿಸಿಕೊಟ್ಟರು. ನಂತರ ಅಧ್ಯಕ್ಷ ಸ್ಥಾನ ದಿಂದ ಮಾತನಾಡಿದ ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಹೆಚ್ ಡಿ ರಮೇಶ್ ಶಾಸ್ತ್ರೀರವರು, ಸಂಸ್ಥಾಪಕರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಡೆದು ಜೀವನದಲ್ಲಿ ಯಶಸ್ವಿಯಾಗಿ ಎಂದು ಸರ್ವರಿಗೂ ಹಾರೈಸಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ತಮ್ಮ ಸ್ನೇಹಿತರನ್ನು ಈ ಚಳುವಳಿಗೆ ಸೇರಿಸುವಂತೆ ಮನವಿ ಮಾಡಿದರು.
ನಂತರ online ನಲ್ಲಿ ರಾಜ್ಯ ಸಂಸ್ಥೆರವರು ನಡೆಸಿದ್ದ ಚಿತ್ರಕಲೆ ಮತ್ತು ಗೀತಗಾಯನ ಸ್ಪರ್ದಿಗಳ, ಹಾಗೂ ಸಂಸ್ಥಾಪಕರ ದಿನಾಚರಣೆ ಯಲ್ಲಿ ಭಾಗವಹಿಸಿದ್ದ ಶಾಲೆ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಶ್ರೀ ದೀಪು ಪಿ ಎಸ್, ಸ್ಥಳೀಯ ಸಂಸ್ಥೆ ಖಜಾಂಜಿ ಸರ್ವರಿಗೂ ವಂದಿಸಿದರು. ಶ್ರೀ ರಾಜೇಶ್ ಅವಲಕ್ಕಿ ಸಹ ಕಾರ್ಯದರ್ಶಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಜಂಟಿ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮಿ ರವಿ, ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ವಿಜಯಕುಮಾರ, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶ್ರೀ ಡಿ. ಎನ್.ನೂರ್ ಅಹ್ಮದ್ ಉಪಸ್ಥಿತರಿದ್ದರು. ಶಿವಮೊಗ್ಗ ನಗರದ ವಿವಿಧ ಶಾಲೆ , ಕಾಲೇಜಿನ ಸುಮಾರು 350 ಕಬ್, ಬುಲ್ಬುಲ್, ಸ್ಕೌಟ್, ಗೈಡ್, ರೋವರ್ ಮತ್ತು ರೇಂಜರ್ಸ್ ಹಾಗೂ ದಳ ನಾಯಕರು ಮತ್ತು ಪೋಷಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿಕೊಟ್ಟರು.
ಸರ್ವರಿಗೂ ಧನ್ಯವಾದಗಳು......

ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯ ವತಿಯಿಂದ ಇಂದು ಸ್ಕೌಟ್ ಮತ್ತು ಗೈಡ್ ಚಳುವಳಿಯ ಸಂಸ್ಥಾಪರಾದ ಬೇಡನ್ ಪೊವೆಲ್ ಮತ್...
22/02/2021

ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯ ವತಿಯಿಂದ ಇಂದು ಸ್ಕೌಟ್ ಮತ್ತು ಗೈಡ್ ಚಳುವಳಿಯ ಸಂಸ್ಥಾಪರಾದ ಬೇಡನ್ ಪೊವೆಲ್ ಮತ್ತು ಲೇಡಿ ಬೇಡನ್ ಪೊವೆಲ್ ರವರ ಜನ್ಮದಿನಾಚಾರಣೆಯನ್ನು ಆಚರಿಸಲಾಯಿತು. ಶ್ರೀಮತಿ ಸುಕನ್ಯಾ ಶೆಟ್ಟಿ ಮತ್ತು ಶ್ರೀಮತಿ ರೇಣುಕಾ ಎಲ್. ಗೈಡ್ ಶಿಕ್ಷಕಿಯರು ನೇತೃತ್ವ ವಹಿಸಿದ್ದರು...

" ಸ್ಥಳೀಯ ಸಂಸ್ಥೆ ಪ್ರಗತಿ ಪರಿಶೀಲನಾ ಸಭೆ "ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಜಿಲ್ಲಾ ಸಂಸ್ಥೆಯ ಪದಾದಿಕಾರಿಗಳು, ಶಿವಮೊಗ್ಗ ಸ್ಥಳೀಯ ಸಂಸ್ಥೆಗೆ ...
13/02/2021

" ಸ್ಥಳೀಯ ಸಂಸ್ಥೆ ಪ್ರಗತಿ ಪರಿಶೀಲನಾ ಸಭೆ "
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಜಿಲ್ಲಾ ಸಂಸ್ಥೆಯ ಪದಾದಿಕಾರಿಗಳು, ಶಿವಮೊಗ್ಗ ಸ್ಥಳೀಯ ಸಂಸ್ಥೆಗೆ ಪ್ರಗತಿ ಪರಿಶೀಲನೆಗಾಗಿ ದಿನಾಂಕ 11/02/2021 ರಂದು ಭೇಟಿ ನೀಡಿದ್ದರು. ಇದೆ ಸಂದರ್ಭದಲ್ಲಿ ಸ್ಕೌಟರ್ಸ್ ಮತ್ತು ಗೈಡರ್ಸ್ ಸಮಾವೇಶವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವು ಪ್ರಾರ್ಥನೆ ಯೊಂದಿಗೆ ಪ್ರಾರಂಭಿಸಲಾಯಿತು. ಶ್ರೀ ದೀಪು ಪಿ ಎಸ್ ಸ್ಥಳೀಯ ಸಂಸ್ಥೆ ಖಜಾಂಜಿ ಸರ್ವರನ್ನು ಸ್ವಾಗತಿಸಿದರು. ಶ್ರೀ ರಾಜೇಶ್ ವಿ. ಅವಲಕ್ಕಿ ALT(R) ಸಹ ಕಾರ್ಯದರ್ಶಿ ಜಿಲ್ಲಾ ಸಂಸ್ಥೆ ಕೇಳಿದ್ದಂತಹ ಎಲ್ಲಾ ಮಾಹಿತಿಯ ವರದಿಯನ್ನು ಮಂಡಿಸಿದರು. ಶ್ರೀಮತಿ ಭಾರತಿ ಡಾಯಸ್ ASOC ರವರು 4R, ರಾಜ್ಯಪುರಸ್ಕಾರ , ದಳ ನಾಯಕ / ನಾಯಕಿ online registration ಬಗ್ಗೆ ಮಾಹಿತಿಯನ್ನು ನೀಡಿದರು. ಇದೆ ಸಂದರ್ಭದಲ್ಲಿ ಜಿಲ್ಲಾ ಸ್ಕೌಟ್ , ಗೈಡ್ ತರಬೇತಿ ಆಯುಕ್ತರಾದ ಶ್ರೀ ಎಂ. ಗಣಪತಿ, ಶ್ರೀಮತಿ ಕಾತ್ಯಾಯಿನಿ ರವರುಗಳು ವಯಸ್ಕ ನಾಯಕರ ತರಬೇತಿ ಬಗ್ಗೆ ಮಾಹಿತಿ ನೀಡಿ ಸರ್ವರಿಗೂ ಶುಭ ಹಾರೈಸಿದರು. ನಂತರ ಅಧ್ಯಕ್ಷತೆ ವಹಿಸಿದ್ದ ಶ್ರೀ ವೈ ಆರ್ ವೀರೇಶಪ್ಪ ಸಹ ಕಾರ್ಯದರ್ಶಿ, ಜಿಲ್ಲಾ ಸಂಸ್ಥೆ ಹಾಗೂ ಹಿರಿಯ ಸ್ಕೌಟರ್ ಮಾತನಾಡುತ್ತ ಬಹಳ ದೊಡ್ಡ ಸಂಖ್ಯೆಯಲ್ಲಿ ಸೇರಿರುವ ಸರ್ವರನ್ನು ಅಭಿನಂದಿಸಿ, ಸಭೆಯಲ್ಲಿ ಕೊಟ್ಟ ಮಾಹಿತಿಯಂತೆ ಕಾರ್ಯನಿರ್ವಹಿಸಲು ಕೋರಿದರು. ನಂತರ ಶ್ರೀ ಹೆಚ್ ಡಿ ರಮೇಶ್ ಶಾಸ್ತ್ರಿ ಜಿಲ್ಲಾ ಮುಖ್ಯ ಆಯುಕ್ತರು ಶಿವಮೊಗ್ಗ ಸ್ಥಳೀಯ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿ, ಇನ್ನು ಹೆಚ್ಚಿನ ರೀತಿಯಲ್ಲಿ ಕಾರ್ಯ ನಿರ್ವಹಿಸಲು ತಿಳಿಸಿದರು. ಹಾಗೂ ಈ ಸಂದರ್ಭದಲ್ಲಿ ಸೇವಾ ಪದಕ, SSLC ಪರೀಕ್ಷಾ ಪ್ರಮಾಣ ಪತ್ರ, ಪರಿಸರ ಗಣಪತಿ ಚಟುವಟಿಕೆಯ ಪ್ರಮಾಣ ಪತ್ರ, ಸನ್ನದ್ದು ಗಳನ್ನು ವಿತರಿಸಲಾಯಿತು. ಶ್ರೀ ಡಿ ಎನ್ ನೂರ್ ಅಹ್ಮದ್, ಕಾರ್ಯದರ್ಶಿ ಸಭೆಯಲ್ಲಿ ಉಪಸ್ಥಿತರಿದ್ದು ಮಾರ್ಗದರ್ಶನ ಮಾಡಿದರು. ಶ್ರೀ ರಾಜೇಶ್ ಅವಲಕ್ಕಿ ಸರ್ವರಿಗೂ ವಂದಿಸಿದರು. ರಾಷ್ಟ್ರಗೀತೆ ಗಾಯನದೊಂದಿಗೆ ಮುಕ್ತಯವಾಯಿತು. ನಂತರ ದಳ ನಾಯಕ / ನಾಯಕಿ ಯವರೊಂದಿಗೆ ಮುಂದಿನ ಹಂತದ ಚಟುವಟಿಕೆ ಗಳ ಬಗ್ಗೆ ಚರ್ಚಿಸಲಾಯಿತು...
ಶಿವಮೊಗ್ಗ ತಾಲ್ಲೂಕಿನಾದ್ಯಂತದಿಂದ ವಿವಿಧ ಶಾಲಾ ಕಾಲೇಜಿನ 50 ದಳ ನಾಯಕ / ನಾಯಕಿ ಯರು ಭಾಗವಹಿಸಿ ಈ ಸಭೆಯನ್ನು ಯಶಸ್ವಿ ಗೊಳಿಸಿಕೊಟ್ಟರು.
ಸರ್ವರಿಗೂ ಧನ್ಯವಾದಗಳು...

" ರಾಷ್ಟ್ರೀಯ ಹೆಣ್ಣು ಮಕ್ಕಳ" ದಿನಾಚರಣೆ ಅಂಗವಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಜಿಲ್ಲಾ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆ ಶಿವಮೊಗ್ಗದ ವತಿಯ...
24/01/2021

" ರಾಷ್ಟ್ರೀಯ ಹೆಣ್ಣು ಮಕ್ಕಳ" ದಿನಾಚರಣೆ ಅಂಗವಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಜಿಲ್ಲಾ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆ ಶಿವಮೊಗ್ಗದ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಗಳ ಕಚೇರಿ ಶಿವಮೊಗ್ಗ, ತಾಲ್ಲೂಕು ಪಂಚಾಯತ್, ಅಗಸವಲ್ಲಿ ಗ್ರಾಮ ಪಂಚಾಯತ್ , ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯ ಮುಖ್ಯೋಪಾಧ್ಯಾಯರು ಮತ್ತು ಸಹ ಶಿಕ್ಷಕರ ಸಹಯೋಗದಲ್ಲಿ ದಿನಾಂಕ 22-01-2೦21 ರ ಶುಕ್ರವಾರದಂದು ಕಾರ್ಯಕ್ರಮ ವನ್ನು ಶಾಲೆಯ ಆವರಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವು ಧ್ವಜಾರೋಹಣದೊಂದಿಗೆ ಪ್ರಾರಂಭ ವಾಯಿತು. ಶ್ರೀಮತಿ ರೇಣುಕಾ ಮತ್ತು ಶ್ರೀಮತಿ ಸುಕನ್ಯಾ ಗೈಡ್ ಶಿಕ್ಷಕಿಯರು ಶ್ರೀಮತಿ ಭಾರತಿ ಡಾಯಸ್ ASOC ಇವರ ನೇತೃತ್ವದಲ್ಲಿ ಶಾಲೆಯ ಗೈಡ್ ವಿದ್ಯಾರ್ಥಿನಿ ಮತ್ತು ಇತರ ವಿದ್ಯಾರ್ಥಿಗಳೊಂದಿಗೆ ಧ್ವಜಾರೋಹಣ ನೆರೆವೇರಿಸಿದರು. ನಂತರ ಉದ್ಘಾಟನಾ ಕಾರ್ಯಕ್ರಮ ದಲ್ಲಿ ಶ್ರೀ ರಾಮಚಂದ್ರಪ್ಪ, ಮುಖ್ಯೋಪಾಧ್ಯಾಯರು, ಪ್ರೌಢಶಾಲೆ,ಶ್ರೀ ರಾಜಶೇಖರ ಮುಖ್ಯೋಪಾಧ್ಯಾಯ ಹಿ.ಪ್ರ. ಶಾಲೆ, ಶ್ರೀಮತಿ ಗಾಯತ್ರಿ Pre-AlT, BIERT, ಶ್ರೀಮತಿ ಮಧು CRP, ಶ್ರೀ ಹೆಚ್ ಪರಮೇಶ್ವರ,ಜಿಲ್ಲಾ ಕಾರ್ಯದರ್ಶಿ, ಶ್ರೀ ವೈ ಆರ್ ವೀರೇಶಪ್ಪ ಸಹ ಕಾರ್ಯದರ್ಶಿ, ಶ್ರೀಮತಿ ಭಾರತಿ ಡಾಯಸ್ ASOC, ಕುಮಾರಿ ಸುಮಲತಾ SGV ಉಪಸ್ಥಿತರಿದ್ದು ಉದ್ಘಾಟಿಸಿದರು.
ನಂತರ ಶ್ರೀಮತಿ ಭಾರತಿ ಡಾಯಸ್ ರವರು ಹೆಣ್ಣು ಮಕ್ಕಳ ಆರೋಗ್ಯ, ಪೌಷ್ಟಿಕ ಆಹಾರ, ವೈಯಕ್ತಿಕ ಸ್ವಚ್ಛತೆ ಬಗ್ಗೆ ಮನಮುಟ್ಟುವಂತೆ ಮಾತನಾಡಿದರು. ಕುಮಾರಿ ಸುಮಲತಾ ರವರು ಸಾಧನೆ ತೋರಿದ ಹೆಣ್ಣು ಮಕ್ಕಳ ಬಗ್ಗೆ ಮಾತನಾಡಿದರು. ಶ್ರೀ ರಾಜೇಶ್ ಅವಲಕ್ಕಿ , ಸಹ ಕಾರ್ಯದರ್ಶಿ ಸ್ಥಳೀಯ ಸಂಸ್ಥೆ ರವರು ಸರ್ವರನ್ನು ಸ್ವಾಗತಿಸಿ ನಿರೂಪಿಸಿದರು. ಶ್ರೀಮತಿ ಸುಕನ್ಯಾ ವಂದಾನರ್ಪಣೆ ಸಲ್ಲಿಸಿದರು. ನಂತರ ಶ್ರೀ ಡಿ. ಎನ್.ನೂರ್ ಅಹ್ಮದ್ ಕಾರ್ಯದರ್ಶಿ, ಶ್ರೀ ದೀಪು ಪಟೇಲ್, ಖಜಾಂಜಿ ಸ್ಥಳೀಯ ಸಂಸ್ಥೆ ಇವರುಗಳ ನೇತೃತ್ವದಲ್ಲಿ ಮತ್ತು ರೋವರ್ಸ್ ರೇಂಜರ್ಸ್ ಸಹಯೋಗದಲ್ಲಿ ಎಲ್ಲಾ ಹೆಣ್ಣು ಮಕ್ಕಳಿಗೆ, Archery, rifle shooting, blind fold game, tug of war, musical chair ಇತ್ಯಾದಿ ಆಟಗಳನ್ನು ಆಡಿಸಲಾಯಿತು. ನಂತರ ಸರ್ವರಿಗೂ ಪ್ರಮಾಣ ಪತ್ರ ವಿತರಿಸಲಾಯಿತು. .

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಶಿವಮೊಗ್ಗ ಜಿಲ್ಲಾ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆಯ ವತಿಯಿಂದ ದಿನಾಂಕ 23-01-2021 ಶನಿವಾರದಂದು ನೇತಾಜಿ ಸುಭ...
24/01/2021

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಶಿವಮೊಗ್ಗ ಜಿಲ್ಲಾ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆಯ ವತಿಯಿಂದ ದಿನಾಂಕ 23-01-2021 ಶನಿವಾರದಂದು ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 125ನೇ ಜಯಂತಿಯನ್ನು ಸಂಜೆ ಆಚರಿಸಲಾಯಿತು. ಕಾರ್ಯಕ್ರಮ ವನ್ನು ಪ್ರಾರ್ಥನೆ ಯೊಂದಿಗೆ ಪ್ರಾರಂಭಿಸಲಾಯಿತು. ದೀಪ ಬೆಳಗಿಸಿ, ನೇತಾಜಿ ಯವರಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಕುಮಾರಿ ರಕ್ಷಾ ರವರು ನೇತಾಜಿ ರವರ ಬದುಕಿನಬಗ್ಗೆ ಮಾತನಾಡಿದರು. ಶ್ರೀಮತಿ ಕಾತ್ಯಾಯಿನಿ, ಜಿಲ್ಲಾ ತರಬೇತಿ ಆಯುಕ್ತರು (ಗೈಡ್ ), ರವರು ಸಹ ನೇತಾಜಿ ರವರ ಬಗ್ಗೆ ಮಾತನಾಡಿದರು. ನಂತರ ತೃತೀಯ ಸೋಪಾನ ಪ್ರಮಾಣ ಪತ್ರ, sslc ಪರೀಕ್ಷೆಯಲ್ಲಿ ಸೇವೆ ಸಲ್ಲಿಸಿದವರ ಪ್ರಮಾಣ ಪತ್ರ ಮತ್ತು ಸನ್ನದ್ದು ಗಳನ್ನು ವಿತರಿಸಲಾಯಿತು. ನಂತರ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಶ್ರೀ ಹೆಚ್.ಪರಮೇಶ್ವರ, ಜಿಲ್ಲಾ ಕಾರ್ಯದರ್ಶಿ ರವರು ಮಾತನಾಡುತ್ತ ನೇತಾಜಿ ರವರ ಜೀವನದಿಂದ ನಾವೆಲ್ಲರೂ ಪ್ರೇರೇಪಿತರಾಗಿ ತಾಯಿ ಭಾರತಾಂಬೆಯ ಸೇವೆಯಲ್ಲಿ ತೊಡಗಿಸಿಕೊಳ್ಳೋಣ ಎಂದು ಕರೆ ನೀಡಿದರು. ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಹೆಚ್. ಡಿ. ರಮೇಶ್ ಶಾಸ್ತ್ರಿ ರವರ ಮಾರ್ಗದರ್ಶನ ದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ ವಿಜಯ್ ಕುಮಾರ್, ಸಾರ್ವಜನಿಕ ಸಂಪರ್ಕಾಧಿಕಾರಿ, ಶ್ರೀ ಶ್ರೀನಿವಾಸ್ ವರ್ಮಾ ಸಹಾಯಕ ಜಿಲ್ಲಾ ಆಯುಕ್ತರು, ಶ್ರೀ ರಾಘವೇಂದ್ರ ಹಿರಿಯ ಸದಸ್ಯರು, ಹಲವಾರು ದಳ ನಾಯಕ, ನಾಯಕಿಯರು ಉಪಸ್ಥಿತರಿದ್ದರು. ಶ್ರೀ ರಾಜೇಶ್ ಅವಲಕ್ಕಿ, ಸಹ ಕಾರ್ಯದರ್ಶಿ ಸ್ಥಳೀಯ ಸಂಸ್ಥೆ ಸರ್ವರನ್ನು ಸ್ವಾಗತಿಸಿ, ವಂದಿಸಿದರು. ಕುಮಾರಿ ಶ್ರೇಯಾಂಕ, ರೇಂಜರ್ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಡಿ. ಎನ್. ನೂರ್ ಅಹ್ಮದ್, ಕಾರ್ಯದರ್ಶಿ ಸ್ಥಳೀಯ ಸಂಸ್ಥೆ, ಶಿವಮೊಗ್ಗ ವ್ಯವಸ್ಥೆ ಗಳನ್ನು ಅಚ್ಚುಕಟ್ಟಾಗಿ ಮಾಡಿದರು. ವೇದಿಕೆ ಕಾರ್ಯಕ್ರಮ ದ ನಂತರ ನೇತಾಜಿ ಸುಭಾಷ್ ಚಂದ್ರ ಬೋಸ್ ರವರಿಗೆ ದೀಪ ನಮನ ಸಲ್ಲಿಸಲಾಯಿತು. ರಾಷ್ಟ್ರಗೀತೆ ಗಾಯನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಕಬ್, ಬುಲ್ಬುಲ್, ಸ್ಕೌಟ್ಸ್, ಗೈಡ್ಸ್, ರೋವರ್ಸ್ , ರೇಂಜರ್ಸ್, ಪೋಷಕರೆಲ್ಲ ಸೇರಿ ನೇತಾಜಿ ನಮನ ಕಾರ್ಯಕ್ರಮ ಯಶಸ್ವಿ ಗೊಳಿಸಿಕೊಟ್ಟರು...

ಈ ದಿನ, ದಿನಾಂಕ 10-10-2020 ರಂದು ಕರ್ನಾಟಕ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್  ವತಿಯಿಂದ ನಡೆದ ರಾಜ್ಯ ಮಟ್ಟದ ದೇಶ ಭಕ್ತಿ ಗೀತೆ ಗಾಯನ ಸ್...
10/10/2020

ಈ ದಿನ, ದಿನಾಂಕ 10-10-2020 ರಂದು ಕರ್ನಾಟಕ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ನಡೆದ ರಾಜ್ಯ ಮಟ್ಟದ ದೇಶ ಭಕ್ತಿ ಗೀತೆ ಗಾಯನ ಸ್ಪರ್ಧೆಯಲ್ಲಿ ಶಿವಮೊಗ್ಗ ಸ್ಥಳೀಯ ಸಂಸ್ಥೆ ವತಿ ಇಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ, ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಇಂದು ಕಬ್ ವಿಭಾಗದಿಂದ ರಜತ ಕಬ್ ಪ್ಯಾಕ್ ಕುಮಾರ್ ಗೋಕುಲ್ , ಸಹನಾ ಬುಲ್ಬುಲ್ ಫ್ಲ್ಯಾಕ್ ನ ಕುಮಾರಿ ನಿಕಿತ, ಜ್ಞಾನದೀಪ ಶಾಲೆಯ ಸ್ಕೌಟ್ ಕುಮಾರ್ ವೀರ್ ನರಸಿಂಹ, ಕಸ್ತೂರಬಾ ಶಾಲೆಯ ಗೈಡ್ ಕುಮಾರಿ ಐಸಿರಿ ಭಾಗವಹಿಸಿದ್ದರು.
ಅವರಿಗೆ ಶಿವಮೊಗ್ಗ ಸ್ಥಳೀಯ ಸಂಸ್ಥೆ ಯ ಎಲ್ಲ ಪದಾಧಿಕಾರಿಗಳ ವತಿಯಿಂದ ಶುಭಕಾಮನೆಗಳು...
Today on 10-10-2020, Cub Gokul of Rajat Cub pack, Bulbul Nikita of Sahana Bulbul flock, scout Veer Narasimha of Jnanadeepa School, Guide Aisiri of Kasturba School participated in State Level Geetha Gayana patriotic song competition conducted by Karnataka State Bharat Scouts and Guides.
All the office bearers of Shivamogga Local Association convey their best wishes to all the participant's.....

Address

Shimoga
577204

Telephone

+919964678414

Website

Alerts

Be the first to know and let us send you an email when The Bharat Scouts and Guides, Shivamogga Local Association posts news and promotions. Your email address will not be used for any other purpose, and you can unsubscribe at any time.

Contact The Establishment

Send a message to The Bharat Scouts and Guides, Shivamogga Local Association:

Share