Sangama Kalavider Manipal

Sangama Kalavider Manipal Sangama Kalavider Manipal

ಕಾಮನಬಿಲ್ಲು 2026 – ಮಕ್ಕಳ ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ.​"ನಾವು ಎಳೆಯರು..... ನಾವು ಗೆಳೆಯರು" ಕಳೆದ ಹತ್ತು ದಿನಗಳಿಂದ ಮಣಿಪಾಲದಲ್ಲಿ...
20/05/2026

ಕಾಮನಬಿಲ್ಲು 2026 – ಮಕ್ಕಳ ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ.

​"ನಾವು ಎಳೆಯರು..... ನಾವು ಗೆಳೆಯರು" ಕಳೆದ ಹತ್ತು ದಿನಗಳಿಂದ ಮಣಿಪಾಲದಲ್ಲಿ ರಂಗು ರಂಗಾಗಿ ನಡೆದ ಮಕ್ಕಳ ರಂಗ ತರಬೇತಿ ಶಿಬಿರ 'ಕಾಮನಬಿಲ್ಲು' ಈಗ ಸಮಾರೋಪದ ಸಂಭ್ರಮದಲ್ಲಿದೆ. ಮುಗ್ಧ ಮನಸ್ಸುಗಳಿಗೆ ರಂಗಭೂಮಿಯ ಮ್ಯಾಜಿಕ್ ಉಣಬಡಿಸಿದ ಈ ಸುಂದರ ಜರ್ನಿಯ ಕೊನೆಯ ಮತ್ತು ಅತ್ಯಂತ ವಿಶೇಷವಾದ ದಿನಕ್ಕೆ ನಿಮ್ಮೆಲ್ಲರಿಗೂ ಪ್ರೀತಿಯ ಆಮಂತ್ರಣ. ✨
​ಮುದ್ದು ಮಕ್ಕಳ ನಟನೆ, ಮಾತು ಮತ್ತು ರಂಗಭೂಮಿಯ ಕೌಶಲ್ಯಗಳನ್ನು ಕಣ್ಣಾರೆ ಕಂಡು ಪ್ರೋತ್ಸಾಹಿಸಲು ತಪ್ಪದೆ ಬನ್ನಿ.
​🗓️ ದಿನಾಂಕ: ಮೇ 20, ಬುಧವಾರ (ನಾಳೆ)
🕡 ಸಮಯ: ಸಂಜೆ 5:30 ಕ್ಕೆ
📍 ಸ್ಥಳ: ಯಕ್ಷಗಾನ ಕಲಾರಂಗ ಐ.ವೈ.ಸಿ.(IYC) ಸಭಾಂಗಣ, ಶಾರದಾ ಕಲ್ಯಾಣ ಮಂಟಪದ ಹತ್ತಿರ, ಉಡುಪಿ.

ಕಾಮನಬಿಲ್ಲು ಮಕ್ಕಳ ರಂಗ ತರಬೇತಿ ಶಿಬಿರಸಂಗಮ ಕಲಾವಿದೆರ್ ಮಣಿಪಾಲ (ರಿ.) ವತಿಯಿಂದ, ಮಣಿಪಾಲ ಪದವಿ ಪೂರ್ವ ಕಾಲೇಜು, ರೋಟರಿ ಕ್ಲಬ್ ಮಣಿಪಾಲ ಹಾಗೂ ...
19/05/2026

ಕಾಮನಬಿಲ್ಲು ಮಕ್ಕಳ ರಂಗ ತರಬೇತಿ ಶಿಬಿರ

ಸಂಗಮ ಕಲಾವಿದೆರ್ ಮಣಿಪಾಲ (ರಿ.) ವತಿಯಿಂದ, ಮಣಿಪಾಲ ಪದವಿ ಪೂರ್ವ ಕಾಲೇಜು, ರೋಟರಿ ಕ್ಲಬ್ ಮಣಿಪಾಲ ಹಾಗೂ ಪೆರಂಪಳ್ಳಿ ಯುವಕ ಮಂಡಲದ ಸುವರ್ಣ ಮಹೋತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ 10 ದಿನಗಳ ಮಕ್ಕಳ ರಂಗ ತರಬೇತಿ ಶಿಬಿರ "ಕಾಮನಬಿಲ್ಲು" ನಾಳೆ ಮುಕ್ತಾಯಗೊಳ್ಳಲಿದೆ.

ಯುವ ಸಾಹಿತಿ ಮತ್ತು ಕಲಾವಿದರಾದ ಸಚಿನ್ ಅಂಕೋಲಾ ಅವರು ಸಮಾರೋಪದ ನುಡಿಯಾಗಲಿದ್ದಾರೆ. ಅತಿಥಿಗಳಾಗಿ ಮಣಿಪಾಲ ಹೈಸ್ಕೂಲ್ ಟ್ರಸ್ಟ್ ನ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಜೊತೆಯಾಗಲಿದ್ದಾರೆ.

ಪ್ರತಿ ವರ್ಷದಂತೆ ಈ ಬಾರಿಯೂ ಶಿಬಿರದ ಚಿಗುರುಗಳಾದ ಮಕ್ಕಳು ರಂಗಭೂಮಿಯ ರುಚಿ ಹತ್ತಿಸಿಕೊಂಡು ನಮ್ಮೆದುರಿಗೆ ನಾಲ್ಕು ರಂಗಪ್ರಸ್ತುತಿಗಳನ್ನು ತೋರಿಸಲಿದ್ದಾರೆ.
ಮಕ್ಕಳ ರಂಗದನಿಗೆ ಹಾಗೂ ಉತ್ಸಾಹಕ್ಕೆ ಸಾಕ್ಷಿಯಾಗೋಣ. ಆಸಕ್ತರೆಲ್ಲರಿಗೂ ಅಕ್ಕರೆಯ ಆಮಂತ್ರಣ. ಬನ್ನಿ 🙏🙏

"ಕಾಮನಬಿಲ್ಲು" ಮಕ್ಕಳ ರಂಗ ತರಬೇತಿ ಶಿಬಿರಕ್ಕೆ ಚಾಲನೆ!ಸಂಗಮ ಕಲಾವಿದೆರ್ ಮಣಿಪಾಲ (ರಿ.) ವತಿಯಿಂದ, ಮಣಿಪಾಲ ಪದವಿ ಪೂರ್ವ ಕಾಲೇಜು, ರೋಟರಿ ಕ್ಲಬ್...
12/05/2026

"ಕಾಮನಬಿಲ್ಲು" ಮಕ್ಕಳ ರಂಗ ತರಬೇತಿ ಶಿಬಿರಕ್ಕೆ ಚಾಲನೆ!

ಸಂಗಮ ಕಲಾವಿದೆರ್ ಮಣಿಪಾಲ (ರಿ.) ವತಿಯಿಂದ, ಮಣಿಪಾಲ ಪದವಿ ಪೂರ್ವ ಕಾಲೇಜು, ರೋಟರಿ ಕ್ಲಬ್ ಮಣಿಪಾಲ ಹಾಗೂ ಪೆರಂಪಳ್ಳಿ ಯುವಕ ಮಂಡಲದ ಸುವರ್ಣ ಮಹೋತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ 10 ದಿನಗಳ ಮಕ್ಕಳ ರಂಗ ತರಬೇತಿ ಶಿಬಿರ "ಕಾಮನಬಿಲ್ಲು" ಉದ್ಘಾಟನೆಗೊಂಡಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪಡುಬಿದ್ರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರಾದ ಡಾ. ಸುಮಾ ಎಸ್. ಅವರು ಮಾತನಾಡಿ, "ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರತರಲು ರಂಗಭೂಮಿ ಅತ್ಯುತ್ತಮ ವೇದಿಕೆ. ಇಂತಹ ಶಿಬಿರಗಳು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕ" ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ನಾಗೇಂದ್ರ ಪೈ, ಶ್ರೀಪತಿ ಪೆರಂಪಳ್ಳಿ, ಪವನ್ ಪೂಜಾರಿ, ಶಶಿಕಲಾ ರಾಜ ವರ್ಮಾ, ಶಶಾಂಕ್ ಶಿವತ್ತಾಯ, ಶಿಬಿರದ ನಿರ್ದೇಶಕರು ಸಂತೋಷ ಶೆಟ್ಟಿ ಹಿರಿಯಡ್ಕ ಹಾಗೂ ಸಂಚಾಲಕರು ವೈಷ್ಣವಿ ಭಂಡಾರ್ಕರ್ ಉಪಸ್ಥಿತರಿದ್ದರು.

Date: 10/05/2026

Udayavani 12-05-2026
12/05/2026

Udayavani 12-05-2026

11/04/2026
ಸಂಗಮ ಕಲಾವಿದೆರ್ ಮಣಿಪಾಲ (ರಿ.) ಇದರ ಈ ವರ್ಷದ ರಂಗ ಪ್ರಸ್ತುತಿ "ದೇವರ ಆತ್ಮಹತ್ಯೆ" ಬ್ರಹ್ಮಾವರ ದಲ್ಲಿ   ನಡೆಯುವ ಮಂದಾರ ರಂಗೋತ್ಸವದಲ್ಲಿ ಇದೇ ...
09/04/2026

ಸಂಗಮ ಕಲಾವಿದೆರ್ ಮಣಿಪಾಲ (ರಿ.) ಇದರ ಈ ವರ್ಷದ ರಂಗ ಪ್ರಸ್ತುತಿ "ದೇವರ ಆತ್ಮಹತ್ಯೆ" ಬ್ರಹ್ಮಾವರ ದಲ್ಲಿ ನಡೆಯುವ ಮಂದಾರ ರಂಗೋತ್ಸವದಲ್ಲಿ ಇದೇ ಏಪ್ರಿಲ್ 12 ನೇ ತಾರೀಖಿನಂದು ಪ್ರದರ್ಶನಗೊಳ್ಳಲಿದೆ. ಈ ನಾಟಕವು ಬೀಚಿ ಮತ್ತು ಶ್ರೀನಿವಾಸ ವೈದ್ಯರ ಲೇಖನಗಳ ಆಧಾರಿತ ರಂಗ ಪಠ್ಯವನ್ನು ಹೊಂದಿದ್ದು, ಯುವ ರಂಗ ನಿರ್ದೇಶಕರಾದ ರಮೇಶ್ ಬೆಣಕಲ್ ನಿರ್ದೇಶಿಸಿದ್ದಾರೆ.

ಸಂಗಮ ಕಲಾವಿದೆರ್ ಮಣಿಪಾಲ (ರಿ.) ಪ್ರಸ್ತುತಿ: "ದೇವರ ಆತ್ಮಹತ್ಯೆ" ನಾಟಕದ ಪ್ರದರ್ಶನ! ಉಡುಪಿಯ ಯಕ್ಷಗಾನ ಕಲಾರಂಗದ IYC ಸಭಾಂಗಣದಲ್ಲಿ ನಡೆದ 'ಕರಾ...
20/01/2026

ಸಂಗಮ ಕಲಾವಿದೆರ್ ಮಣಿಪಾಲ (ರಿ.) ಪ್ರಸ್ತುತಿ:
"ದೇವರ ಆತ್ಮಹತ್ಯೆ" ನಾಟಕದ ಪ್ರದರ್ಶನ!

ಉಡುಪಿಯ ಯಕ್ಷಗಾನ ಕಲಾರಂಗದ IYC ಸಭಾಂಗಣದಲ್ಲಿ ನಡೆದ 'ಕರಾವಳಿಯ ನಿರ್ದಿಗಂತ ಉತ್ಸವ'ದಲ್ಲಿ ನಿನ್ನೆ ನಮ್ಮ ತಂಡದ ನಾಟಕ ಪ್ರದರ್ಶನ ಸಂಪನ್ನಗೊಂಡಿತು.

ರಂಗರೂಪ-ನಿರ್ದೇಶನ: ರಮೇಶ್ ಕೆ. ಬೆಣಕಲ್
ಸಂಗೀತ: ಶುಭಕರ್ ಪುತ್ತೂರು

ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ.

ಇಂದು ಸಂಜೆ 6: 30ಕ್ಕೆ ಉಡುಪಿ ಯಕ್ಷಗಾನ ಕಲಾರಂಗದಲ್ಲಿ...
19/01/2026

ಇಂದು ಸಂಜೆ 6: 30ಕ್ಕೆ
ಉಡುಪಿ ಯಕ್ಷಗಾನ ಕಲಾರಂಗದಲ್ಲಿ...

ನಾವು ಎಳೆಯರು ನಾವು ಗೆಳೆಯರು #ಕಾಮನಬಿಲ್ಲು-2025
01/06/2025

ನಾವು ಎಳೆಯರು ನಾವು ಗೆಳೆಯರು

#ಕಾಮನಬಿಲ್ಲು-2025

Address

Manipal

Telephone

+918746930404

Website

Alerts

Be the first to know and let us send you an email when Sangama Kalavider Manipal posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Sangama Kalavider Manipal:

Shortcuts

Share