18/12/2017
ಡಾ. ಮಹೇಶ್ ನಾಲವಾಡ್ ಪೌಂಡೇಶನ ಮತ್ತು ಗ್ರೀನ್ ಆಪಲ್ ಇವೆಂಟ್ಸ್ & ಎಂಟರ್ಟೈನ್ಮೆಂಟ್ ನವರ ಸಹಯೋಗದಲ್ಲಿ ಇಂದು ದಿನಾಂಕ 17/12/2017 ಬಾನುವಾರ
ಶ್ರೀ ನಗರ ಸ್ಕೂಲ್ ಉಣಕಲ್ ನಲ್ಲಿ 1ನೇ ತರಗತಿಯಿಂದ 7ನೇ ತರಗತಿಯ ವರೆಗಿನ ಮಕ್ಕಳಿಗೆ ಜಿಲ್ಲಾ ಮಟ್ಟದ "ಚಿತ್ರ ಪಟ" ಎನ್ನುವ "ಚಿತ್ರಕಲೆ" ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಚಿತ್ರಕಲಾ ಸ್ಪರ್ಧೆಯಲ್ಲಿ 4000 ವಿದ್ಯಾರ್ಥಿಗಳು ಬಾಗಿಯಾಗಿದ್ದರು ಈ ಚಿತ್ರಕಲಾ ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಮಹೇಶ್ ಉಂತಾರ್, ವಿನೋದ್ ಇನಾಮ್ದಾರ್ ,ಪಾಷಾ, ಎ ಲೋಕಪಲ್ಲಿ, ಬಾಗಿಯಾಗಿದ್ದರು. ಈ ಸ್ಪರ್ಧೆಯಲ್ಲಿ ಬಾಗಿಯಾಗಿದ್ದ ವಿದ್ಯಾರ್ಥಿಗಳ ನೂರಕ್ಕೂ ಅಧಿಕ ಉತ್ತಮವಾದ ಚಿತ್ರಗಳಿಗೆ ಪ್ರಶಸ್ತಿಯನ್ನು ಕೊಡಲಾಯಿತು. ಈ ಚಿತ್ರಕಲಾ ಸ್ಪರ್ಧಾ ಕಾರ್ಯಕ್ರಮ ದಲ್ಲಿ ಬಾಗಿಯಾಗಿದ್ದ ಡಾ. ಮಹೇಶ್ ನಾಲವಾಡ್ ಮಕ್ಕಳ ಕಲೆಗೆ ಪ್ರೋತ್ಸಾಹ ನೀಡಿ ಇಂತಹ ಸ್ಪರ್ಧೆ ಮತ್ತು ಶಿಬಿರಗಳಿಗೆ ನನ್ನ ಪ್ರೋತ್ಸಾಹ ಸದಾ ಇದೆ ಎಂದು ತಿಳಿಸಿದರು.