08/08/2026
ರಂಗ ಸಜ್ಜಾಗಿದೆ… ರಾಘವೇಂದ್ರ ಮಹಿಮೆ ಮೊಳಗಲಿದೆ! 🌺✨
ಯಕ್ಷಗಾನದ ರಂಗವೈಭವಕ್ಕೆ ಹೊಸ ಹೊಳಪನ್ನು ನೀಡುತ್ತಾ ಹೊಸಪಟ್ಟಣ ಯಕ್ಷ ಕಲಾ ಟ್ರಸ್ಟ್ ಇದೇ ಮೊದಲ ಬಾರಿಗೆ ಬೆಂಗಳೂರಿನ ಪ್ರತಿಷ್ಠಿತ ರವೀಂದ್ರ ಕಲಾಕ್ಷೇತ್ರದಲ್ಲಿ ತನ್ನ ಕಲಾಪ್ರದರ್ಶನಕ್ಕೆ ಸಜ್ಜಾಗಿದೆ.
ಮಂತ್ರಾಲಯದ ಮಠಾಧೀಶರಾದ ಜಗದ್ಗುರು ಪರಮಪೂಜ್ಯ ಶ್ರೀ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯಾ ಆಶೀರ್ವಾದದೊಂದಿಗೆ, ನಂದ್ರೊಳ್ಳಿ ಶಾಂತಾರಾಮ ಶೆಟ್ಟಿ ವಿರಚಿತ ‘ಶ್ರೀ ರಾಘವೇಂದ್ರ ಮಹಾತ್ಮೆ – ಬ್ರಹ್ಮಲೋಕದಿಂದ ಭೂಲೋಕದ ವರೆಗೆ’ ಅವಳಿ ರಂಗಸ್ಥಳದಲ್ಲಿ ಯಕ್ಷಗಾನ ಪ್ರಸಂಗವು ಆಗಸ್ಟ್ 9ರಂದು ಮಧ್ಯಾಹ್ನ 2 ಗಂಟೆಗೆ ರಂಗದ ಮೇಲೆ ಅನಾವರಣಗೊಳ್ಳಲಿದೆ.
ಭಕ್ತಿ, ಭಾವ ಮತ್ತು ರಂಗವೈಭವವನ್ನು ಮೈಗೂಡಿಸಿಕೊಂಡ ಈ ಪ್ರಸಂಗದಲ್ಲಿ ಚಂಡೆಯ ಘೋಷ, ಬಣ್ಣದ ವೇಷ, ಲಯಬದ್ಧ ಹೆಜ್ಜೆ ಹಾಗೂ ಮೊಳಗುವ ಮಾತುಗಾರಿಕೆ ಒಂದಾಗಿ ಶ್ರೀ ರಾಘವೇಂದ್ರರ ಮಹಿಮೆಯನ್ನು ರಂಗದಲ್ಲಿ ಜೀವಂತಗೊಳಿಸಲಿವೆ.
ಹಿಮ್ಮೇಳದಲ್ಲಿ ಪ್ರಸನ್ನ ಭಟ್ ಬಾಳ್ಕಲ್, ಸೃಜನ್ ಗಣೇಶ ಹೆಗಡೆ, ಸುನಿಲ್ ಭಂಡಾರಿ ಕಡತೋಕ, ಸುಬ್ರಹ್ಮಣ್ಯ ಭಟ್ ಬಾಡ, ಶಿವಾನಂದ ಕೋಟ ಹಾಗೂ ರಾಮನ್ ಹೆಗಡೆ ಮೂರುರು ಸಾಥ್ ನೀಡಲಿದ್ದಾರೆ.
ಮುಮ್ಮೇಳದಲ್ಲಿ ನರಸಿಂಹ ಚಿಟ್ಟಾಣಿ, ಈಶ್ವರ ನಾಯ್ಕ ಮಂಕಿ, ಪ್ರಸನ್ನ ಶೆಟ್ಟಿಗಾರ ಮಂದಾರ್ಥಿ, ಪ್ರಕಾಶ ಕಿರಾಡಿ, ಚಂದ್ರಹಾಸ ಗೌಡ ಹೊಸಪಟ್ಟಣ, ಶಿವಾನಂದ ಶೆಟ್ಟಿ ಪೆರ್ಲ.ಪವನ ಕುಮಾರ್ ಸಾನ್ಮನೆ .ವಿಘ್ನೇಶ್ವರ ಹಾವಗೋಡಿ, ಪ್ರಶಾಂತ ಹೆಗಡೆ .ಗಣೇಶ ಹಳದಿಪುರ. ಗೌರೀಶ್ ಗುಣವಂತೆ ಕಾಣಿಸಿಕೊಳ್ಳಲಿದ್ದಾರೆ.
ಸ್ತ್ರೀವೇಷದಲ್ಲಿ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ವಿಜಯ ಗಾಣಿಗ ಬಿಜಮಕ್ಕಿ ಹಾಗೂ ವಸಂತ ನಾಯ್ಕ ಚಿಕ್ಕೊಳ್ಳಿ ಕಾಣಿಸಿಕೊಳ್ಳಲಿದ್ದು, ಹಾಸ್ಯದಲ್ಲಿ ರವೀಂದ್ರ ದೇವಾಡಿಗ ಕಮಲಶಿಲೆ ಹಾಗೂ ಪಾಂಡು ಪಟಗಾರ ಯಾಣ ರಂಜಿಸಲಿದ್ದಾರೆ.
ಒಂದು ಮಧ್ಯಾಹ್ನ… ಒಂದು ರಂಗ… ಭಕ್ತಿಯೊಂದಿಗಿನ ಒಂದು ಅಪೂರ್ವ ಯಕ್ಷಾನುಭವ! 🌸
ಬನ್ನಿ… ರಾಘವೇಂದ್ರ ಮಹಿಮೆಯ ದಿವ್ಯತೆಯಲ್ಲಿ ಮಿಂದೇಳೋಣ; ಹೊಸಪಟ್ಟಣದ ಯಕ್ಷನಾದಕ್ಕೆ ಸಾಕ್ಷಿಯಾಗೋಣ. 🙏✨