ಕಲ್ಯಾಣ ಜನಪರ ವೇದಿಕೆ

ಕಲ್ಯಾಣ ಜನಪರ ವೇದಿಕೆ ಕಲ್ಯಾಣ ಜನಪರ ವೇದಿಕೆ ಸಾಮಾಜಿಕ ಕಳಕಳಿ ಇಟ್ಟುಕೊಂಡು ನಮ್ಮ ಭಾಗದ ಜನಸ್ನೇಹಿಯಾಗಿ ಸೇವೆಮಾಡುವ ವೇದಿಕೆ

08/08/2026

ಕಲ್ಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಕಲ್ಯಾಣ ಜನಪರ ವೇದಿಕೆಯ ತಾಲೂಕ ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡುವ ಸಂದರ್ಭದಲ್ಲಿ ಆಳಂದ ತಾಲೂಕಿನ ಕಲ್ಯಾಣ ಜನಪರ ವೇದಿಕೆಯ ಪದಾಧಿಕಾರಿಗಳು ರಾಜ್ಯ ಪದಾಧಿಕಾರಿಗಳನ್ನು ಸ್ವಾಗತಿಸಿದ ಸಂದರ್ಭದಲ್ಲಿನ ವಿಡಿಯೋ.

ಅಳಂದದಲ್ಲಿ ಕಲ್ಯಾಣ ಜನಪರ ವೇದಿಕೆಯ ತಾಲೂಕು ಮತ್ತು ಗ್ರಾಮ ಘಟಕಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಆಯೋಜಿಸುತ್ತಿರುವುದಕ್ಕೆ ಶುಭಾಶಯಗ...
08/08/2026

ಅಳಂದದಲ್ಲಿ ಕಲ್ಯಾಣ ಜನಪರ ವೇದಿಕೆಯ ತಾಲೂಕು ಮತ್ತು ಗ್ರಾಮ ಘಟಕಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಆಯೋಜಿಸುತ್ತಿರುವುದಕ್ಕೆ ಶುಭಾಶಯಗಳು.
​ಕಲ್ಯಾಣ ಜನಪರ ವೇದಿಕೆ, ಕಲಬುರಗಿ ಜಿಲ್ಲೆ
ಶುಭ ಹಾರೈಕೆ ಹಾಗೂ ಆತ್ಮೀಯ ಆಹ್ವಾನ
​ಅಳಂದ ತಾಲೂಕಿನ ಕಲ್ಯಾಣ ಜನಪರ ವೇದಿಕೆಯ ನೂತನ ತಾಲೂಕಾಧ್ಯಕ್ಷರು, ವಿವಿಧ ವಲಯಾಧ್ಯಕ್ಷರು ಹಾಗೂ ಗ್ರಾಮ ಘಟಕಗಳ ಅಧ್ಯಕ್ಷರುಗಳ ಪದಗ್ರಹಣ ಹಾಗೂ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
​ದಿನಾಂಕ: 08-08-2026 (ಶನಿವಾರ)
​ಸ್ಥಳ: ಪ್ರವಾಸಿ ಮಂದಿರ ಆಳಂದ
​ಜನಪರ ಕಾಳಜಿ, ತಾಲೂಕಿನ ಅಭಿವೃದ್ಧಿ ಹಾಗೂ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ನೂತನವಾಗಿ ಜವಾಬ್ದಾರಿ ವಹಿಸಿಕೊಳ್ಳುತ್ತಿರುವ ಎಲ್ಲಾ ಪದಾಧಿಕಾರಿಗಳಿಗೂ ಹೃತ್ಪೂರ್ವಕ ಅಭಿನಂದನೆಗಳು.
​ಈ ಶುಭ ಸಮಾರಂಭಕ್ಕೆ ಸಂಘಟನೆಯ ಎಲ್ಲಾ ಜವಾಬ್ದಾರಿಯುತ ಕಾರ್ಯಕರ್ತರು, ಆತ್ಮೀೕಯ ಹಿತೈಷಿಗಳು, ಬಂಧು-ಮಿತ್ರರು ಹಾಗೂ ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.

​ಇಂತಿ ನಿಮ್ಮ ಪ್ರೀತಿಯ,
ನಾಗರಾಜ ಘೋಡಕೆ
ಜಿಲ್ಲಾಧ್ಯಕ್ಷರು
ಕಲ್ಯಾಣ ಜನಪರ ವೇದಿಕೆ ಕಲಬುರಗಿ

ಮಾದನಹಿಪ್ಪರ್ಗಾ ವಲಯ ಮಟ್ಟದ ಕ್ರೀಡಾಕೂಟ
03/08/2026

ಮಾದನಹಿಪ್ಪರ್ಗಾ ವಲಯ ಮಟ್ಟದ ಕ್ರೀಡಾಕೂಟ

01/08/2026

ಶುಭೋದಯಗಳೂ

31/07/2026

ಕಲ್ಯಾಣ ಜನಪರ ವೇದಿಕೆವತಿಯಿಂದ ಇಂದು ಕಲಬುರಗಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಭೇಟಿಯಾಗಿ ರೈತರ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದ್ದರು ೨ ನೇ ಕಂತಿನ ಹಣ ಕಡಿಮೆ ಜಮಾಮಾಡಲು ಕಾರಣೀಭೂತರಾಗಿರುವ ಸಂಬಂಧ ಪಟ್ಟ ಸಮೀಕ್ಷೆ ಅಧಿಕಾರಿಗಳು ಸಮೀಕ್ಷೆ ಮಾಡಿ ಮಾಡಿ ಅ ವೈಜ್ಞಾನಿಕವಾಗಿ ಮತ್ತು ತಪ್ಪು ವರದಿ ನೀಡಿರುತ್ತಾರೆ . ಇದರಿಂದ ವಿಮೆ ಕಂಪನಿಗಳು ರೈತರಿಗೆ ಬೆಳೆವಿಮೆ ಪರಿಹಾರ ಹಣವನ್ನು ಅತ್ಯಂತ ಕಡಿಮೆ ಮಟ್ಟದಲ್ಲಿ ನೀಡಿರುತ್ತಾರೆ . ಇದರಿಂದ ನಮ್ಮ ರೈತರಿಗೆ ಸಂಪೂರ್ಣವಾಗಿ ಮೋಸ ಮಾಡಿರುತ್ತಾರೆ ಕೂಡಲೇ ಬೆಳೆ ವಿಮೆ ಪರಿಹಾರದ ಸಮೀಕ್ಷೆಯ ವರದಿಯನ್ನು ಇನ್ನೊಮ್ಮೆ ಪರಿಶೀಲಿಸಿ ರೈತರಿಗೆ ಸೂಕ್ತವಾಗಿ ಬೆಳೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಮಾನ್ಯ ಅಪರ ಜಿಲ್ಲಾಧಿಕಾರಿಗಳಿಗೆ ಕಲ್ಯಾಣ ಜನಪರ ವೇದಿಕೆ ವತಿಯಿಂದ ಮನವಿ ಸಲ್ಲಿಸಿಲಾಯಿತು.

ಸದರಿ ದೂರನ್ನ ಅತಿ ಜರೂರು ಎಂದು ಪರಿಗಣಿಸಿ ಕೂಡಲೇ ನಮ್ಮ ರೈತರಿಗೆ ಸೂಕ್ತವಾದ ಬೆಳೆ ವಿಮೆ ಪರಿಹಾರ ನೀಡಬೇಕು ಇಲ್ಲವಾದರೆ ಮುಂಬರುವ ದಿನಗಳಲ್ಲಿ ರೈತರ ಜೊತೆಗೋಡಿ ಕಲ್ಯಾಣ ಜನಪರ ವೇದಿಕೆ ಉಗ್ರವಾದ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಚ್ಚರಿಸಲಾಯಿತು.

31/07/2026

ಕಲಬುರ್ಗಿ ಜಿಲ್ಲೆ, ಅಫಜಲಪುರ ತಾಲೂಕಿನ ಕರಜಗಿ ಮುರಾರ್ಜಿ ವಸತಿ ಶಾಲೆಯಲ್ಲಿ ಕಲುಷಿತ ಉಪಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆಯನ್ನು , ತಪ್ಪಿತಸ್ಥ ಅಧಿಕಾರಿಗಳು ಹಾಗೂ ನಿರ್ಲಕ್ಷ್ಯ ವಹಿಸಿದ ವೈದ್ಯಾಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
​ ಕಲ್ಯಾಣ ಜನಪರ ವೇದಿಕೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಕರಜಗಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇಂದು ಬೆಳಗಿನ ಉಪಹಾರ ಸೇವಿಸಿದ ಹಲವು ವಿದ್ಯಾರ್ಥಿಗಳು ತೀವ್ರ ಅಸ್ವಸ್ಥಗೊಂಡಿರುತ್ತಾರೆ. ಈ ದುರಂತ ಘಟನೆಯನ್ನು ನಮ್ಮ ಕಲ್ಯಾಣ ಜನಪರ ವೇದಿಕೆಯು ತೀವ್ರವಾಗಿ ಖಂಡಿಸುತ್ತದೆ.
​ವಿದ್ಯಾರ್ಥಿಗಳ ಜೀವದ ಜೊತೆ ಆಟವಾಡಿದ ಈ ಘಟನೆಗೆ ಕಾರಣರಾದ ಹಾಗೂ ಕಳಪೆ ಮಟ್ಟದ/ಹಾಳಾದ ಆಹಾರ ನೀಡಿರುವ ಸಂಬಂಧಪಟ್ಟ ವಸತಿ ಶಾಲೆಯ ಪ್ರಾನ್ಶುಪಾಲರು ನಿಲಯ ಪಾಲಕರು ಹಾಗೂ ಅಡುಗೆ ಸಿಬ್ಬಂದಿಯನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಬೇಕು
​ಅಲ್ಲದೆ, ಅಸ್ವಸ್ಥಗೊಂಡ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ವಹಿಸಿರುವ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ನಡೆಗೆ ವಿದ್ಯಾರ್ಥಿಗಳ ಪೋಷಕರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಡಳಿತ ಮಂಡಳಿ ಹಾಗೂ ವೈದ್ಯರ ಈ ಬೇಜವಾಬ್ದಾರಿತನವು ಅಕ್ಷಮ್ಯ ಅಪರಾಧವಾಗಿದೆ.
​ ಕಳಪೆ ಉಪಹಾರ ಪೂರೈಕೆಗೆ ನೇರ ಕಾರಣರಾದ ವಸತಿ ಶಾಲೆಯ ಪ್ರಾನ್ಶುಪಾಲರು, ನಿಲಯ ಪಾಲಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ತಕ್ಷಣವೇ ಅಮಾನತುಗೊಳಿಸಿ, ಅವರ ವಿರುದ್ಧ ಇಲಾಖಾ ತನಿಖೆ ನಡೆಸಬೇಕು.
​ಮತ್ತು ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ತೋರಿದ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಯ ವಿರುದ್ಧ ಸೂಕ್ತ ಶಿಸ್ತುಕ್ರಮ ಜರುಗಿಸಬೇಕು.
​ ಅಸ್ವಸ್ಥಗೊಂಡ ವಿದ್ಯಾರ್ಥಿಗಳಿಗೆ ತಕ್ಷಣವೇ ಉತ್ತಮ ದರ್ಜೆಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಬೇಕು ಹಾಗೂ ಅದರ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಬೇಕು.
​ಜಿಲ್ಲೆಯ ಎಲ್ಲಾ ವಸತಿ ಶಾಲೆಗಳಲ್ಲಿ ಸರಬರಾಜಾಗುವ ಆಹಾರದ ಗುಣಮಟ್ಟವನ್ನು ನಿಯಮಿತವಾಗಿ ತಪಾಸಣೆ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
​ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ವಿದ್ಯಾರ್ಥಿಗಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ಮೇಲ್ಕಂಡ ಆಗ್ರಹಗಳನ್ನು ತಕ್ಷಣವೇ ಈಡೇರಿಸಬೇಕು. ತಪ್ಪಿದಲ್ಲಿ, ಕಲ್ಯಾಣ ಜನಪರ ವೇದಿಕೆಯ ವತಿಯಿಂದ ಜಿಲ್ಲಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ.

​ತಮ್ಮ ನಂಬುಗೆಯ,
​ನಾಗರಾಜ ಘೋಡಕೆ
ಜಿಲ್ಲಾಧ್ಯಕ್ಷರು
ಕಲ್ಯಾಣ ಜನಪರ ವೇದಿಕೆ, ಕಲಬುರಗಿ

29/07/2026

ಗುರು ಪೂರ್ಣಿಮೆಯ ಶುಭಾಶಯಗಳು.
ನಮ್ಮ ಜೀವನದಲ್ಲಿ ದೇವರದ ನಂತರದ ಸ್ಥಾನ ಗುರುವಿನದ್ದಾಗಿದೆ. ನಮ್ಮ ಭವಿಷ್ಯವನ್ನು ರೂಪಿಸಿ ನಮ್ಮನ್ನು ವಿದ್ಯಾವಂತರು ಬುದ್ದಿವಂತರನ್ನಾಗಿಸಿ ಮಾಡುವ ಕಲೆ ನಮ್ಮ ಗುರುಗಳದ್ದಾಗಿದೆ. ಹಸಿಮಣ್ಣಿಗೆ ಆಕಾರ ಕೊಡುವ ಗುರು ಎಂಬ ಮಾರ್ಗದರ್ಶಿ ತಂದೆ ತಾಯಿಯ ಸ್ಥಾನಕ್ಕೆ ಸಮಾನರು. ಜ್ಞಾನ ಎಂಬ ಬೆಳಕಿನಡೆಗೆ ನಮ್ಮನ್ನು ಕೊಂಡೊಯ್ಯುವ ಈ ಮಹಾನುಭಾವರಾದ ಗುರುಗಳು ನಮ್ಮ ಜೀವನದ ದಿಕ್ಕನ್ನು ಬದಲಾಯಿಸುವವರಲ್ಲಿ ಪ್ರಮುಖರು. ಶಿಷ್ಯನ ಏಳಿಗೆಗಾಗಿ ಬೇಕಾದ ಸೋಪಾನವನ್ನು ಹತ್ತಿಸುವ ಸಾಧನೆಯ ಮಾರ್ಗದರ್ಶನ ಮಾಡುವ ಶ್ರೀ ಗುರುವಿಗೆ ವಂದನೆಗಳು..🙏🙏

ಇಂದು ಕಲ್ಯಾಣ ಜನಪರ ವೇದಿಕೆ ಕೇಂದ್ರ ಕಚೇರಿಯಲ್ಲಿ ಕಲ್ಯಾಣ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ಬಸವರಾಜ ಕೊರಳ್ಳಿ ಅವರ ನೇತೃತ್ವದಲ್ಲಿ*ಕಲ್ಬು...
29/07/2026

ಇಂದು ಕಲ್ಯಾಣ ಜನಪರ ವೇದಿಕೆ ಕೇಂದ್ರ ಕಚೇರಿಯಲ್ಲಿ ಕಲ್ಯಾಣ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ಬಸವರಾಜ ಕೊರಳ್ಳಿ ಅವರ ನೇತೃತ್ವದಲ್ಲಿ
*ಕಲ್ಬುರ್ಗಿ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ಶ್ರೀ ನಾಗರಾಜ ಘೋಡಕೆ* ಅವರನ್ನು ಆಯ್ಕೆ ಮಾಡಲಾಗಿತ್ತು ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಶ್ರೀ ವರದ ಸ್ವಾಮಿ ಹಿರೇಮಠ
ಹಾಗೂ ರಾಜ್ಯ ಕಾರ್ಯದರ್ಶಿಯಾದ ಶ್ರೀ ಶರಣಬಸಪ್ಪ ಕುಲಕರ್ಣಿ ರವರು ಮತ್ತು ಸೋಮಯ್ಯ ಸ್ವಾಮಿ ಶ್ರೀ ರಾಹುಲ ಹಂಚಟೆ ಹಾಗೂ ಶ್ರೀ ಸಂದೀಪ ಜೋರಗಸ್ತಿ ಭೀಮಳ್ಳಿ ಶ್ರೀ ನಿಖಿಲ ಭೀಮಳ್ಳಿ ಶ್ರೀ ದಯಾನಂದ ಪಾಟೀಲ ಶ್ರೀ ದತ್ತ ಪೂಜಾರಿ ಶ್ರೀ ವಿನೋದ ಮಡಿವಾಳ ಇನ್ನಿತರು ಉಪಸ್ಥಿತರಿದ್ದರು.

Address

Office 6/7 Pawadshetty Complex Ramathirth Temple Cross Near Aland Checkpost Kalaburagi-
Gulbarga
585101

Website

Alerts

Be the first to know and let us send you an email when ಕಲ್ಯಾಣ ಜನಪರ ವೇದಿಕೆ posts news and promotions. Your email address will not be used for any other purpose, and you can unsubscribe at any time.

Shortcuts

Share

Category