30/04/2026
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆ 4.3 ಓವರ್‌ಗಳಲ್ಲಿ 49 ರನ್ ಗಳಿಸಿದ್ದ ಸ್ಕೋರ್‌ಕಾರ್ಡ್ ಪೋಸ್ಟ್ ಮಾಡುವ ಮೂಲಕ ಪಂಜಾಬ್ ಕಿಂಗ್ಸ್ (PBKS) ತಂಡವು ಆರ್‌ಸಿಬಿಯನ್ನು ಟ್ರೋಲ್ ಮಾಡಿದೆ. 2017ರಲ್ಲಿ ಆರ್‌ಸಿಬಿ 49ಕ್ಕೆ ಆಲೌಟ್ ಆಗಿದ್ದನ್ನು ಕೆದಕಿದ ಈ ಪೋಸ್ಟ್ ಅಭಿಮಾನಿಗಳನ್ನು ಕೆರಳಿಸಿದೆ.
ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಆರ್‌ಸಿಬಿ ಅಭಿಮಾನಿಗಳು, "ಅನಗತ್ಯ ಟ್ರೋಲಿಂಗ್ ಬಿಟ್ಟು ಪಂದ್ಯ ಗೆಲ್ಲಲು ಗಮನ ಕೊಡಿ" ಎಂದು ಕಿಚಾಯಿಸಿದ್ದಾರೆ. ಕಳೆದ 19 ಪಂದ್ಯಗಳ ಪೈಕಿ ಪಂಜಾಬ್ ಅನುಭವಿಸಿದ 4 ಸೋಲುಗಳಲ್ಲಿ 3 ಆರ್‌ಸಿಬಿ ವಿರುದ್ಧವೇ ಬಂದಿವೆ ಎಂದು ನೆನಪಿಸಿದ್ದಾರೆ. ಅಲ್ಲದೆ, 2025ರ ಐಪಿಎಲ್ ಫೈನಲ್‌ನಲ್ಲಿ ಪಂಜಾಬ್ ಸೋಲಿಸಿ ಆರ್‌ಸಿಬಿ ಚಾಂಪಿಯನ್ ಆಗಿದ್ದನ್ನು ಸ್ಮರಿಸಿರುವ ಫ್ಯಾನ್ಸ್, ಮೇ 17ರ ಪಂದ್ಯದಲ್ಲಿ ತಕ್ಕ ಉತ್ತರ ನೀಡುವುದಾಗಿ ಎಚ್ಚರಿಸಿದ್ದಾರೆ.