06/09/2026
#ನೀಲಕಂಠ 2006
Dr.Ravichandran Veeraswami
ದೇವರು ಬರೆದ ಕತೆಯಲ್ಲಿ
ತಾಯಿಯ ಪ್ರೀತಿಯೇ ಮೊದಲಿಲ್ಲಿ
ಹೆತ್ತವಳು ಬರೆದ ಕತೆಯಲ್ಲಿ
ಕಂದನ ಪ್ರೀತಿಯೇ ಮೊದಲಿಲ್ಲಿ
ಆರಾರಿರಾರೋ ಹಾಡು
ಪ್ರೀತಿಗೆ ಮೊದಲ ಹಾಡು
ಅಮ್ಮ ಅನ್ನೋ ಮಾತು
ಪ್ರೀತಿಗೆ ಮೊದಲ ತುತ್ತು
ದೇವರು ಬರೆದ ಕತೆಯಲ್ಲಿ
ತಾಯಿಯ ಪ್ರೀತಿಯೇ ಮೊದಲಿಲ್ಲಿ
ಹೆತ್ತವಳು ಬರೆದ ಕತೆಯಲ್ಲಿ
ಕಂದನ ಪ್ರೀತಿಯೇ ಮೊದಲಿಲ್ಲಿ
💗🎶🎶🎶🎶🎶🎶🎶💗
ನೋವಿಗೆ ಮೊದಲ ಔಷದಿ
ಅಮ್ಮ ಅನ್ನೋ ಕೂಗೆ
ಕಂದನ ಮೊದಲಾ ಆಸೆಗೆ
ತಾಯಿ ನಾಂದಿಯಂತೆ
ಮೊದಲಿಗೆ ಮೊದಲಿಲ್ಲಿ
ಈ ತಾಯಿಯೇ ಮೊದಲಿಲ್ಲಿ
ಒಂಬತ್ತಾದರೂ ತೊಂಬತ್ತಾದರೂ
ಈ ಪ್ರೀತಿ ಬದಲಾಗದು
ಗರ್ಭದಗುಡಿಯಲಿ ಭಗವಂತ
ತಾನೇ ಕುಳಿತ ಸ್ವಾರ್ಥಿ ಕಣೋ
ತಾಯಿಯು ಗರ್ಭವ ಕಂದನಿಗೆ
ಮೀಸಲು ಇಡುವ ನಿಸ್ವಾರ್ಥಿ ಕಣೋ
💗🎶🎶🎶🎶🎶🎶🎶🎶💗
ಕರುಳನೇ ತೊಟ್ಟಿಲ್ಲ ಮಾಡಿ
ಕಂದನನ್ನು ತೂಗುವಳು
ಮನಸನ್ನೇ ಮೆಟ್ಟಿಲ್ಲ ಮಾಡಿ
ಕನಸನು ಜಯಿಸುವಳು
ಕೊನೆಗೆ ಕೊನೆಯಲ್ಲಿ
ತಾಯಿ ಪ್ರೀತಿಗೆ ಕೊನೆಯಲ್ಲಿ
ಜೊತೆಗೆ ಇದ್ದರು ಇಲ್ಲದಿದ್ದರೂ
ಈ ಪ್ರೀತಿ ಬದಲಾಗದು
ದೇವರು ಬರೆದ ಕತೆಯಲ್ಲಿ
ತಾಯಿಯ ಪ್ರೀತಿಯೇ ಮೊದಲಿಲ್ಲಿ
ಹೆತ್ತವಳು ಬರೆದ ಕತೆಯಲ್ಲಿ
ಕಂದನ ಪ್ರೀತಿಯೇ ಮೊದಲಿಲ್ಲಿ
ಆರಾರಿರಾರೋ ಹಾಡು
ಪ್ರೀತಿಗೆ ಮೊದಲ ಹಾಡು
ಅಮ್ಮ ಅನ್ನೋ ಮಾತು
ಪ್ರೀತಿಗೆ ಮೊದಲ ತುತ್ತು
ದೇವರು ಬರೆದ ಕತೆಯಲ್ಲಿ
ತಾಯಿಯ ಪ್ರೀತಿಯೇ ಮೊದಲಿಲ್ಲಿ
ಹೆತ್ತವಳು ಬರೆದ ಕತೆಯಲ್ಲಿ
ಕಂದನ ಪ್ರೀತಿಯೇ ಮೊದಲಿಲ್ಲಿ