13/05/2025
Many art enthusiasts are learning painting through our VidyaVinyasa Institute. But what we teach here is not just art — it's an education rooted in both modern artistic practices and the rich traditions of Indian painting and sculpture. This is a form of learning deeply intertwined with spiritual reflection and the cultural heritage of our land.
Alongside various forms of art, we also regularly create artworks that reflect and celebrate Indian festivals and traditions. In keeping with that spirit, on the auspicious occasion of Narasimha Jayanti, all our students — from beginners to advanced learners, have come together to create paintings of Lord Narasimha, the remover of all evil, seeking peace and well-being for the nation. Each one has offered their work with heartfelt devotion, hoping for divine blessings for the country and for their own growth in the field of art.
This online exhibition is being inaugurated by none other than our very own, world-renowned Haridasa Keertana singer, Sri Sheshagiri Das Raichur, who has graciously extended his blessings and good wishes to everyone involved. We offer our heartfelt respects and gratitude to him on behalf of the entire community.
-----------------------------------
ಅನೇಕ ಚಿತ್ರಕಲಾಸಕ್ತರು ನಮ್ಮ ವಿದ್ಯಾವಿನ್ಯಾಸ ಸಂಸ್ಥೆಯ ಮೂಲಕ ಚಿತ್ರಕಲೆಯನ್ನು ಕಲಿಯುತ್ತಿದ್ದಾರೆ. ಇಲ್ಲಿ ಕಲಿಯುತ್ತಿರುವುದು ಕೇವಲ ಚಿತ್ರಕಲೆಯಲ್ಲ. ಆಧುನಿಕ ಕಲೆಯ ಅಭ್ಯಾಸದ ಜೊತೆಗೆ ಭಾರತೀಯ ಚಿತ್ರ-ಶಿಲ್ಪಪದ್ಧತಿಗಳ ಹಿನ್ನೆಲೆಯಲ್ಲಿ ಕಲಿಸುತ್ತಿರುವ ಕಲಾಶಿಕ್ಷಣ. ಅಧ್ಯಾತ್ಮಚಿಂತನೆ ಒಡಗೂಡಿದ ಈ ನೆಲದ ಕಲಿಕೆ. ಕಲೆಯ ವಿವಿಧ ಪ್ರಕಾರಗಳನ್ನು ಕಲಿಯುವ ಜೊತೆ ಜೊತೆಗೆ ಭಾರತೀಯ ಹಬ್ಬಹರಿದಿನಗಳಿಗನುಗುಣವಾದ ಚಿತ್ರಗಳನ್ನೂ ಸಹಾ ಕಾಲಕಾಲಕ್ಕೆ ಮಾಡುತ್ತಾ ಬಂದಿದ್ದೇವೆ. ಅದರಂತೆ ನರಸಿಂಹ ಜಯಂತಿಯ ಈ ಸುಸಂದರ್ಭದಲ್ಲಿ ಎಲ್ಲಾ ಹಿರಿಯ-ಕಿರಿಯ ಕಲಾಸಕ್ತರು, ಸಕಲ ದುರಿತ ನಿವಾರಕರಾದ ಶ್ರೀನರಸಿಂಹದೇವರ ಚಿತ್ರ ಮಾಡುವ ಮೂಲಕ ದೇಶಕ್ಕೆ ಕ್ಷೇಮವಾಗಲಿ ಎಂದು ಎಲ್ಲರೂ ಬರೆದು ದೇವರಿಗೆ ಅರ್ಪಿಸಿದ್ದಾರೆ. ಅವರೆಲ್ಲರಿಗೂ ಕಲಾವಿದ್ಯೆಯಲ್ಲಿ ಉತ್ತಮ ಸಿದ್ಧಿಯಾಗಲಿ ಎಂದು ಹಾರೈಸಿ ಈ ಚಿತ್ರಗಳನ್ನು ನರಸಿಂಹದೇವರಿಗೆ ಅರ್ಪಿಸುತ್ತಿದ್ದೇವೆ.
ಈ ಆನ್-ಲೈನ್ ಪ್ರದರ್ಶನವನ್ನು ನಮ್ಮವರೇ ಆದ, ವಿಶ್ವವಿಖ್ಯಾತರಾದ ಹರಿದಾಸ ಕೀರ್ತನೆಗಳ ಗಾಯಕರಾದ ಶ್ರೀ ಶೇಷಗಿರಿದಾಸ್ ರಾಯಚೂರು ಇವರು ಉದ್ಘಾಟಿಸಿ ಎಲ್ಲರಿಗೂ ಶುಭ ಕೋರಿದ್ದಾರೆ. ಅವರಿಗೆ ನಮ್ಮೆಲ್ಲರ ಪ್ರೀತಿಯ ನಮಸ್ಕಾರಗಳನ್ನು ಅರ್ಪಿಸುತ್ತಿದ್ದೇವೆ.