29/06/2023
ರಂಗಸಂಗ್ರಹ ಬಣ್ಣಗಳ ಬಯಲು ಕುಟುಂಬಕ್ಕೆ ಸ್ವಾಗತ.
ರಂಗ-ಕಲಾಭಿರುಚಿ ಶಿಬಿರ 2023-24 ಐದನೆಯ ಬ್ಯಾಚ್ 25 ಜೂನ್ 2023, ಭಾನುವಾರ
ಪ್ರಾರಂಭವಾಗಿದ್ದು , ಈ ಕಾರ್ಯಾಗಾರವು ಪ್ರತಿ ಶನಿವಾರ (ಸಂಜೆ 5:00 ರಿಂದ 7:00) ಹಾಗೂ ಭಾನುವಾರ (ಬೆಳಿಗ್ಗೆ 10:ರಿಂದ ಮಧ್ಯಾಹ್ನ 1:00) ರವರೆಗೆ ಇರುತ್ತವೆ. ಜನವರಿ ಎರಡನೇ ವಾರದಲ್ಲಿ ಅಂತಿಮ ಪ್ರದರ್ಶನದವರೆಗೆ ನಮ್ಮ ತರಗತಿಗಳು, ವಿವಿಧ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ.
ಇದರ ಭಾಗವಾಗಿ ದಿನಾಂಕ 2 ಜುಲೈ 2023, ಭಾನುವಾರ ಬೆಳಿಗ್ಗೆ 10:00 ಕ್ಕೆ ಶಿಬಿರದ ಉದ್ಘಾಟನಾ ಕಾರ್ಯಕ್ರಮವಿರತ್ತದೆ. ಈ ಕಾರ್ಯಕ್ರಮಕ್ಕೆ
ಶ್ರೀ ಬಸವರಾಜು. ಒ.ಎಮ್. ಕಲಾಪೋಷಕರು,
ಶ್ರೀ ಸೂರ್ಯಕಾಂತ ಗುಣಕಿಮಠ. ಸಾಹಿತಿಗಳು, ರಂಗಭೂಮಿ. ಹಿರಿತೆರೆ ಕಲಾವಿದರು
ಶ್ರೀ ಭರತ್ ಕುಮಾರ್ ಮೈಸೂರು. ರಂಗಭೂಮಿ, ಕಿರುತೆರೆ, ಹಿರಿತೆರೆ ಕಲಾವಿದರು
ಶ್ರೀಮತಿ. ಚಂದ್ರಕಲಾ. ಹೆಚ್. ಕೆ
ಕಲಾಪೋಷಕರು.
ಅಥಿತಿಗಳಾಗಿ ಆಗಮಿಸುತ್ತಿದ್ದಾರೆ.
ಈ ಕಾರ್ಯಕ್ರಮಕ್ಕೆ ತಾವು ಮನೆಯವರೆಲ್ಲರೂ ಮಕ್ಕಳ ಸಮೇತ ಬರಬೇಕು. ಮತ್ತು
ಅಕ್ಕಪಕ್ಕದ ಮನೆಯವರನ್ನು. ಸ್ನೇಹಿತರನ್ನು, ಅವರ ಮಕ್ಕಳನ್ನು
ಕರೆತರಬೇಕು.
ಬಣ್ಣಗಳ ಬಯಲಲ್ಲಿ ವಿಹರಿಸುತ್ತ, ಹಾಡುತ್ತ, ಕುಣಿಯುತ್ತ, ನಲಿಯುತ್ತ, ಬಯಕೆಯ ಬಣ್ಣಗಳ, ವಿಚಾರಗಳ, ಭಾವಾಭಿನಯದ ಸಂಯೋಜನೆ ಮಾಡಿ, ಕಲ್ಪನೆಗಳಿಗೆ ಜೀವತುಂಬುವ ರಂಗಪರಿಸರಕ್ಕೆ ಎಲ್ಲರಿಗೂ ಸ್ವಾಗತ.