27/05/2023
ಆತ್ಮೀಯರೇ
ಗೀಜಗ ತಂಡವು ಸಂವಾದ ಬದುಕು ಕಮ್ಯುನಿಟಿ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ನಾಟಕ ರಚನಾ ಕಾರ್ಯಾಗಾರದ ಎರಡನೇ ಹಂತವು ತಮ್ಮೆಲ್ಲರ ಪ್ರೋತ್ಸಾಹದಿಂದ ಯಶಸ್ವಿಯಾಗಿ ಮುಕ್ತಾಯವಾಯಿತೆಂದು ತಿಳಿಸಲು ತಂಡವು ಹರ್ಷಿಸುತ್ತೇವೆ. ರಾಜ್ಯದಾದ್ಯಂತ ಆಸಕ್ತ 45 ಜನರು ಅರ್ಜಿ ಹಾಕಿದ್ದರು, ಅವುಗಳಲ್ಲಿ 15 ಆಯ್ಕೆಗೊಂಡು, ಮೊದಲ ಹಂತದಲ್ಲಿ ಆನ್ ಲೈನ್ ತರಗತಿಗಳು ಜರುಗಿದವು. ಆ ತರಗತಿಗಳನ್ನು ನಡೆಸಿಕೊಟ್ಟ ಶಕೀಲ್ ಅಹಮದ್, ಕಾವ್ಯ ಕಡಮೆ, ಸುಧಾ ಆಡುಕಳ, ಅಭಿಮನ್ಯು ಭೂಪತಿ, ಡಾ. ಶ್ರೀಪಾದ ಭಟ್ ರವರಿಗೆ ಪ್ರೀತಿಯ ನನ್ನಿ.
ಎರಡನೇ ಹಂತದ ತಯಾರಿಯಲ್ಲಿ ಸ್ಥಳಕ್ಕಾಗಿ ವದ್ದಾಡುತ್ತಿರುವಾಗ ಸಹಯೋಗದ ಮುಖೇನ ಸ್ಥಳಾವಕಾಶವಿತ್ತು ನಮ್ಮ ಕನಸನ್ನು ಮುನ್ನೆಡೆಸಿದ ಸಂವಾದ ಸಂಸ್ಥೆ, ಮತ್ತು ಜನಾರ್ದನ ಕೆಸರಗದ್ದೆ, ಮುರಳಿ ಮೋಹನ ಕಾಟಿ, ದಯಾನಂದ ಮತ್ತು ಕ್ಯಾಂಪಸ್ ಎಲ್ಲಾ ವರ್ಗದವರಿಗೆ ವ್ಯವಸ್ಥೆಗಳಿಗೆ ಶರಣು.
ಆರ್ಥಿಕ ಸಹಾಯದಿಂದ ನಮ್ಮ ಕನಸನ್ನು ನನಸಾಗಿಸಲು ಮುನ್ನಡೆಸಿದ ಗೌರಿದತ್ತು, ಬಿ. ಸುರೇಶ್, ಅವಿರತ ತಂಡ, ವೀಮೂವ್, ಪ್ರವರ, ದಾಟು, ರಂಗವರ್ತುಲ ರಂಗ ತಂಡಗಳಿಗೆ ನಮ್ಮ ಮೇಲಿಟ್ಟ ನಂಬಿಕೆಗೆ ಕೃತಜ್ಞತೆಗಳು.
ಕಾರ್ಯಾಗಾರವನ್ನು ಉದ್ಘಾಟನೆ ಮಾಡಿಕೊಟ್ಟ ಡಾ. ಹೆಚ್. ಎಸ್. ಶಿವಪ್ರಕಾಶ್, ಆಶಯ ನುಡಿಗಳನ್ನಾಡಿದ ಸಿದ್ದರಾಮ ಕೊಪ್ಪರ್ ರವರಿಗೆ ಜೈಭೀಮ್ ನಮನಗಳು. ವಿವಿಧ ವಿಷಯಗಳ ಮೇಲೆ ಬೆಳಕು ಚೆಲ್ಲಿದ ಚಾಣಕ್ಯ ವ್ಯಾಸ್, ಬಿ. ಎಮ್. ಗಿರಿರಾಜ್, ದಯಾನಂದ, ಎಸ್. ಸುರೇಂದ್ರನಾಥ್, ಕೆ. ಪಿ. ಲಕ್ಷ್ಮಣ, ಶರಣ್ಯ ರಾಂ ಪ್ರಕಾಶ್, ಡಾ. ರಾಜಪ್ಪ ದಳವಾಯಿ, ಡಾ. ಕೆ. ವೈ. ನಾರಾಯಣ ಸ್ವಾಮಿ ರವರಿಗೆ ಪ್ರೀತಿಯ ವಂದನೆಗಳು.
ಇವುಗಳ ನಡುವೆ ಕವಿತೆಗಳ ವಾಚಿಸಿದ ಸಂಧ್ಯಾ ರಾಣಿ, ಶಿವಪ್ರಸಾದ್ ಪಟ್ಟಣಗೆರೆ, ನಾಟಕ ವಾಚಿಸಿದ ಹವೀಶ್, ನಾಟಕ ಪ್ರದರ್ಶನ ಮಾಡಿದ ನಿಷ ಅಬ್ದುಲ್ ಮತ್ತು ತಂಡ, ಪದ ಪ್ರಸ್ತುತ ಪಡಿಸಿದ ಜಂಗಮ ಕಲೆಕ್ಟೀವ್ ತಂಡಕ್ಕೆ ಆಭಾರಿಯಾಗಿದ್ದೇವೆ.
ಮರೆಯೋದುಂಟೇ ....
ಈ ಕಾರ್ಯ ಆಗುಮಾಡುವಲ್ಲಿ ಹಲವರ ಪಾಲಿದೆ, ಭಿತ್ತಿ ಚಿತ್ರಗಳ ವಿನ್ಯಾಸ ಮಾಡಿಕೊಟ್ಟ ಬ. ಕಲ್ಚರ್, ವಾಲೆಂಟಿಯರ್ ಆಗಿ ತೊಡಗಿಸಿಕೊಂಡ ರಾಹುಲ್, ಸುನಿಲ್, ವಾಹನ ಚಾಲನೆ ಮಾಡಿದ ಸತೀಶ್, ದೂರದೂರುಗಳಿಂದ ಬಂದು ಪಾಲ್ಗೊಂಡ ಅಭ್ಯರ್ಥಿಗಳು, ವಿಶೇಷವಾಗಿ ಒಟ್ಟು ಕಾರ್ಯಾಗಾರವನ್ನು ಮುನ್ನಡೆಸಿದ ಕಾರ್ಯಾಗಾರದ ನಿರ್ದೇಶಕರಾದ ಡಾ. ಹೆಚ್. ಎಲ್. ಪುಷ್ಪ ಮತ್ತು ಕಾರ್ಯಾಗಾರದ ರೂಪುರೇಷೆಗಳನ್ನು ಹುಡುಕ ಹೊರಟಾಗ ಒಳಹುಗಳನ್ನು ಕೊಟ್ಟ ಶಶಿಧರ್ ಭಾರೀಘಾಟ್, ಅಭಿಷೇಕ್ ಅಯ್ಯಂಗಾರ್, ವೆಂಕಟೇಶ್ ಪ್ರಸಾದ್, ಗಣೇಶ್ ಶಂಕರ್, ಉಜ್ವಲ ರಾವ್, ನಯನ ಸೂಡ ಹಾಗೂ ಕನ್ನಡ ರಂಗಭೂಮಿಗೆ ಆಭಾರಿಯಾಗಿದ್ದೇವೆ. ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ನಮ್ಮೊಂದಿಗೆ ಕೈ ಜೋಡಿಸಿದ ವಿಶ್ವನಾಥ ಮಂಡಿ, ದಿವಾಕರ್ ನಂತಹ ಹಲವು ಮನಸುಗಳಿಗೆ ಪ್ರೀತಿಯ ಸಲಾಂ. ಮುಂದೆಯೂ ನಿಮ್ಮೆಲ್ಲರ ಪ್ರೀತಿ ಸ್ನೇಹಗಳ ನಿರೀಕ್ಷೆಯಲ್ಲಿ ......
ಇಂತಿ
ಗೀಜಗ ತಂಡ