06/11/2024
ಗ್ರಾಮ ಸ್ವರಾಜ್ಯದ ಬಹು ಮುಖ್ಯ ಚಟುವಟಿಕೆ ಗ್ರಾಮಸಭೆ ಮತ್ತು ವಾರ್ಡ್ ಸಭೆಗಳು. ವಿಪರ್ಯಾಸ ಎಂದರೆ ಬಹುತೇಕ ಪಂಚಾಯತಿಗಳಲ್ಲಿ ಈ ಸಭೆಗಳೇ ನಡೆಯುವುದಿಲ್ಲ ನಡೆದರೂ ಕೇವಲ ತಾಂತ್ರಿಕ ವಿಚಾರಗಳ ವಿನಿಮಯ, ಹಣಕಾಸು ವಿಚಾರ ಮತ್ತು ಸೌಲಬ್ಯಗಳ ಮಾಹಿತಿ ಹಂಚಿಕೆಗೆ ಅವು ಸೀಮಿತವಾಗುತ್ತಿವೆ. ತೀರಾ ಕೆಲವು ಪಂಚಾಯತಿಗಳಲ್ಲಿ ಅವುಗಳ ಆಶಯಗಳು ಚರ್ಚೆಯಾಗುತ್ತಿವೆ . ಈ ನಿಟ್ಟಿನಲ್ಲಿ ಅನೋಡ್ ಸಂಸ್ಥೆಯ ಚಟುವಟಿಕೆಗಳು ಗ್ರಾಮ ಪಂಚಾಯತ್ ಸದಸ್ಯರನ್ನು ಸಾಮಾಜಿಕ ಬದಲಾವಣೆಯ ಹರಿಕಾರರನ್ನಾಗಿಸುವತ್ತ ಮುನ್ನಡೆಸುತ್ತಿವೆ .
ಕಳೆದ ಎರಡು ದಿನಗಳಲ್ಲಿ ಚಿತ್ರದುರ್ಗದ ಅನೇಕ ಪಂಚಾಯತಿಗಳ ಸದಸ್ಯರು ಮತ್ತು ಗ್ರಾಮಸ್ಥರನ್ನು ಬೇಟಿಯಾಗಿ ಮಾತುಕತೆ ನಡೆಸಿದೆವು.