Cinibuzz Kannada

Cinibuzz Kannada ಕನ್ನಡ ಸಿನಿಮಾ ನ್ಯೂಸ್ | ಮೂವಿ ಅಪ್‌ಡೇಟ್ಸ್ | ಸೆಲಿಬ್ರಿಟಿ ಇಂಟರ್ವ್ಯೂಸ್ | ರೀಲ್ಸ್ ಮತ್ತು ವಿಡಿಯೋಸ್ Cinibuzz ನಿಮ್ಮ ಸಿನಿಮಾ ಹಬ್|
ಪ್ರಮೋಷನ್ ಗಾಗಿ ಸಂಪರ್ಕಿಸಿ -9019661474

ಕನ್ನಡ ಸಿನಿಮಾ ನ್ಯೂಸ್ | ಮೂವಿ ಅಪ್‌ಡೇಟ್ಸ್ | ಸೆಲಿಬ್ರಿಟಿ ಇಂಟರ್ವ್ಯೂಸ್ | ರೀಲ್ಸ್ ಮತ್ತು ವಿಡಿಯೋಸ್ Cinibuzz ನಿಮ್ಮ ಸಿನಿಮಾ ಹಬ್|
ಪ್ರಮೋಷನ್ ಗಾಗಿ ಸಂಪರ್ಕಿಸಿ -9900000579

16/07/2026

ರುಕ್ಮಿಣಿ ರಾಧಾಕೃಷ್ಣ ಡೈರೆಕ್ಟರ್ ಮಾತು 😍

16/07/2026

ರುಕ್ಮಿಣಿ ರಾಧಾಕೃಷ್ಣ ದಲ್ಲಿ ನನ್ನ ಪಾತ್ರವನ್ನು ನಾನೇ ಆಯ್ಕೆ ಮಾಡಿಕೊಂಡೆ 😍

16/07/2026

ರುಕ್ಮಿಣಿ ರಾಧಾಕೃಷ್ಣ ಪ್ರೇಮ್ ಕಹಾನಿ!!

16/07/2026

ರುಕ್ಮಿಣಿ ರಾಧಾಕೃಷ್ಣ ಮೂಲಕ ಮೋಕ್ಷಿತಾ ಎಂಟ್ರಿ 😍

16/07/2026

ರುಕ್ಮಿಣಿ ರಾಧಾಕೃಷ್ಣ ಜೋಡಿ 😍

ಮಾಧ್ಯಮ ಕ್ಷೇತ್ರದ ಕ್ರೇಜಿಸ್ಟಾರ್‌ ಮೋಹನ್‌ ಸರ್‌ಗೆ ಹುಟ್ಟುಹಬ್ಬದ ಶುಭಾಶಯಗಳು...
14/07/2026

ಮಾಧ್ಯಮ ಕ್ಷೇತ್ರದ ಕ್ರೇಜಿಸ್ಟಾರ್‌ ಮೋಹನ್‌ ಸರ್‌ಗೆ ಹುಟ್ಟುಹಬ್ಬದ ಶುಭಾಶಯಗಳು...

ಲೈಫ್ ಕೊಟ್ಟ ವಾಹಿನಿಗೇ ಕೈಕೊಟ್ಟನಾ ಗಿಲ್ಲಿ?ಪಾಪ ಗಿಲ್ಲಿ! ತುಂಬಾ ಒಳ್ಳೇ ಹುಡುಗ, ಅಮಾಯಕ, ಪ್ರತಿಭಾವಂತ… ತನ್ನಲ್ಲಿರುವ ಟ್ಯಾಲೆಂಟನ್ನು ಮಾತ್ರ ಬಳ...
14/07/2026

ಲೈಫ್ ಕೊಟ್ಟ ವಾಹಿನಿಗೇ ಕೈಕೊಟ್ಟನಾ ಗಿಲ್ಲಿ?

ಪಾಪ ಗಿಲ್ಲಿ! ತುಂಬಾ ಒಳ್ಳೇ ಹುಡುಗ, ಅಮಾಯಕ, ಪ್ರತಿಭಾವಂತ… ತನ್ನಲ್ಲಿರುವ ಟ್ಯಾಲೆಂಟನ್ನು ಮಾತ್ರ ಬಳಸಿ ಬಿಗ್ ಬಾಸ್ ಶೋವನ್ನು ಗೆದ್ದವನು. ಆ ಮೂಲಕ ಅಗಣಿತ ಅಭಿಮಾನಿಗಳನ್ನು ಸಂಪಾದಿಸಿದವನು.... ಇದು ಗಿಲ್ಲಿ ಬಗ್ಗೆ ಇರುವ ಸಾರ್ವಜನಿಕ ಅಭಿಪ್ರಾಯ!

ಆದರೆ, ಇದೇ ಗಿಲ್ಲಿ ಸಿಕ್ಕಾಪಟ್ಟೆ ಲೆಕ್ಕಾಚಾರದ ಮನ್ಷ. ಯಾರೇ ಕರೆದರೂ ವಿಪರೀತ ಕಾಸು ಕೇಳುತ್ತಾನೆ. ಸಣ್ಣ ಪುಟ್ಟ ಕಾರ್ಯಕ್ರಮಕ್ಕೆ ಕಾಲಿಡೋಕೂ ದೊಡ್ಡ ಮಟ್ಟದ ಪೇಮೆಂಟು ಬಯಸುತ್ತಾನೆ ಎನ್ನುವ ಅಸಮಧಾನ ಒಳಗೊಳಗೇ ಹೊಗೆಯಾಡುತ್ತಿದೆ. ಮಾತಾಡೋರ ತಕರಾರು ಏನೇ ಇರಲಿ, ಗಿಲ್ಲಿ ಪಾಲಿಗೆ ಇದು ಕೊಯ್ಲಿನ ಕಾಲ. ಈಗಿರುವ ಕ್ರೇಜು, ಜನಪ್ರಿಯತೆಯನ್ನು ಬಳಸಿಕೊಂಡು ಲೈಫಲ್ಲಿ ಸೆಟಲ್ ಆಗಬೇಕು. ಅದನ್ನು ಆತ ಅಚ್ಚುಕಟ್ಟಾಗಿ ಪಾಲಿಸುತ್ತಿದ್ದಾನೆ. ಇವತ್ತಿಗೆ ರೀಲ್ಸಲ್ಲಿ ಕೋತಿ ತರಾ ಕುಣಿಯೋರು, ಕಮಂಗಿಗಳಂತೆ ಡೈಲಾಗ್ ಹೊಡೆಯೋರು, ವಿಕೃತರೆಲ್ಲಾ ಸೆಲೆಬ್ರಿಟಿ ಅಂತಾ ಮೆರೆಯುತ್ತಿದ್ದಾರೆ. ಸೋಷಿಯಲ್ ಮೀಡಿಯಾ ಇನ್ಫ್ಲ್ಯೂಯೆನ್ಸರ್ ಹೆಸರಲ್ಲಿ ವಕರು-ಪೆಕರುಗಳೆಲ್ಲಾ ಸಂಪಾದನೆಗಿಳಿದಿದ್ದಾರೆ. ಅಪಾರ ಜನಪ್ರಿಯತೆ ಪಡೆದಿರುವ, ಚತುರ ಗಿಲ್ಲಿನಟ ಕಾಸು ಕೇಳೋದೇನು ತಪ್ಪಲ್ಲ!

ಆದರೆ, ನಲ್ಲಿಮೂಳೆ ಗಿಲ್ಲಿನಟನಾಗಿದ್ದ ಹುಡುಗನನ್ನು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕರೆಸಿಕೊಂಡು ಈ ಮಟ್ಟಕ್ಕೆ ತಂದುನಿಲ್ಲಿಸಿದ ಕಲರ್ಸ್ ಕನ್ನಡ ಚಾನೆಲ್ಲಿಗೇ ಕೈ ಕೊಟ್ಟಿದ್ದಾನಂತೆ. ಬಿಗ್ ಬಾಸ್ ಗೆದ್ದಮೇಲೆ ಕಲರ್ಸ್ ಆರಂಭಿಸಿದ ಕ್ವಾಟ್ಲೆ ಕಿಚನ್ ಕಾರ್ಯಕ್ರಮಕ್ಕೆ ಬರಲು ಗಿಲ್ಲಿ ಹಿಂದೇಟು ಹಾಕಿಬಿಟ್ಟನಂತೆ. ಒಂದು ಸಲ ಗೆದ್ದಮೇಲೆ ಅದೇ ವಾಹಿನಿಗೆ ಹೋಗಿ ಕೂರೋದು ಸರಿಯಲ್ಲ ಎನ್ನುವುದು ಗಿಲ್ಲಿ ಮನಸ್ಥಿತಿಯಂತೆ. ಸದ್ಯ ಕಲರ್ಸ್ ಕನ್ನಡದ ಹೆಡ್ ಪ್ರಕಾಶ್ಗೆ ಬಹುಶಃ ಇದರಿಂದ ಸಂಕಷ್ಟ ಎದುರಾಗಿದೆ. ಹೇಳಿಕೇಳಿ ಕಾರ್ಪೊರೇಟ್ ಸಂಸ್ಥೆ ಅದು. ಬಾಂಬೆಯಲ್ಲಿ ಕೂತಿರುವ ಮೇಲಿನವರು ʻʻಅಲ್ರೀ… ನಮ್ಮ ಕಾರ್ಯಕ್ರಮದಿಂದ ಆ ಹುಡುಗ ವಿಶ್ವವಿಖ್ಯಾತಿ ಪಡೆದಿದ್ದಾನೆ. ಅವನನ್ನು ಕರೆಸಿ ಕೂರಿಸಿಕೊಳ್ಳುವಷ್ಟು ತಾಕತ್ತಿಲ್ಲವಾ ನಿಮಗೆʼʼ ಅಂತಾ ಗದರೋದು ಸಹಜ. ಆದರೆ, ವಾಸ್ತವ ಸ್ಥಿತಿ ಬೇರೆಯದ್ದೇ ಇರುತ್ತೆ.

ವಾಹಿನಿಯ ಮುಖ್ಯಸ್ಥರು ಅತ್ತ ಬಾಂಬೆ ಬಾಸ್‌ಗಳ ಒತ್ತಡಕ್ಕೂ ಮಣಿಯಬೇಕು, ಇತ್ತ ತಾವೇ ಬೆಳೆಸಿದ ಹುಡುಗನ ತಟಸ್ಥ ನಿಲುವನ್ನೂ ನಿಭಾಯಿಸಬೇಕು. ವಾಹಿನಿಯ ಆಫರ್‌ಗಿಂತಲೂ ಗಿಲ್ಲಿಗೆ ಹೊರಗಿನಿಂದ ಬರುತ್ತಿರುವ ಆಫರ್‌ಗಳು ಮತ್ತು ದೊಡ್ಡ ಮೊತ್ತದ ಸಂಭಾವನೆಗಳು ಆಕರ್ಷಕವಾಗಿ ಕಾಣುತ್ತಿರುವುದು ಸುಳ್ಳಲ್ಲ. ಆದರೆ, ಕಲರ್ಸ್ ಕನ್ನಡದೊಂದಿಗಿನ ಈ ಮುನಿಸು ಅಥವಾ ಅಂತರ ಗಿಲ್ಲಿಯ ಮುಂದಿನ ವೃತ್ತಿಬದುಕಿನ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎನ್ನುವುದೇ ಸದ್ಯದ ಕುತೂಹಲ.
ಒಂದು ಕಡೆ, ತನಗೆ ಲೈಫ್ ಕೊಟ್ಟ ವಾಹಿನಿಗೆ ಕೃತಜ್ಞತೆ ಸಲ್ಲಿಸಬೇಕು ಎನ್ನುವುದು ಇಂಡಸ್ಟ್ರಿಯ ಅಲಿಖಿತ ನಿಯಮವಾದರೆ, ಇನ್ನೊಂದೆಡೆ ಕ್ರೇಜ್ ಇರುವಾಗಲೇ ನಾಲ್ಕು ಕಾಸು ಮಾಡಿಕೊಳ್ಳಬೇಕು ಎನ್ನುವುದು ಗಿಲ್ಲಿಯ ಪ್ರಾಯೋಗಿಕ ಲೆಕ್ಕಾಚಾರ. ಸದ್ಯ ಈ ಇಬ್ಬರ ನಡುವಿನ ಶೀತಲ ಸಮರ ಹೀಗೆಯೇ ಮುಂದುವರಿದಿದೆ. ಏನೇ ಇರಲಿ, ಕಷ್ಟಪಟ್ಟು ಮೇಲೆ ಬಂದ ಈ 'ಗಿಲ್ಲಿ'ಯ ಹಾರಾಟ ಎಲ್ಲಿಯವರೆಗೆ ಹೋಗಿ ತಲುಪುತ್ತದೆ ಮತ್ತು ಕಾರ್ಪೊರೇಟ್ ಲೆಕ್ಕಾಚಾರಗಳ ನಡುವೆ ಆತ ತನ್ನ ಜನಪ್ರಿಯತೆಯನ್ನು ಹೇಗೆ ಉಳಿಸಿಕೊಳ್ಳುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.

-ಅರುಣ್‌‌ ಜಿ

12/07/2026

ಶರಣ್ಯ ಶೆಟ್ಟಿ ನೆಕ್ಲೆಸ್ಸನ್ನು ಸರಿ ಪಡಿಸಿದ ಅನು ಪ್ರಭಾಕರ್..RR ಗೋಲ್ಡ್ ಪ್ಯಾಲೆಸ್ ನೂತನ ಶಾಖೆ ಉನ್ಸೂರ್ ನಲ್ಲಿ 😍

12/07/2026

ಶರಣ್ಯಶೆಟ್ಟಿ ಕೈಯಲ್ಲಿ ಆರ್ ಆರ್ ಗೋಲ್ಡ್ ಪ್ಯಾಲೇಸ್ ಉನ್ಸೂರ್ ಲೆಕ್ಲೆಸ್ 😍
official

12/07/2026

ಆರ್ ಆರ್ ಗೋಲ್ಡ್ ಪ್ಯಾಲೇಸ್ ನೂತನ ಶಾಖೆಯಲ್ಲಿ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳ ಕಲರವ😍
official

Address

#13/1, 2nd Floor, 1st Temple Street, 9th Cross, Malleshwaram
Bangalore
560003

Alerts

Be the first to know and let us send you an email when Cinibuzz Kannada posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Cinibuzz Kannada:

Shortcuts

Share