S-unit Records

S-unit Records To provide young people across India with the opportunities, resources, and support they need.

25/11/2022

ಕನ್ನಡಕ್ಕೆ ಮತ್ತೊಂದು ಕಲರ್ ಫುಲ್ ಆಲ್ಬಮ್ ಸಾಂಗ್!
- ನ.25ಕ್ಕೆ "ಓಡಾಡೋ ಗೊಂಬೆ" ಆಲ್ಬಮ್ ಬಿಡುಗಡೆ
- ತೀರ್ಥಹಳ್ಳಿ ಸುತ್ತಮುತ್ತಲಿನ ಪರಿಸರದಲ್ಲಿ ಚಿತ್ರೀಕರಣ

ತೀರ್ಥಹಳ್ಳಿ ಸುತ್ತಮುತ್ತಲಿನ ಪರಿಸರದಲ್ಲಿ ಚಿತ್ರೀಕರಣಗೊಂಡಿರುವ ಕನ್ನಡದ ಪ್ರಸಿದ್ಧ ನಿರ್ದೇಶಕರು, ತಂತ್ರಜ್ಞರು ಸೇರಿ ಮಾಡಿರುವ "ಓಡಾಡೋ ಗೊಂಬೆ" ಆಲ್ಬಮ್ ಸಾಂಗ್ ಟ್ರೈಲರ್ ಬಿಡುಗಡೆಗೊಂಡಿದ್ದು, ನವೆಂಬರ್ 25ರಂದು 5 ಗಂಟೆಗೆ ಆಲ್ಬಮ್ ಸಾಂಗ್ ಬಿಡುಗಡೆಗೊಳ್ಳಲಿದೆ.
ಕನ್ನಡದ ಆಲ್ಬಮ್ ಸಾಂಗ್ ಕ್ಷೇತ್ರದಲ್ಲಿ ಈ ಸಾಂಗ್ ಹೊಸ ಮೈಲುಗಲ್ಲು ಸೃಷ್ಟಿ ಮಾಡಲಿದೆ. ಹೊಸ ಪ್ರೊಡಕ್ಷನ್ ಫ್ಲೈ ಆನ್ ಬ್ರದರ್ಸ್ ಈ ಆಲ್ಬಮ್ ಸಾಂಗ್ ನಿರ್ಮಾಣ ಮಾಡಿದೆ.
ಜೆಆರ್ ಎಂ ಕಾನ್ಸೆಪ್ಟ್ ಟೀಮ್ ಕಲ್ಪನೆಯೊಂದಿಗೆ ಅಮೃತಾಂಜನ್, ಸಡನ್ ಆಗಿ ಬತ್ತಿ ಇಟ್ರೆ ಶಾರ್ಟ್ ಮೂವಿ ನಿರ್ದೇಶನ ಖ್ಯಾತಿಯ ಜ್ಯೋತಿರಾವ್ ಮೋಹಿತ್ ಈ ಆಲ್ಬಮ್ ಸಾಂಗ್ ನಿರ್ದೇಶಕರಾಗಿದ್ದಾರೆ
ತೀರ್ಥಹಳ್ಳಿ ಮೂಲದ ದಿಯನ್ ರಾಜ್ ಹಾಗೂ ಪಾಯಲ್ ಚಂಗಪ್ಪ ನಟಿಸಿರುವ ಈ ಆಲ್ಬಮ್ ಸಾಂಗ್ ಟ್ರೈಲರ್ ಈಗಾಗಲೇ ಸದ್ದು ಮಾಡಿದೆ.
ಎಸ್ ಯೂನಿಟ್ ರೆಕಾರ್ಡ್ ( s-unit records) ಯೂಟ್ಯೂಬ್ ಚಾನೆಲಿನಲ್ಲಿ ಈಗಾಗಲೇ ರಿಲೀಸ್ ಆಗಿದ್ದು ಜನ ಮೆಚ್ಚುಗೆ ಪಡೆದಿದೆ.
ಜೀ ಕನ್ನಡ ಸರಿಗಮಪ, ಇಂಡಿಯನ್ ಐಡಾಲ್ ಖ್ಯಾತಿಯ ಗಾಯಕ ನಿಹಾಲ್ ತಾರೋ, ಇಶಾ ಸುಚಿ ಹಾಡಿದ್ದಾರೆ. ಕಾಂತಾರಾ ಸಿನಿಮಾದ ಸಿಂಗಾರ ಸಿರಿಯೇ ಖ್ಯಾತಿಯ ಪ್ರಮೋದ್ ಮರವಂತೆ ಈ ಆಲ್ಬಮ್ ಸಾಂಗ್ ರಚಿಸಿದ್ದು, ನೂರಾರು ಕಲಾವಿದರು ಈ ಆಲ್ಬಮ್ ಸಾಂಗ್ ಗೆ ಕೆಲಸ ಮಾಡಿದ್ದಾರೆ.
ಓಡಾಡೋ ಗೊಂಬೆ ಆಲ್ಬಮ್ ಸಾಂಗ್ ನಲ್ಲಿ ಮಧುಮತಿ, ರಿಷಿಕ ಗೌಡ, ಪ್ರತಿಕ್ ಶೆಟ್ಟಿ ನಟಿಸಿದ್ದಾರೆ. ಕಿರಣ್ ಕುಮಾರ್ ಎಡಿಟಿಂಗ್ ಮಾಡಿದ್ದಾರೆ. ರತ್ವಿಕ್ ಮುರಳಿದರ್ ಸಂಗೀತ ಮಾಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ರಮಣೀಯ ಪರಿಸರಗಳ ನಡುವೆ ಹಾಗೂ ಪ್ರಕೃತಿಯ ತಾಣಗಳಲ್ಲಿ ಶೂಟಿಂಗ್ ನಡೆದಿದ್ದು ಆಲ್ಬಮ್ ಸಾಂಗ್ ಈಗಾಗಲೇ ಹಿಟ್ ಆಗುವ ನಿರೀಕ್ಷೆ ಮೂಡಿಸಿದೆ.
ಕನ್ನಡಕ್ಕೆ ಮತ್ತೊಂದು ಕಲರ್ ಫುಲ್ ಹಾಡು ಸಿಕ್ಕಿದೆ. ನ.25 ರಂದು ಈ ಆಲ್ಬಮ್ ಸಾಂಗ್ ಬಿಡುಗಡೆಗೊಳ್ಳಲಿದೆ.
ಛಾಯಾಗ್ರಹಣ ಸುಮಂತ್ ಆಚಾರ್ಯ, ನೃತ್ಯ ಸಂಯೋಜನೆ ಪ್ರತೀಕ್ ಶೆಟ್ಟಿ ಮಾಡಿದ್ದಾರೆ.

Address

Bangalore
560038

Alerts

Be the first to know and let us send you an email when S-unit Records posts news and promotions. Your email address will not be used for any other purpose, and you can unsubscribe at any time.

Share