ಯಕ್ಷ ನಿನಾದ

ಯಕ್ಷ ನಿನಾದ ಕಲೆಯೇ ಕಲಾವಿದರ ಬದುಕು
ಕಲೆ ಕಲೆಗಾಗಿ ಕಲಾವಿದರ ಹುರುಪು
ಇದುವೇ ಕಲಾವಿದರ ಜೀವನ... ❤️

09/09/2026

ಯಕ್ಷ ನಿನಾದ 5 ರ ಸಂಭ್ರಮ || ಆರ್ಡಿ ಮೆಲೋಡಿ || ಭರತ್ ಚಂದನ್ ಕೋಟೇಶ್ವರ ||

ಯಕ್ಷ ನಿನಾದ 5 ರ ಸಂಭ್ರಮಆಗಸ್ಟ್ 29ರಂದು ಕೋಟೇಶ್ವರ ಶ್ರೀ ಕೋಟಿಲಿಂಗೆಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ...
09/09/2026

ಯಕ್ಷ ನಿನಾದ 5 ರ ಸಂಭ್ರಮ

ಆಗಸ್ಟ್ 29ರಂದು ಕೋಟೇಶ್ವರ ಶ್ರೀ ಕೋಟಿಲಿಂಗೆಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ ಐರೋಡಿ ಮಂಜುನಾಥ ಕುಲಾಲ್* ಇವರಿಗೆ ಬಣ್ಣದ ಸಕ್ಕಟ್ಟು ಪ್ರಶಸ್ತಿ ನೀಡಿ ಗೌರವಿಸಲಾಯಿತು, ಹಾಗೆ ಮಂದಾರ್ತಿ ಮೇಳದ ಪ್ರಧಾನ ಭಾಗವತರು ಗಣೇಶ್ ನಾಯ್ಕ್ ಯಡಮೊಗೆ ಇವರಿಗೆ ಯಕ್ಷ ನಿನಾದ 5 ರ ಸಂಭ್ರಮದ ಗೌರವ ಸನ್ಮಾನ ನೀಡಲಾಯಿತು,... ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ತುಂಬು ಹೃದಯದ ಧನ್ಯವಾದಗಳು...

ಶ್ರೀ ನಾಗಯಕ್ಷಿ ಯಕ್ಷಕೂಟ ಮಾರ್ಕೋಡು ಕೋಟೇಶ್ವರ ಇದರ ಪ್ರತಿಭಾನ್ವಿತ ಯುವ ಕಲಾವಿದರಿಂದ ಪ್ರಚಲಿತ ಶೈಲಿಯಲ್ಲಿ, ವೀರ ಮೌರ್ವಿಜ ಹಾಗೂ ಸಾಂಪ್ರದಾಯಿಕ ಶೈಲಿಯಲ್ಲಿ ಪ್ರಮೀಳಾರ್ಜುನ ಘೋರಭಿಷಣ ಎಂಬೆರಡು ಆಖ್ಯಾನವನ್ನು ಹವ್ಯಾಸಿ ಯುವ ಕಲಾವಿದರು ಪ್ರದರ್ಶಿಸಿದ ಪರಿ ಅದ್ಭುತ... ಅವರಿಗೆ ಸರಿಯಾಗಿ ತರಬೇತಿ ನೀಡಿದ ಗುರು ದ್ವಯರು ಮಂಜುನಾಥ್ ಕುಲಾಲ್ ಐರೋಡಿ, ವಿಘ್ನೇಶ್ ಗಿಳಿಯಾರು ಇವರಿಗೆ ಧನ್ಯವಾದಗಳು

#ಯಕ್ಷನಿನಾದ5 #ಯಕ್ಷಪಂಚಮಿ2026 #ಯಕ್ಷಗಾನ #ಕರ್ನಾಟಕದಕಲೆ #ಕರಾವಳಿಯಕಲೆ

ಯಕ್ಷ ನಕ್ಷತ್ರ ಟ್ರಸ್ಟ್ ಕಿರಾಡಿಕಿರಾಡಿ ಯಕ್ಷೋತ್ಸವನಾಳೆ ದುರ್ಗಾ ಸನ್ನಿಧಿ ಶೇಡಿಕೊಡ್ಲು ಮಂದಾರ್ತಿ  ಯಕ್ಷನಕ್ಷತ್ರ ಕಿರಾಡಿ ಅಭಿಮಾನಿ ಬಳಗ  ಯಕ್ಷ...
05/09/2026

ಯಕ್ಷ ನಕ್ಷತ್ರ ಟ್ರಸ್ಟ್ ಕಿರಾಡಿ
ಕಿರಾಡಿ ಯಕ್ಷೋತ್ಸವ

ನಾಳೆ ದುರ್ಗಾ ಸನ್ನಿಧಿ ಶೇಡಿಕೊಡ್ಲು ಮಂದಾರ್ತಿ

ಯಕ್ಷನಕ್ಷತ್ರ ಕಿರಾಡಿ ಅಭಿಮಾನಿ ಬಳಗ ಯಕ್ಷ ನಿನಾದ

https://youtu.be/WTmChfBYJbgಮಾರಣಕಟ್ಟೆ ಕ್ಷೇತ್ರ ಮಹಾತ್ಮೆ ಪ್ರಸಂಗದ ರತಿ ಮನ್ಮಥರ ಸನ್ನಿವೇಶ...ಈ ತಿರುಗಾಟದಲ್ಲಿ ಮಿಸ್ ಆದ ಸನ್ನಿವೇಶ... 👌
05/09/2026

https://youtu.be/WTmChfBYJbg

ಮಾರಣಕಟ್ಟೆ ಕ್ಷೇತ್ರ ಮಹಾತ್ಮೆ ಪ್ರಸಂಗದ ರತಿ ಮನ್ಮಥರ ಸನ್ನಿವೇಶ...

ಈ ತಿರುಗಾಟದಲ್ಲಿ ಮಿಸ್ ಆದ ಸನ್ನಿವೇಶ... 👌

2025 - 26 ನೇ ಸಾಲಿನ ತಿರುಗಾಟದಲ್ಲಿ ಮಾರಣಕಟ್ಟೆ ಕ್ಷೇತ್ರ ಮಹಾತ್ಮೆ ಪ್ರಸಂಗದಲ್...

03/09/2026

ಬರ್ಬರಿಕ - ಅಕ್ಷಯ್ ಕೋಟೇಶ್ವರ || ಆರ್ಡಿ ಮೆಲೋಡಿ || ಯಕ್ಷ ನಿನಾದ 5 ರ ಸಂಭ್ರಮ ❤️

02/09/2026

ಅರ್ಜುನ - ತನ್ಮಯ್ ಮಾರ್ಕೋಡು | ಗಣೇಶ್ ನಾಯ್ಕ್ ಯಡಮೊಗೆಯವರ ಹೈ ಪಿಚ್ ಭಾಮಿನಿ | ಯಕ್ಷ ನಿನಾದ 5 ರ ಸಂಭ್ರಮ

# #ಯಕ್ಷನಿನಾದ5 #ಯಕ್ಷಪಂಚಮಿ2026 #ಯಕ್ಷಗಾನ YakshaPanchami Yakshagana Koteswara YakshaganaArtists ಕರ್ನಾಟಕದಕಲೆ ಕರಾವಳಿಯಕಲೆ

02/09/2026

*ರಂಗಸ್ಥಳದ‌ ರಾಜ, ಕರ್ನಾಟಕ ರಾಜ್ಯೋತ್ಸವ ಪ್ತಶಸ್ತಿ ಪುರಸ್ಕೃತ ಐರ್ಬೈಲ್ ಆನಂದ ಶೆಟ್ಟಿ ಅವರು ಕಿರಾಡಿ ಉತ್ಸವಕ್ಕೆ ಎಲ್ಲರನ್ನೂ ಆಹ್ವಾನಿಸಿದ್ದಾರೆ..ಬನ್ನಿ ಜೊತೆಯಾಗಿ...*

#ಕಿರಾಡಿಉತ್ಸವ
#ಯಕ್ಷನಕ್ಷತ್ರ

01/09/2026
31/08/2026

ಯಕ್ಷ ಪಂಚಮಿ -5
ನಮ್ಮೆಲ್ಲರ ಪ್ರೀತಿಯ "ನಾಗರಾಜ್ ಆಚಾರ್ ಹಟ್ಟಿಯಂಗಡಿ "ಸಂಯೋಜನೆಯಲ್ಲಿ ಒಂದು ಅದ್ಭುತ ಕಾರ್ಯಕ್ರಮ ವಾಗಿ ಯಶಸ್ವಿಯಾಗಿದೆ.ನಿನ್ನೆ ದಿನ ಕೋಟೇಶ್ವರದಲ್ಲಿ ಯಕ್ಷ ನಿನಾದ ಮೊಳಗಿದ್ದು. ಉತ್ತಮ ಸ್ನೇಹಜೀವಿ ಸಂಘಟಕ ನಾಗರಾಜ್ ಅವರ ಹೋರಾಟ ಅದ್ಭುತ. ಅದೆಷ್ಟೋ ದಿವಸದ ಕನಸನ್ನು ನಿನ್ನೆ ಪೂರ್ತಿಗೊಳಿಸಿ. ಆಗಸದ ಹುಣ್ಣಿಮೆ ಚಂದ್ರನಂತೆ ಮಿಂಚಿದರು. ಎಷ್ಟೋ ಹಗಲು ರಾತ್ರಿ ಶ್ರಮಪಟ್ಟು ತನ್ನ ಉದ್ಯೋಗದ ಕೆಲಸದ ನಡುವೆಯೂ ಇಂತಹ ಒಂದು ಸುಂದರ ಸಮಯಕ್ಕೆ ತನ್ನ ಕಾರ್ಯವೈಖರಿ ಬದಿಗಿಟ್ಟು ಉತ್ತಮ ಸಂಯೋಜನೆ ಮಾಡಿದ್ದಾರೆ!... ಹಾಗೆ ಯಶಸ್ವಿಯಾಗಿದ್ದಾರೆ! ಶುಭವಾಗಲಿ ಅವರ ಈ ಯಕ್ಷ ಪ್ರೀತಿಗೆ ಇನ್ನೂ ನೂರು ಕಾಲ ಇಂತಹ ಎಲೆ ಮರೆಯ ಪ್ರತಿಭೆಗಳ ಗುರುತಿಸಿ ಯಕ್ಷರಂಗಕ್ಕೆ ಅಪಾರ ಕೊಡುಗೆ ಅಮೂಲ್ಯ ರತ್ನವನ್ನು ನೀಡಿ ಎನ್ನುತ್ತಾ. ಶುಭಾಶಯಗಳು
ಇನ್ನೂ ಯಕ್ಷಗಾನ ಬಗ್ಗೆ ಮಾತು....!
ಶ್ರೀ ನಾಗಯಕ್ಷಿ ಯಕ್ಷಕೂಟ ಮಾರ್ಕೋಡು ಕೋಟೇಶ್ವರ ಸಂಸ್ಥೆ ಹಾಗೂ ಅತಿಥಿ ಕಲಾವಿದರಿಂದ.... 100% ಆಟ...ಮಕ್ಕಳ ಸಂಸ್ಥೆ ಯಾದರು ನಿಜಕ್ಕೂ ಯಾವ ಮೇಳಕ್ಕೂ ಪೈಪೋಟಿ ನೀಡಬಲ್ಲ ಪ್ರಚಲಿತ ಕುಂದಾಪುರದ ಹೆಸರಾಂತ ಉತ್ಸಾಹಿಗಳ ತಂಡ....ಯಬ್ಬಾ "ಐರೊಡಿ ಮಂಜುನಾಥ್ ಕುಲಾಲ್ " ಹಾಗೂ ವಿಗ್ನೇಶ್ ಗಿಳಿಯಾರು ಜೋಡೆತ್ತುಗಳ ಗುರುತನ ಸಾರ್ಥಕ... ತಾನು ಕಲಿತ ವಿದ್ಯೆ ಅದೆಷ್ಟೋ ಯಕ್ಷರತ್ನಗಳಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ.
ಇನ್ನೂ ಯಕ್ಷ ಪ್ರಸಂಗ : ಬರ್ಬರಿಕ. ಪ್ರಮೀಳಾರ್ಜುನ. ಘೋರಬಿಷಣ ಕಾಳಗ
ಹಿಮ್ಮೆಳದಲ್ಲಿ : ಗಣೇಶ್ ಎಡಮೋಗೆ ಅದ್ಭುತ. ಆರ್ಡಿ ಸಂತೋಷಕುಮಾರ್ ಎಂದಿನಂತೆ ಹೈ ಪೈ...🔥🔥
ಚೆಂಡೆ ಯಲ್ಲಿ ಶಿವಾನಂದ ಕೋಟ ಹಾಗೂ ಯುವ ಯಶಸ್ವಿ ಆದಿತ್ಯಆಚಾರ್ ಸೇನಾಪುರ ಟಾಪ್ ಜೋಡಿ... 🔥🔥
ಮದ್ದಳೆಯ ಭಾರ್ಗವ ಭರತ್ ಚಂದನ್ 🔥🔥
ಇನ್ನೂ ಸಂಸ್ಥೆಯ ಯುವ ಕಲಾವಿದರು ನೆಕ್ಸ್ಟ್ ಲೆವೆಲ್ 🔥🔥🔥
ಅಕ್ಷಯ್ ಕೋಟೇಶ್ವರರ ರೂಡಿಯಂತೆ ಬರ್ಬರಿಕ ಅದ್ಭುತ ಹಾಗೆ ಸುರಾಗ್ ಕುಮಾರ್ ಹೇರೂರ್ ಹಾಸ್ಯ ಚಿಂದಿ, ಇನ್ನೂ ತನ್ಮಯ್ ಕೋಟೇಶ್ವರ ಅರ್ಜುನ ಬೆಂಕಿ, ಸುಮನಾ ಆಚಾರ್ ಮಟಪಾಡಿ ಕೃಷ್ಣ ಸೂಪರ್, ಇನ್ನೂ ಪ್ರತೀಕ್, ಅಕ್ಷಯ್ ಮಾರ್ಕೋಡು ಜೋಡಿ ಸಂಪ್ರದಾಯ ವೇಷ ಹಾಗೆ ಪ್ರೇಕ್ಷಕರ ಕಣ್ಮನ ಸೆಳೆದ ಪ್ರಮೀಳೆ ಧನ್ವಿತಾ ಕೋಟೇಶ್ವರ, ಹಾಗೂ ಅಭಿನಯದ ಮೂಲಕ ಹಾಗೂ ಕುಣಿತದಿಂದ ಜನರ ಮನ ಸೆಳೆದ ವತ್ಸಲೇ ಸಂಜನಾ ಕೋಟೇಶ್ವರ ಅಧ್ಬುತ.. ತನೀಶ್ ಮಾರ್ಕೋಡರ ಹಾಸ್ಯ ಸಂಸ್ಥೆಯಲ್ಲಿ‌ ಇರ್ನೋವ ಹಾಸ್ಯಗಾರ ತಯಾರಿ‌ಯಲ್ಲಿ ಇದ್ದಾನೆ ಎಂಬುದು ಸಂಶಯವೇ ಇಲ್ಲಾ..
ಹಾಗೇ ಹೀಗೆ ಹೇಳುತ್ತಾ ಹೋದರೆ ಉಳಿದ ಕಲಾವಿದರ ಶ್ರಮ‌ ಹಾಗೂ ಪ್ರತಿಭೆ ಅಪಾರ ಅಗಣಿತ.. ಇವರೆಲ್ಲರ ಅಭಿನಯ ಪಾತ್ರ ನಿರ್ವಹಣೆ ಯಾವ ವೃತ್ತಿ ಪರ ಕಲಾವಿದರಿಗೂ ಕಮ್ಮಿ ಇಲ್ಲ...
ಇಂತಹ ಯುವ ಸಂಸ್ಥೆಗೆ ಹಾಗೆ ಇಂತ ಸಂಘ ನೋಡಿ ಪ್ರೋತ್ಸಾಹ ನೀಡಿದ ಸಂಯೋಜಕರಿಗೆ ನಿಮ್ಮೆಲ್ಲರ ಪ್ರೀತಿ ಹಾರೈಕೆ ಸದಾ ಇರಲಿ.ಇಂಥ ಸಂಸ್ಥೆ ಇನ್ನಷ್ಟು ಬೆಳಗಲಿ ಬೆಳೆಯಲಿ ಬೆಳೆದು ಬಂಧವಾಗಿ ನಮ್ಮೊಂದಿಗಿರಲಿ..ಶುಭವಾಗಲಿ
(ಭರತ ಗಾಣಿಗ ಕುಂದಾಪುರ )

#ಯಕ್ಷನಿನಾದ5 #ಯಕ್ಷಪಂಚಮಿ2026 #ಯಕ್ಷಗಾನ #ಕರ್ನಾಟಕದಕಲೆ #ಕರಾವಳಿಯಕಲೆ

29/08/2026

*ಯಕ್ಷ ನಿನಾನದ* 5 ರ ಸಂಭ್ರಮವೇ
*ಯಕ್ಷ ಪಂಚಮಿ*

ಇಂದು ನಿಮ್ಮೆಲ್ಲರ ಆಗಮನದ ನಿರೀಕ್ಷೆಯಲ್ಲಿ ....

ನಾಗರಾಜ್ ಆಚಾರ್ಯ ಹಟ್ಟಿಯಂಗಡಿ
ಯಕ್ಷ ನಿನಾದ

#ಯಕ್ಷನಿನಾದ5 #ಯಕ್ಷಪಂಚಮಿ2026 #ಯಕ್ಷಗಾನ Yakshagana Koteswara YakshaganaArtists ಕರ್ನಾಟಕದಕಲೆ ಕರಾವಳಿಯಕಲೆ

Address

Kundapur

Alerts

Be the first to know and let us send you an email when ಯಕ್ಷ ನಿನಾದ posts news and promotions. Your email address will not be used for any other purpose, and you can unsubscribe at any time.

Shortcuts

Share