Radhas Thulunada Channel

Radhas Thulunada Channel ಶುಚಿಯಾಗಿ ರುಚಿಯಾಗಿ ತುಳುನಾಡಿನ ಹಾಗೂ ಭಾರತೀಯ ಅಡುಗೆಗಳು, ಹೊಸ ರುಚಿ, ಉಪಯೋಗವಾಗುವಂತಹ ಉತ್ತಮ ಮಾಹಿತಿಗಳು, ತುಳುನಾಡಿನ ಆಚರಣೆಗಳು..

20/02/2026
ಉತ್ಕರ್ಷಣ ನಿರೋಧಕ (Antioxidant) ಎಂದರೆ ದೇಹದಲ್ಲಿನ ಹಾನಿಕಾರಕ ಸ್ವತಂತ್ರ ರಾಡಿಕಲ್‌ಗಳನ್ನು (free radicals) ತಟಸ್ಥಗೊಳಿಸಿ, ಜೀವಕೋಶಗಳಿಗೆ ...
17/02/2026

ಉತ್ಕರ್ಷಣ ನಿರೋಧಕ (Antioxidant) ಎಂದರೆ ದೇಹದಲ್ಲಿನ ಹಾನಿಕಾರಕ ಸ್ವತಂತ್ರ ರಾಡಿಕಲ್‌ಗಳನ್ನು (free radicals) ತಟಸ್ಥಗೊಳಿಸಿ, ಜೀವಕೋಶಗಳಿಗೆ ಆಗುವ ಹಾನಿಯನ್ನು ತಡೆಗಟ್ಟುವ ವಸ್ತುಗಳು. ಇವು ಕ್ಯಾನ್ಸರ್ ಮತ್ತು ಹೃದಯ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ವಿಟಮಿನ್ ಸಿ, ಇ, ಮತ್ತು ಪಾಲಿಫಿನಾಲ್‌ಗಳು ಇವುಗಳ ಪ್ರಮುಖ ಮೂಲಗಳಾಗಿವೆ.

ಬಾರ್ಬಡೋಸ್ ಚೆರ್ರಿ (ಅಸೆರೋಲಾ) ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ಉಷ್ಣವಲಯದ ಹಣ್ಣು, ಇದು ಕಿತ್ತಳೆಗಿಂತ 50-100 ಪಟ್ಟು ಹೆಚ್ಚು ವಿಟಮಿನ್ ಸಿ ಹೊಂದಿದೆ. ಇದು ಮಲಪಿಘಿಯಾ ಎಮಾರ್ಜಿನಾಟಾ ಸಸ್ಯದಿಂದ ಬರುತ್ತದೆ, ಇದು ನಿತ್ಯಹರಿದ್ವರ್ಣ ಪೊದೆಸಸ್ಯವಾಗಿದ್ದು, ಸಣ್ಣ, ಕೆಂಪು ಮತ್ತು ಸಿಹಿ-ಹುಳಿ ಹಣ್ಣುಗಳನ್ನು ನೀಡುತ್ತದೆ. ಇದು ಉದ್ಯಾನವನಗಳಲ್ಲಿ ಬೆಳೆಯಲು ಸುಲಭ ಮತ್ತು ಪಾಟ್ ಅಥವಾ ಭೂಮಿಯಲ್ಲಿ ನೆಡಲು ಸೂಕ್ತವಾಗಿದೆ.
ಬಾರ್ಬಡೋಸ್ ಚೆರ್ರಿಯ ಪ್ರಮುಖ ಲಕ್ಷಣಗಳು:
ಪೋಷಕಾಂಶಗಳು: ಈ ಹಣ್ಣು ವಿಟಮಿನ್ ಸಿ, ಆಂಟಿಆಕ್ಸಿಡೆಂಟ್‌ಗಳ ಉತ್ತಮ ಮೂಲವಾಗಿದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಆರೋಗ್ಯ ಪ್ರಯೋಜನಗಳು: ರಕ್ತದೊತ್ತಡವನ್ನು ನಿಯಂತ್ರಿಸಲು, ಉರಿಯೂತವನ್ನು ಕಡಿಮೆ ಮಾಡಲು ಮತ್ತು ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡಬಹುದು.
ಹಣ್ಣಿನ ಬಳಕೆ: ಹಣ್ಣುಗಳು ತಾಜಾ ತಿನ್ನಲು, ರಸ, ಸ್ಮೂಥಿಗಳು, ಜಾಮ್ ಮತ್ತು ಇತರ ಸಿಹಿತಿಂಡಿಗಳನ್ನು ತಯಾರಿಸಲು ಬಳಸಲಾಗುತ್ತದೆ.
ವೈವಿಧ್ಯತೆ: ಈ ಹಣ್ಣು ಬಣ್ಣದಲ್ಲಿ ಕೆಂಪು ಮತ್ತು ರುಚಿಯಲ್ಲಿ ಸಿಹಿ-ಹುಳಿ ಇರುತ್ತದೆ.
#ಬಾರ್ಬಡೋಸ್ಚೆರ್ರಿ

ಈ ಹಣ್ಣು ಯಾರಿಗೆಲ್ಲಾ ಗೊತ್ತು?? ಇದರ ರುಚಿ ಯಾರೆಲ್ಲ ನೋಡಿರುವಿರಿ? ಕಾಮೆಂಟ್ ಮಾಡಿ.. ಲೈಕ್ ಮಾಡಿ  #ಫ್ರೂಟ್     🍉🍊🍓🥭🌴🌻🌺🍀
17/02/2026

ಈ ಹಣ್ಣು ಯಾರಿಗೆಲ್ಲಾ ಗೊತ್ತು?? ಇದರ ರುಚಿ ಯಾರೆಲ್ಲ ನೋಡಿರುವಿರಿ? ಕಾಮೆಂಟ್ ಮಾಡಿ.. ಲೈಕ್ ಮಾಡಿ #ಫ್ರೂಟ್ 🍉🍊🍓🥭🌴🌻🌺🍀

ಮಕ್ಕಳು ತಪ್ಪು ಮಾಡುವಾಗ ಗಮನಕ್ಕೆ ಬಂದರೆ ಅದನ್ನು ಹೆತ್ತವರು ತಿದ್ದಲೇಬೇಕು. ಇಲ್ಲವಾದಲ್ಲಿ ಮುಂದೆ ಅದರ ಪರಿಣಾಮವನ್ನು ಮಕ್ಕಳ ಜೊತೆ ಹೆತ್ತವರು ಅನ...
27/12/2025

ಮಕ್ಕಳು ತಪ್ಪು ಮಾಡುವಾಗ ಗಮನಕ್ಕೆ ಬಂದರೆ ಅದನ್ನು ಹೆತ್ತವರು ತಿದ್ದಲೇಬೇಕು. ಇಲ್ಲವಾದಲ್ಲಿ ಮುಂದೆ ಅದರ ಪರಿಣಾಮವನ್ನು ಮಕ್ಕಳ ಜೊತೆ ಹೆತ್ತವರು ಅನುಭವಿಸಬೇಕಾದೀತು..
ಅದರ ಹೊರತು ಮಕ್ಕಳು ತಪ್ಪು ಮಾಡಿದರೂ ಕೂಡಾ ಮಕ್ಕಳ ತಪ್ಪನ್ನು ಸರಿ ಎಂದು ಪರಿಗಣಿಸಿ ಅದನ್ನೇ ಸರಿ ಎಂದು ಹೇಳುವ ಕೆಟ್ಟ ತಾಯಂದಿರು ಇರುತ್ತಾರೆ.. (ಇದು ಮಕ್ಕಳ ತಪ್ಪನ್ನೇ ಸರಿ ಎಂದು ಸಮರ್ಥಿಸುವವರಿಗಾಗಿ ಮಾತ್ರ ಬರೆದಿರುವುದು )
ಅವರು ತಪ್ಪು ಮಾಡುವಾಗ ನಿಮಗೆ ಅದು ಸರಿ ಎಂದು ಕಾಣಿಸಬಹುದು.. ಅಥವಾ ಅದು ತಪ್ಪು ಎಂದು ತಿಳಿದಿದ್ದರೂ ಕೂಡಾ ಇನ್ನೊಬ್ಬರೆಡೆಗೆ ನಿಮ್ಮ ಮಕ್ಕಳನ್ನು ಬಿಟ್ಟು ಕೊಡಬಾರದು ಎನ್ನುವ ನಿಮ್ಮ ಮನಸ್ಥಿತಿಯೂ ಇರಬಹುದು. ಆದ್ರೆ ಯಾರು ತಪ್ಪು ಮಾಡಿದರೂ ಅದು ತಪ್ಪೇ ಆಗಿರುತ್ತದೆ.. ಅದು ನಿಮ್ಮ ಮಗನೋ, ಮಗಳೋ ಮಾಡಿದ್ದಾರೆ ಎಂದು ನಿಮಗೆ ತಿಳಿದಿರುವಾಗ ನೀವು ಸತ್ಯ ಏನು ಎನ್ನುವುದನ್ನು ನಿಮ್ಮ ಮಗ ಅಥವಾ ಮಗಳಿಗೆ ಅರಿವು ಮೂಡಿಸಿದರೆ ಹಾಗೂ ನಿಮ್ಮ ಮಕ್ಕಳ ತಪ್ಪಿನಿಂದ ಯಾರಿಗೆಲ್ಲಾ ನೋವಾಗಿದೆಯೋ ಅವರ ಮುಂದೆ ತಪ್ಪು ನಿಮ್ಮ ಮಕ್ಕಳದ್ದೇ ಎಂದು ನೀವೇ ಹೇಳಿದರೆ ನೊಂದವರ ಹಾಗೂ ನೋಡುಗರ ದೃಷ್ಟಿಯಲ್ಲಿ ನೀವು ತುಂಬಾ ಎತ್ತರದ ಸ್ಥಾನದಲ್ಲಿ ಇರುತ್ತೀರಿ.. ಇಲ್ಲವಾದಲ್ಲಿ ನೀವು ಎಷ್ಟೇ ದೊಡ್ಡವರಾಗಿದ್ದರೂ ಕೂಡಾ ಅವರ ದೃಷ್ಟಿಯಲ್ಲಿ ಕಾಲ ಕಸಕ್ಕಿಂತ ಕಡೆಯಾಗುತ್ತೀರಿ..
ಇದು ಹೀಗೆ ನಡೆದುಕೊಂಡವರಿಗೆ ಮಾತ್ರ ಅನ್ವಯವಾಗುತ್ತದೆ..

✍️ ಸುಪ್ರೀತ ಪದ್ಮನಾಭ ಅಡ್ಕತ್ ಬೈಲ್.

ನಿನ್ನ ನಗುವಿನಲಿ ಇಹುದು ನಮ್ಮ ಖುಷಿಯು.. ನಿನ್ನ ಸಂತಸದಿ ಇಹುದು ನಮ್ಮ ಸಂಭ್ರಮವು.. ಸದಾ ಖುಷಿಯಾಗಿ ಆರೋಗ್ಯದಿಂದ ಇರು ನನ್ನ ಮುದ್ದು ಕಂದಮ್ಮ.. ದ...
16/12/2025

ನಿನ್ನ ನಗುವಿನಲಿ ಇಹುದು ನಮ್ಮ ಖುಷಿಯು.. ನಿನ್ನ ಸಂತಸದಿ ಇಹುದು ನಮ್ಮ ಸಂಭ್ರಮವು.. ಸದಾ ಖುಷಿಯಾಗಿ ಆರೋಗ್ಯದಿಂದ ಇರು ನನ್ನ ಮುದ್ದು ಕಂದಮ್ಮ.. ದೊಡ್ಡ ಹಾಗೂ ಚುಪ್ಪಿಯಮ್ಮನ ಮುದ್ದು ಕಂದಮ್ಮಗೆ ಹುಟ್ಟುಹಬ್ಬದ ಶುಭಾಶಯಗಳು.. 🥰🥰🎉🎂🎁

ನಾವು ಕೆಲವೊಮ್ಮೆ ದೊಡ್ಡವರಾಗಲು ಹೋಗುತ್ತೇವೆ.. ಇನ್ನೊಬ್ಬರನ್ನು ತಿದ್ದಲು ಹೋಗುತ್ತೇವೆ.. ಹೋಗಬೇಕು.. ಒಳ್ಳೆಯದು ಕೂಡಾ.. ಆದರೆ ನಾವೆಷ್ಟು ಸರಿ ಇ...
10/12/2025

ನಾವು ಕೆಲವೊಮ್ಮೆ ದೊಡ್ಡವರಾಗಲು ಹೋಗುತ್ತೇವೆ.. ಇನ್ನೊಬ್ಬರನ್ನು ತಿದ್ದಲು ಹೋಗುತ್ತೇವೆ.. ಹೋಗಬೇಕು.. ಒಳ್ಳೆಯದು ಕೂಡಾ.. ಆದರೆ ನಾವೆಷ್ಟು ಸರಿ ಇದ್ದೇವೆ ಎನ್ನುವುದನ್ನು ಮೊದಲು ಯೋಚಿಸಬೇಕು. ನಮ್ಮ ಮನೆಯವರನ್ನು ಮೊದಲು ಸರಿ ದಾರಿಗೆ ತರಬೇಕು. ಅದನ್ನು ಮಾಡದೆ ಬೇರೆಯವರ ಜೊತೆ ನೀವು ಸರಿ ಇರಬೇಕು ಎಂದು ಹೇಳಿದರೆ ಆ ಮಾತಿಗೆ ಯಾರೂ ಬೆಲೆ ಕೊಡಲಾರರು.. 🤔💭👍
ಒಳ್ಳೆಯ ಕಾರ್ಯ ಮಾಡುವ ಮೊದಲು ನಾವು ಒಳ್ಳೆಯವರಾಗಿರಬೇಕು.. ನಾವು ಒಳ್ಳೆಯ ರೀತಿಯಲ್ಲಿ ಬದಲಾಗಬೇಕು..
ನಿಜ ಅಲ್ಲವೇ??

ನಿಜ ಅನಿಸಿಸಿದೆಯೇ ನಿಮಗೂ  #ಅಪಹಾಸ್ಯ  #ನಿಂದನೆ 😂🤔
07/12/2025

ನಿಜ ಅನಿಸಿಸಿದೆಯೇ ನಿಮಗೂ #ಅಪಹಾಸ್ಯ #ನಿಂದನೆ 😂🤔

04/12/2025

ಕೆಲವು ವ್ಯಕ್ತಿಗಳು ಇದ್ದಾರೆ..
ಅವರ ಜೀವನ ಹೇಗಿದ್ದರೂ ಸರಿ..
ಇನ್ನೊಬ್ಬರ ಜೀವನವನ್ನು ಹೇಗಾದರೂ ಹಾಳು ಮಾಡಲೇಬೇಕೆಂದು ಹರ ಸಾಹಸ ಮಾಡುತ್ತಲೇ ಇರುತ್ತಾರೆ... 🤔💭👏💯

✍️ಸುಪ್ರೀತ ಪದ್ಮನಾಭ ಅಡ್ಕತ್ ಬೈಲ್

ಒಂದು ಕಾಲ್ಪನಿಕ ಬರಹ...✍️✍️********************************ನೀನು ಪತ್ರೊಡೆ ಮಾಡುದಿಲ್ವಾ.. ನಂಗೆ ತುಂಬಾ ಇಷ್ಟ.. ತುಂಬಾ ಆಯಿತು ತಿನ್ನದೆ....
02/12/2025

ಒಂದು ಕಾಲ್ಪನಿಕ ಬರಹ...✍️✍️
********************************
ನೀನು ಪತ್ರೊಡೆ ಮಾಡುದಿಲ್ವಾ.. ನಂಗೆ ತುಂಬಾ ಇಷ್ಟ.. ತುಂಬಾ ಆಯಿತು ತಿನ್ನದೆ..
ಸ್ವಲ್ಪ ಇದು ತೆಗೊಂಡಿದ್ದೇನೆ (ತಿಮರೆ )
ಅಲೋವೆರಾ ಉಂಟಾ... ಹಾ ಇದುವೆ.. ಸ್ವಲ್ಪ ತೆಗೊಳ್ತೇನೆ.. ಇನ್ನು ಸ್ವಲ್ಪ ಅದು ಹಾ ಎಂತ ಅಂದ್ರೆ ಅದು ಮತ್ತೆ ಸ್ವಲ್ಪ ಮೆಹಂದಿ ಕೊಯಿದುಕೊಂಡೆ..
ಹಾ ಕೆಂಪು ದಾಸವಾಳ.. ಇದುವೆ.. ನನಗೆ ಬೇಕು.. ಎಲೆ ಕೂಡಾ..
ಬೃಂಗರಾಜ ಇದೆಯಾ... ನೀನು ಇಲ್ಲಿ ಒಂದು ನೆಟ್ರೆ ತುಂಬಾ ಆಗ್ತದೆ ಅದು..
ತುಳಸಿ.. ಹಾ ಇಲ್ಲಿ ಉಂಟು.. ಕೊಯ್ದೆ ಆಯಿತಾ..
ದೊಡ್ಡಪತ್ರೆ ಎಲೆ ಉಂಟಾ??
*ಅದು ಚಿಕ್ಕ ಗಿಡ ನೋಡಿ ಅಲ್ಲಿ.. ಎಲೆ ಇಲ್ಲ..
ಅದು ಪರ್ವಾಗಿಲ್ಲ.. ನಾನು ತೆಗೊಳ್ತೇನೆ..
ಹಸಿ ಅರಶಿನ ಉಂಟಾ??
*ಹಾ ಇದೆ.. ಬಂದೆ ಕೊಡ್ತೇನೆ..
ಬೇಡ ನಾನೇ ತೆಗೊಂಡೆ..
* (ಸ್ವಗತ ) ಹಾ.. ಇದೇನಪ್ಪ ಗಿಡ ಕಿತ್ತು ಬಿಸಾಡಿ ಅರಶಿನ ತೆಗೊಂಡಿದ್ದಾರೆ 🥲..
ಹೋ ಗಾಂಧಾರಿ ಮೆಣಸು..
ತೆಗೊಂಡೆ ಆಯಿತಾ ಸ್ವಲ್ಪ ನನಗೆ ಇಷ್ಟ...🥲
ಸ್ವಲ್ಪ ಕಾಳು ಮೆಣಸು ಉಂಟಾ... ಹೀಗೆ ಹೀಗೆ.. ಅದು ಉಂಟಾ.. ಇದು ಉಂಟಾ 😂...
ಒಂದೇ ಸಲ ಕೇಳಿ ತೆಗೆದದ್ದು .. ಮತ್ತೆ ಅವರದ್ದೇ ಇಷ್ಟ.. ಕೇಳುವುದು ಇಲ್ಲ.. ಹೇಳುವುದು ಇಲ್ಲ.. ಬರುವುದು.. ಕೀಳೋದು.. ಹೋಗೋದು.. ಅವರೇ ನೆಟ್ಟು ಬೆಳೆಸಿದ ಹಾಗೆ..
ಇಷ್ಟೆಲ್ಲಾ ಅವರಿಷ್ಟದಂತೆ ಅವರೇ ತೆಗೆದುಕೊಂಡು ಹೋಗಿ ಕೊನೆಗೊಂದು ದಿನ ಅವರೇ ಬಂದು ಕಾರಣವೇ ಇಲ್ಲದೆ ಜಗಳ ಮಾಡುತ್ತಾರೆ..
ಕೆಟ್ಟದಾಗಿ ಬಯ್ಯುತ್ತಾರೆ.. ಏನೇನೋ ಏನೇನೋ ಹೇಳುತ್ತಾರೆ..
ಎಲ್ಲದಕ್ಕೂ ನಮ್ಮ ಕಡೆಯಿಂದ ಮೌನವೇ ಉತ್ತರವಾಗಿರುತ್ತದೆ.. ಯಾಕೆಂದರೆ ನಾವು ಕಾರಣ ಇಲ್ಲದೆ ಜಗಳ ಮಾಡಲೇಬೇಕೆಂದು ಬಂದ ಜಗಳ ಮಾಡುವವರಲ್ಲಿ ಜಗಳ ಮಾಡುವ ವ್ಯಕ್ತಿತ್ವದವರು ಅಲ್ಲ.
ಅಷ್ಟೇ ಅಲ್ಲ.. ನಮಗಿಂತ ಮೊದಲೇ ನಮ್ಮ ಮನೆಯವರಲ್ಲಿ ಸುಳ್ಳು ಸುಳ್ಳು ಏನೇನೋ ಹೇಳಿ ಕೊಡುತ್ತಾರೆ.. ನಾವು ಹೇಳದನ್ನು ಸೃಷ್ಟಿಸಿ ಹೇಳುತ್ತಾರೆ..
ಕೊನೆಗೆ ಶಾಪ ಕೂಡಾ ಹಾಕುತ್ತಾರೆ... ಆದರೆ ನಮ್ಮ ಮನೆಯವರಲ್ಲಿ ಇಲ್ಲದ ಚಾಡಿ ಮಾತ್ರ ಹೇಳುತ್ತಾರೆ. ಅವರು ಅವರಾಗಿಯೇ ಬಂದದ್ದು ಅವರಾಗಿಯೇ ಜಗಳ ಮಾಡಿದ್ದು.. ಕೆಟ್ಟದಾಗಿ ಬೈದದ್ದು.. ಶಾಪ ಹಾಕಿದ್ದು ಏನೂ ಹೇಳುವುದಿಲ್ಲ.. ಏನೋ ನಮ್ಮ ಮನೆಯವರು ಒಳ್ಳೆಯವರಾಗಿದ್ರೆ ನಮ್ಮ ಭಾಗ್ಯ.. ಇಲ್ಲಾ ಅಂದ್ರೆ ಮನೆಯಿಂದ ಹೊರ ಹಾಕುವವರೆಗೆ ಈ ಕೆಟ್ಟ ಅಸಹ್ಯ ಜನರು ಬಿಡಲ್ಲ..
ಅದು ಇದು ಕೇಳಿ ತೆಗೆದುಕೊಂಡು ಹೋದ ಅವರೇ ಹೇಳುತ್ತಾರೆ ಇನ್ನು ಅವಳು (ನಾನು )ನಮ್ಮ ಮನೆಗೆ ಅದು ಇದು ಕೇಳಿಕೊಂಡು ಬರುವುದು ಬೇಡ ಅಂತ..😂..
ದೇವ್ರೇ ನಾವು ಯಾರಿಗಾದ್ರೂ ಸಹಾಯ ಮಾಡೋಕೆ ಅಲ್ಲದೆ ಸುಮ್ಮನೆ ಸುಮ್ಮನೆ ಒಬ್ಬರ ಮನೆಗೆ ಹೋಗಿ ಹರಟೆ ಹೊಡೆಯುವವರು ಅಲ್ಲ.. ಹೋಗುವವರೇ ಅಲ್ಲ.. ಇದು ಎಂತ ಮಾತು.. ನಾವು ಹಾಗೆಲ್ಲಾ ಹೋಗುವವರೇ ಅಲ್ಲ.. ಅವಸ್ಥೆ ಮಾರ್ರೇ..
ಅಯ್ಯೋ ದೇವರೇ.. ಇಲ್ಲಿ ಕೇಳಿಕೊಂಡು ಬರ್ತಾ ಇದ್ದದ್ದು ಯಾರು ದೇವರೇ?? ನನಗಂತೂ ಪೂರ್ತಿ ಗೊಂದಲಮಯ..ಇನ್ನೊಬ್ಬರ ಮನೆಯಿಂದ ಯಾವ ವಸ್ತುಗಳನ್ನು ಕೂಡಾ ಕೇಳಿ ತರುವಷ್ಟು ದುರಾಸೆ ಅಂತು ಇಲ್ಲವೇ ಇಲ್ಲ..
ಅಷ್ಟೇ ಅಲ್ಲ.. ಮನೆಯ ಯಜಮಾನನಲ್ಲಿ ನಾನು ನಿಮ್ಮ ಮನೆ ಅಂದುಕೊಂಡು ಬರ್ತಾ ಇದ್ದದ್ದು..
ಅವಳು ಆ ಮನೆಯಲ್ಲಿ ಇರುವುದರಿಂದ ನಾನು ಇನ್ನು ಬರುವುದಿಲ್ಲ ಎಂದು ಹೇಳುತ್ತಾರೆ 😂..
ಅಲ್ಲ.. ಹಾಗಾದ್ರೆ ನನ್ನ ಮನೆ ಯಾವುದು??
ಇಷ್ಟು ದಿನ ರಾಗ ಎಳೆದುಕೊಂಡು ನಮ್ಮಲ್ಲಿಗೆ ಬರುತ್ತಿದ್ದದ್ದು?? ಹಾಗಾದ್ರೆ ನಾನು ನೆಟ್ಟ ಗಿಡದ ಎಲೆಗಳು, ಹೂವು ಎಲ್ಲವೂ??? ನಗಬೇಕೋ ಅಳಬೇಕೋ?? ನನಗೆ ಅವರ ಮೇಲೆ ಅಸಹ್ಯವಾಯಿತು.. ಎಷ್ಟು ಕೀಳಾಗಿ ಯೋಚಿಸುತ್ತಾರೆಂದು??
ಕಲಿಯುಗ ಅಲ್ವಾ?? ಕೇಳಿಕೊಂಡು ಬರ್ತಾ ಇದ್ದದ್ದು ಅವರು.. ತೆಗೆದುಕೊಂಡು ಹೋಗುತ್ತಿದ್ದದ್ದು ಅವರು.. ಅಪವಾದ ನಮಗೆ... ಇದು ಯಾವ ನ್ಯಾಯ ಮಾರ್ರೇ.. ಕಲಿಯುಗದ ಮಹಿಮೆನಾ???...
ಅದಕ್ಕೆ ಹೇಳುವುದು ಈ ಕೆಟ್ಟ ಜನರಿಗೆ ಹೆಚ್ಚು ಸ್ವಾತಂತ್ರ್ಯ ಕೊಡಬಾರದು ಎಂದು. ನಾನಂತೂ ಒಳ್ಳೆಯ ಪಾಠ ಕಲಿತೆ.. ನನ್ನ ಅಕ್ಕ ಪಕ್ಕದ ಜನರೂ ಕೂಡಾ ಒಳ್ಳೆಯ ಪಾಠ ಕಲಿತರು.. ಇನ್ನು ಏನಿದ್ದರೂ ನೇರವಾಗಿ ಮಾತಾಡುವುದು ಅಷ್ಟೇ..

ಸುಮ್ಮನೆ ಒಂದು ಕಾಲ್ಪನಿಕ ಬರಹ.. ಸುಮ್ಮನೆ ಇದ್ದರೂ ಕಷ್ಟ ಎಂದು.. ಹೀಗೆಯೂ ಆಗುವ ಸಾಧ್ಯತೆ ಇರುತ್ತದೆ ಎಂದು.. ವಿಷಯ ಏನು ಅಂದರೆ ಮೂರನೆಯವರಿಗೆ ಎಷ್ಟು ಸ್ವಾತಂತ್ರ್ಯ ನೀಡಬೇಕೋ ಅಷ್ಟು ಮಾತ್ರ ನೀಡಿ.. ಯಾರಿಂದ ಯಾವಾಗ ಹೇಗೆ ಅಪಾಯ, ಅಪವಾದ ಬರಬಹುದು ಎನ್ನುವುದು ಊಹಿಸಲು ಕೂಡಾ ಆಗಲ್ಲ.. ಮುನ್ನೆಚ್ಚರಿಕೆ ಅಗತ್ಯ ಎನ್ನುವ ಉದ್ಧೇಶಕ್ಕಷ್ಟೇ ಈ ಕಾಲ್ಪನಿಕ ಬರಹ.. ಸಮಯ ಸರಿ ಇಲ್ಲದಾಗ ನಾವು ಎಷ್ಟೇ ಸರಿಯಾಗಿ ಇದ್ದರೂ ಎಷ್ಟೇ ನಿಷ್ಠೆ ನಿಯತ್ತಿನಿಂದ ಇದ್ದರೂ, ನಾವು ಎಷ್ಟೇ ಸತ್ಯವಂತರಾಗಿದ್ದರೂ ನಮ್ಮ ಹೆಸರು, ವ್ಯಕ್ತಿತ್ವ ಕೆಡಿಸಲು ಬೇರೆಯವರು ಶ್ರಮಿಸುವ ಸಾಧ್ಯತೆ ಹೆಚ್ಚು..
ಇಲ್ಲಿ ಕೆಲವೊಮ್ಮೆ ನಮ್ಮವರ ಬೆಂಬಲವೇ ನಮಗೆ ಸಿಗದೆ ಇರುವ ಸಾಧ್ಯತೆ ಕೂಡಾ ಇದೆ..🥲

✍️ಸುಪ್ರೀತ ಪದ್ಮನಾಭ ಅಡ್ಕತ್ ಬೈಲ್

ಅಪವಾದ ಎನ್ನುವುದು ಯಾವಾಗ, ಯಾರಿಗೆ ಯಾವ ರೂಪದಲ್ಲಿ.. ಯಾವ ವಿಚಾರದಲ್ಲಿ ಬರಬಹುದು ಎಂದು ಹೇಳಲಾಗುವುದಿಲ್ಲ.. 🤔💭👀ಏನೋ ಒಳ್ಳೆಯದು ಮಾಡಲು ಹೋಗಿ ನಮ್...
01/12/2025

ಅಪವಾದ ಎನ್ನುವುದು ಯಾವಾಗ, ಯಾರಿಗೆ ಯಾವ ರೂಪದಲ್ಲಿ.. ಯಾವ ವಿಚಾರದಲ್ಲಿ ಬರಬಹುದು ಎಂದು ಹೇಳಲಾಗುವುದಿಲ್ಲ.. 🤔💭👀
ಏನೋ ಒಳ್ಳೆಯದು ಮಾಡಲು ಹೋಗಿ ನಮ್ಮ ಕಾಲು ಬುಡಕ್ಕೆ ಬಂದು ಬಿಡುತ್ತದೆ.. ಕೆಲವೊಮ್ಮೆ ಒಳ್ಳೆಯ ಕೆಲಸವನ್ನು ಕೂಡಾ ಯೋಚಿಸಿಯೇ ಮಾಡಬೇಕಾಗುತ್ತದೆ... ಇಲ್ಲದಿದ್ದರೆ ಕೊನೆಗೆ ನಮ್ಮ ಜೊತೆ ಯಾರೂ ಇರುವುದಿಲ್ಲ.. 🥲🥲
ನಮ್ಮಿಂದ ಸಹಾಯ ಪಡೆದವರು ಯಾರೋ ನಮ್ಮ ಮೇಲೆ ಏನೋ ಹೇಳಿದಾಗ ನಮ್ಮ ಸಹಾಯಕ್ಕೆ ನಿಲ್ಲಲಾರರು... ಆ ಕೃತಜ್ಞತೆಯೂ ಇರುವುದಿಲ್ಲ..

🥲🥲ಹೆಣ್ಣಿನ ಮೌನ ಅವಳ ಅಂತರಾಳದ ಅಳುವಾಗಿರುತ್ತದೆ.... ಅದು ಯಾರಿಗೂ ಕೇಳಿಸದ ಹಾಗೆ ಎದೆ ಒಡೆದು ಹೋಗುವಷ್ಟು ಜೋರಾದ ಅಳುವಾಗಿರುತ್ತದೆ. 🥲🥲ಹೆಣ್ಣಿನ ...
29/11/2025

🥲🥲ಹೆಣ್ಣಿನ ಮೌನ ಅವಳ ಅಂತರಾಳದ ಅಳುವಾಗಿರುತ್ತದೆ.... ಅದು ಯಾರಿಗೂ ಕೇಳಿಸದ ಹಾಗೆ ಎದೆ ಒಡೆದು ಹೋಗುವಷ್ಟು ಜೋರಾದ ಅಳುವಾಗಿರುತ್ತದೆ. 🥲🥲
ಹೆಣ್ಣಿನ ಮೌನದ ಹಿಂದೆ ಅದೆಷ್ಟೋ ದಿನ ನಿದ್ದೆ ಇಲ್ಲದೆ ಹೊರಳಾಡಿದ ಅದೆಷ್ಟೋ ನೋವುಗಳಿರುತ್ತದೆ..

ಮುಂಜಾನೆ ಬೇಗ ಏಳಲಾಗದೆ ಇನ್ನೂ ಮಲಗಿಯೇ ಇದ್ದಾಳೆ ಎಂದರೆ ಅದು ಅವಳ ಹಟ ಕೋಪ ಅಲ್ಲ.. ನೋವಿನಿಂದ ರಾತ್ರಿಯಿಡೀ ನಿದ್ದೆ ಬಾರದೆ ಬೆಳಿಗ್ಗೆ ತಲೆ ಎತ್ತಲು ಆಗದ ಅವಳ ಅಸಹಾಯಕತೆ ಆಗಿರಬಹುದು..

ಎಲ್ಲರ ಜೊತೆಗೆ ಚೆನ್ನಾಗಿ ನಗು ನಗುತ್ತಾ ಮಾತನಾಡುತ್ತಾಳೆ ಅಂದರೆ ಅವಳಿಗೆ ನೋವುಗಳೇ ಇಲ್ಲ ಎಂದು ಅಲ್ಲ..
ಅವಳು ಯಾರಿಗೂ ಗೊತ್ತಾಗದ ಹಾಗೆ ನೋವನ್ನೆಲ್ಲಾ ಬಚ್ಚಿಟ್ಟು ತನ್ನ ಅಸಹಾಯಕತೆ ಯಾರಿಗೂ ತಿಳಿಯಬಾರದೆಂದು ಮಾಡುವ ಒಂದು ಪ್ರಯತ್ನ..

ಈ ನಗು, ಮೌನ ಎಲ್ಲವೂ ಕೂಡಾ ಒಂಟಿಯಾಗಿದ್ದಾಗ ಅಥವಾ ಸ್ನಾನದ ಮನೆಯಲ್ಲಿ ಜೋರಾಗಿ ಕಿರುಚಾಡಿ ಅಳುವಿನ ರೂಪದಲ್ಲಿ ಹೊರ ಬರುತ್ತದೆ..

ತನಗೆಷ್ಟೇ ನೋವಾದ್ರೂ ಸಹಿಸಿಕೊಂಡು ಎಲ್ಲರಿಗಾಗಿ ತವರು, ಗಂಡ, ಮಕ್ಕಳು, ಅತ್ತೆ, ಮಾವ, ಕುಟುಂಬ ಎಂದು ಎಲ್ಲರಿಗಾಗಿ ಜೀವ ತೇಯುವ ಒಂದು ಜೀವ ಅಂದ್ರೆ ಅದು ಹೆಣ್ಣು..

ಅವಳು ತನ್ನ ಕುಟುಂಬದವರಲ್ಲಿ ಏನೂ ಹೇಳಿಕೊಳ್ಳುವುದಿಲ್ಲ ಅಂದರೆ ಅವಳಿಗೆ ನೋವುಗಳೇ ಇಲ್ಲ ಎಂದು ಅಲ್ಲ.. ಅವಳು ಏನನ್ನೂ ಬೇಕು ಎಂದು ಆಸೆ ಪಟ್ಟು ಕೇಳುವುದಿಲ್ಲ ಎಂದರೆ ಅವಳಿಗೆ ಆಸೆಗಳೇ ಇಲ್ಲ ಎಂದು ಅಲ್ಲ. ಅವಳ ಆಸೆಗಳನ್ನೆಲ್ಲ ಅವಳೊಳಗೆ ಅದುಮಿಟ್ಟು ಬದುಕುತ್ತಿದ್ದಾಳೆ ಎಂದು ಅರ್ಥ.

ಅವಳು ಪತಿಯಿಂದ ಆಸ್ತಿ ಅಂತಸ್ತು ಯಾವುದನ್ನೂ ಬಯಸುವುದಿಲ್ಲ.. ನಾನಿದ್ದೇನೆ ನಿನಗೆ.. ನೀನು ನನ್ನವಳು ಎನ್ನುವ ಒಂದು ಪ್ರೀತಿ ತುಂಬಿದ ಮಾತು ಅವಳಿಗೆ ಬೇಕಾಗಿರುವುದು.

ಅವಳು ತಾಳ್ಮೆಯಿಂದ ಕಾದು ಕಾದು ಕೊನೆಗೆ ಅವಳೇ ತನ್ನ ಪ್ರೀತಿಗಾಗಿ ನಿಮ್ಮಲ್ಲಿ ಬೇಡಿಕೊಳ್ಳುತ್ತಾಳೆ ಅಂದರೆ ನಿಮಗೆ ಕಿರಿ ಕಿರಿ ಮಾಡಬೇಕೆಂದು ಅಲ್ಲ.. ಒಮ್ಮೆ ಪದಗಳ ಮೂಲಕ ಮಾತಿನಿಂದ ಬೇಡಿ ಕೊಳ್ಳುತ್ತಾಳೆ.. ಅವಳು ಮತ್ತೆ ಮತ್ತೆ ವಿವರಿಸುತ್ತಾಳೆ.. ತನ್ನವರ ಮುಂದೆ ವಾದಿಸುತ್ತಾಳೆ.. ಕಿರುಚಾಡುತ್ತಾಳೆ.. ಧ್ವನಿ ಏರಿಸಿ ಕಿರುಚಾಡುತ್ತಾಳೆ.. ಆನಂತರ ಒಮ್ಮೆ ಕಣ್ಣೀರಿನಿಂದ ಬೇಡಿಕೊಳ್ಳುತ್ತಾಳೆ.. ಅವಳು ಕಣ್ಣೀರು ಹಾಕಿ ನಿಮ್ಮನ್ನು ಅಂಗಲಾಚುತ್ತಿದ್ದಾಳೆ ಅಂದರೆ ನೀವು ಅವಳನ್ನು ಅರ್ಥ ಮಾಡಿಕೊಳ್ಳುತ್ತೀರಿ ಎನ್ನುವ ನಂಬಿಕೆ.. ತನ್ನವರು ಅರ್ಥಮಾಡಿಕೊಳ್ಳುತ್ತಾರೆ ಎಂಬ ಆಶಾಭಾವನೆಯಿಂದ ಪದಗಳು ಮಾತಿನಲ್ಲಿ ಬಂದರೆ ಅದಕ್ಕೂ ಬಗ್ಗದಿದ್ದರೆ ಅದು ತನ್ನಷ್ಟಕ್ಕೆ ಒಳಗೆ ಅದುಮಿಟ್ಟ ನೋವೆಲ್ಲವೂ ಕಣ್ಣೀರಾಗಿ ಹೊರ ಬರುತ್ತದೆ. ತನ್ನವರು ಮತ್ತೂ ಕಲ್ಲಾದರೆ ಕುಸಿದು ಹೋಗುತ್ತಾಳೆ.. ಅದು ಕೋಪ ಅಲ್ಲ.. ಶರಾಣಾಗತಿ..

ಅವಳ ಮೌನ ಯಾರಿಗಾಗಿ..
ತನ್ನ ತವರಿಗಾಗಿ..
ತನ್ನ ಅಪ್ಪ, ಅಮ್ಮ, ಸಹೋದರ, ಸಹೋದರಿಯರಿಗಾಗಿ ಆಗಿರಬಹುದು..
ಅವಳು ಮನೆಯಿಂದ ಹೊರ ನಡೆದರೆ ಅವಳ ತವರಿನವರ ಎದೆ ಒಡೆದು ಹೋಗಬಹುದೆನ್ನುವ ಕಾಳಜಿ.. ಅಷ್ಟೇ ಅಲ್ಲ.. ಏನೋ ನಿಮ್ಮನ್ನು ನಂಬಿ ಬಂದಿದ್ದಾಳೆ.. ನಿಮ್ಮನ್ನು ಬಿಟ್ಟು ಹೊರ ನಡೆದರೆ ನಿಮ್ಮ ಮುಂದಿನ ಜೀವನ ಹೇಗೆನ್ನುವ ನಿಮಗೆ ಅರ್ಥವಾಗದ ನಿಮ್ಮ ಮೇಲಿನ ಕಾಳಜಿ. ನಿಮಗೆ ಅವಳ ಮೇಲೆ ಇಲ್ಲದ ಕಾಳಜಿ ಅವಳಿಗೆ ನಿಮ್ಮ ಮೇಲೆ..

ಒಟ್ಟಾರೆಯಾಗಿ ಅವಳ ಮೌನ ಅದು ಕೋಪ ಅಲ್ಲ.. ಅವಳ ಅಹಂಕಾರವೂ ಅಲ್ಲ.. ಶೂನ್ಯತೆ..
ಇವೆಲ್ಲದರ ನಡುವೆ ಅವಳಲ್ಲಿನ ಒಂದೊಂದೇ ನಿರ್ಧಾರಗಳು, ಭರವಸೆಗಳು ಕಡಿಮೆಯಾಗುತ್ತಾ ಹೋಗುತ್ತದೆ.. ತನ್ನನ್ನೇ ತಾನು ಕಳೆದುಕೊಂಡು ಯಾಂತ್ರಿಕವಾಗಿ ಬದುಕುತ್ತಾಳೆ.. ತನಗಾಗಿ ಅಲ್ಲ.. ತನ್ನವರಿಗಾಗಿ.. ನೋವಿನ ಆಯಾಸದೊಂದಿಗೆ..
ಇಷ್ಟೆಲ್ಲದರ ನಡುವೆ ಅವಳು ಹೊರಗಡೆ ಕಾಣುವಾಗ ಏನೂ ಆಗಿಲ್ಲವೆಂಬ ನಗು ಮುಖ ಅವಳಲ್ಲಿ.. ಒಳಗಡೆ ಬೆಟ್ಟದಷ್ಟು ನೋವು ತುಂಬಿದ್ದರೂ ಕೂಡಾ..

ಒಟ್ಟಾರೆ ಕೆಲವೊಮ್ಮೆ ಆಕೆಗೂ ಅನಿಸುತ್ತದೆ ಹೆಣ್ಣಿನ ಅಸ್ತಿತ್ವ ಎಲ್ಲಿ...? ತವರಿನಿಂದ ಮದುವೆ ಮಾಡಿ ಕೊಟ್ಟ ಮೇಲೆ ಅಲ್ಲಿ ಆಕೆಗೆ ಬಂದು ಹೋಗುವ ಅತಿಥಿ ಸ್ಥಾನ.. ಗಂಡನ ಮನೆಯಲ್ಲಿ ನಿನ್ನೆ ಮೊನ್ನೆ ಬಂದವಳು.. ಹಾಗಾದರೆ ಆಕೆಯ ನಿಜವಾದ ಮನೆ ಯಾವುದು?

ಹಾಗೆಯೇ ಅವಳ ತಾಳ್ಮೆಗೂ ಒಂದು ಮಿತಿ ಇರುತ್ತದೆ.. ಹೆಣ್ಣು ಎಷ್ಟು ಸಹನಾಮೂರ್ತಿಯೋ ಅದೇ ಹೆಣ್ಣು ಎಲ್ಲವನ್ನೂ ಸಹಿಸಿ ಸಹಿಸಿ ಕಲ್ಲಾದ ಮನಸ್ಸಿನಿಂದ ಒಮ್ಮೆ ಗಟ್ಟಿ ಮನಸು ಮಾಡಿ ಒಮ್ಮೆ ಮನೆಯಿಂದ ಹೊರಗಡೆ ಕಾಲಿಟ್ಟರೆ ಅವಳ ಜೀವನವನ್ನು ಅವಳೇ ಗಟ್ಟಿಯಾಗಿ ನಿಂತು ರೂಪಿಸಿಕೊಳ್ಳುವಷ್ಟು ಶಕ್ತಿಯೂ ಅವಳಲ್ಲಿ ಇದೆ.
✍️ ಸುಪ್ರೀತ ಪದ್ಮನಾಭ ಅಡ್ಕತ್ ಬೈಲ್

ಜೀವನವೇ ಇಷ್ಟು.. 🤔💭👏
29/11/2025

ಜೀವನವೇ ಇಷ್ಟು.. 🤔💭👏

Address

Kasaragod
671121

Alerts

Be the first to know and let us send you an email when Radhas Thulunada Channel posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Radhas Thulunada Channel:

Share