Saaksha TV

Website Contact the establishment

Saaksha TV Contact information, map and directions, contact form, opening hours, services, ratings, photos, videos and announcements from Saaksha TV, Bangalore.

ನಮ್ಮ ಸುತ್ತಮುತ್ತ ನಡೆಯುತ್ತಿರುವ ಪ್ರಸ್ತುತ ವಿದ್ಯಮಾನಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಸಿನಿಮಾ, ಕ್ರೀಡೆ, ಮತ್ತು ಸಾಮಾಜಿಕ ವಿಚಾರಗಳ ನೈಜ ಚಿತ್ರಣವನ್ನು ನಿಮ್ಮ ಮುಂದೆ ಇಡುವುದೇ 'ಸಾಕ್ಷ ಟಿವಿ' ಯ ಮುಖ್ಯ ಉದ್ದೇಶ.

https://www.youtube.com/live/1Q-ka4PQYgs?si=hGB70K8Oq9AVMLVpBZ CUP 2026MEDIA CRICKET LEAGUEPLAYER AUCTIONLIVE LINK WATCH...
23/08/2026

https://www.youtube.com/live/1Q-ka4PQYgs?si=hGB70K8Oq9AVMLVp

BZ CUP 2026

MEDIA CRICKET LEAGUE

PLAYER AUCTION

LIVE LINK

WATCH ALL THE ACTION ON CM CUP YOUTUBE CHANNEL

Enjoy the videos and music you love, upload original content, and share it all with friends, family, and the world on YouTube.

ಒಡಿಯೂರಿನ ಒಡಲಲ್ಲಿ ಮೂಡಿದ ಆಧ್ಯಾತ್ಮಿಕ ಬೆಳಕು...ನಂಬಿದವರ ಬಾಳಿನ ಶಾಂತಿ ಧಾಮ..ಧರ್ಮ ಸಂಸ್ಕೃತಿ, ಧಾರ್ಮಿಕತೆಯ ಪಾವನ ಬೀಡು.. ಶ್ರೀ ಗುರುದೇವದತ್...
08/08/2026

ಒಡಿಯೂರಿನ ಒಡಲಲ್ಲಿ ಮೂಡಿದ ಆಧ್ಯಾತ್ಮಿಕ ಬೆಳಕು...ನಂಬಿದವರ ಬಾಳಿನ ಶಾಂತಿ ಧಾಮ..ಧರ್ಮ ಸಂಸ್ಕೃತಿ, ಧಾರ್ಮಿಕತೆಯ ಪಾವನ ಬೀಡು.. ಶ್ರೀ ಗುರುದೇವದತ್ತ ಪೀಠದ ಅವಧೂತ ಶ್ರೀ ಗುರುದೇವಾನಂದ ಸ್ವಾಮೀಜಿಯವರು..!

=====

ಮಂದಹಾಸದಿಂದ ಕಂಗೊಳಿಸುತ್ತಿರುವ ಮುಖದ ತೇಜಸ್ಸು.. ಕಾಂತಿಯಂತೆ ಹೊಳೆಯುವ ಕಣ್ಣುಗಳು.. ದಿವ್ಯ ಪ್ರಭೆಯ ನೋಟ.. ಗಾಂಭೀರ್ಯದ ನಡೆ.. ದೈವಿಕ ವರ್ಚಸ್ಸಿನಿಂದಲೇ ಆಕರ್ಷಿಸುತ್ತಿರುವ ವ್ಯಕ್ತಿತ್ವ.. ಮನಸ್ಸಿಗೆ ಹಿತ ನೀಡುವ ಮಾತುಗಳು.. ನೊಂದವರ ಬಾಳಿಗೆ ಬೆಳಕು ನೀಡಿ ಮುನ್ನಡೆಸುವ ಕೈಗಳು.. ಕರುಣೆ, ಪ್ರೀತಿ, ದಯೆ ಮತ್ತು ಮಾನವೀಯತೆಯಿಂದ ತುಂಬಿದ ಪವಿತ್ರ ಹೃದಯ.. ಪರರ ಸುಖ-ದುಃಖ, ನೋವು-ನಲಿವುಗಳಿಗೆ ಸ್ಪಂದಿಸುವ ಮನಸ್ಸು..

ಸದಾ ಲೋಕಕಲ್ಯಾಣದ ಚಿಂತನೆಯಲ್ಲಿರುವ ಅಂತರಂಗ.. ದಣಿವನ್ನರಿಯದೆ ಸೇವೆಯ ಹಾದಿಯಲ್ಲಿ ಸಾಗುವ ಪಾವನ ಚರಣಗಳು.. ಭಕ್ತಿ, ಪ್ರೀತಿ ಮತ್ತು ಶ್ರದ್ಧೆಯಿಂದ ಪೂಜಿಸಲ್ಪಡುವ ಪಾದಕಮಲಗಳು. ಹೆಜ್ಜೆಯ ಕುರುಹುಗಳಲ್ಲಿ ಸೇವೆಯ ಸಾರ್ಥಕತೆಯ ದರ್ಶನ..ಸರಳತೆಯ ಸಾಕಾರಮೂರ್ತಿ..ತನ್ನ ಬದುಕನ್ನು ಧರ್ಮ, ಸಂಸ್ಕøತಿ, ಸಮಾಜಕ್ಕೆ ಸಮರ್ಪಿಸಿಕೊಂಡಿರುವ ಮಹಾತ್ಯಾಗಿ.

ಹೌದು, ಅವರ ಪ್ರತಿಯೊಂದು ಹೆಜ್ಜೆಯ ಗುರುತುಗಳಲ್ಲೂ ಪರೋಪಕಾರದ ಸಂದೇಶವಿದೆ.. ಪ್ರತಿಯೊಂದು ನಡೆಯಲ್ಲೂ ನಿಸ್ವಾರ್ಥ ಸೇವೆಯ ಸಂಕಲ್ಪವಿದೆ.. ಪ್ರತಿ ನುಡಿ ಮತ್ತು ಹಿತವಚನಗಳಲ್ಲಿ ಬದುಕಿಗೆ ದಾರಿ ತೋರುವ ಜ್ಞಾನದ ಬೆಳಕಿದೆ.. ಆಶೀರ್ವಚನ ಮಂಟಪದ ಪದಗಳಲ್ಲಿ ಸಮಾಜವನ್ನು ಜಾಗೃತಗೊಳಿಸುವ ಶಕ್ತಿ ಇದೆ. ಪ್ರತಿ ಪಾದಸ್ಪರ್ಶದಲ್ಲೂ ಭಕ್ತಿಭಾವದ ಅನುಭೂತಿ ಇದೆ.. ಪ್ರತಿಯೊಂದು ಸೇವಾ ಕೈಂಕರ್ಯವೂ ಸಮಾಜಕ್ಕೆ ದಾರಿದೀಪವಾಗಿದೆ..

ನಂಬಿದ ಭಕ್ತರಿಗೆ ಅಭಯ ನೀಡುವ.. ಸರಳತೆಯಲ್ಲೇ ಶ್ರೇಷ್ಠತೆಯನ್ನು ಕಾಣುವ.. ಸೇವೆಯನ್ನೇ ಬದುಕಿನ ಧ್ಯೇಯವನ್ನಾಗಿಸಿಕೊಂಡಿರುವ.. ಜಾತಿ-ಧರ್ಮ ಭೇದವಿಲ್ಲದೆ ಎಲ್ಲರನ್ನು ಸಮಾನತೆಯಿಂದ ಕಾಣುವ.. ಸಮಾಜದ ಒಳಿತಿಗಾಗಿ ಸದಾ ಶ್ರಮಿಸುತ್ತಿರುವ.. ತುಳುನಾಡಿನ ಸಂಸ್ಕøತಿ, ಪರಂಪರೆ ಹಾಗೂ ತುಳು ಭಾಷೆಯ ಬಗ್ಗೆ ಮಿಡಿಯುತ್ತಿರುವ..

ಆ ದಿವ್ಯ ಚೇತನವೇ..

ಒಡಿಯೂರು ಶ್ರೀಗಳು..!
ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರು.

ಆಗಸ್ಟ್ 8..
ಒಡಿಯೂರು ಶ್ರೀಗಳಿಗೆ ಇಂದು ಜನ್ಮದಿನದ ಸಂಭ್ರಮ.. ಅಸಂಖ್ಯಾತ ಭಕ್ತವೃಂದಕ್ಕೆ ಶ್ರೀಗಳ ಹುಟ್ಟುಹಬ್ಬವೇ ಭಕ್ತಿಯ ಮಹಾಸಂಗಮ.. ಗುರುಗಳ ಸೇವಾ ಕಾರ್ಯಗಳಿಗೆ ಶ್ರದ್ಧೆಯಿಂದ ನಮನ ಸಲ್ಲಿಸುವ ಸುದಿನ.. ಸಮಾಜಕ್ಕೆ ಮಾದರಿ ಹಾಗೂ ಆದರ್ಶಮಯ ಬದುಕನ್ನು ಸಾಗಿಸುತ್ತಿರುವ ಸ್ವಾಮೀಜಿಯವರ ಆಶೀರ್ವಾದ ಪಡೆಯುವ ಪುಣ್ಯದಿನ.

ಹಾಗಾಗಿಯೇ ಒಡಿಯೂರು ಕ್ಷೇತ್ರದಲ್ಲಿ ಭಕ್ತರು, ಗುರುಗಳ ಹುಟ್ಟುಹಬ್ಬವನ್ನು ಉತ್ಸವದಂತೆ ಆಚರಿಸುತ್ತಾರೆ. ಪ್ರತಿ ವರ್ಷದಂತೆ ಈ ವರ್ಷವೂ ಶ್ರೀಗಳ ಆಶೀರ್ವಾದದೊಂದಿಗೆ, ಗ್ರಾಮೋತ್ಸವ ಹಾಗೂ ಗುರುವಂದನ ಸೇವಾ ಸಂಭ್ರಮದೊಂದಿಗೆ ಪರಮ ಪೂಜ್ಯರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ.

ಎಲ್ಲಿದೆ ಒಡಿಯೂರು ಕ್ಷೇತ್ರ..!

ಒಡಿಯೂರು..ಪರಶುರಾಮ ಸೃಷ್ಟಿಯ ಪುಣ್ಯಭೂಮಿಯ ಧಾರ್ಮಿಕ ಕ್ಷೇತ್ರ. ಪ್ರಕೃತಿಯ ರಮಣೀಯ ತಾಣದಲ್ಲಿರುವ ಆಧ್ಯಾತ್ಮಿಕ ಧಾಮ. ಧರ್ಮ, ಸಂಸ್ಕøತಿ, ಭಕ್ತಿ, ಸೇವೆ, ಆಚಾರ, ವಿಚಾರ, ನಂಬಿಕೆಯ ಪವಿತ್ರ ತಾಣ. ಶ್ರದ್ಧೆ, ನಿಷ್ಠೆ, ಭಕ್ತಿಯಿಂದ ನಂಬಿ ಬರುವ ಪ್ರತಿಯೊಬ್ಬರ ಮನಸ್ಸಿಗೆ ನೆಮ್ಮದಿಯ ಸ್ಪರ್ಶ ನೀಡುವ ಪುಣ್ಯ ಕ್ಷೇತ್ರ.

ಒಡಿಯೂರು ಅಂದ್ರೆ ಧಾರ್ಮಿಕ ಅಥವಾ ಆಧ್ಯಾತ್ಮಿಕ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಅಲ್ಲಿದೆ ಕರುನಾಡಿನ ಮತ್ತು ತುಳುನಾಡಿನ ಸಂಸ್ಕøತಿ ಮತ್ತು ಪರಂಪರೆಯ ಕಂಪು. ಅಲ್ಲಿ ಮಿಡಿಯುತ್ತಿದೆ ತುಳು ಭಾಷೆಯ ಇಂಪು. ಹಾಗೇ ಶ್ರದ್ಧೆ, ಭಕ್ತಿಯ ಭಾವನೆಯೂ ಇದೆ. ಸೇವೆಯ ಸಂಕಲ್ಪವಿದೆ. ಮಾನವೀಯತೆಯ ಸಂದೇಶವಿದೆ. ಹೀಗಾಗಿಯೇ ಒಡಿಯೂರು ಅಸಂಖ್ಯಾತ ಭಕ್ತರ ನಂಬಿಕೆಯ ನೆಲೆಯಾಗಿದೆ.

ಇನ್ನು, ಶಿಕ್ಷಣ, ಆರೋಗ್ಯ, ಸಹಕಾರಿ ಬ್ಯಾಂಕ್, ಸ್ವಸಹಾಯ ಗುಂಪು, ಗ್ರಾಮ ವಿಕಾಸ, ಬಾಲ ವಿಕಾಸ, ಕಲೆ, ಸಾಹಿತ್ಯ, ಸಂಗೀತ, ಯಕ್ಷಗಾನ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳ ಮೂಲಕ ವಿವಿಧ ವರ್ಗಗಳ ಜನರ ಬದುಕಿಗೆ ಆಸರೆಯಾಗಿದೆ. ಶ್ರೀಗಳ ಆಶೀರ್ವಾದದಲ್ಲಿ ನೆಮ್ಮದಿ ಮತ್ತು ಪರಿಹಾರ ಕಾಣುವ ಭಕ್ತರಿಗೆ ಈ ಕ್ಷೇತ್ರವು ಶಾಂತಿಧಾಮವಾಗಿದೆ.

ಇಂತಹ ಪುಣ್ಯಕ್ಷೇತ್ರವು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದಲ್ಲಿದೆ. ಈ ಕ್ಷೇತ್ರವನ್ನು ದಕ್ಷಿಣದ ಗಾಣಗಾಪುರ ಕರೆಯಲಾಗುತ್ತಿದೆ. ಶ್ರೀ ದತ್ತಾಂಜನೇಯ ಇಲ್ಲಿನ ಆರಾಧ್ಯಮೂರ್ತಿ. 1 ಅಡಿ 1 ಇಂಚು ಎತ್ತರದ ದತ್ತಾತ್ರೇಯರ ಸ್ಪಟಿಕ ವಿಗ್ರಹ ಮತ್ತು ಕೃಷ್ಣ ಶಿಲೆಯ 5 ಅಡಿ 4 ಇಂಚು ಎತ್ತರದ ಆಂಜನೇಯ ಸ್ವಾಮಿಯೇ ಇಲ್ಲಿನ ಆರಾಧ್ಯ ದೇವರು. ಬಲಮುರಿ ಗಣಪತಿ, ಪ್ರಸನ್ನ ಸ್ವರೂಪಿ ಶ್ರೀ ಮಹಾವಜ್ರಮಾತೆ, ಸುಬ್ರಹ್ಮಣ್ಯ ಸ್ವಾಮಿ, ಮೂಲ ರಾಮ ಮತ್ತು ಭದ್ರಕಾಳಿಯನ್ನು ಇಲ್ಲಿ ಆರಾಧಿಸಲಾಗುತ್ತಿದೆ.

ಒಡಿಯೂರು ಕ್ಷೇತ್ರದ ಇನ್ನೊಂದು ವಿಶೇಷತೆ ಅಂದ್ರೆ ಇಲ್ಲಿ, ಅತ್ತಿ, ನೆಲ್ಲಿ ಮತ್ತು ಪಾರಿಜಾತ ವೃಕ್ಷಗಳು ಪ್ರಾಕೃತಿಕವಾಗಿ ಹುಟ್ಟಿ ಬೆಳೆದಿವೆ. ಅತ್ತಿಮರದಲ್ಲಿ ಲಕ್ಷ್ಮೀ ನಾರಾಯಣ (ಇಲ್ಲಿ ದತ್ತನ ಸಾನ್ನಿಧ್ಯ), ಪಾರಿಜಾತದಲ್ಲಿ ಆಂಜನೆಯ ಸ್ವಾಮಿ ಹಾಗೂ ನೆಲ್ಲಿ ಮರದಲ್ಲಿ ವಿಷ್ಣುವಿನ ಸಾನ್ನಿಧ್ಯದ ಪ್ರತೀಕ ಎಂಬುದು ಇಲ್ಲಿನ ನಂಬಿಕೆಯಾಗಿದೆ.

ನಿತ್ಯಾನಂದ ಗುಹೆ, ಧರ್ಮಶಾಲೆ, ಜ್ಞಾನಮಂದಿರ, ಆಧ್ಯಾತ್ಮಿಕ
ಕೇಂದ್ರ, ಗೋಶಾಲೆಗಳನ್ನು ನಿರ್ಮಿಸಲಾಗಿದೆ. ಭಜನೆ, ಯಜ್ಞ, ಪೂಜೆ, ಅನ್ನದಾಸೋಹ ನಿರಂತರವಾಗಿ ನಡೆಯುತ್ತಿದೆ. ಶ್ರೀ ಗುರುದೇವದತ್ತ ಪೀಠದಲ್ಲಿ ಗುರುವಾರ, ಶನಿವಾರ ಮತ್ತು ಭಾನುವಾರ ಶ್ರೀಗಳು ಭಕ್ತರ ಸಂಕಷ್ಟಗಳನ್ನು ಆಲಿಸಿ ಪರಿಹಾರ ನೀಡುತ್ತಾರೆ.

ಶ್ರೀ ಗುರುದೇವಾನಂದ ಸ್ವಾಮೀಜಿಯವರ ಪೂರ್ವಾಶ್ರಮ ಹಿನ್ನೆಲೆ..!

ಸುಮಾರು 30 ವರ್ಷಗಳ ಹಿಂದೆ ಒಡಿಯೂರು ಕುಗ್ರಾಮವಾಗಿತ್ತು. ಅಭಿವೃದ್ಧಿಯ ಹೆಜ್ಜೆ ಗುರುತುಗಳಿಲ್ಲದ ಈ ನೆಲ, ಇಂದು ಧರ್ಮದ ಬೀಡಾಗಿದೆ. ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಮಾಜಮುಖಿ ಚಟುವಟಿಕೆಗಳ ಕೇಂದ್ರವಾಗಿದೆ. ಇದರ ಹಿಂದೆ ಒಡಿಯೂರು ಶ್ರೀಗಳ ದೂರದೃಷ್ಟಿ, ಸಂಕಲ್ಪ, ತ್ಯಾಗ ಮತ್ತು ನಿರಂತರ ಪರಿಶ್ರಮವಿದೆ. ಹಾಗಾಗಿಯೇ ಒಡಿಯೂರು ಎಂಬ ಹೆಸರು ಇಂದು ಜಗದಗಲ ಪಸರಿಸಿದೆ.

ಹೌದು, ಶ್ರೀಗಳ ಪೂರ್ವಾಶ್ರಮದ ಹೆಸರು ನಾರಾಯಣ. ಒಡಿಯೂರು ಪೆರ್ಗಡೆ ಶೆಟ್ರು ಮತ್ತು ಅಂತಕ್ಕ ದಂಪತಿಯ ಪುತ್ರ . ಒಬ್ಬ ಸಹೋದರ ಮತ್ತು ಸಹೋದರಿ. ಕೃಷಿ ಕುಟುಂಬದ ಹಿನ್ನೆಲೆ. ಆದ್ರೆ ಅವರಿಗೆ ಎಳವೆಯಲ್ಲೇ ಆಧ್ಯಾತ್ಮಿಕತೆಯ ಬಗ್ಗೆ ಆಕರ್ಷಣೆ ಇತ್ತು. ಪ್ರತಿಯೊಬ್ಬರ ಬದುಕಿನಲ್ಲೂ ಒಂದು ತಿರುವು ಇರುತ್ತದೆ. ಅದೇ ರೀತಿ ಇವರ ಬದುಕಿಗೂ ಒಂದು ತಿರುವು ಸಿಕ್ಕಿತ್ತು. ತನ್ನ ಸಹೋದರಿ ಅನಾರೋಗ್ಯದಿಂದ ಬಳಲುತ್ತಿರುವುದನ್ನು ನೋಡಿ ಅವರ ಮನಸ್ಸು ಪರಿವರ್ತನೆಗೊಂಡಿತ್ತು. ಆಗಲೇ ಅವರು ಜೀವನದ ಬಗ್ಗೆ ಗಂಭೀರವಾಗಿ ಯೋಚನೆ ಮಾಡಲು ಪ್ರಾರಂಭಿಸಿದ್ರು. ಆಗ ಗಣೇಶಪುರಿಯ ಭಗವಾನ್ ನಿತ್ಯಾನಂದ ಶ್ರೀಗಳ ಆಧ್ಯಾತ್ಮಿಕ ಜೀವನ ಅವರಿಗೆ ಪ್ರೇರಣೆ ನೀಡಿತ್ತು.

ಪ್ರೌಢ ಶಿಕ್ಷಣ ಮುಗಿಸಿದ ನಂತರ ಮಂಗಳೂರಿನಲ್ಲಿ ಮೂರು ವರ್ಷಗಳ ಕಾಲ ಒಬ್ಬ ವಕೀಲರ ಜೊತೆ ಕ್ಲರ್ಕ್ ಆಗಿ ಕೆಲಸ ಮಾಡಿದ್ದರು. ನಂತರ ಖಾಸಗಿ ಕಂಪೆನಿಯಲ್ಲೂ ಕೆಲಸ ಮಾಡಿದ್ದರು. ಆದ್ರೆ ಮನಸ್ಸು ಆಧ್ಯಾತ್ಮಿಕತೆಯತ್ತ ಸೆಳೆಯುತ್ತಿತ್ತು. ಹಾಗಾಗಿ ಅವರು ತನ್ನ ಗುರುವಿಗಾಗಿ ಹುಡುಕಾಟ ನಡೆಸಿದ್ದರು.

ಕೆಲವು ವರ್ಷ ಗಾಣಗಾಪುರದಲ್ಲಿ ಆಧ್ಯಾತ್ಮಿಕತೆಯಲ್ಲಿ ಸಾಧನೆ ಮಾಡಿದ್ರು. ಕೊನೆಗೆ ಪುಣೆಯ ದತ್ತ ಯೋಗಾಶ್ರಮದಲ್ಲಿ ಅವಧೂತ ಮುನಿ ವಿವೇಕಾನಂದರ ದರ್ಶನವಾಯ್ತು. ಅಲ್ಲಿ ದೀಕ್ಷೆ ಪಡೆದು ಗುರುದೇವಾನಂದ ಹೆಸರಿನೊಂದಿಗೆ ದೈವಿಕ ಜಗತ್ತಿಗೆ ಪ್ರವೇಶಿಸಿದ್ರು. ಅಲ್ಲಿಂದ ಅವಧೂತ ಪರಂಪರೆಯ ಪಥವನ್ನು ಹಿಡಿದು ಲೋಕ ಕಲ್ಯಾಣದ ಸೇವಾ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ.

ದತ್ತಾತ್ರೇಯ ಅಂದರೆ ಬ್ರಹ್ಮ, ವಿಷ್ಣು, ಶಿವ ಸ್ವರೂಪಿ. ಆಂಜನೇಯ ಅಂದ್ರೆ ಶಕ್ತಿಯ ಪ್ರತೀಕ. ಈ ನಂಬಿಕೆಯೊಂದಿಗೆ 15-2-1989ರಲ್ಲಿ ಒಡಿಯೂರಿನಲ್ಲಿ ಓಂ ಶ್ರೀ ವೀರಾಂಜನೆಯ ಸ್ವಾಮಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಬಳಿಕ ಶ್ರೀ ಗುರುದೇವದತ್ತ ಸಂಸ್ಥಾನವಾಗಿ ಭಕ್ತರ ಆರಾಧನಾ ಕ್ಷೇತ್ರವಾಗಿದೆ.

ಹುಟ್ಟೂರಿನಲ್ಲೇ ದೇಗುಲ ನಿರ್ಮಿಸಿ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಮಾಜಮುಖಿ ಸೇವೆಗಳ ಮಂತ್ರ ಪಠಿಸುವ ಆ ಅವಧೂತರೇ..
ಇಂದು ಒಡಿಯೂರಿನ ದೈವಿಕ ಶಕ್ತಿ. ಭಕ್ತರ ನಂಬಿಕೆಯ ಗುರೂಜಿ. ಸೇವಾ ಸಂಕಲ್ಪದ ಸಾಕಾರರೂಪ. ಸರ್ವರ ಸುಖ-ಶಾಂತಿಗಾಗಿ ಶ್ರಮಿಸುತ್ತಿರುವ ದಿವ್ಯ ಚೇತನ.
ಅಂದಿನ ನಾರಾಯಣ, ನಾರಾಯಣ ಸ್ವಾಮೀಜಿಯವರೇ ಇಂದಿನ ಒಡಿಯೂರು ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರು.

ಸನತ್ ರೈ

saakshatv.com

#ಒಡಿಯೂರುಶ್ರೀಗಳು #ಶ್ರೀಗುರುದೇವಾನಂದಸ್ವಾಮೀಜಿ

ರಾಜಮಾತೆಯ ರಾಜ್ಯಭಾರ..!ಮಹಾರಾಜರ ವೈಭವ..!ದಂಡನಾಯಕರ ತ್ಯಾಗ..!ಸೈನಿಕರ ಹೋರಾಟ..!ಇದೇ ಭಾರತೀಯ ಕ್ರಿಕೆಟ್‍ನ ರಾಜಪರಂಪರೆ..!ಅಂದು..!ಸಾಮ್ರಾಜ್ಯ ವಿ...
08/08/2026

ರಾಜಮಾತೆಯ ರಾಜ್ಯಭಾರ..!
ಮಹಾರಾಜರ ವೈಭವ..!
ದಂಡನಾಯಕರ ತ್ಯಾಗ..!
ಸೈನಿಕರ ಹೋರಾಟ..!
ಇದೇ ಭಾರತೀಯ ಕ್ರಿಕೆಟ್‍ನ ರಾಜಪರಂಪರೆ..!

ಅಂದು..!
ಸಾಮ್ರಾಜ್ಯ ವಿಸ್ತರಿಸಲು ಯುದ್ಧ ಗೆಲ್ಲುವ ರಾಜ, ಮಹಾರಾಜನಾಗಿ ಸಿಂಹಾಸನದ ಪಟ್ಟಕ್ಕೇರುತ್ತಿದ್ದ. ಅವನ ಒಡ್ಡೋಲಗದ ಪ್ರಭಾವಳಿಯ ಮುಂದೆ ದಂಡನಾಯಕರ ಮತ್ತು ಸೈನಿಕರ ವೀರೋಚಿತ ಹೋರಾಟ ಮಂಕಾದ ಬೆಳಕಿನಲ್ಲಿ ಕಾಣಿಸುತ್ತಿತ್ತು. ದೇಹದ ಗಾಯ, ಹರಿದ ರಕ್ತ, ಸುರಿಸಿದ ಬೆವರ ಹನಿಗಳು ಹಣತೆಯ ದೀಪದಂತೆ ಉರಿಯುತ್ತಿದ್ದವು. ಆದ್ರೆ ಮಹಾರಾಜ ಮಾತ್ರ ಚರಿತ್ರೆಯ ಪುಟಗಳಲ್ಲಿ ನಂದಾದೀಪವಾಗಿ ಬೆಳಗುತ್ತಿದ್ದ.

ಇದು ಅಂದಿನ ರಾಜವಂಶದ ಇತಿಹಾಸ. ಇದನ್ನು ಭಾರತೀಯ ಕ್ರಿಕೆಟ್‍ಗೆ ಹೋಲಿಕೆ ಮಾಡಿದಾಗ...! ಹಾಗೇ ಸುಮ್ಮನೆ ಊಹಿಸಿಕೊಳ್ಳಿ..!

ಇಂದು...
ಕಾಲಮಾನ ಬದಲಾಗಿದೆ. ಇತಿಹಾಸ ಪುನರಾವರ್ತನೆಗೊಳ್ಳುತ್ತಿದೆ. ಆದ್ರೆ ಇದು ಸಾಮ್ರಾಜ್ಯಶಾಹಿ ಸಾಮ್ರಾಟರ ಗತವೈಭವ ಅಲ್ಲ. ಕ್ರಿಕೆಟ್ ಅಂಗಣದ ಮಹಾರಾಜ, ದಂಡನಾಯಕರ ಮತ್ತು ಸೈನಿಕರ ವಿರೋಚಿತ ಹೋರಾಟದ ವಾಸ್ತವ ಚಿತ್ರಣ

ಅಂದಿನವರು ಖಡ್ಗ, ಬಿಲ್ಲು ಬಾಣ ಹಿಡಿದುಕೊಂಡು ರಣಭೂಮಿಯಲ್ಲಿ ಹೋರಾಡುತ್ತಿದ್ದರು. ಇಂದು ಕ್ರಿಕೆಟಿಗರು ಬ್ಯಾಟ್ ಚೆಂಡು ಹಿಡಿದುಕೊಂಡು ಅಂಗಣದಲ್ಲಿ ಸ್ಪರ್ಧಿಸುತ್ತಿದ್ದಾರೆ. ಅಂದು- ಇಂದು... ವ್ಯತ್ಯಾಸ ಏನಿಲ್ಲ. ಬದಲಾಗಿದ್ದು ಕೈಯಲ್ಲಿರುವ ಆಯುಧ ಮಾತ್ರ. ಅದನ್ನು ಬಿಟ್ರೆ, ಅದೇ ರಕ್ತ, ಅದೇ ಗಾಯ, ಅದೇ ಬೆವರಿನ ಹನಿಗಳು ದೇಹದಿಂದ ಭೂಮಿಗೆ ಬೀಳುತ್ತಲೇ ಇರುತ್ತವೆ.

ಹೌದು, ತಂಡದ ಗೆಲುವಿನಲ್ಲಿ ಎಲ್ಲಾ ಆಟಗಾರರು ಭಾಗಿಯಾಗುತ್ತಾರೆ. ಎಲ್ಲರೂ ಅದ್ಭುತ ಪ್ರದರ್ಶನ ನೀಡುತ್ತಾರೆ. ಕಠಿಣ ಸನ್ನಿವೇಶಗಳಲ್ಲೂ ನೆಲಕಚ್ಚಿ ನಿಂತು ಆಡ್ತಾರೆ. ಆ ಪೈಕಿ ಒಬ್ಬ ಆಟಗಾರ ಮಾತ್ರ ಮಹಾರಾಜನಾಗಿ ಮೆರೆಯುತ್ತಾನೆ.

ಇನ್ನುಳಿದವರು ಸೇನಾಧಿಪತಿಗಳಾಗಿ, ಸೈನಿಕರಾಗಿಯೇ ಉಳಿದಿರುತ್ತಾರೆ. ಆದ್ರೂ ಕ್ರಿಕೆಟ್ ಇತಿಹಾಸ ಪುಟಗಳಲ್ಲಿ ಅವರ ಹೆಸರು ಶಾಶ್ವತವಾಗಿ ಉಳಿದುಕೊಂಡಿರುತ್ತದೆ. ಆದರೆ ಅವರ ಹೆಮ್ಮೆ - ಬಿರ್ಮೆಯ ಹೆಸರು, ಚಕ್ರವರ್ತಿಯಂತೆ ಹೊಳೆಯುವ ಆಟಗಾರನ ನೆರಳಿನಲ್ಲೇ ಅಡಗಿಕೊಂಡಿರುತ್ತದೆ.

ಹಾಗೇ ನೋಡಿದ್ರೆ ಭಾರತೀಯ ಕ್ರಿಕೆಟ್‍ನ ಪರಂಪರೆಯೇ ಒಂದು ಅದ್ಭುತ ಪಯಣ. ಒಂದೊಂದು ಕಾಲಘಟ್ಟದಲ್ಲಿ ಒಬ್ಬೊಬ್ಬ ಕ್ರಿಕೆಟ್ ಮಹಾರಾಜನಿಗೆ ಟೀಮ್ ಇಂಡಿಯಾ ಗರ್ಭಗುಡಿಯಲ್ಲಿ ಪಟ್ಟಾಭಿಷೇಕವಾಗಿದೆ. ಅದರಲ್ಲೂ ಸುನೀಲ್ ಗವಾಸ್ಕರ್, ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿಯಂತಹ ಮಹಾನ್ ಆಟಗಾರರು ರಾಜಾಧಿರಾಜರಂತೆ ವಿಶ್ವ ಕ್ರಿಕೆಟ್‍ನಲ್ಲಿ ದರ್ಬಾರು ನಡೆಸಿದ್ದಾರೆ.

ಸೂರ್ಯನ ಕಾಂತಿಯ ಸನ್ನಿ ಮತ್ತು ಬೆಳಂದಿಗಳ ಚಂದಿರನಂತಹ ಜಿ.ಆರ್.ವಿ..!

ನಿಜ, 70-80ರ ದಶಕಗಳಲ್ಲಿ ಸುನೀಲ್ ಗವಾಸ್ಕರ್ ವಿಶ್ವ ಕ್ರಿಕೆಟ್‍ನ ರನ್ ಮೇಷಿನ್. ಟೆಸ್ಟ್ ಕ್ರಿಕೆಟ್‍ನಲ್ಲಿ 10,122 ರನ್ ಹಾಗೂ 34 ಶತಕ ಸಿಡಿಸಿ ದಾಖಲೆ ಬರೆದಿದ್ದರು. ಇದೇ ವೇಳೆ ನಮ್ಮ ಕರ್ನಾಟಕದ ಜಿ.ಆರ್.ವಿಶ್ವನಾಥ್ ತನ್ನ ಕಲಾತ್ಮಕ ಬ್ಯಾಟಿಂಗ್ ಶೈಲಿಯಿಂದಲೇ ಕ್ರಿಕೆಟ್ ಜಗತ್ತನ್ನು ಅಚ್ಚರಿಗೊಳಿಸಿದ್ದರು. 6080 ರನ್ ಹಾಗೂ 14 ಶತಕ ಸಿಡಿಸಿದ್ದ ಜಿಆರ್‍ವಿಗೆ ಖ್ಯಾತಿ ಮಾತ್ರ ಇದೆ. ಆದ್ರೆ ಸೂರ್ಯನಂತೆ ಹೊಳೆಯುತ್ತಿದ್ದ ಸನ್ನಿಯ ಎದುರು ಜಿಎರ್‍ವಿ ಬೆಳಂದಿಗಳ ಚಂದಿರನಂತೆ ಹಿತವಾಗಿ ಕಂಗೊಳಿಸಿದ್ರು.

ವೆಂಗ್ ಸರ್ಕಾರ್ ಗೆ ಛಾಯೆಯಾದ ತ್ರಿಮೂರ್ತಿಗಳು..!

ಟೆಸ್ಟ್ ಕ್ರಿಕೆಟ್‍ನಲ್ಲಿ 6868 ರನ್ ಹಾಗೂ 17 ಶತಕಗಳು ಸರ್ಕಾರ್ ಹೆಸರಿನಲ್ಲಿವೆ. ಲಾಡ್ಸ್ ನಲ್ಲಿ ಸತತ ಮೂರು ಶತಕ ಗಳಿಸಿದ ದಾಖಲೆಯೂ ಇದೆ. ಗವಾಸ್ಕರ್ ಜೊತೆಗೆ ಸರ್ಕಾರ್ ಭಾರತ ಕ್ರಿಕೆಟ್‍ನ ಸೇತುವೆಯಾಗಿದ್ದರು. ಆದ್ರೆ ಗವಾಸ್ಕರ್ ದಾಖಲೆ, ವಿಶ್ವಕಪ್ ವಿಜೇತ ನಾಯಕ ಕಪಿಲ್ ವರ್ಚಸ್ಸು ಹಾಗೂ ಸಚಿನ್ ಆಗಮನದಿಂದ ವೆಂಗ್‍ಸರ್ಕಾರ್ ಹೆಸರು ನಕ್ಷತ್ರದಂತೆ ಕಾಣಿಸಿಕೊಂಡಿತ್ತು.

ಕಪಿಲ್ ಹೀರೋಯಿಸಂಗೆ ಜಿಮ್ಮಿಯೇ ಪೋಷಕ ಪಾತ್ರಧಾರಿ..!

ಮೋಹಿಂದರ್ ಅಮರನಾಥ್. 1983ರ ವಿಶ್ವಕಪ್ ಟೂರ್ನಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಪಿಲ್ ನಾಯಕತ್ವಕ್ಕೂ ಜಿಮ್ಮಿ ಸಾರಥಿಯಾಗಿದ್ದರು. ಆದ್ರೆ ಅಮರನಾಥ್ ಕೇವಲ ಪೋಷಕ ಪಾತ್ರದ ಭಾಗವಾದ್ರು. ಕ್ರಿಕೆಟ್ ಇತಿಹಾಸ ಕಪಿಲ್ ನಾಯಕತ್ವವನ್ನೇ ಹೆಚ್ಚು ನೆನಪಿಸಿಕೊಂಡಿತ್ತು.

ವಿಶ್ವ ಕ್ರಿಕೆಟ್‍ನಲ್ಲಿ ಕ್ರಿಕೆಟ್ ದೇವ್ರ ಅವತಾರ..!

ಸಚಿನ್ ತೆಂಡುಲ್ಕರ್ ಭಾರತೀಯ ಕ್ರಿಕೆಟ್‍ನ ಮುಕುಟ ಮಣಿ. ಭಾರತೀಯ ಕ್ರಿಕೆಟ್ ಅನ್ನು ಶ್ರೀಮಂತಗೊಳಿಸಿದ್ದ ಮಾಸ್ಟರ್ ಬ್ಲಾಸ್ಟರ್. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‍ನಲ್ಲಿ ದಾಖಲೆಗಳ ಸರದಾರ. ಜೊತೆಗೆ ವಿಶ್ವ ಕ್ರಿಕೆಟ್‍ನ ಸಾರ್ವಭೌಮನಾಗಿ ಮೆರೆದಾಡಿದ್ದು ಈಗ ಇತಿಹಾಸ. ಕ್ರಿಕೆಟ್ ದೇವ್ರರಾಗಿ ಟೀಮ್ ಇಂಡಿಯಾದ ಗರ್ಭಗುಡಿಯನ್ನು ಅಲಂಕರಿಸಿದ್ದ ಸಚಿನ್‍ಗೆ ಅಷ್ಪದಿಕ್ಪಾಲಕಾರಂತಹ ಆಟಗಾರರ ಬೆಂಬಲವಿತ್ತು. ಹಾಗಾಗಿಯೇ ಸಚಿನ್ ಕ್ರಿಕೆಟ್ ಜಗತ್ತಿನಲ್ಲಿ ಮೇರು ಪರ್ವತವಾಗಿ ಬೆಳೆಯಲು ಸಾಧ್ಯವಾಯ್ತು.

ಸಚಿನ್ ಪ್ರಭೆಯ ಮಧ್ಯೆ ಮೂಡಿದ ಗ್ರೇಟ್ ವಾಲ್..!

ರಾಹುಲ್ ದ್ರಾವಿಡ್ ಅಂದ್ರೆ ಗ್ರೇಟ್ ವಾಲ್. ಟೆಸ್ಟ್ ನಲ್ಲಿ 13,288 ಹಾಗೂ ಏಕದಿನ ಕ್ರಿಕೆಟ್‍ನಲ್ಲಿ 10889 ರನ್ ದಾಖಲಿಸಿದ್ದಾರೆ. ತಂಡದ ಹಿತಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಆದ್ರೆ ಕ್ರಿಕೆಟ್ ದೇವ್ರ ಪ್ರಖರತೆಯ ಮುಂದೆ ರಾಹುಲ್ ಕುಸಿಯದ ಗೋಡೆಯಾಗಿಯೇ ಉಳಿದ್ರು. ಅಂದು ತಂಡದ ಗೋಡೆಯಾಗಿದ್ದ ಜಾಮಿ, ಇಂದು ಕೂಡ ಗೊಡೆ ಕಟ್ಟುವ ಕಾಯಕದಲ್ಲೇ ಇದ್ದಾರೆ.

ತಂಡದ "4 -ಬಿ"ಗಳಲ್ಲಿ ಒಬ್ಬರಾದ ವಿವಿಎಸ್..!

ವಿವಿಎಸ್ ಲಕ್ಷ್ಮಣ್. ಈ ಹೆಸರು ಕೇಳಿದಾಗ ನೆನಪಾಗೋದು 2001ರ ಈಡನ್ ಟೆಸ್ಟ್‍ನ 281 ರನ್‍ಗಳ ಮಹೋನ್ನತ ಇನಿಂಗ್ಸ್. ಟೆಸ್ಟ್ ನಲ್ಲಿ 8781 ರನ್ ದಾಖಲಿಸಿದ್ದಾರೆ. ತಂಡದ ಹಲವು ಗೆಲುವುಗಳಿಗೆ ಕಾರಣೀಕರ್ತರಾಗಿದ್ದಾರೆ. ಆದ್ರೆ ತೆಂಡುಲ್ಕರ್ ಗಂಗೂಲಿ, ದ್ರಾವಿಡ್À, ಸೆಹ್ವಾಗ್À ಆಟದ ಮುಂದೆ ವಿವಿಎಸ್,ವೇರಿ ವೇರಿ ಸ್ಪೇಷಲ್ ಆಗಿಯೇ ಕಾಣಿಸಿದ್ರು.

ಬ್ಯಾಟರ್‍ಗಳ ಅಬ್ಬರದ ನಡುವೆಯೂ ಗ್ರೇಟ್ ಬೌಲರ್..!

ಅನಿಲ್ ಕುಂಬ್ಳೆ. ಟೆಸ್ಟ್ ನಲ್ಲಿ 619 ವಿಕೆಟ್ ಮತ್ತು ಏಕದಿನ ಕ್ರಿಕೆಟ್‍ನಲ್ಲಿ 337 ವಿಕೆಟ್ ಉರುಳಿಸಿದ್ದಾರೆ. ಪಾಕ್ ವಿರುದ್ದ ಇನಿಂಗ್ಸ್‍ನ 10 ವಿಕೆಟ್ ಪಡೆದು ದಾಖಲೆ ಬರೆದಿದ್ದರು. ಟೀಮ್ ಇಂಡಿಯಾದ ವಿಕೆಟ್ ಟೇಕಿಂಗ್ ಬೌಲರ್. ಬ್ಯಾಟರ್‍ಗಳ ಪ್ರಾಬಲ್ಯದ ನಡುವೆಯೂ ವಿಕೆಟ್ ಸಾಮ್ರಾಜ್ಯ ಕಟ್ಟಿದ ಅಪ್ರತಿಮ ದಂಡನಾಯಕ.

ಮಹಾರಾಜನಾದ್ರೂ ಭಾರತೀಯ ಕ್ರಿಕೆಟ್‍ಗೆ ದಾದಾ..!

ಸೌರವ್ ಗಂಗೂಲಿ. ಆಧುನಿಕ ಟೀಮ್ ಇಂಡಿಯಾಗೆ ಅಡಿಪಾಯ ಹಾಕಿಕೊಟ್ಟ ಕ್ಯಾಪ್ಟನ್. ಮ್ಯಾಚ್ ಫಿಕ್ಸಿಂಗ್ ಕಳಂಕದಿಂದ ತಂಡವನ್ನು ಮುಕ್ತಿಗೊಳಿಸಿದ್ದ ನಾಯಕ. ಆದ್ರೂ ಸಚಿನ್, ದ್ರಾವಿಡ್ ನೇಮ್, ಫೇಮ್ ಹಾಗೂ ಧೋನಿಯ ಯಶಸ್ವಿ ನಾಯಕತ್ವದಿಂದ ಗಂಗೂಲಿ ದಾದಾ ಬಿರುದಿನಲ್ಲೇ ಗುರುತಿಸಿಕೊಂಡ್ರು.

ಯುವರಾಜ, ಸುಲ್ತಾನನೂ ಮಹಾರಾಜನಾಗಲಿಲ್ಲ..!

ಇನ್ನು, ಯುವರಾಜ್ ಸಿಂಗ್, ಸೆಹ್ವಾಗ್, ಗಂಭೀರ್ ಕೂಡ ಇತಿಹಾಸದ ನೆನಪಿನ ಪುಟ ಸೇರಿಕೊಂಡ್ರು. ಜೀವ ಪಣಕ್ಕಿಟ್ಟು ಆಡಿದ್ದ ಯುವಿ, ಯುವರಾಜನಾಗಿಯೇ ಉಳಿದು ಬಿಟ್ರು. ವೀರೂ ಡೆಲ್ಲಿ ಸುಲ್ತಾನ ಬಿರುದುಗೆ ಸೀಮಿತವಾದ್ರು. ಯಾಕಂದ್ರೆ, ಮೂರು ಐಸಿಸಿ ಟ್ರೋಫಿ ಗೆದ್ದ ಧೋನಿ ಜನಮನ ಗೆದ್ದಿದ್ದರು.

ಧೋನಿಯ ಸಾಮ್ರಾಜ್ಯದಲ್ಲಿ ಉದಯಿಸಿದ ಆಧುನಿಕ ಮಹಾರಾಜ..!

ಎಂ.ಎಸ್. ಧೋನಿ ಟೀಮ್ ಇಂಡಿಯಾದ ಕಿಂಗ್‍ಮೇಕರ್. ಸಮಯಪ್ರಜ್ಞೆಯಿಂದ ಗೆಲುವು ಸಾಧಿಸುವ ನಿಪುಣ ಮಂತ್ರಿ. ಅನುಭವಿ ಹಾಗೂ ಬಿಸಿರಕ್ತದ ಹುಡುಗರೇ ಧೋನಿಯ ಗೆಲುವಿನ ಸೈನ್ಯ. ಈ ನಡುವೆ ಕೊಹ್ಲಿಯ ಅಧಿಪತ್ಯ ಧೋನಿಯನ್ನು ತೆರೆಮರೆಗೆ ಸರಿಯುವಂತೆ ಮಾಡಿತ್ತು. ಹಾಗಾಗಿ ಧೋನಿ ಗ್ರೇಟ್ ಲೀಡರ್, ಕೂಲ್ ಕ್ಯಾಪ್ಟನ್ ಆಗಿಯೇ ಪ್ರಖ್ಯಾತಿ ಪಡೆದ್ರು.

ಕೊಹ್ಲಿಯ ಮಹಾಜ್ವಾಲೆಯಿಂದ "ಇವರು" ಹೆಚ್ಚು ಪ್ರಕಾಶಿಸಲಿಲ್ಲ..!

ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ಅಜಿಂಕ್ಯಾ ರಹಾನೆ, ಜಸ್ಪ್ರಿತ್ ಬೂಮ್ರಾ, ರವೀಂದ್ರ ಜಡೇಜಾ ಕೊಹ್ಲಿಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೊಹ್ಲಿ ಹಂತ ಹಂತವಾಗಿ ಸಾಧನೆಯ ಮೆಟ್ಟಲೇರಿದ್ರು. ಸಚಿನ್ ಅವರ ಕೆಲವೊಂದು ದಾಖಲೆಗಳನ್ನು ತನ್ನ ಹೆಸರಿಗೆ ಬರೆಸಿಕೊಂಡ್ರು. ಏತನ್ಮಧ್ಯೆ, ನಾಯಕನಾಗಿ ರೋಹಿತ್ 2 ಐಸಿಸಿ ಟ್ರೋಫಿ ಗೆದ್ದುಕೊಂಡ್ರು. ಆದ್ರೂ ರೋಹಿತ್ ಅಬ್ಬರ, ಪೂಜಾರ, ರಹಾನೆಯ ತಾಳ್ಮೆ ಕೊಹ್ಲಿಯ ನೆರಳಿನಲ್ಲಿ ಬಚ್ಚಿಟ್ಟುಕೊಂಡಿತ್ತು.

ಒಂದಂತೂ ಸತ್ಯ, ಭಾರತೀಯ ಕ್ರಿಕೆಟ್, ರಾಜಪರಂಪರೆಯಂತೆ ಒಂದೊಂದು ಪರ್ವದಲ್ಲಿ ಒಬ್ಬ ಆಟಗಾರ, ಮಹಾರಾಜನ ಪಟ್ಟವನ್ನು ಅಲಂಕರಿಸಿದ್ದಾರೆ. ಆದ್ರೆ ಸಾಮಾಜ್ಯ ಕಟ್ಟಲು ಶ್ರಮಿಸಿದ್ದ ದಂಡನಾಯಕರನ್ನು ಕೆಲವೊಮ್ಮೆ ಇತಿಹಾಸ ಮರೆತುಬಿಡುತ್ತದೆ. ಆದ್ರೆ ಭಾರತೀಯ ಕ್ರಿಕೆಟ್ ಚರಿತ್ರೆ ಈ ದಂಡನಾಯಕರು ಮತ್ತು ಸೈನಿಕರಂತಹ ಆಟಗಾರರನ್ನು ಎಂದಿಗೂ ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ.

ಬಿಸಿಸಿಐನ ಇಬ್ಬಗೆಯ ನೀತಿ ಎಷ್ಟು ಸರಿ..?

ಭಾರತೀಯ ಕ್ರಿಕೆಟ್‍ಗೆ ಬಿಸಿಸಿಐ ರಾಜಮಾತೆ. ಕ್ರಿಕೆಟ್ ರಾಜ್ಯಭಾರದ ಸೂತ್ರಗಳನ್ನು ಕೈ ಬೆರಳಿನಲ್ಲಿ ಆಡಿಸುತ್ತಿರುವ ಪಾಲಕಿ. ಆದ್ರೆ ಎಲ್ಲಾ ಆಟಗಾರರನ್ನು ಒಂದೇ ರೀತಿಯಲ್ಲಿ ನಡೆಸಿಕೊಳ್ಳುತ್ತಿಲ್ಲ ಎಂಬ ಆರೋಪ ಸುಳ್ಳಲ್ಲ. ಇದಕ್ಕೆ ಸಾಕಷ್ಟು ನಿದರ್ಶನಗಳೂ ಇವೆ. ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದಾಗ ಯುವ ಆಟಗಾರರಿಗೆ ಅದ್ದೂರಿ ಸ್ವಾಗತ. ಆದ್ರೆ ಸೇವೆ ಮುಗಿಸಿ ವಿದಾಯ ಹೇಳುವಾಗ ಹಿರಿಯ ಆಟಗಾರರಿಗೆ ಗೌರವದ ಬೀಳ್ಕೊಡುಗೆ ಮಾಡುತ್ತಿಲ್ಲ.

ಯಾಕಂದ್ರೆ ಬಿಸಿಸಿಐ ಕೆಲವೇ ಕೆಲವು ಆಟಗಾರರಿಗೆ ಮಾತ್ರ ಅದ್ದೂರಿಯಾದ ವಿದಾಯ ನೀಡಿದೆ. ಸಚಿನ್ ತೆಂಡುಲ್ಕರ್ ಒಲ್ಲದ ಮನಸ್ಸಿನಿಂದ ಹೇಳಿರುವ ವಿದಾಯವನ್ನು ತನ್ನ ಇಚ್ಛೆಯಂತೆ ಅರ್ಥಪೂರ್ಣಗೊಳಿಸಿದ್ರು. ಇನ್ನುಳಿದಂತೆ ಯಾವೊಬ್ಬ ಕ್ರಿಕೆಟಿಗನಿಗೂ ಬಿಸಿಸಿಐ ಅವರಿಚ್ಚೆಯಂತೆ ಗೌರವಯುತವಾದ ವಿದಾಯವನ್ನು ನೀಡಲಿಲ್ಲ.

ಹಾಗಾಗಿ, ಬಿಸಿಸಿಐನ ತಾರತಮ್ಯದ ಸಂಸ್ಕøತಿಯ ಬಗ್ಗೆ ಹಲವರಿಗೆ ಬೇಸರವಿದೆ. ಆದ್ರೂ ಒಂದು ಸಮಾಧಾನ. ಅಂದು ಕಾಸಿಲ್ಲದೆ ಒದ್ದಾಡುತ್ತಿದ್ದ ಬಿಸಿಸಿಐ ಇಂದು, ಕ್ರಿಕೆಟ್ ಆಟವನ್ನು ಶ್ರೀಮಂತಗೊಳಿಸಿದೆ. ಕ್ರಿಕೆಟಿಗರ ಬದುಕನ್ನು ಹಸನಾಗಿಸಿದೆ. ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತಿದೆ. ತನ್ನ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಯುವರಾಜನಂತಹ ಆಟಗಾರರನ್ನು ಬೆಳೆಸುತ್ತಿದೆ.

ಮುಂದಿನ ಮಹಾರಾಜ ಯಾರು..?

ಒಟ್ಟಿನಲ್ಲಿ ಗವಾಸ್ಕರ್, ತೆಂಡುಲ್ಕರ್, ಕೊಹ್ಲಿ ಈಗಾಗಲೇ ಭಾರತೀಯ ಕ್ರಿಕೆಟ್‍ನ ಅಧಿಪತಿಯ ಪಟ್ಟವನ್ನು ಅಲಂಕರಿಸಿದ್ದಾರೆ. ಹಾಗಿದ್ರೆ ಮುಂದಿನ ಸಾಮ್ರಾಟ ಯಾರು..? ಈ ಪ್ರಶ್ನೆಗೆ ಉತ್ತರ ಇನ್ನೊಂದು ಪರ್ವದವರೆಗೆ ಕಾಯಲೇಬೇಕು. ಅದೇ ಭಾರತೀಯ ಕ್ರಿಕೆಟ್‍ನ ಸಂಸ್ಕøತಿ, ಪರಂಪರೆ..ಮುಂದಿನ ಇತಿಹಾಸ.

#ಸನತ್ ರೈcom

ಭಾರತದ ಲಂಕಾ ಪ್ರವಾಸ -  ಧೋನಿಯ ಮಾರ್ಗದರ್ಶನ ಪಡೆದ ರಿಷಪ್ ಪಂತ್..!ಫಿಯರ್‍ಲೆಸ್ ಕ್ರಿಕೆಟರ್ ರಿಷಬ್ ಪಂತ್ ಶ್ರೀಲಂಕಾ ಪ್ರವಾಸಕ್ಕೆ ರೆಡಿಯಾಗುತ್ತಿ...
04/08/2026

ಭಾರತದ ಲಂಕಾ ಪ್ರವಾಸ - ಧೋನಿಯ ಮಾರ್ಗದರ್ಶನ ಪಡೆದ ರಿಷಪ್ ಪಂತ್..!

ಫಿಯರ್‍ಲೆಸ್ ಕ್ರಿಕೆಟರ್ ರಿಷಬ್ ಪಂತ್ ಶ್ರೀಲಂಕಾ ಪ್ರವಾಸಕ್ಕೆ ರೆಡಿಯಾಗುತ್ತಿದ್ದಾರೆ. ಅಪಘಾತ, ಸತತ ಗಾಯ, ಸ್ಥಿರ ಪ್ರದರ್ಶನದ ಕೊರತೆಯ ನಡುವೆಯೂ ಪಂತ್ ಟೀಮ್ ಇಂಡಿಯಾದ ಟೆಸ್ಟ್ ತಂಡದ ಆಧಾರಸ್ತಂಭವಾಗಿದ್ದಾರೆ. ಏಕದಿನ ಮತ್ತು ಟಿ-20 ಪಂದ್ಯಗಳಲ್ಲಿ ಪಂತ್‍ಗೆ ಟೀಮ್ ಇಂಡಿಯಾದಲ್ಲಿ ಸ್ಥಾನವಿಲ್ಲ. ಆದ್ರೆ ಟೆಸ್ಟ್ ಕ್ರಿಕೆಟ್ ಬಂದಾಗ ಪಂತ್ ಸ್ಪೇಷಲ್ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದೀಗ ಆಗಸ್ಟ್ 15ರಿಂದ ಶ್ರೀಲಂಕಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ. ಈಗಾಗಲೇ ಟೀಮ್ ಇಂಡಿಯಾದ ಟೆಸ್ಟ್ ಆಟಗಾರರು ಅಂತಿಮ ಹಂತದ ಸಿದ್ದತೆ ನಡೆಸುತ್ತಿದ್ದಾರೆ.
ಆದ್ರೆ ರಿಷಬ್ ಪಂತ್ ಲಂಕಾ ಪ್ರವಾಸಕ್ಕೆ ಮುನ್ನ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿ ಕೆಲವೊಂದು ಸಲಹೆಗಳನ್ನು ಪಡೆದುಕೊಂಡಿದ್ದಾರೆ.
ಸ್ವತಃ ರಿಷಬ್ ಪಂತ್ ರಾಂಚಿಯಲ್ಲಿರುವ ಧೋನಿಯನ್ನು ಭೇಟಿ ಮಾಡಿರುವ ವಿಡಿಯೋ ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಮಾಜಿ ವಿಕೆಟ್ ಕೀಪರ್ ಧೋನಿ, ಭಾರತದ ಮಾಜಿ ಸ್ಪಿನ್ನರ್ ಶಹಬಾಜ್ ನದೀಮ್ ಅವರೊಂದಿಗೆ ಪಂತ್ ತರಬೇತಿ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಗಮನ ಸೆಳೆಯುತ್ತಿದೆ.
ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ದ ಸೋತ ನಂತರ ಪಂತ್ ಕೀಪಿಂಗ್ ಮತ್ತು ಬ್ಯಾಟಿಂಗ್ ಮೇಲೆ ಗಮನ ಹರಿಸುತ್ತಿದ್ದಾರೆ. ಹಾಗಂತ ಧೋನಿಯ ಸಲಹೆ, ಮಾರ್ಗದರ್ಶನ ಪಡೆಯುತ್ತಿರುವುದು ಪಂತ್ ಇದೇನೂ ಮೊದಲ ಸಲವಲ್ಲ. ಈ ಹಿಂದೆಯೂ ಪಂತ್ ಧೋನಿಯ ಸಲಹೆ, ಸೂಚನೆಗಳನ್ನು ಪಡೆಯುತ್ತಿದ್ದರು. ಇವರಿಬ್ಬರ ನಡುವಿನ ಬಾಂಧವ್ಯ ತುಂಬಾ ಚೆನ್ನಾಗಿದೆ. ಇದೀಗ ಪಂತ್ ಧೋನಿಯ ಫಾರ್ಮ್‍ಹೌಸ್‍ಗೆ ಹೋಗಿ ಕೆಲವೊಂದು ಟಿಪ್ಸ್‍ಗಳನ್ನು ಪಡೆದುಕೊಂಡಿದ್ದಾರೆ.

ಚೆನ್ನೈನಲ್ಲಿ ಹೈಸ್ಪೀಡ್ ಕೆಟಿಎಂ ಬೈಕ್ ಸವಾರಿ ಮಾಡಿದ ಧೋನಿ..!ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು, ಮದ್ರಾಸ್ ಇಂಟರ್ ನ್ಯಾಷನ...
04/08/2026

ಚೆನ್ನೈನಲ್ಲಿ ಹೈಸ್ಪೀಡ್ ಕೆಟಿಎಂ ಬೈಕ್ ಸವಾರಿ ಮಾಡಿದ ಧೋನಿ..!

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು, ಮದ್ರಾಸ್ ಇಂಟರ್ ನ್ಯಾಷನಲ್ ಸಕ್ರ್ಯೂಟ್‍ನಲ್ಲಿ ಕೆಟಿಎಂ 390 ಡ್ಯೂಕ್ ಬೈಕ್ ಸವಾರಿ ಮಾಡುವ ಮೂಲಕ ಗಮನ ಸೆಳೆದ್ರು.

ಚೆನ್ನೈನ ಇರುಂಗಟ್ಟುಕೊಟ್ಟೈನಲ್ಲಿರುವ ಮದ್ರಾಸ್ ಇಂಟರ್ ನ್ಯಾಷನಲ್ ಸಕ್ರ್ಯೂಟ್‍ನಲ್ಲಿ ಟಿವಿಎಸ್ ಯೂರೋಗ್ರಿಪ್ ಆಯೋಜಿಸಿರುವ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ರೇಸಿಂಗ್ ಟ್ರ್ಯಾಕ್‍ನಲ್ಲಿ ಸೈ ಸ್ಪೀಡ್ ಲ್ಯಾಂಪ್‍ಗಳಲ್ಲಿ ಧೋನಿ ಎಂಜಾಯ್ ಮಾಡಿದ್ದರು. ಇದು ನೆರೆದಿದ್ದ ಅಭಿಮಾನಿಗಳನ್ನು ಅಚ್ಚರಿಗೊಳಿಸಿತ್ತು. ಧೋನಿ ಕ್ರಿಕೆಟ್ ಜೊತೆಗೆ ಫುಟ್‍ಬಾಲ್ ಹಾಗೂ ಬೈಕ್ ಸವಾರಿಯ ನಿರಂತರ ಪ್ರೀತಿಯನ್ನು ಮತ್ತೊಮ್ಮೆ ನೆನೆಪಿಸಿದ್ದರು. ಧೋನಿಗೆ ಮೊದಲಿನಿಂದಲೇ ಬೈಕ್ ಗಳ ಮೇಲೆ ಅಪಾರ ಒಲವು. ಬಿಡುವಿನ ವೇಳೆಯಲ್ಲಿ ಬೈಕ್ ಸವಾರಿ ಮಾಡೋದು ಅವರ ನೆಚ್ಚಿನ ಹವ್ಯಾಸವಾಗಿದೆ. ಈಗಾಗಲೇ ಅವರ ಮನೆಯಲ್ಲಿ ಬೈಕ್‍ಗಳ ಮ್ಯೂಸಿಯಂ ಕೂಡ ಇದೆ.

ಕತ್ತಲೆಯ ರಾತ್ರಿಯಲ್ಲಿ ರಾಜಾರೋಷದ ಓಡಾಟ..! ಕಾಡು ದಾರಿಯಲ್ಲಿ ಸದ್ದಿಲದ ಕಾರ್ಯಾಚರಣೆ..! ಬಲಿಯಾಯ್ತು ಒಂದು ಬಡ ಜೀವ..! ಕಾಡಿನವರು ಊರಿಗೆ ಬಂದಿದ್...
03/08/2026

ಕತ್ತಲೆಯ ರಾತ್ರಿಯಲ್ಲಿ ರಾಜಾರೋಷದ ಓಡಾಟ..! ಕಾಡು ದಾರಿಯಲ್ಲಿ ಸದ್ದಿಲದ ಕಾರ್ಯಾಚರಣೆ..! ಬಲಿಯಾಯ್ತು ಒಂದು ಬಡ ಜೀವ..! ಕಾಡಿನವರು ಊರಿಗೆ ಬಂದಿದ್ದಾರೆ..ಊರಿನವರು ಎಲ್ಲಿಗೆ ಹೋಗಬೇಕು..? ಜೀವ ಉಳಿಸಿ..ನಮ್ಮನ್ನು ರಕ್ಷಿಸಿ..! ಈ ಸಣ್ಣ ಕೂಗು ಕೇಳಿ ಬರುತ್ತಿರುವುದು ಎಲ್ಲಿಂದ..? ಆ ಊರು ಯಾವುದು..?

ಅದು...!
ನನ್ನ ಊರು..!
ಊರಿನ ಹೆಸರು ರೆಖ್ಯ

ಎಲ್ಲಿದೆ..?

ದಕ್ಷಿಣ ಕನ್ನಡ ಜಿಲ್ಲೆ,
ಬೆಳ್ತಂಗಡಿ ತಾಲೂಕು
ರೆಖ್ಯ ಗ್ರಾಮ...ರೆಖ್ಯ ಪೋಸ್ಟ್
ಪಿನ್‍ಕೋಡ್- 574229

ಇದುವೇ ನನ್ನ ಜನ್ಮಭೂಮಿ..!

ನನ್ನ ಹುಟ್ಟು, ನನ್ನ ಬಾಲ್ಯ, ನನ್ನ ಆಟ -ಪಾಠ. ಹೀಗೆ ನನ್ನ ಹದಿಹರೆಯದ ಎಲ್ಲಾ ನೆನಪುಗಳ ತವರೂರು. ರೆಖ್ಯ ನನಗೆ ಕೇವಲ ಗ್ರಾಮದ ಹೆಸರು ಅಲ್ಲ. ಅದು ನನ್ನ ಗುರುತು. ಅದು ನನ್ನ ಅಸ್ಮಿತೆ. ಈ ಊರಿನಲ್ಲಿರುವ ನಮ್ಮ ತಲೆತಲಾಂತರದ ಮನೆಯೇ ನನ್ನ ಬದುಕಿನ ಅಮೂಲ್ಯ ಆಸ್ತಿ.

ಇಲ್ಲಿದೆ ನನ್ನೂರಿನ ಪರಿಚಯ..!

ಎಂಜೀರ ಮತ್ತು ನೇಲ್ಯಡ್ಕ
ರೆಖ್ಯ ಗ್ರಾಮದ ಪ್ರಮುಖ ಎರಡು ಹೆಬ್ಬಾಗಿಲುಗಳು. ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯು ಈ ಗ್ರಾಮದ ಗಡಿಯಲ್ಲೇ ಹಾದು ಹೋಗುತ್ತದೆ. ಸೌತೆಡ್ಕ - ಧರ್ಮಸ್ಥಳ - ಸುಬ್ರಮಣ್ಯ, ಶಿಶಿಲ, ಶಿಬಾಜೆ ಸೇರಿದಂತೆ ಹಲವು ದೇಗುಲಗಳಿಗೆ ತೆರಳುವ ಕವಲು ದಾರಿಗಳು ಇದೇ ಹಳ್ಳಿಯಲಿದೆ.

ಏನಿದೆ ವಿಶೇಷತೆ...?

ಪ್ರಕೃತಿ ಮಾತೆಯೇ ಈ ಮಣ್ಣಿನ ಉಸಿರು. ಬೆಟ್ಟ, ಗುಡ್ಡ, ಕಾಡುಗಳೇ ಈ ಸೀಮೆಗೆ ನೆರಳು. ಕೃಷಿಯೇ ಬದುಕಿನ ಬೆನ್ನೆಲುಬು. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಅಡಿಕೆ, ತೆಂಗು, ರಬ್ಬರ್ ನನ್ನೂರಿನವರ ಜೀವನಾಧಾರ. ಬಾವಿ, ಕೆರೆ, ತೊರೆ-ಹಳ್ಳಗಳು, ಪಕ್ಕದಲ್ಲೇ ಹರಿಯುತ್ತಿರುವ ಗುಂಡ್ಯ ನದಿ ಈ ಊರಿನ ಜೀವನಾಡಿ. ಶುದ್ಧ ನೀರು, ಸ್ವಚ್ಛ ಗಾಳಿಯ ನಡುವೆ ಕಷ್ಟಪಟ್ಟು, ಬೆವರು ಸುರಿಸಿ ದುಡಿಯುವ ಕೈಗಳಿಗೆ ಭೂಮಾತೆಯೇ ಜೀವಾಳ.

ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯೇ ಈ ಹಳ್ಳಿಯ ಮಕ್ಕಳ ಜ್ಞಾನದೇಗುಲ. ಹಿಂದೂ- ಕ್ರೈಸ್ತ ಬಾಂಧವರ ನಡುವಿನ ಸಹಬಾಳ್ವೆಯೇ ಈ ಊರಿನ ದೊಡ್ಡ ಸಂಪತ್ತು. ಸಂಸ್ಕøತಿ, ಸಂಪ್ರದಾಯ, ಹಬ್ಬ ಹರಿದಿನಗಳು, ದೇಗುಲ ಉತ್ಸವ, ಭಜನೆ, ನಾಗಾರಾಧನೆ, ದೈವರಾಧನೆಯೇ ಇಲ್ಲಿನ ಬದುಕಿನ ಜೀವಂತಿಕೆ.

ಈಗ ಹೇಗಿದೆ..?

ಹೌದು, ದಶಕಗಳ ಹಿಂದೆ ನನ್ನೂರು ಕುಗ್ರಾಮವಾಗಿತ್ತು. ಆದ್ರೆ ಇಂದು ಅಭಿವೃದ್ಧಿಯ ಸ್ಪರ್ಶವನ್ನು ಪಡೆದುಕೊಳ್ಳುತ್ತಿದೆ. ಜನರ ಜೀವನ ಮಟ್ಟ ಸುಧಾರಣೆಯಾಗಿದೆ. 30-40 ವರ್ಷಗಳ ಹಿಂದಿನ ಬಡತನ ಮಾಯಾವಾಗಿದೆ. ಕಷ್ಟಪಟ್ಟು ದುಡಿದು ಮಕ್ಕಳನ್ನು ಓದಿಸಿದ್ದಾರೆ. ಹಲವರು ಪರ ಊರಿನಲ್ಲಿ ಉದ್ಯೋಗದಲ್ಲಿದ್ದಾರೆ. ಇನ್ನೂ ಕೆಲವರು ಊರಿನಲ್ಲಿದ್ದುಕೊಂಡೇ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಮತ್ತೆ ಕೆಲವರು ಪುಂಡು ಪೋಕರಿಗಳಂತೆ ತಿರುಗಾಡುತ್ತಿದ್ದಾರೆ. ಹಾಗಂತ ಎಲ್ಲರೂ ನೆಮ್ಮದಿಯಾಗಿದ್ದಾರೆ ಅಂತ ಹೇಳ್ತಿಲ್ಲ. ಅವರವರ ಇತಿಮಿತಿಯಲ್ಲಿ ಬದುಕುತ್ತಿದ್ದಾರೆ. ಈ ನಡುವೆ ಸಣ್ಣಪುಟ್ಟ ಮನಸ್ತಾಪಗಳು ಆಗಾಗ ನಡೆಯುತ್ತಿರುತ್ತದೆ.

ಈವಾಗ ಏನಾಗಿದೆ..?

ಈಗ ನನ್ನೂರಿನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಜನರ ನೆಮ್ಮದಿಗೆ ಭಂಗವಾಗಿದೆ. ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ. ಯಾವುದೇ ಭಯವಿಲ್ಲದೆ ಮಧ್ಯ ರಾತ್ರಿ ರಬ್ಬರ್ ಟ್ಯಾಪಿಂಗ್ ಮಾಡುವವರ ಕೈ-ಕಾಲುಗಳು ನಡುಗುತ್ತಿವೆ. ಕೂಲಿ ಕಾರ್ಮಿಕರು ಸೇರಿದಂತೆ ಪ್ರತಿಯೊಬ್ಬರಿಗೂ ಕತ್ತಲಾಗುವ ಮುನ್ನ ಮನೆ ಸೇರಿಕೊಳ್ಳುವ ಧಾವಂತವಿದೆ.

ಯಾಕೆ ಹೀಗಾಯ್ತು..? ಯಾರು ಕಾರಣ..?

ಅದು ನಡೆದದ್ದೇ ದಾರಿ. ಎಲ್ಲಿ, ಯಾವಾಗ, ಹೇಗೆ, ಯಾವ ಸಮಯದಲ್ಲಿ ಪ್ರತ್ಯಕ್ಷವಾಗುತ್ತದೆ ಅನ್ನೋದೇ ಗೊತ್ತಾಗಲ್ಲ. ಹಾಗಾದ್ರೆ ನನ್ನೂರಿಗೆ ಯಾಕೆ ಹೀಗಾಯ್ತು..? ಈ ಪ್ರಶ್ನೆಗೆ ಉತ್ತರ..

"ಅಜ್ಜೆರು"..! ಅಜ್ಜೆರುನಕುಲು..!

ಇದು ನಮ್ಮೂರಿನ ಜನ ಒಂಟಿ ಸಲಗಕ್ಕೆ ಅಜ್ಜೆರು ಅಂತಾರೆ.
ಕಾಡಾನೆಗಳ ಗುಂಪಿಗೆ "ಅಜ್ಜೆರುನಕುಲು" ಅಂತ ಹೇಳ್ತಾರೆ

ಏನು ಮಾಡಿತ್ತು ಆ "ಒಂಟಿ ಸಲಗ"?À

ಎರಡು ದಿನಗಳ ಹಿಂದೆ ಕೂಲಿ ಕಾರ್ಮಿಕನೊಬ್ಬನನ್ನು ಒಂಟಿ ಸಲಗ ಬಲಿ ತೆಗೆದುಕೊಂಡಿದೆ. ಸಂಜೆ ಕೆಲಸ ಮುಗಿಸಿ, ಎಂದಿನಂತೆ ಕಾಡು ದಾರಿಯಲ್ಲಿ ಮನೆಯತ್ತ ಹೆಜ್ಜೆ ಹಾಕುತ್ತಿದ್ದಾಗ ಕಾಡಾನೆಯ ತಿವಿತಕ್ಕೊಳಗಾಗಿದ್ದಾನೆ. ಇಳಿ ಸಂಜೆಯ ವೇಳೆ ನಡೆದ ಈ ಘಟನೆ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.

ಹಾಗೇ ನೋಡಿದ್ರೆ, ಕಳೆದ ಹತ್ತು - ಹದಿನೈದು ವರ್ಷಗಳ ಹಿಂದೆಯೇ ಕಾಡಾನೆಗÀಳು ನಮ್ಮೂರಿನ ಕಾಡನ್ನು ಆಕ್ರಮಿಸಿಕೊಂಡಿದ್ದವು. ಕಾಡಿನಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದ ಕಾಡಾನೆಗಳು, ರಾತ್ರಿ ವೇಳೆ ತೋಟಗಳಿಗೆ ನುಗ್ಗಿ ಪುಂಡಾಟ ನಡೆಸಿದ್ದು ಇದೆ. ಅಲ್ಲದೆ ಕಾಡು ಬದಿಯ ರಸ್ತೆಗಳಲ್ಲಿ ಕಾಣಿಸಿಕೊಂಡು ಜನರನ್ನು ಭಯಪಡುವಂತೆ ಮಾಡಿದ್ದೂ ಇದೆ. ಆದ್ರೆ ಇಲ್ಲಿಯ ತನಕ ನಮ್ಮೂರಿನಲ್ಲಿ ಯಾರ ಜೀವವನ್ನು ಬಲಿಪಡೆದುಕೊಂಡಿರಲಿಲ್ಲ. ಇದೀಗ ಕಾಡಾನೆ ಮೊದಲ ಬಾರಿ ಒಬ್ಬ ವ್ಯಕ್ತಿಯ ಜೀವವನ್ನು ಕಸಿದುಕೊಂಡಿದೆ.

ಸಮಾಚಾರ ಗೊತ್ತಾಗಿದ್ದು ಹೇಗೆ..?

ಮೂರು ದಿನಗಳ ಹಿಂದೆ ಅಪ್ಪ - ಅಮ್ಮ ಫೋನ್ ಮಾಡಿ ಹೇಳಿದ್ದರು.

ಬಹಳ ದಿನಗಳ ನಂತರ "ಒಂಟಿ ಅಜ್ಜೆರು (ಕಾಡಾನೆ) ಬಂದಿದ್ದಾನೆ. ಕಳೆದ ವರ್ಷ ಚಿಕ್ಕಪ್ಪನ ಮನೆಯ ಅಂಗಳದಲ್ಲಿರುವ ನೀರಿನ ಟ್ಯಾಪ್ ಅನ್ನು ಪುಡಿಗೈದು, ತೋಟಕ್ಕೆ ನುಗ್ಗಿ, ಸ್ವಲ್ಪ ಬಾಳೆ, ಅಡಿಕೆ ಸಸಿ, ತೆಂಗಿನ ಸಸಿಗಳನ್ನು ನೆಲಸಮ ಮಾಡಿತ್ತು ಹಾಗೇ ನಮ್ಮ ನೆರೆಹೊರೆಯವರ ತೋಟದ ಪರಿಸ್ಥಿತಿ ಸ್ವಲ್ಪ ಜಾಸ್ತಿನೇ ಆಗಿತ್ತು. ಈಗ ಮತ್ತೆ ಬಂದಿದೆ. ಈ ಬಾರಿ ಹಾನಿ ಏನು ಮಾಡಿಲ್ಲ ಎಂದಿದ್ರು.

ಇನ್ನು ಮುಂದೆ ಮಧ್ಯರಾತ್ರಿ ಮಾಡ್ಕೊಂಡು ಮನೆಗೆ ಬರಬೇಡಿ ಎಂದು ಕಿವಿ ಮಾತು ಕೂಡ ಹೇಳಿದ್ದರು. ಆಗ ನಾನು, ತಮ್ಮ ಹೊರಟಿದ್ದಾನೆ. ಮನೆಗೆ ರೀಚ್ ಆದಾಗ 11-12 ಗಂಟೆಯಾಗಬಹುದು ಅಂದೆ. ಅಷ್ಟರಲ್ಲಿ ನಿಮಗೆ ಎಷ್ಟು ಹೇಳಿದ್ರೂ ಅರ್ಥ ಆಗಲ್ಲ. ಕಾಡನೆಗಳು ತಿರುಗಾಡುತ್ತಿವೆ. ರಾತ್ರಿ ಮಾತ್ರವಲ್ಲ. ಹಗಲಿನಲ್ಲೂ ಜನ ಓಡಾಡುವುದಕ್ಕೆ ಹಿಂಜರಿಯುತ್ತಾರೆ ಎಂದು ಎಚ್ಚರಿಸಿದ್ರು.

ಅವರ ಮಾತುಗಳನ್ನು ನಾನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಯಾಕಂದ್ರೆ, ಕಾಡಾನೆಗಳ ಸವಾರಿಯ ಸಮಾಚಾರ ಮಾಮೂಲಿ ಸುದ್ದಿಯಾಗಿತ್ತು. ಬರ್ತಾವೆ.. ಹೋಗ್ತಾವೆ. ಹಾಗಾಗಿ ಈ ಬಗ್ಗೆ ಹೆಚ್ಚು ಯೋಚನೆ ಮಾಡಿರಲಿಲ್ಲ.

ಯಾವಾಗ ಭಯದ ಛಾಯೆ ಮೂಡಿದ್ದು..?

ಆದ್ರೆ ಈಗ ಪರಿಸ್ಥಿತಿ ಬದಲಾಗಿದೆ. ಕಾಡಾನೆಗೆ ಒಂದು ಜೀವ ಬಲಿಯಾಗಿದೆ ಎಂಬ ಸುದ್ದಿ ಕೇಳಿದ ತಕ್ಷಣ ಮನಸ್ಸಿನಲ್ಲಿ ಒಂಥರಾ ಅಂಜಿಕೆ. ಊರಿನಲ್ಲಿರುವ ಎಲ್ಲಾ ರಸ್ತೆಗಳು ಒಂದು ಕ್ಷಣ ಮುಂದೆ ಹಾದು ಹೋದವು..! ಯಾವುದೇ ಭಯವಿಲ್ಲದೆ ಜನ ಮುಕ್ತವಾಗಿ ಓಡಾಡುತ್ತಿದ್ದರು. ಈಗ ನನ್ನಂತೆ ಅವರ ಮನಸ್ಸಿನಲ್ಲೂ ಹೆದರಿಕೆಯ ಭಾವನೆ ಮೂಡಿರಬಹುದೇನೋ..?

ನಾನು ಬೆಂಗಳೂರಿನಿಂದ ರಾತ್ರಿ ಏಳು -ಎಂಟು ಗಂಟೆಗೆ ಹೊರಟರೆ ಮನೆ ತಲುಪುವಷ್ಟರಲ್ಲಿ ಮಧ್ಯರಾತ್ರಿ ಕಳೆಯುತ್ತಿತ್ತು. ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡು ಪ್ರಾಣಿಗಳ ಸಂಚಾರದ ಫಲಕಗಳನ್ನು ನೋಡಿದ್ರೂ ಕ್ಯಾರೇ ಎನ್ನುತ್ತಿರಲಿಲ್ಲ. ಅಷ್ಟೇ ಯಾಕೆ, ನಮ್ಮೂರಿನ ರಸ್ತೆಗಳಲ್ಲಿ ಓಡಾಡುವುದಕ್ಕೂ ಯಾವ ಭಯವೂ ಇರುತ್ತಿರಲಿಲ್ಲ.

ನನ್ನನ್ನು ಯಾಕೆ ಇಷ್ಟೊಂದು ಕಾಡುತ್ತಿದೆ..?

ಈಗ ಮನದಲ್ಲಿ ಭಯ ಆವರಿಸಿಕೊಂಡಿದೆ. ಅದೇ ಹೆದ್ದಾರಿ , ಅದೇ ಕಾಡು, ಅದೇ ದಾರಿ, ಸಾಗುವ ಮುನ್ನವೇ ತಳಮಳ ಶುರುವಾಗಿದೆ. ನನ್ನೂರಿನವರ ಮನಸ್ಸಿನಲ್ಲೂ ಇದೇ ರೀತಿಯ ಕಳವಳ ಇದ್ದಿರಬಹುದು. ಯಾಕಂದ್ರೆ, ಪ್ರತಿಯೊಂದು ತಿರುವಿನಲ್ಲೂ, ಪ್ರತಿಯೊಂದು ಕತ್ತಲೆಯಲ್ಲೂ, ಪ್ರತಿ ಕಾಡು ದಾರಿಯಲ್ಲೂ ಅಜ್ಜೆರು (ಕಾಡಾನೆ) ಇರಬಹುದೇನೋ ಎಂಬ ಛಾಯೆ ಮೂಡುತ್ತಿದೆ.

ಇದು ನನ್ನೂರಿನ "ಕಿಲ್ಲರ್" ಕಾಡಾನೆಯ ಸುದ್ದಿ. ಹಾಗೇ ನಮ್ಮ ಅಕ್ಕದ ಊರಿನಲ್ಲೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಮಡಿಕೇರಿ, ಚಿಕ್ಕಮಗಳೂರು, ಹಾಸನ, ಮೈಸೂರು, ಚಾಮರಾಜನಗರ ಹೀಗೆ ಹಲವು ಕಡೆ ಕಾಡಾನೆಗಳು ಮಾಡಿರುವ ಪುಂಡಾಟಗಳನ್ನು ವಿಡಿಯೋಗಳಲ್ಲಿ ನೋಡಿದ್ದೇನೆ. ಕಾಲ್ತುಳಿತಕ್ಕೆ ಬಲಿಯಾದವರ ಸುದ್ದಿಗಳನ್ನು ಓದಿದ್ದೇನೆ. ಆದ್ರೆ ವಾಸ್ತವ ಸ್ಥಿತಿ ಏನು ಎಂಬುದು ಈಗ ಅರಿವಾಗುತ್ತಿದೆ.

ಹಾಗಿದ್ರೆ ಈ "ಸಂಘರ್ಷ"ಕ್ಕೆ ಕೊನೆಯೇ ಇಲ್ವಾ..?

ಸಾವನ್ನಪ್ಪಿದ್ದ ಬಡ ಕೂಲಿ ಕಾರ್ಮಿಕನ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ನೀಡಿದ್ರೆ ಎಲ್ಲವೂ ಮುಗಿದು ಹೋಯ್ತಾ..? ಇಷ್ಟು ದಿನ ಸ್ಥಳೀಯ ಅರಣ್ಯಾಧಿಕಾರಿಗಳು ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದ್ರೆ ಈಗ ಎಚ್ಚೆತ್ತುಕೊಳ್ಳಲೇಬೇಕು. ಕಾಡಿನ ಗಡಿ ಪ್ರದೇಶಗಳಲ್ಲಿ ಸೌರ ವಿದ್ಯುತ್ ಬೇಲಿ ಅಥವಾ ಆನೆ ತಡೆ ಬೇಲಿಗಳನ್ನು ನಿರ್ಮಿಸಬೇಕು. ಜನಪ್ರತಿನಿಧಿಗಳು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಕಾರ್ಯಪ್ರವೃತ್ತರಾಗಬೇಕು.

ಕೇಸರಿ ಬಣ್ಣಕ್ಕೆ "ಅಜ್ಜೆರು" ಓಡಿ ಹೋಗ್ತಾರಾ..?

ರೆಖ್ಯ ಗ್ರಾಮದ ಬಗ್ಗೆ ಅಪಾರ ಪ್ರೀತಿಯನ್ನಟ್ಟುಕೊಂಡಿರುವ ಬೆಳ್ತಂಗಡಿ ಶಾಸಕರು ಹೆಚ್ಚಿನ ಮುತುವರ್ಜಿ ವಹಿಸಬೇಕು. ಕೇವಲ ಪರಿಹಾರ ನೀಡುವುದಕ್ಕೆ ಸೀಮಿತವಾಗಬಾರದು. ಗ್ರಾಮಸ್ಥರು ನಿರ್ಭಿತಿಯಿಂದ ಓಡಾಡಲು ಅಭಯ ನೀಡಬೇಕು. ಕಣ್ಣೋರೆಸುವ ತಂತ್ರ ಬೇಡ. ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಶಾಶ್ವತ ಪರಿಹಾರ ಕಲ್ಪಿಸಬೇಕು. ಈ ಬಗ್ಗೆ ಅರಣ್ಯ ಇಲಾಖೆ ಮತ್ತು ಸರ್ಕಾರದ ಮೇಲೆ ಒತ್ತಡ ಹೇರಬೇಕು.

ಯಾಕಂದ್ರೆ ಕೇಸರಿ ಬಣ್ಣಕ್ಕೆ ಕಾಡಾನೆಗಳು, ಕಾಡು ಪ್ರಾಣಿಗಳು ಓಡಿ ಹೋಗಲ್ಲ. ಆದ್ರೂ ಶಾಸಕರ ಕಾಳಜಿ, ಮಾನವಿಯತೆಗೆ ಸ್ಪಂದಿಸಿದ್ದ ರೀತಿಯನ್ನು ಮೆಚ್ಚಲೇಬೇಕು. ಹಾಗೇ ಆ "ಕಿಲ್ಲರ್" ಕಾಡಾನೆಯನ್ನು ಸೆರೆ ಹಿಡಿದು, ಪ್ರಾಣ ಕಳೆದುಕೊಂಡ ಬಡ ಕೂಲಿ ಕಾರ್ಮಿಕನ ಆತ್ಮಕ್ಕೆ ಶಾಂತಿ ದೊರೆಯುವಂತೆ ಮಾಡಬೇಕು.

ಕಾಡಿನವರು ನಾಡಿಗೆ ಬಂದಿದ್ದು ಯಾಕೆ..?

ಇಂದಿನ ದಿನಗಳಲ್ಲಿ ಪ್ರಕೃತಿ ಮತ್ತು ಮನುಷ್ಯನ ಸಂಘರ್ಷ ಜಾಸ್ತಿಯಾಗುತ್ತಿದೆ. ಯಾಕಂದ್ರೆ ಒಂದು ಕಾಲದಲ್ಲಿ ಕಾಡು ದೂರದಲ್ಲಿತ್ತು. ಪ್ರಕೃತಿ "ಸುವಾಸನೆ" ಬೀರುತ್ತಿತ್ತು. ಹಾಗಾಗಿ ಭಯದ "ವಾಸನೆಯೇ" ಇರಲಿಲ್ಲ. ಈಗ ಕಾಡು, ನಾಡು ಒಂದೇ ಆಗಿದೆ. ಹಾಗಾಗಿ ಕಾಡಿನವರು ಮನೆಯಂಗಳಕ್ಕೆ ಬರುತ್ತಿದ್ದಾರೆ. ಊರಿನವರು ಹೆದರಿ ಮನೆಯೊಳಗೆ ಕೂತಿದ್ದಾರೆ. ಇಲ್ಲಿ ತಪ್ಪು ಯಾರದ್ದು ಅನ್ನೋ ಪ್ರಶ್ನೆಯಲ್ಲ. ತಪ್ಪು ಆಗಿದೆ. ಮುಂದಿನ ದಾರಿ ಹುಡುಕಬೇಕು ಅಷ್ಟೇ..!

ಹಾಗಾದ್ರೆ ಜೀವ ಉಳಿಸಿಕೊಳ್ಳುವುದು ಹೇಗೆ..?

ಒಟ್ಟಿನಲ್ಲಿ ರೆಖ್ಯ ನನ್ನ ಒಬ್ಬನ ಊರಲ್ಲ. ನನ್ನಂತೆ ಈ ಹಳ್ಳಿಯಲ್ಲಿ ಹುಟ್ಟಿ ಬೆಳೆದು ಬದುಕು ಸಾಗಿಸುತ್ತಿರುವವರÀ ಊರು. ಹಾಗಾಗಿ ಈಗ ನಾವು ಎಚ್ಚೆತ್ತುಕೊಳ್ಳಬೇಕು. ನಮ್ಮ ಊರಿನ ರಕ್ಷಣೆ ಮಾಡುವುದು ನಮ್ಮ ಆದ್ಯ ಕರ್ತವ್ಯ. ಇವತ್ತು ಒಂದು ಕಾಡಾನೆಗೆ ಒಂದು ಬಲಿ..! ನಾಳೆ....! ಅದು ಆಗುವುದು ಬೇಡ.

ಯಾರು ಏನು ಮಾಡಬೇಕು...?

ಸರ್ಕಾರವೇ.. ಜನಪ್ರತಿನಿಧಿಗಳೇ..ಅರಣ್ಯ ಅಧಿಕಾರಿಗಳೇ..
ಇದೇ ಪ್ರಾರ್ಥನೆ.. ಇದೇ ಮನವಿ. ಇನ್ನೊಂದು ಮನೆಯ ದೀಪ ಆರದಂತೆ ನೋಡಿಕೊಳ್ಳಿ. ನಮ್ಮ ಜೀವವನ್ನು ಕಾಪಾಡಿ. ನಮ್ಮನ್ನು ಭಯವಿಲ್ಲದೆ, ನೆಮ್ಮದಿಯಾಗಿ ಬದುಕಲು ಬಿಡಿ.

ಅರಣ್ಯ ಬೆಳೆಸಿ..! ಆದ್ರೆ ಕಾಡು ಪ್ರಾಣಿಗಳಿಂದ ನಮ್ಮ ಜೀವ ಉಳಿಸಿ..! ಭಯದಿಂದ ನಮ್ಮನ್ನು ಮುಕ್ತಗೊಳಿಸಿ...! ನಮ್ಮೂರನ್ನು ರಕ್ಷಿಸಿ..!

ಇದು ಬರೀ ನನ್ನ ಹಾಗೂ ರೆಖ್ಯ ಗ್ರಾಮಸ್ಥರ ಧ್ವನಿಯಲ್ಲ. ಕಾಡಂಚಿನಲ್ಲಿರುವ ಪ್ರತಿಯೊಂದು ಗ್ರಾಮವಾಸಿಗಳ ಒಕ್ಕೋರಲಿನ ಧ್ವನಿ..!

ಇಂತಿ..

ಸನತ್ ರೈ.
saakshatv

ಸುಮಾರು ಎರಡು ತಿಂಗಳ ಹಿಂದೆ... ಆಕೆ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದಳು. ಗ್ಲೌಸ್ ಧರಿಸಿ ಅಭ್ಯಾಸ ನಡೆಸಬೇಕಿದ್ದ ಕೈಗಳಿಗೆ ಚಿಕಿತ್ಸೆಯ ಸೂಜಿಗಳ...
03/08/2026

ಸುಮಾರು ಎರಡು ತಿಂಗಳ ಹಿಂದೆ... ಆಕೆ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದಳು. ಗ್ಲೌಸ್ ಧರಿಸಿ ಅಭ್ಯಾಸ ನಡೆಸಬೇಕಿದ್ದ ಕೈಗಳಿಗೆ ಚಿಕಿತ್ಸೆಯ ಸೂಜಿಗಳು ಚುಚ್ಚಿಕೊಂಡಿದ್ದವು. ಹಲವು ದಿನಗಳ ಕಾಲ ಕಾಡಿದ್ದ ಜ್ವರಕ್ಕೆ ಅವಳು ಬಳಲಿ ಬೆಂಡಾಗಿದ್ದಳು. ಕೊನೆಗೂ ಔಷಧಿ ಮತ್ತು ವೈದ್ಯರ ಕಾಳಜಿಯಿಂದ ಜ್ವರವೇನೂ ವಾಸಿಯಾಗಿತ್ತು.

ಮನೆಗೆ ಬಂದು ಹಾಗೇ ಕುಳಿತು ಯೋಚಿಸಿದಾಗ ಆಕೆಗೆ ಕಾಡಿದ್ದು ಬರೀ ಜ್ವರದ ನೋವಲ್ಲ. ತನ್ನ ಕಾಮನ್‍ವೆಲ್ತ್ ಗೇಮ್ಸ್ ಕನಸು ಕಮರಿ ಹೋಗುತ್ತಿದೆಯಲ್ಲ ಅನ್ನೋ ವೇದನೆ..!

ಬೆಂಬಿಡದೆ ಕಾಡಿದ ಜ್ವರ ಆಕೆಯ ದೇಹವನ್ನು ಸೊರಗುವಂತೆ ಮಾಡಿತ್ತು. ಹೀಗಾಗಿ ವಿದೇಶದಲ್ಲಿದ್ದ ವಿಶೇಷ ತರಬೇತಿಯನ್ನು ತಪ್ಪಿಸಿಕೊಂಡಿದ್ದಳು. ಹಾಗಂತ ಆಕೆ ಕುಗ್ಗಲಿಲ್ಲ. ಆತ್ಮವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ. ಚೇತರಿಸಿಕೊಂಡ ತಕ್ಷಣವೇ ಮತ್ತೆ ಅಖಾಡಕ್ಕಿಳಿದಳು.

ಆಗ ಕೋಚ್‍ಗಳು ಆಕೆಗೆ ಹೇಳಿದ್ದು ಇಷ್ಟೇ..!
ಫಲಿತಾಂಶದ ಬಗ್ಗೆ ಯೋಚನೆ ಮಾಡಬೇಡ. ನಿನ್ನ ಮೇಲೆ ನಂಬಿಕೆ ಇಟ್ಟು ಸ್ಪರ್ಧೆ ಮಾಡು. ಈ ಧೈರ್ಯದ ಮಾತೇ ಆಕೆಯ ಸೊರಗಿದ್ದ ದೇಹಕ್ಕೆ "ಟಾನಿಕ್" ನೀಡಿದಂತೆ ಆಯ್ತು.

ಹೌದು. ಗ್ಲಾಸ್ಗೋ ಕಾಮನ್‍ವೆಲ್ತ್ ಗೇಮ್ಸ್‍ನ ಬಾಕ್ಸಿಂಗ್ ರಿಂಗ್‍ನಲ್ಲಿ ಆಕೆ ಬರೀ ಸ್ಪರ್ಧಿಯಾಗಿರಲಿಲ್ಲ. ಗಾಯಗೊಂಡ ಸಿಂಹಿಣಿಯಂತೆ ಎದುರಾಳಿಗಳ ವಿರುದ್ಧ ಪ್ರಹಾರ ನಡೆಸಿದ್ದಳು. ಪ್ರತಿಯೊಂದು ಪಂಚ್‍ನಲ್ಲೂ ಅನುಭವಿಸಿದ್ದ ನೋವಿನ ಯಾತನೆ ಇತ್ತು. ಪ್ರತಿಯೊಂದು ಹೆಜ್ಜೆಯಲ್ಲೂ ಸಿಂಹಿಣಿಯ ಘರ್ಜನೆ ಇತ್ತು. ಪ್ರತಿಯೊಂದು ದಾಳಿಯಲ್ಲೂ ಚಿನ್ನದ ಪದಕ ಗೆಲ್ಲುವ ಹಸಿವಿತ್ತು.

ಇನ್ನೇನು ಫೈನಲ್‍ನ ಕೊನೆಯ ಗಂಟೆ ಮೊಳಗಿತ್ತು. ಅಷ್ಟರಲ್ಲೇ ರೆಫ್ರಿ ಆಕೆಯ ಕೈಯನ್ನು ವಿಜಯದ ಸಂಕೇತವಾಗಿ ಮೇಲೆಕ್ಕಿತ್ತಿದರು. ಆಗ ಆಕೆಯ ಆನಂದಕ್ಕೆ ಪಾರವೇ ಇರಲಿಲ್ಲ. ಓಡೋಡಿ ಬಂದು ಭಾರತದ ರಾಷ್ಟ್ರ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ನಲಿದಾಡಿದಳು.

ಪ್ರತಿಷ್ಠಿತ ಪೋಡಿಯಂನಲ್ಲಿ ಚಿನ್ನದ ಪದಕವನ್ನು ಕೊರಳಿಗೆ ಹಾಕೊಂಡು ಭಾರತದ ರಾಷ್ಟ್ರ ಗೀತೆಯನ್ನು ಮೊಳಗಿಸಿದಳು. ಆರೇಳು ವಾರಗಳ ಹಿಂದೆ ಕಣ್ಣೀರು ಹಾಕೊಂಡಿದ್ದ ಹುಡುಗಿ, ಇಂದು ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಮಂದಹಾಸ ನಗೆ ಬೀರಿದಳು.

ಈ ಧೀರೆಯ ಹೆಸರು ಜೈಸ್ಮಿನ್ ಲಂಬೋರಿಯಾ.

ಹರಿಯಾಣದ ಭಿವಾನಿಯ ಮಣ್ಣಿನಲ್ಲಿ ಹುಟ್ಟಿ ಬೆಳೆದ ಮಗಳು. ಭಿವಾನಿ ಅಂದ್ರೆ ಭಾರತದ ಬಾಕ್ಸಿಂಗ್‍ನ "ತೊಟ್ಟಿಲು". ಅಂತಹ ತೊಟ್ಟಿಲಿನಲ್ಲಿ ಬೆಳೆದ ಜೈಸ್ಮಿನ್‍ಗೆ, ಬಾಕ್ಸಿಂಗ್ ಬರೀ ಒಂದು ಸ್ಪರ್ಧೆಯಾಗಿರಲಿಲ್ಲ. ತನ್ನ ಕುಟುಂಬದ ಪರಂಪರೆಯನ್ನು ಮುನ್ನಡೆಸುವ ವಾರಸುಧಾರೆಯಾಗಿದ್ದಳು.

ಹಾಗಂತ ಜೈಸ್ಮಿನ್ ತಂದೆ ಜೈವೀರ್ ಲಂಬೋರಿಯಾ ಬಾಕ್ಸರ್ ಆಗಿರಲಿಲ್ಲ. ಹೋಮ್ ಗಾರ್ಡ್ ಕೆಲಸ ಮಾಡುತ್ತಿದ್ದರು. ತಾಯಿ ಜೋಂಗಿಂದರ್ ಕೌರ್. ಗೃಹಿಣಿಯಾಗಿದ್ದರೂ ಮಗಳ ಬಾಕ್ಸಿಂಗ್ ಆಸಕ್ತಿಯನ್ನು ಗಮನಿಸಿ ಬೆಂಬಲ ನೀಡಿದ್ದರು.

ಆದ್ರೆ ಜೈಸ್ಮಿನ್‍ನ ಚಿಕ್ಕಪ್ಪಂದಿರಾದ ಸಂದೀಪ್ ಲಂಬೋರಿಯಾ ಮತ್ತು ಪರ್ವಿಂದರ್ ಲಂಬೋರಿಯಾ ಅಪ್ರತಿಮ ಬಾಕ್ಸರ್‍ಗಳಾಗಿದ್ದರು. 2006ರ ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಪರ್ವಿಂದರ್ ಸ್ಪರ್ಧೆ ಮಾಡಿದ್ದರು. ನಂತರ ಇಬ್ಬರು ಸೇರಿಕೊಂಡು ಲಂಬೋರಿಯಾ ಬಾಕ್ಸಿಂಗ್ ಅಕಾಡೆಮಿಯನ್ನು ಶುರು ಮಾಡಿದ್ದರು. ಕುಟುಂಬದ ಪರಂಪರೆಯ ಸಂಕೇತವಾಗಿರುವ ಇದೇ ಅಕಾಡೆಮಿಯಲ್ಲಿ ಜೈಸ್ಮಿನ್ ತರಬೇತಿ ಪಡೆಯುತ್ತಿದ್ದಳು.

ಅಂದ ಹಾಗೆ, ಭಿವಾನಿಯಲ್ಲಿ ಬಾಕ್ಸಿಂಗ್ ಬೀಜ ಬಿತ್ತಿದ್ದ ದಿಗ್ಗಜ ಬಾಕ್ಸರ್ ಹವಾಸಿಂಗ್ ಅವರು, ಜೈಸ್ಮಿನ್‍ಳ ದೂರದ ಸಂಬಂಧಿಯೂ ಹೌದು. ಇಂತಹ ದಿಗ್ಗಜರ ಕುಟುಂಬದ ಕುಡಿ ಜೈಸ್ಮಿನ್, ಬಾಕ್ಸಿಂಗ್ ಸ್ಪರ್ಧೆಯ ತಂತ್ರಗಳನ್ನು ಬೇಗನೇ ಕರಗತ ಮಾಡಿಕೊಂಡಳು. ಹಂತ ಹಂತವಾಗಿ ಒಂದೊಂದು ಮೆಟ್ಟಿಲನ್ನು ಹತ್ತಿದಳು. 57 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಜೈಸ್ಮಿನ್ ರಾಷ್ಟ್ರೀಯ ಮಟ್ಟದಲ್ಲಿ ಮಿಂಚು ಹರಿಸಿದ್ದಳು.

ಪದಕದ ಬೇಟೆ.. ವಿಶ್ವ ಚಾಂಪಿಯನ್ ಕಿರೀಟ...!

2021ರಲ್ಲಿ ದುಬೈನಲ್ಲಿ ನಡೆದಿದ್ದ ಏಷ್ಯನ್ ಅಮೆಚೂರು ಬಾಕ್ಸಿಂಗ್ ಅಖಾಡಕ್ಕಿಳಿದ್ದಿದ್ದಳು. ಅಲ್ಲಿ ಬೆಳ್ಳಿ ಗೆದ್ದು ಪದಕದ ಬೇಟೆಯಾಡಲು ಶುರು ಮಾಡಿದ್ದಳು. 2022ರ ಬರ್ಮಿಂಗ್ ಹ್ಯಾಮ್ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಕಂಚಿನ ಹಾರ ಹಾಕಿಸಿಕೊಂಡಿದ್ದಳು.

ನಂತರ 2025ರ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಹಾಗೂ ವಿಶ್ವ ಬಾಕ್ಸಿಂಗ್‍ನ ಎರಡು ಸ್ಪರ್ಧೆಗಳಲ್ಲಿ ಬಂಗಾರವನ್ನು ತನ್ನದಾಗಿಸಿಕೊಂಡಿದ್ದಳು. ವಿಶ್ವ ಚಾಂಪಿಯನ್ ಎಂಬ ಹೆಗ್ಗಳಿಕೆ ಪಡೆದಿರುವ ಜೈಸ್ಮಿನ್, ಇದೀಗ ಗ್ಲಾಸ್ಗೋ ಕಾಮನ್‍ವೆಲ್ತ್ ನಲ್ಲಿ ಚಿನ್ನದ ಪದಕವನ್ನು ಮೂಡಿಗೇರಿಸಿಕೊಂಡಿದ್ದಾಳೆ.

ಭಾರತೀಯ ಸೇನೆಯಲ್ಲಿ ಉದ್ಯೊಗ ಪಡೆದ ಮೊದಲ ಬಾಕ್ಸರ್..!

ಇನ್ನು ಬರ್ಮಿಂಗ್ ಹ್ಯಾಮ್‍ನಲ್ಲಿ ಕಂಚಿನ ಪದಕ ಆಕೆಯ ಬದುಕಿಗೆ ಹೊಸ ತಿರುವನ್ನು ನೀಡಿತ್ತು. ಭಾರತೀಯ ಸೇನೆಯಲ್ಲಿ ಉದ್ಯೋಗವನ್ನು ಪಡೆದುಕೊಂಡಳು. ಕಾಪ್ರ್ಸ್ ಆಫ್ ಮಿಲಿಟರಿ ಪೊಲೀಸ್ ಗೆ ಸೇರ್ಪಡೆಯಾದ ಮೊದಲ ಬಾಕ್ಸರ್ ಎಂಬ ಹೆಗ್ಗಳಿಕೆಯೂ ಈಕೆಗಿದೆ. ಆಗ ಜೈಸ್ಮಿನ್ ಹೇಳಿದ್ದು ಹೀಗೆ. "ಇದು ನನಗೆ ಸಿಕ್ಕಿದ ದೊಡ್ಡ ಗೌರವ. ಆದ್ರೆ ಇದು ಮಹಿಳಾ ಕ್ರೀಡಾಪಟುಗಳಿಗೆ ಪ್ರೇರಣೆಯಾಗುವ ಅವಕಾಶ ಎಂದು ನಾನು ಭಾವಿಸುತ್ತೇನೆ" ಈ ಮೂಲಕ ಯುವ ಮಹಿಳಾ ಬಾಕ್ಸರ್‍ಗಳಿಗೆ ಸ್ಪೂರ್ತಿ ನೀಡಿದ್ದಳು.

ಸೋಲು ಕಲಿಸಿದ ಪಾಠಗಳು..! ವಿಶ್ವ ಚಾಂಪಿಯನ್ ಆಗಿದ್ದೇಗೆ..?

ಜೀವನದಲ್ಲಿ ಪ್ರತಿಯೊಂದು ಸ್ಪರ್ಧೆಗಳನ್ನು ಗೆಲ್ಲುವುದು ಅಸಾಧ್ಯ. ಹಾಗೇ ಜೈಸ್ಮಿಕ್ ಕೂಡ. 2024ರ ಪ್ಯಾರಿಸ್ ಒಲಿಂಪಿಕ್ಸ್‍ನಲ್ಲಿ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದ್ದಳು. ಆದ್ರೆ ಜೈಸ್ಮಿನ್ ಸೋಲಿನ ಹಿಂದೆ ಹೋಗಲಿಲ್ಲ. ಆ ಸೋಲನ್ನೇ ಶಕ್ತಿಯನ್ನಾಗಿಸಿಕೊಂಡಳು. ದೇಹಕ್ಕಿಂತ ಮನಸ್ಸಿನ ಶಕ್ತಿ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಂಡಳು. ಬಾಕ್ಸಿಂಗ್ ರಿಂಗ್‍ನಲ್ಲಿ ಬರೀ ಕೌಶಲ್ಯಗಳು, ಶಕ್ತಿ, ವೇಗವೇ ಮುಖ್ಯವಾಗಿರುವುದಿಲ್ಲ. ಅದಕ್ಕಿಂತ ಮುಖ್ಯ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಅದಕ್ಕೆ ಆಕೆ ಅನುಸರಿಸಿದ್ದು ಮಹೇಂದ್ರ ಸಿಂಗ್ ಧೋನಿಯ ಸೂತ್ರವನ್ನು.

ಜೈಸ್ಮಿನ್‍ಗೆ ಮಾನಸಿಕ ಶಕ್ತಿ ನೀಡಿದ್ದ ಕೂಲ್ ಕ್ಯಾಪ್ಟನ್ ವ್ಯಕ್ತಿತ್ವ..!

ಪ್ರತಿಯೊಬ್ಬರಿಗೂ ಒಬ್ಬರು ಪ್ರೇರಣೆಯಾಗಿರುತ್ತಾರೆ. ಹಾಗೇ, ಜೈಸ್ಮಿನ್‍ಗೆ ಪ್ರೇರಣೆಯಾಗಿದ್ದು ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂ.ಎಸ್. ಧೋನಿ. ಎಷ್ಟೇ ಒತ್ತಡಗಳಿದ್ರೂ ಕೂಲ್ ಆಗಿಯೇ ತಂಡವನ್ನು ಮುನ್ನಡೆಸುತ್ತಿರುವ ಧೋನಿಯ ಮನಸ್ಥಿತಿಗೆ ಜೈಸ್ಮಿನ್ ಮಾರು ಹೋಗಿದ್ದಳು.

ಬಾಕ್ಸಿಂಗ್ ರಿಂಗ್‍ನಲ್ಲಿ ಆಕ್ರಮಣಕಾರಿ ಪ್ರವೃತ್ತಿ ಎಲ್ಲ ಸಮಯದಲ್ಲೂ ಗೆಲುವನ್ನು ತಂದುಕೊಡಲ್ಲ. ಅದರ ಜೊತೆಗೆ ಎದುರಾಳಿಯ ನಡೆಯನ್ನು ಅರಿತುಕೊಳ್ಳಬೇಕು. ಅದಕ್ಕೆ ಸಂಯಮ ಬೇಕು. ಸಮಯ ಪರಿಸ್ಥಿತಿಯನ್ನು ನೋಡಿಕೊಂಡು ಎದುರಾಳಿಯ ಮೇಲೆ ದಾಳಿ ಮಾಡಬೇಕು. ಇದನ್ನು ಅರಿತ ಜೈಸ್ಮಿನ್, ಧೋನಿಯ ಶಾಂತಚಿತ್ತತೆಯ ನಾಯಕತ್ವದ ಗುಣಗಳನ್ನು ಅಳವಡಿಸಿಕೊಂಡಳು. ಹಾಗಾಗಿಯೇ ಜೈಸ್ಮಿನ್ ಹೆಚ್ಚು ಆವೇಶ, ಆಕ್ರಮಣಕಾರಿಯಾಗಿ ರಿಂಗ್‍ನಲ್ಲಿ ಕಾಣಿಸಲ್ಲ. ಬದಲಾಗಿ ಶಾಂತವಾಗಿ ಬೇಟೆಯಾಡುವ ಸಿಂಹಿಣಿಯಾಗಿರುತ್ತಾಳೆ.

ಜೈಸ್ಮಿನ್‍ಗೆ ಬೆಂಬಿಡದೆ ಕಾಡುತ್ತಿದ್ದ ಜ್ವರ..!

ಹಾಗೇ ನೋಡಿದ್ರೆ ಕಳೆದ ಮಾರ್ಚ್‍ನಿಂದಲೇ ಜೈಸ್ಮಿನ್ ಸಂಕಷ್ಟದ ದಿನಗಳು ಶುರುವಾಗಿದ್ದವು. ಏಷ್ಯನ್ ಚಾಂಪಿಯನ್‍ಷಿಪ್‍ನಲ್ಲಿ ತೀವ್ರ ಜ್ವರದಿಂದ ಬಳಲುತ್ತಿದ್ದಳು. ಆದ್ರೂ ಫೈನಲ್ ಸ್ಪರ್ಧೆಯಲ್ಲಿ ಸೋತಿದ್ದಳು. ಇದೇ ವೇಳೆ ಆಕೆಯ ತಲೆಗೆ ಬಲವಾದ ಏಟು ಕೂಡ ಬಿದ್ದಿತ್ತು. ಪುಣ್ಯಕ್ಕೆ ಏನು ತೊಂದರೆ ಆಗಲಿಲ್ಲ.

ಈ ಆಘಾತದಿಂದ ಹೊರಬಂದ ನಂತ್ರ ಮತ್ತೊಂದು ಸವಾಲು ಎದುರಾಗಿತ್ತು. ಆಗ ಕಾಮನ್‍ವೆಲ್ತ್ ಗೇಮ್ಸ್‍ನ ಪೂರ್ವ ತಯಾರಿ ಶುರುವಾಗಿತ್ತು. ಸುಮಾರು 20 ದಿನಗಳ ಕಾಲ ಭಾರತದಲ್ಲೇ ತರಬೇತಿ ಪಡೆಯುತ್ತಿದ್ದಳು. ಆಗ ಮತ್ತೆ ಕಾಡಿದ್ದು ಜ್ವರ. ಬಳಿಕ ಆಸ್ಪತ್ರೆ ಸೇರಿಕೊಂಡಿದ್ದಳು. ಆಮೇಲೆ ಚೇತರಿಸಿಕೊಂಡಿದ್ದಳು. ಇದೀಗ ಚಿನ್ನದ ರಾಣಿಯಾಗಿದ್ದಾಳೆ.

"ಬರ್ಮಿಂಗ್ ಹ್ಯಾಮ್‍ನಲ್ಲಿ ಕಂಚು ಗೆದ್ದಿದೆ. ಈ ಬಾರಿ ಪದಕದ ಬಣ್ಣದ ಹಳದಿಯಾಗಿದೆ. ಚಿನ್ನ ಗೆಲ್ಲಬೇಕು ಎಂಬ ಗುರಿಯೊಂದಿಗೆ ಬಂದಿದ್ದೆ. ನನ್ನ ಗುರಿಯೂ ಈಡೇರಿದೆ. ಕನಸು ನನಸಾಗಿದೆ ಎಂದು ಹೆಮ್ಮೆಯಿಂದಲೇ ಹೇಳ್ತಾಳೆ ಜೈಸ್ಮಿನ್.

ಸೋಲು ಕ್ಷಣಿಕ. ನೋವು ಆ ಕ್ಷಣದ ಗಾಯ. ಆದ್ರೆ ಹೋರಾಟ ನಿರಂತರ. ಗೆಲುವು ಶಾಶ್ವತ. ಜೈಸ್ಮಿನ್ ಕೂಡ ಇದೇ ಹಾದಿಯಲ್ಲಿ ಸಾಗಿ ಬಂದಿರೋದು.

ಅದಕ್ಕಾಗಿಯೇ ಆಕೆಯ ಹೆಸರು. ಬರೀ ಮಹಿಳಾ ಬಾಕ್ಸರ್‍ನ ಹೆಸರಲ್ಲ. ಪ್ರತಿ ಯುವತಿಯರಿಗೂ ಧೈರ್ಯ ತುಂಬುವ ಹೆಸರು.
ಭಿವಾನಿ ಮಣ್ಣಿನ ಪರಂಪರೆಯ ಮತ್ತೊಂದು ಹೆಸರು. ಭಾರತದ ಭವಿಷ್ಯದ ಬಾಕ್ಸಿಂಗ್ ತಾರೆಯ ಹೆಸರು..!

ಜೈಸ್ಮಿನ್ ಲಂಬೋರಿಯಾ ಅಂದ್ರೆ ಬಾಕ್ಸಿಂಗ್ ಕ್ವೀನ್..!

ಸನತ್ ರೈ

800 ಗ್ರಾಂ ತೂಕ.. ಎಂಟು ಅಡಿ 10 ಇಂಚಿನ ಜಾವೆಲಿನ್. ಫಿನ್ನಿಷ್ ಗ್ರಿಪ್‍ನ ಟೆಕ್ನಿಕ್. ಶಕ್ತಿಯ ಜೊತೆಗೆ ಯುಕ್ತಿಯ ಅಪೂರ್ವ ಸಂಗಮ. ಬಿಲ್ಲು ಬಾಣದಂತ...
02/08/2026

800 ಗ್ರಾಂ ತೂಕ.. ಎಂಟು ಅಡಿ 10 ಇಂಚಿನ ಜಾವೆಲಿನ್. ಫಿನ್ನಿಷ್ ಗ್ರಿಪ್‍ನ ಟೆಕ್ನಿಕ್. ಶಕ್ತಿಯ ಜೊತೆಗೆ ಯುಕ್ತಿಯ ಅಪೂರ್ವ ಸಂಗಮ. ಬಿಲ್ಲು ಬಾಣದಂತೆ ಬಾಗುವ ದೇಹ..!
ಅಬ್ಬಾ...ಈ ದೃಶ್ಯವನ್ನು ನೋಡುವುದೇ ಕಣ್ಣಿಗೆ ಹಬ್ಬ..!
====

ಈಟಿಯ ಹಿಡಿತದ ಮೇಲೆ ಕೈ ಬೆರಳುಗಳ ಸ್ಪರ್ಶ. ಒಂದು ಕೈಯಲ್ಲಿ ಅನುಭವ ಮತ್ತು ಪರಿಶ್ರಮದ ಶಕ್ತಿ. ಇನ್ನೊಂದು ಕೈಯಲ್ಲಿ ನಿಖರವಾದ ಗುರಿ. ದೂರದ ಗೆರೆಯತ್ತ ಕಣ್ಣುಗಳ ತೀಕ್ಷ್ಣ ನೋಟ. ಏಕಾಗ್ರತೆಯ ಒಂದು ದೀರ್ಘ ಉಸಿರು...!

ರನ್ ವೇನಲ್ಲಿ ಟೇಕ್ ಆಪ್ ಆಗುವ ವಿಮಾನದಂತೆ, 15-15 ಹೆಜ್ಜೆಗಳ ರನ್‍ಅಪ್. ದೇಹದ ಪ್ರತಿ ನರನಾಡಿಗಳಲ್ಲೂ ಮಿಂಚಿನ ಸಂಚಾರ. ಎರಡು ಅಥವಾ ಮೂರು ಕ್ರಾಸ್ ಓವರ್ ಸ್ಟೆಪ್ಸ್. ಈಟಿ ಎಸೆಯುವ ಮುನ್ನ ಭುಜದ ಚಲನೆಯ ಮೇಲೊಂದು ಅದ್ಭುತವಾದ ಲಯ. ದೇಹವನ್ನು ಬಿಲ್ಲಿನಂತೆ ಬಾಗಿ ಎಸೆಯುವ ಭಂಗಿ. ತನ್ನ ಎಲ್ಲಾ ಬಲ ಪ್ರಯೋಗಿಸಿ ಈಟಿಯನ್ನು ಗಾಳಿಗೆ ಒಪ್ಪಿಸಿದಾಗ ಆತನಿಂದ ಹೊರಬರೋದು ಒಂದು ಆವೇಶದ ಉದ್ಗಾರ..!

ಅಷ್ಟೇ....!

ಅವನಿಗೆ ಬೇಕಾಗಿದ್ದು ಅಷ್ಟೇ. ಪರ್ಫೆಕ್ಟ್ ಎಸೆತವಾಗಿದ್ರೆ, ಆತ ನೆಲಕ್ಕೆ ಬಿದ್ರೂ ಹಿಂತಿರುಗಿ ನೋಡಲ್ಲ. ತಾನು ಎಸೆದ ಈಟಿ, ಗಾಳಿಯನ್ನು ಸೀಳಿ ಹೋಗುವುದನ್ನು ನೋಡಲು ಕೂಡ ಇಷ್ಟಪಡಲ್ಲ. ಎಷ್ಟು ದೂರದಲ್ಲಿ ಈಟಿ ಭೂಸ್ಪರ್ಶ ಆಗಿದೆ ಎಂಬುದು ಅವನಿಗೆ ಬೇಕಿಲ್ಲ. ಆ ಕ್ಷಣದಲ್ಲಿ ಅವನು ಫಲಿತಾಂಶದ ಬಗ್ಗೆ ಯೋಚನೆಯನ್ನೂ ಮಾಡಲ್ಲ.

ಯಾಕಂದ್ರೆ ಆ ಎಸೆತದ ಮೇಲೆ ಅವನಿಗೆ ಅಚಲವಾದ ನಂಬಿಕೆ ಇರುತ್ತೆ. ತಾನು ಎಸೆದಿರುವುದು ಅತ್ಯುತ್ತಮ ಕ್ಲೀನ್ ಥ್ರೋ ಎಂದು ಮನಸ್ಸು ಆ ಕ್ಷಣದಲ್ಲೇ ಹೇಳುತ್ತದೆ. ಹೀಗಾಗಿಯೇ ಈಟಿ ಗಾಳಿಯಲ್ಲಿ ತೇಲಾಡುತ್ತಿರುವಾಗಲೇ ಎರಡು ಕೈ ಎತ್ತಿ ಸಂಭ್ರಮಿಸುತ್ತಾನೆ. ಗ್ಲಾಸ್ಗೋ ಅಂಗಣದಲ್ಲಿ ಆಗಿದ್ದು ಅದೇ. ಎರಡನೇ ಯತ್ನದಲ್ಲಿ ಈಟಿ ಅಂಗಣದ ಮೇಲೆ ಗುರುತು ಮೂಡಿಸಿದಾಗ ಆತನ ಕೊರಳಿಗೆ ಬೆಳ್ಳಿ ಪದಕವೂ ಒಲಿದು ಬಂತು.

ಇದು ಆತನ ಆತ್ಮವಿಶ್ವಾಸದ ಕ್ಷಣವಾಗಿತ್ತು. ಅನುಭವದ ಉತ್ತರವಾಗಿತ್ತು. ಇನ್ನಷ್ಟು ಪಕ್ವತೆ ಪಡೆದುಕೊಳ್ಳಲು ಕಲಿತ ಪಾಠವಾಗಿತ್ತು. ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿತ್ತು.

ನೀರಜ್ ಚೋಪ್ರಾ.

ಇದು ಗ್ಲಾಸ್ಗೋ ಅಂಗಣದ ಜಾವೆಲಿನ್ ಅಖಾಡದಲ್ಲಿ ನೀರಜ್, ಈಟಿಯ ಜೊತೆ ನಡೆಸಿದ್ದ ಮೌನ ಸಂಭಾಷಣೆಯ ಒಂದು ಝಲಕ್..!

ನೀರಜ್‍ಗೆ ಪದಕ ಗೆಲ್ಲುವುದು ಮುಖ್ಯವಲ್ಲ. ಸ್ಥಿರ ಪ್ರದರ್ಶನ ನೀಡುವುದೇ ಆತನ ವಿಶೇಷತೆ. ಕೇವಲ ಒಂದೇ ಒಂದು ಅದ್ಭುತ ಎಸೆತ ಫಲಿತಾಂಶವನ್ನೇ ಬಡಮೇಲು ಮಾಡಬಹುದು. ಆದ್ರೆ ಅಂತಹ ಅಮೋಘ ಎಸೆತ ಎಸೆಯಲು ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು.

ಹಾಗಾಗಿ ನೀರಜ್, ಫಲಿತಾಂಶಕ್ಕಿಂತ ಸ್ಥಿರ ಪ್ರದರ್ಶನದ ಮೇಲೆ ಹೆಚ್ಚು ನಂಬಿಕೆಯನ್ನಿಟ್ಟುಕೊಂಡಿದ್ದಾನೆ. ಇದೀಗ ಗಾಯದಿಂದ ಚೇತರಿಸಿಕೊಂಡು ಪದಕ ಗೆದ್ದಿರುವುದು ಆತನ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ.

ಚಿನ್ನ ಗೆದ್ದ ಲಂಕಾದ ರುಮೇಶ್‍ಗೆ ನೀರಜ್ ಪ್ರೇರಣೆ..!

ನೀರಜ್, ವಿಶ್ವದ ಚಾಂಪಿಯನ್ ಈಟಿ ಎಸೆತಗಾರ. ಅಷ್ಟೇ ಅಲ್ಲ, ಸ್ನೇಹ - ಗೌರವಕ್ಕೆ ಮತ್ತೊಂದು ಹೆಸರು ಕೂಡ. ತನ್ನ ಜೊತೆ ಅಖಾಡಕ್ಕಿಳಿಯುವ ಅಥ್ಲೀಟ್‍ಗಳನ್ನು ಪ್ರತಿಸ್ಪರ್ಧಿಗಳಂತೆ ನೀರಜ್ ನೋಡುವುದೇ ಇಲ್ಲ. ಪದಕದ ರೇಸ್‍ನಲ್ಲಿದ್ರೂ ಅವರ ತಪ್ಪುಗಳನ್ನು ಸರಿಪಡಿಸಿಕೊಳ್ಳುವಂತೆ ಸಲಹೆ ನೀಡುವ ಒಬ್ಬ ಆಪ್ತ ಗೆಳೆಯ.

ಇತ್ತೀಚಿನ ವರ್ಷಗಳಲ್ಲಿ ಭಾರತ, ಪಾಕ್ ಮತ್ತು ಲಂಕಾದ ಜಾವೆಲಿನ್ ಎಸೆತಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಈ ಹಿಂದೆ ಯೂರೋಪ್‍ನವರು ಈಟಿ ಎಸೆತದಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ರು. ಆದ್ರೆ ಈಗ ಏಷ್ಯಾದ ಹುಡುಗರು ಮೇಲುಗೈ ಸಾಧಿಸುತ್ತಿದ್ದಾರೆ. ನೀರಜ್ ಚೋಪ್ರಾ, ಪಾಕ್‍ನ ಅರ್ಷದ್ ನದೀಮ್ ಹಾಗೂ ಲಂಕಾದ ರುಮೇಶ್ ಜಾಗತಿಕ ಸ್ಪರ್ಧೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ.

ಗ್ಲಾಸ್ಗೋ ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ನೀರಜ್‍ಗಿಂತಲೂ ಒಂದು ಹೆಜ್ಜೆ ಮುಂದೆ ಸಾಗಿದ್ದ ಲಂಕಾದ ರುಮೇಶ್ ಪತಿರಾಜೆ ಚಿನ್ನದ ನಗೆ ಬೀರಿದ್ದಾನೆ. ಆದ್ರೆ ಆ ಚಿನ್ನದ ನಗುವಿನ ಹಿಂದೆ ಇದ್ದಿದ್ದು ಇದೇ ನೀರಜ್ ಚೋಪ್ರಾನ ಪ್ರೋತ್ಸಾಹ. ಇದು ಅಚ್ಚರಿಯಾದ್ರೂ ಸತ್ಯ.

ಕಳೆದ ವರ್ಷ ಭುವನೇಶ್ವರದಲ್ಲಿ ನಡೆದ ಕ್ರೀಡಾಕೂಟದ ಜಾವೆಲಿನ್ ಸ್ಪರ್ಧೆಯಲಿ,್ಲ ರುಮೇಶ್ 86.50 ಮೀಟರ್ ದೂರ ಎಸೆದು ವಿಶ್ವ ಚಾಂಪಿಯನ್‍ಷಿಪ್‍ಗೆ ಅರ್ಹತೆ ಪಡೆದುಕೊಂಡಿದ್ದ. ಇದನ್ನು ಗಮನಿಸಿದ್ದ ನೀರಜ್, ಬೆಂಗಳೂರಿನಲ್ಲಿ ನಡೆದ ನೀರಜ್ ಚೋಪ್ರಾ ಕ್ಲಾಸಿಕ್ ನಲ್ಲಿ ಸ್ಪರ್ಧಿಸುವಂತೆ ರುಮೇಶ್‍ಗೆ ಆಹ್ವಾನ ನೀಡಿದ್ದ.

ಚೋಪ್ರಾ ಆಹ್ವಾನದಂತೆ ರುಮೇಶ್ ಸ್ಪರ್ಧೆಯಲ್ಲಿ ಭಾಗವಹಿಸಿದ್ರೂ ಮೊದಲ ಎರಡು ಪ್ರಯತ್ನಗಳಲ್ಲಿ ನೀರಸ ಪ್ರದರ್ಶನ ನೀಡಿದ್ದ. ಇದನ್ನು ನೋಡಿದ್ದ ನೀರಜ್, ರುಮೇಶ್ ಬಳಿ ಹೋಗಿ ನೀನು ಇದಕ್ಕಿಂತಲೂ ಉತ್ತಮವಾಗಿ ಎಸೆಯಬಲ್ಲೆ ಎಂದು ಹೇಳಿದ್ದ. ಇದು ರುಮೇಶ್‍ನ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಅಲ್ಲದೆ ನೀರಜ್ ಜೊತೆ ಪೋಡಿಯಂ ಹತ್ತಿ ಪದಕ ಕೂಡ ಗೆದ್ದುಕೊಂಡಿದ್ದ.

ನಂತರ ಮಾಧ್ಯಮಗಳ ಮುಂದೆ ಮಾತನಾಡುವಾಗ ರುಮೇಶ್ ಭಾಷೆಯ ಸಮಸ್ಯೆಯಿಂದ ಹಿಂದೇಟು ಹಾಕುತ್ತಿದ್ದ. ಆಗ ರುಮೇಶ್ ಸಹಾಯಕ್ಕೆ ಬಂದ ನೀರಜ್, ಎಷ್ಟು ಸಾಧ್ಯವೋ ಅಷ್ಟು ಇಂಗ್ಲಿಷ್‍ನಲ್ಲಿ ಮಾತನಾಡು. ನಾನು ಹೀಗೆ ಕಲಿತಿರುವುದು. ಪೋಡಿಯಂ ಮೇಲೆ ಮುಂದಿನ ದಿನಗಳಲ್ಲಿ ನೀನು ನಿಲ್ಲುತ್ತಿಯಾ. ಹೆದರಬೇಡ. ಯಾವುದೇ ಹಿಂಜರಿಕೆ ಬೇಡ. ಧೈರ್ಯವಾಗಿರು ಎಂದು ಚೋಪ್ರಾ ಹೇಳಿರುವುದನ್ನು ರುಮೇಶ್ ಈಗಲೂ ನೆನಪಿಸಿಕೊಳ್ಳುತ್ತಾನೆ.

ಪಾಕ್‍ನ ಅರ್ಷದ್ ನದೀಮ್‍ಗೆ ನೀರಜ್ ನೈತಿಕ ಬೆಂಬಲ..!

ಇನ್ನು ನೆರೆಯ ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್‍ಗೂ ಪರೋಕ್ಷವಾಗಿ ನೀರಜ್‍ಗೆ ನೈತಿಕ ಬೆಂಬಲ ನೀಡಿದ್ದಾನೆ. ವೈರಿ ರಾಷ್ಟ್ರದ ಸ್ಪರ್ಧಿಯಾದ್ರೂ ಪ್ರತಿಭೆ, ಸಾಮಥ್ರ್ಯಕ್ಕೆ ಗೌರವ ನೀಡಿರುವುದು ನೀರಜ್ ಚೋಪ್ರಾನ ದೊಡ್ಡತನ.

ಉತ್ತಮ ಜಾವೆಲಿನ್ ಖರೀದಿಸಲು ನದೀಮ್‍ಗೆ ಆರ್ಥಿಕ ಸಮಸ್ಯೆ ಇದೆ ಎಂಬ ಸುದ್ದಿ ಕೇಳಿದ ತಕ್ಷಣ ನೀರಜ್ ಮೌನವಾಗಿರಲಿಲ್ಲ. ನದೀಮ್ ಅತ್ಯುತ್ತಮ ಜಾವೆಲಿನ್ ಎಸೆತಗಾರ. ಅವನಿಗೆ ಪಾಕ್ ಸರ್ಕಾರ ಅಗತ್ಯ ನೆರವು ನೀಡಬೇಕು ಎಂದು ಬಹಿರಂಗವಾಗಿಯೇ ಹೇಳಿದ್ದ. ಅಷ್ಟೇ ಅಲ್ಲ, ಜಾವೆಲಿನ್ ತಯಾರಿಕಾ ಸಂಸ್ಥೆಗಳು ಕೂಡ ನದೀಮ್‍ಗೆ ಪ್ರಾಯೋಜಕತ್ವ ನೀಡಲು ಮುಂದೆ ಬರಬೇಕು ಎಂದು ಹೇಳಿದ್ದ.

ನೀರಜ್‍ನಂತಹ ಚಾಂಪಿಯನ್‍ಗೆ ಎದುರಾಳಿಯನ್ನು ಸೋಲಿಸುವುದು ದೊಡ್ಡ ವಿಷಯವೇನೂ ಅಲ್ಲ. ಆದ್ರೆ ಪ್ರತಿಸ್ಪರ್ಧಿಯೂ ಉತ್ತಮ ಪ್ರದರ್ಶನ ನೀಡಲಿ ಎಂದು ಬಯಸುವ ಗುಣ ಆತನ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ

ಹೌದು, ನೀರಜ್ ಕೇವಲ ಭಾರತೀಯ ಚಾಂಪಿಯನ್ ಮಾತ್ರವಲ್ಲ. ಜಾಗತಿಕ ಕ್ರೀಡೆಯ ನಿಜವಾದ ರಾಯಭಾರಿ..! ಕಲ್ಮಶವಿಲ್ಲದ ಮನಸ್ಸಿನಿಂದ ರುಮೇಶ್‍ಗೆ ಪ್ರೋತ್ಸಾಹ ನೀಡಿ ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಚಿನ್ನ ಗೆಲ್ಲುವಂತೆ ಆತ್ಮವಿಶ್ವಾಸ ಮೂಡಿಸಿದ್ದ್ದ. ಹಾಗೇ ಅರ್ಷದ್ ನದೀಮ್‍ಗೆ ನೈತಿಕ ಬೆಂಬಲ ನೀಡಿ ಪ್ಯಾರಿಸ್ ಒಲಿಂಪಿಕ್ಸ್‍ನಲ್ಲಿ ಬಂಗಾರ ಗೆಲ್ಲುವಂತೆ ಮಾಡಿದ್ದ.

ಬೊಜ್ಜು ಹುಡುಗನ ಕೈಗೆ ಈಟಿ ಬಂದಿದ್ದು ಹೇಗೆ..?

ಅಂದ ಹಾಗೇ, ನೀರಜ್ ಚೋಪ್ರಾನ ಈ ಸಾಧನೆಯ ಮೆರವಣಿಗೆಯ ಹಿಂದೆ ಅಪಾರವಾದ ಶ್ರಮವಿದೆ. ಅಪಮಾನಗಳ ಕೋಪವಿದೆ. ಬೊಜ್ಜು ಹುಡುಗ ಅಂತ ಹೀಯಾಳಿಸಿದಾಗ ಕಣ್ಣೀರು ಸುರಿಸಿದ್ದು ಇದೆ. 11ರ ಹರೆಯದಲ್ಲೇ ವಯಸ್ಸಿಗೂ ಮೀರಿದ ತೂಕವಿದ್ದ ನೀರಜ್, ತನ್ನ ದೇಹದ ಬೊಜ್ಜು ಕರಗಿಸಲು ಪಾಣಿಪತ್‍ನಲ್ಲಿ ಜಿಮ್‍ಗೆ ಸೇರಿಕೊಂಡಿದ್ದ. ಆಕಸ್ಮಿಕವಾಗಿ ಒಂದು ದಿನ ಚೋಪ್ರಾ, ಪಾಣಿಪತ್ ನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಭೇಟಿ ಕೊಟ್ಟಿದ್ದ.

ಆಗ ಜಾವೇಲಿನ್ ಎಸೆತಗಾರ ಜೈವೀರ್ ಚೌಧರಿ ಅವರ ಕಣ್ಣಿಗೆ ಬಿದ್ದ. ಯಾವುದೇ ಜಾವೆಲಿನ್ ಎಸೆತದ ತರಬೇತಿ ಇಲ್ಲದ ನೀರಜ್ 40 ಮೀಟರ್ ದೂರ ಎಸೆದಾಗ ಈ ಹುಡುಗನಲ್ಲಿ ಪ್ರತಿಭೆ ಇದೆ ಅಂತ ಜೈವೀರ್ ಚೌಧರಿಗೆ ಅನ್ನಿಸಿತ್ತು. ನಂತರ ಬೊಜ್ಜು ಹುಡುಗನ ಕೈಗೆ ಬಂದಿದ್ದು ಈಟಿ. ನಂತರ ಹಿಂತಿರುಗಿ ನೋಡಲೇ ಇಲ್ಲ. ತನ್ನನ್ನು ಹೀಯಾಳಿಸಿ ಅಪಮಾನ ಮಾಡಿದವರಿಗೆ ಈಟಿಯಿಂದ ಸಾಧನೆ ಮಾಡಿ ಚುಚ್ಚುತ್ತಿದ್ದಾನೆ.

ಅದಕ್ಕೆ ಅನ್ನೋದು ನೀರಜ್ ಚೋಪ್ರಾ ಅಂದ್ರೆ ಆತ್ಮವಿಶ್ವಾಸಕ್ಕೆ ಮತ್ತೊಂದು ಹೆಸರು. ನೀನು ಯಾವತ್ತಿಗೂ ನೀ..ರಾಜನೇ...!

ಸನತ್ ರೈ
saakshatv.com

#ನೀರಜ್_ಚೋಪ್ರಾ #ಜಾವೆಲಿನ್ #ಕಾಮನ್‌ವೆಲ್ತ್_ಗೇಮ್ಸ್ #ರುಮೇಶ್_ಪತಿರಾಜೆ

Address

Bangalore

Alerts

Be the first to know and let us send you an email when Saaksha TV posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Saaksha TV:

Shortcuts

Share