03/05/2026
ವಾಟ್ಸಾಪಲ್ಲಿ ಓದಿದ ಸಣ್ಣ ಕಥೆ..
ಆತನೊಬ್ಬ ವಿಚಾರವಾದಿ, ಸಾಮಾಜಿಕ ಕಳಕಳಿಯುಳ್ಳ ಪ್ರಗತಿಪರ ಚಿಂತಕ. ಅಂದು ಅಂಗವಿಕಲ ಮತ್ತು ಹಿರಿಯ ನಾಗರಿಕರಿಗೆ ಆಗುತ್ತಿರುವ ಶೋಷಣೆಗಳ ಬಗೆಗಿನ ವಿಚಾರ ಸಂಕಿರಣ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಅವರಿಗೆ ಸಹಾಯ ಮಾಡಿ ಗೌರವಿಸಬೇಕು ಎಂದು ಭಾಷಣ ಮಾಡಿ ಕಾರ್ಯಕ್ರಮ ಮುಗಿಸಿ ತಮ್ಮೂರಿಗೆ ತೆರಳಲು ಬಸ್ಸಿನಲ್ಲಿ ಕುಳಿತ.
ದಾರಿ ಮಧ್ಯೆ ವಿಕಲಚೇತನನೊಬ್ಬ ಬಸ್ ಏರಿ ಕುಳಿತುಕೊಳ್ಳಲು ಸೀಟು ಹುಡುಕಲು ಶುರುಮಾಡಿದ. ಬಸ್ಸಿನಲ್ಲಿ ಸೀಟ್ ಖಾಲಿ ಇಲ್ಲದ್ದು ತನಗೆ ಗೊತ್ತಿದ್ದರೂ ತನ್ನ ಆಸನ ಬಿಟ್ಟುಕೊಡದ ಭಾಷಣದ ವಿಚಾರವಾದಿ ನಿದ್ದೆಗೆ ಜಾರಿದ.