VT NEWS KANNADA

VT NEWS KANNADA Welcome to Vt News! Welcome to the official page of VT News Kannada, your trusted source for the latest news and updates in the world of Kannada media.
(1)

Your go-to source for all the latest news and entertainment updates in Kannada.Follow us for the latest updates and join the conversation. ಕನ್ನಡ ಮಾಧ್ಯಮ ಜಗತ್ತಿನಲ್ಲಿ ಇತ್ತೀಚಿನ ಸುದ್ದಿ ಮತ್ತು ನವೀಕರಣಗಳಿಗಾಗಿ ನಿಮ್ಮ ವಿಶ್ವಾಸಾರ್ಹ ಮೂಲವಾದ VT ನ್ಯೂಸ್ ಕನ್ನಡದ ಅಧಿಕೃತ ಫೇಸ್‌ಬುಕ್ ಪುಟಕ್ಕೆ ಸುಸ್ವಾಗತ. ನಿಮಗೆ ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಯನ್ನು ತರಲು ನಾವು ಪ್ರಯತ್ನಿಸುತ್ತೇವೆ, ನಿಮಗೆ

ಮಾಹಿತಿ ನೀಡುತ್ತೇವೆ ಮತ್ತು ನಿಮ್ಮ ಸುತ್ತಲಿನ ಪ್ರಪಂಚದೊಂದಿಗೆ ಸಂಪರ್ಕದಲ್ಲಿದ್ದೇವೆ. We strive to bring you accurate and unbiased news coverage, keeping you informed and connected to the world around you. GMAIL- [email protected]
www.vtnewskannada.com
mob- 9535253535

*ಮೇ ತಿಂಗಳಲ್ಲಿ ಪ್ಯಾನ್-ಐಐಟಿ ಬೆಂಗಳೂರು ಸಮಿಟ್ 2026 ಆಯೋಜನೆ*ಬೆಂಗಳೂರು, ಏಪ್ರಿಲ್ 25: ಪ್ಯಾನ್ ಐಐಟಿ ಅಲ್ಯೂಮ್ನಿ ಇಂಡಿಯಾ ಅಸೋಸಿಯೇಷನ್ ಮತ್ತು...
26/04/2026

*ಮೇ ತಿಂಗಳಲ್ಲಿ ಪ್ಯಾನ್-ಐಐಟಿ ಬೆಂಗಳೂರು ಸಮಿಟ್ 2026 ಆಯೋಜನೆ*

ಬೆಂಗಳೂರು, ಏಪ್ರಿಲ್ 25: ಪ್ಯಾನ್ ಐಐಟಿ ಅಲ್ಯೂಮ್ನಿ ಇಂಡಿಯಾ ಅಸೋಸಿಯೇಷನ್ ಮತ್ತು ಕರ್ನಾಟಕ ಸರ್ಕಾರದ ಸಹಯೋಗದಲ್ಲಿ, ಮೇ 16ರಂದು ಬೆಂಗಳೂರಿನಲ್ಲಿ “ಪ್ಯಾನ್-ಐಐಟಿ ಬೆಂಗಳೂರು ಸಮಿಟ್ 2026” ಆಯೋಜಿಸಲಾಗಿದೆ.
“ತಂತ್ರಜ್ಞಾನದಲ್ಲಿನ ಸ್ವಾಯತ್ತತೆ” ಎಂಬ ವಿಷಯದಡಿ ಈ ಸಮಿಟ್ ನಡೆಯಲಿದೆ ಎಂದು ಕರ್ನಾಟಕ ಸರ್ಕಾರದ ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಪಂಕಜ್ ಕುಮಾರ್ ಪಾಂಡೆ ಅವರು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ, ವಿಶೇಷವಾಗಿ ಬೆಂಗಳೂರು, ಇಂದು ಭಾರತದ ತಂತ್ರಜ್ಞಾನ ಮಹತ್ವಾಕಾಂಕ್ಷೆಯ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ. ದೇಶದ ಪ್ರಮುಖ ಜಿಡಿಪಿ ಕೊಡುಗೆ ನೀಡುವ ನಗರಗಳಲ್ಲಿ ಬೆಂಗಳೂರು ಒಂದಾಗಿದ್ದು, ವೆಂಚರ್ ಕ್ಯಾಪಿಟಲ್ ಹೂಡಿಕೆಗಳ ಪ್ರಮುಖ ಕೇಂದ್ರವಾಗಿಯೂ ಗುರುತಿಸಿಕೊಂಡಿದೆ. ಸ್ಟಾರ್ಟ್‌ಅಪ್‌ಗಳ ನಿಧಿ ಸಂಗ್ರಹ ಹಾಗೂ ನವೀನ ಚಟುವಟಿಕೆಗಳಲ್ಲಿ ಮಹತ್ತರ ಪಾತ್ರವಹಿಸಿರುವುದು, ಸಾವಿರಾರು ಇಂಜಿನಿಯರಿಂಗ್ ಕಾಲೇಜುಗಳು ಹಾಗೂ ವಿಶ್ವದ ಅತಿ ದೊಡ್ಡ ಪ್ರತಿಭಾ ಸಂಪನ್ಮೂಲಗಳಲ್ಲಿ ಒಂದನ್ನು ಹೊಂದಿರುವುದು—ಈ ಎಲ್ಲ ಕಾರಣಗಳಿಂದ ಬೆಂಗಳೂರು “ಪೂರ್ವದ ಸಿಲಿಕಾನ್ ವ್ಯಾಲಿ” ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಅವರು ಹೇಳಿದರು.
ಸಾರ್ವಜನಿಕ ವಲಯ ಮತ್ತು ತಾಂತ್ರಿಕ ಕಂಪನಿಗಳ ಮೂಲಕ ಏರೋಸ್ಪೇಸ್, ರಕ್ಷಣಾ ಹಾಗೂ ಮೂಲ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಕರ್ನಾಟಕವು ಬಲವಾದ ನೆಲೆ ನಿರ್ಮಿಸಿತು. ಬಳಿಕ ಇನ್ಫೋಸಿಸ್, ಟಿಸಿಎಸ್, ಎಚ್‌ಸಿಎಲ್ ಮತ್ತು ವಿಪ್ರೋ ಮುಂತಾದ ಐಟಿ ದಿಗ್ಗಜಗಳ ಉದಯದೊಂದಿಗೆ ಭಾರತವನ್ನು ಜಾಗತಿಕ ತಂತ್ರಜ್ಞಾನ ನಕ್ಷೆಯಲ್ಲಿ ಸ್ಥಾಪಿಸುವಲ್ಲಿ ಮಹತ್ವದ ಪಾತ್ರವಹಿಸಿದೆ ಎಂದು ಅವರು ವಿವರಿಸಿದರು.
ಪ್ರಸ್ತುತ ದೇಶವು ಡೀಪ್ ಟೆಕ್, ಕೃತಕ ಬುದ್ಧಿಮತ್ತೆ ಮತ್ತು ವೈಜ್ಞಾನಿಕ ನವೀನತೆಯ ಹಂತಕ್ಕೆ ಸಾಗುತ್ತಿದೆ. ಈ ಹಂತದಲ್ಲಿ ಅಕಾಡೆಮಿಯಾ, ಕೈಗಾರಿಕೆ ಮತ್ತು ಸರ್ಕಾರಗಳ ನಡುವಿನ ಗಟ್ಟಿಯಾದ ಸಹಕಾರ ಅತ್ಯವಶ್ಯಕವಾಗಿದೆ. ತಂತ್ರಜ್ಞಾನ ಸ್ವಾಯತ್ತತೆಯನ್ನು ಸಾಧಿಸಲು ಇದು ಪ್ರಮುಖ ಹಂತವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ಯಾನ್-ಐಐಟಿ ಬೆಂಗಳೂರು ಸಮಿಟ್ 2026 ರೂಪುಗೊಂಡಿದೆ ಎಂದು ತಿಳಿಸಿದರು.
ಪ್ಯಾನ್ ಐಐಟಿ ಅಧ್ಯಕ್ಷರಾದ ಶ್ರೀ ಪ್ರಭಾತ್ ಕುಮಾರ್ (ಐ.ಆರ್.ಎಸ್) ಅವರು ಮಾತನಾಡಿ, ಸಮಿಟ್‌ನಲ್ಲಿ ಉನ್ನತ ಮಟ್ಟದ ಪ್ಲೀನರಿ ಸೆಷನ್‌ಗಳು, ಆಳವಾದ ಪ್ಯಾನೆಲ್ ಚರ್ಚೆಗಳು ಹಾಗೂ ಎಐ, ರಕ್ಷಣಾ, ಸೆಮಿಕಂಡಕ್ಟರ್, ಇಂಧನ, ಮೊಬೈಲಿಟಿ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಸಮಾಂತರ ಚರ್ಚೆಗಳು ನಡೆಯಲಿವೆ ಎಂದು ಹೇಳಿದರು.
ಆಯ್ದ ಪಿಚ್-ಹ್ಯಾಕಥಾನ್ ಮೂಲಕ ಹೆಚ್ಚಿನ ಸಾಧ್ಯತೆ ಹೊಂದಿರುವ ಸ್ಟಾರ್ಟ್‌ಅಪ್‌ಗಳನ್ನು 200ಕ್ಕೂ ಹೆಚ್ಚು ವೆಂಚರ್ ಕ್ಯಾಪಿಟಲಿಸ್ಟ್‌ಗಳೊಂದಿಗೆ ಸಂಪರ್ಕಿಸಲಾಗುವುದು. ಜೊತೆಗೆ, 10,000 ಮಂದಿ ಭಾಗವಹಿಸುವ ಹ್ಯಾಕಥಾನ್‌ನಲ್ಲಿ ಕರ್ನಾಟಕ ಸರ್ಕಾರ ನೀಡಿದ ನೈಜ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲಾಗುವುದು ಎಂದರು.
ಭಾರತವು ಜಾಗತಿಕ ತಂತ್ರಜ್ಞಾನ ಸ್ಪರ್ಧೆಯಲ್ಲಿ ಮುನ್ನಡೆಯಲು ಆಳವಾದ ವಿಜ್ಞಾನ ಮತ್ತು ಮೂಲ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಅಗತ್ಯವಿದೆ. ಪ್ಯಾನ್ ಐಐಟಿ ಸಮುದಾಯವು ಅಪಾರ ಬೌದ್ಧಿಕ ಸಂಪತ್ತು ಮತ್ತು ಜಾಗತಿಕ ಪ್ರಭಾವ ಹೊಂದಿರುವುದರಿಂದ, ಈ ಸಮಿಟ್ ರಾಷ್ಟ್ರೀಯ ಆದ್ಯತೆಗಳನ್ನು ಜಾಗತಿಕ ಆಶಯಗಳೊಂದಿಗೆ ಹೊಂದಿಸಲು ವೇದಿಕೆಯಾಗಲಿದೆ ಎಂದು ಅವರು ಹೇಳಿದರು.
23 ಐಐಟಿಗಳ 5 ಲಕ್ಷಕ್ಕೂ ಹೆಚ್ಚು ಅಲ್ಯೂಮ್ನಿಗಳ ಸಂಯುಕ್ತ ಚಿಂತನೆಯ ಫಲವಾಗಿರುವ ಈ ಸಮಿಟ್, ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ, ವ್ಯವಹಾರ ಮತ್ತು ನೀತಿ ರೂಪಣೆಯಲ್ಲಿ ಸಕ್ರಿಯ ಸಮುದಾಯವನ್ನು ಒಂದೇ ವೇದಿಕೆಗೆ ತರಲಿದೆ. ನವೀನತೆ, ಉದ್ಯಮಶೀಲತೆ ಮತ್ತು ರಾಷ್ಟ್ರ ನಿರ್ಮಾಣದ ಮುಂದಿನ ಹಂತವನ್ನು ಉತ್ತೇಜಿಸುವ ದಿಕ್ಕಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
ದಿನಪೂರ್ತಿ ನಡೆಯುವ ಈ ಸಮಿಟ್‌ನಲ್ಲಿ ಮುಖ್ಯ ಭಾಷಣಗಳು, ಪ್ಯಾನೆಲ್ ಚರ್ಚೆಗಳು, ಸಿಎಕ್ಸ್ಓ ರೌಂಡ್‌ಟೇಬಲ್, ಅಗ್ರಗಣ್ಯ ಸ್ಟಾರ್ಟ್‌ಅಪ್‌ಗಳ ಪ್ರದರ್ಶನ, ಹ್ಯಾಕಥಾನ್ ಹಾಗೂ ಇನೋವೇಶನ್ ಪ್ರದರ್ಶನಗಳು ನಡೆಯಲಿವೆ.
ಈ ಸಮಿಟ್‌ನಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರಾದ ಗುರುದೇವ ಶ್ರೀ ಶ್ರೀ ರವಿ ಶಂಕರ್, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಡಾ. ವಿ. ಅನಂತ ನಾಗೇಶ್ವರನ್, ಎಎನ್‌ಆರ್‌ಎಫ್ ಸಿಇಒ ಶಿವಕುಮಾರ್ ಕಲ್ಯಾಣರಾಮನ್, ಇಂಡಿಯಾ ಎಐ ಮಿಷನ್‌ನ ಮಾಜಿ ಸಿಇಒ ಅಭಿಷೇಕ್ ಸಿಂಗ್, ತೇಜಸ್ ವಿಮಾನದ ಮುಖ್ಯ ವಿನ್ಯಾಸಕರಾದ ಡಾ. ಕೋಟಾ ಹರಿನಾರಾಯಣ, ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಇಂಧನ) ಗೌರವ್ ಗುಪ್ತಾ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ನಗರಾಭಿವೃದ್ಧಿ ಮತ್ತು ಗೃಹ) ತುಷಾರ್ ಗಿರಿ ನಾಥ್, ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಟ್ಯಾಲಿ ಸೊಲ್ಯೂಶನ್ಸ್ ಸಂಸ್ಥಾಪಕರಾದ ಭಾರತ್ ಗೋಯಂಕಾ, ಮೈಕ್ರೋಸಾಫ್ಟ್ ರಿಸರ್ಚ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ವೆಂಕಟ್ ಪದ್ಮನಾಭನ್, ಮೀಶೋ ಸಹ ಸಂಸ್ಥಾಪಕ ಹಾಗೂ ಸಿಇಒ ವಿಧಿತ್ ಆತ್ರೇಯ್, ಗ್ರೋವ್ ಸಹ ಸಂಸ್ಥಾಪಕ ಹಾಗೂ ಸಿಒಒ ಹರ್ಷ್ ಜೈನ್, ಅಥರ್ ಎನರ್ಜಿ ಸಹ ಸಂಸ್ಥಾಪಕ ಹಾಗೂ ಸಿಇಒ ತರುಣ್ ಮೆಹ್ತಾ, ಸ್ವಿಗ್ಗಿ ಸಹ ಸಂಸ್ಥಾಪಕ ಫಣಿ ಕಿಶನ್ ಅಡ್ಡೆಪಳ್ಳಿ, ಪಿಡಬ್ಲ್ಯೂಸಿ ಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್ ಮುಖ್ಯಸ್ಥ ರಾಜೇಶ್ ಓಜಾ ಹಾಗೂ ಎಸ್ಎಪಿ ಗ್ಲೋಬಲ್ ಡೆಲಿವರಿ ಮುಖ್ಯಸ್ಥ ರಜನೀಶ್ ಪ್ರಸಾದ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಸಿಇಟಿ ಪರೀಕ್ಷಾ ಕೇಂದ್ರದ ಪ್ರವೇಶದ ವೇಳೆ ವಿದ್ಯಾರ್ಥಿಯ ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಎಸೆದಿರುವ ಘಟನೆ...ಚಿಕ್ಕಬಳ್ಳಾಪುರ : ಸಿಇಟಿ ಪರೀಕ್ಷ...
25/04/2026

ಸಿಇಟಿ ಪರೀಕ್ಷಾ ಕೇಂದ್ರದ ಪ್ರವೇಶದ ವೇಳೆ ವಿದ್ಯಾರ್ಥಿಯ ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಎಸೆದಿರುವ ಘಟನೆ...

ಚಿಕ್ಕಬಳ್ಳಾಪುರ : ಸಿಇಟಿ ಪರೀಕ್ಷಾ ಕೇಂದ್ರದ ಪ್ರವೇಶದ ವೇಳೆ ವಿದ್ಯಾರ್ಥಿಯ ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಎಸೆದಿರುವ ಘಟನೆ ಉನ್ನತ ಶಿಕ್ಷಣ ಸಚಿವ ಸುಧಾಕರ್‌ ಅವರ ತವರು ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಬೆಳಕಿಗೆ ಬಂದಿದೆ.

ಚಿಕ್ಕಬಳ್ಳಾಪುರ ತಾಲೂಕು ನಂದಿ ಕ್ರಾಸ್‌ ಬಳಿ ಸಮೀಪ ಇರುವ ನಾಗಾರ್ಜುನ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ವಿದ್ಯಾರ್ಥಿ, ಆತನ ತಾಯಿ ಸೇರಿದಂತೆ ಬ್ರಾಹ್ಮಣ ಸಮುದಾಯದಿಂದ ಘಟನೆ ಖಂಡಿಸಿ ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಗೆ ದೂರು ನೀಡಲು ಮುಂದಾಗಿದ್ದಾರೆ.ಚಿಂತಾಮಣಿ ನಗರದ ವಿದ್ಯಾರ್ಥಿ ಸುಪ್ರೀತ್‌ ಏಪ್ರಿಲ್‌ 23 ರಂದು ಪರೀಕ್ಷೆ ಬರೆಯಲು ಬಂದಾಗ ಜನಿವಾರ ಕತ್ತರಿಸಲಾಗಿದೆ. ತಂದೆ ಇಲ್ಲದ ಸುಪ್ರೀತ್‌ಗೆ ತಾಯಿ ವಾಣಿ ಕಳೆದ 1 ವಾರದ ಹಿಂದೆಯಷ್ಟೇ ಸಂಬಂಧಿಕರ ಸಮ್ಮುಖದಲ್ಲಿ ಉಪನಯನ ಕಾಯಕ್ರಮ ಮಾಡಿಸಿ ಜನಿವಾರ ಹಾಕಿಸಿದ್ದರು.
ಜನಿವಾರ ಕತ್ತರಿಸಿದರಿಂದ ವಿಚಲಿತನಾಗಿರುವ ಪುತ್ರ ವಿಚಲಿತನಾಗಿ ಆತಂಕ ಸರಿಯಾಗಿ ಪರೀಕ್ಷೆ ಬರೆದಿಲ್ಲ. ಹೀಗಾಗಿ ಉನ್ನತ ಶಿಕ್ಷಣ ಸಚಿವರು ಮಗನಿಗೆ ಮರು ಪರೀಕ್ಷೆಯಾದರೂ ಮಾಡಲಿ ಇಲ್ಲವೇ ಗ್ರೇಸ್‌ ಅಂಕ ನೀಡಿ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ.ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಥವಾ ಸರ್ಕಾರವು ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ಜನಿವಾರವನ್ನು ತೆಗೆಯಬೇಕು ಎಂಬ ಯಾವುದೇ ಅಧಿಕೃತ ಮಾರ್ಗಸೂಚಿಯನ್ನು ಹೊರಡಿಸಿಲ್ಲ. ಇದು ವೈಯಕ್ತಿಕ ಧಾರ್ಮಿಕ ನಂಬಿಕೆಯ ಭಾಗವಾಗಿದ್ದು, ಕಾನೂನು ನಿರ್ವಹಿಸುವಾಗ ಅಧಿಕಾರಿಗಳು ವಿವೇಚನೆಯಿಂದ ವರ್ತಿಸಬೇಕು ಎಂದು ಸೂಚಿಸಲಾಗಿದೆ.

*ಶ್ರೀ ಕೆ.ಹೆಚ್. ಮುನಿಯಪ್ಪ*  *ಅಧ್ಯಕ್ಷರು, ಕರ್ನಾಟಕ ಮಾದರ ಮಹಾಸಭಾ* ಮತ್ತುಮಾನ್ಯ ಸಚಿವರು, *ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ...
25/04/2026

*ಶ್ರೀ ಕೆ.ಹೆಚ್. ಮುನಿಯಪ್ಪ*
*ಅಧ್ಯಕ್ಷರು, ಕರ್ನಾಟಕ ಮಾದರ ಮಹಾಸಭಾ*
ಮತ್ತು
ಮಾನ್ಯ ಸಚಿವರು, *ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ*
ಒಳಮೀಸಲಾತಿ ಅನುಷ್ಠಾನ – ನಮ್ಮ ಹೋರಾಟಕ್ಕೆ ದೊರೆತ ಐತಿಹಾಸಿಕ ಜಯ*

ಒಳಮೀಸಲಾತಿ ವರ್ಗೀಕರಣಕ್ಕೆ ಮಾದರ ಮಹಾಸಭಾ ಹೃದಯ ಪೂರಕವಾಗಿ ಸ್ವಾಗತಿಸಿದೆ ಅಧ್ಯಕ್ಷ ಕೆಹೆಚ್. ಮುನಿಯಪ್ಪ*
ರಾಜ್ಯ ಸರ್ಕಾರವು ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಒಳಮೀಸಲಾತಿ ಅನುಷ್ಠಾನದ ತೀರ್ಮಾನವನ್ನು ಕರ್ನಾಟಕ ಮಾದರ ಮಹಾಸಭಾ ಅಧ್ಯಕ್ಷರು ಹಾಗೂ ಸಚಿವರಾದ ಶ್ರೀ ಕೆ.ಹೆಚ್. ಮುನಿಯಪ್ಪ ಅವರು ಹೃತ್ಪೂರ್ವಕವಾಗಿ ಸ್ವಾಗತಿಸಿದ್ದಾರೆ.

“ಇದು ಕೇವಲ ಒಂದು ತೀರ್ಮಾನ ಅಲ್ಲ… ಇದು ನಾಲ್ವತ್ತು ವರ್ಷಗಳ ನೋವು, ಹೋರಾಟದ ಗೆಲುವು,” ಎಂದು ಅವರು ಮನಸ್ಸು ಮುಟ್ಟುವಂತೆ ತಿಳಿಸಿದ್ದಾರೆ.

ಗ್ರೂಪ್ ಎ ಗೆ 5.25%, ಗ್ರೂಪ್ ಬಿ ಗೆ 5.25% ಹಾಗೂ ಗ್ರೂಪ್ ಸಿ ಗೆ 4.5% ಒಳಮೀಸಲಾತಿ ಹಂಚಿಕೆ ಮಾಡುವ ಮೂಲಕ ಸರ್ಕಾರ ಸಾಮಾಜಿಕ ನ್ಯಾಯದ ದಾರಿಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಇದು ಮಾದಿಗ ಸಮುದಾಯ ಸೇರಿದಂತೆ ಪರಿಶಿಷ್ಟ ಜಾತಿಯ ಎಲ್ಲಾ 101 ಸಮುದಾಯಗಳ ಬಹುದಿನದ ಬೇಡಿಕೆಗೆ ನ್ಯಾಯ ಒದಗಿಸಿದ ಐತಿಹಾಸಿಕ ನಿರ್ಧಾರವಾಗಿದೆ ಎಂದು ಅವರು ಹೇಳಿದ್ದಾರೆ.

“ಚಿತ್ರದುರ್ಗದ ಪರಿಶಿಷ್ಟ ಜಾತಿಯ ಮಹಾಸಮಾವೇಶದಲ್ಲಿ ತೆಗೆದುಕೊಂಡ ನಿರ್ಣಯದಂತೆ ಹಾಗೂ 2023ರ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಮಾತಿನಂತೆ ಇಂದು ಆ ಭರವಸೆ ಈಡೇರಿದೆ. ಮಾತು ಕೊಟ್ಟರೆ ನೆರವೇರಿಸುವುದು ಕಾಂಗ್ರೆಸ್ ಪಕ್ಷದ ಸಂಸ್ಕೃತಿ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರ ಸಾಮಾಜಿಕ ನ್ಯಾಯದ ಬದ್ಧತೆ ಹಾಗೂ 12ನೇ ಶತಮಾನದಲ್ಲಿ ಬಸವಣ್ಣವರು ನಡೆಸಿದ ಸಮಾನತೆ ಚಳುವಳಿಯ ಸ್ಪೂರ್ತಿಯಿಂದ ಈ ತೀರ್ಮಾನ ಕಾರ್ಯರೂಪಕ್ಕೆ ಬಂದಿದೆ ಎಂದು ಅವರು ಅಭಿಪ್ರಾಯಪಟ್ಟರು. “ಇಂದು ತೆಗೆದುಕೊಂಡ ಈ ನಿರ್ಧಾರ ಇತಿಹಾಸದ ಪುಟಗಳಲ್ಲಿ ದಾಖಲಾಗುವ ಮಹತ್ವದ ಕ್ಷಣ,” ಎಂದರು.

ಮಾನ್ಯ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಹಾಗೂ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು ಚಿತ್ರದುರ್ಗದ ಸಮಾವೇಶದಲ್ಲಿ ಘೋಷಣೆ ಮಾಡಿದಂತೆ ನಮ್ಮ ಸರ್ಕಾರವು ಒಳಮೀಸಲಾತಿ ಅನುಷ್ಠಾನದಲ್ಲಿ ನುಡಿದಂತೆ ನಡೆದಿದೆ

ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ (ಕೆಪಿಸಿಸಿ ಅಧ್ಯಕ್ಷರು) ಹಾಗೂ ಪ್ರಣಾಳಿಕೆ ಅಧ್ಯಕ್ಷರಾದ ಡಾ. ಜಿ. ಪರಮೇಶ್ವರ್ ಅವರ ಬೆಂಬಲ ಮತ್ತು ಮಾರ್ಗದರ್ಶನ, ಹಾಗು ಸಚಿವರಾದ ಎಚ್.ಕೆ. ಪಾಟೀಲ್, ಹೆಚ್.ಸಿ. ಮಹಾದೇವಪ್ಪ, ಆರ್.ಬಿ. ತಿಮ್ಮಾಪುರ, ಶಿವರಾಜ್ ತಂಗಡಗಿ, ರುದ್ರಪ್ಪ ಲಮಾಣಿ, ಪ್ರಿಯಾಂಕ ಖರ್ಗೆ ಸೇರಿದಂತೆ ಸಚಿವ ಸಂಪುಟದ ಎಲ್ಲಾ ಸಹೋದ್ಯೋಗಿಗಳ ಸಮನ್ವಯದಿಂದ ಈ ಐತಿಹಾಸಿಕ ನಿರ್ಧಾರ ಸಾಧ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

“ಕಾಂಗ್ರೆಸ್ ಪಕ್ಷ ಅಂದ್ರೆ ಅದು ಕೇವಲ ಒಂದು ರಾಜಕೀಯ ಪಕ್ಷ ಅಲ್ಲ… ರೈತರ ,ಬಡವರ, ದೀನದಲಿತರ, ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ಧ್ವನಿ. ಈ ದೇಶದಲ್ಲಿ ಸಾಮಾಜಿಕ ನ್ಯಾಯದ ಬದ್ಧತೆಯ ಮೇಲೆ ನಿಂತಿರುವ ಪ್ರಬಲ ಶಕ್ತಿ,” ಎಂದು ಅವರು ಹೇಳಿದ್ದಾರೆ.

ಮಾದಿಗ ಸಮುದಾಯದ ಪರವಾಗಿ ಅವರು ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಮತ್ತು ಪ್ರಣಾಳಿಕೆ ಅಧ್ಯಕ್ಷರಾದ ಡಾ. ಜಿ. ಪರಮೇಶ್ವರ್ ಹಾಗೂ ಸಚಿವ ಸಂಪುಟದ ಎಲ್ಲಾ ಸಹೋದ್ಯೋಗಿಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಜೊತೆಗೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಮಾರ್ಗದರ್ಶನಕ್ಕೂ ವಿಶೇಷವಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.“ನಾವೆಲ್ಲರೂ ಒಂದೇ ಕುಟುಂಬ… ಅಣ್ಣ-ತಮ್ಮಂದಿರು. ನಮ್ಮ ಪಾಲನ್ನು ನಾವು ಹಂಚಿಕೊಂಡಿದ್ದೇವೆ. ಭಿನ್ನಾಭಿಪ್ರಾಯಗಳಿಗೆ ಜಾಗ ಇಲ್ಲ. ಒಗ್ಗಟ್ಟಿನಿಂದ ಮುಂದೆ ಸಾಗೋಣ,” ಎಂದು ಅವರು ಮನವಿ ಮಾಡಿದ್ದಾರೆ.ನಾಲ್ವತ್ತು ವರ್ಷಗಳ ಕಾಲ ನಿರಂತರ ಹೋರಾಟ ನಡೆಸಿದ ಹೋರಾಟಗಾರರು, ಚಿಂತಕರು ಹಾಗೂ ತಮ್ಮ ಪ್ರಾಣತ್ಯಾಗ ಮಾಡಿದ ಮಹನೀಯರನ್ನು ಸ್ಮರಿಸಿ, “ಈ ಜಯ ಅವರ ತ್ಯಾಗದ ಫಲ,” ಎಂದು ಅವರು ಗೌರವ ನಮನ ಸಲ್ಲಿಸಿದ್ದಾರೆ.ಇದು ಅಂತ್ಯ ಅಲ್ಲ… ಇದು ಒಂದು ಹೊಸ ಆರಂಭ. ಸಮಾನತೆ, ಗೌರವ ಮತ್ತು ಹಕ್ಕುಗಳಿಗಾಗಿ ನಮ್ಮ ಹೋರಾಟ ಮುಂದುವರಿಯಬೇಕು,”
ಉತ್ತಮ ಶಿಕ್ಷಣವನ್ನು ಪಡೆದು ಸರ್ಕಾರದ ಉದ್ಯೋಗ, ಶಿಕ್ಷಣ,ಮತ್ತಿತರ ಅವಕಾಶಗಳನ್ನು ಪಡೆಯಲು ಸಮುದಾಯ ಜಾಗೃತಿ ಹೊಂದಬೇಕು ಅವರು ಕರೆ ನೀಡಿದ್ದಾರೆ.

ಜೀವಾವಧಿ ಶಿಕ್ಷೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ವಿನಯ್ ಕುಲಕರ್ಣಿ...ಬೆಂಗಳೂರು: ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ಕೋರ್...
25/04/2026

ಜೀವಾವಧಿ ಶಿಕ್ಷೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ವಿನಯ್ ಕುಲಕರ್ಣಿ...

ಬೆಂಗಳೂರು: ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ಕೋರ್ಟ್ ನಿಂದ ಜೀವಾವಧಿ ಶಿಕ್ಷೆಗೊಳಗಾಗಿರುವ ಶಾಸಕ ವಿನಯ್ ಕುಲಕರ್ಣಿ ತಮ್ಮ ಶಿಕ್ಷೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಬಿಜೆಪಿಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಯೋಗೇಶ್ ಗೌಡ ಸೇರಿದಂತೆ 16 ಆರೋಪಿಗಳಿಗೆ ಮೊನ್ನೆಯಷ್ಟೇ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದರ ಬೆನ್ನಲ್ಲೇ ವಿನಯ್ ಕುಲಕರ್ಣಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು.
ಜೀವಾವಧಿ ಶಿಕ್ಷೆಗೊಳಗಾಗಿರುವುದರಿಂದ ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದಾಗಲಿದೆ. ಇದೀಗ ಜನಪ್ರತಿನಿಧಿಗಳ ಕೋರ್ಟ್ ಆದೇಶ ಪ್ರಶ್ನಿಸಿ ವಿನಯ್ ಕುಲಕರ್ಣಿ ಮತ್ತು ಇನ್ನೋರ್ವ ಅಪರಾಧಿ ಚಂದ್ರಶೇಖರ್ ಇಂಡಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಸೋಮವಾರ ವಿನಯ್ ಕುಲಕರ್ಣಿ ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆಯಿದೆ. 90 ದಿನಗಳೊಳಗಾಗಿ ಜೀವಾವಧಿ ಶಿಕ್ಷೆ ರದ್ದಾಗದೇ ಇದ್ದಲ್ಲಿ ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದಾಗಲಿದೆ. ಹೀಗಾಗಿ ಅವರ ಭವಿಷ್ಯ ಈಗ ಹೈಕೋರ್ಟ್ ಅಂಗಳದಲ್ಲಿದೆ.

ಬೆಟ್ಟ ಅಗೆದು ಇಲಿ ಹುಡುಕಿದಂತೆ ಒಳ ಮೀಸಲಾತಿ ಕುರಿತ ನಿರ್ಧಾರ ನ್ಯಾ.ನಾಗಮೋಹನ್‍ದಾಸ್ ಅವರ ವರದಿ ಅವೈಜ್ಞಾನಿಕ ಎಂದು ತಿರಸ್ಕರಿಸಿದ್ದೀರಾ? : ಗೋವಿ...
25/04/2026

ಬೆಟ್ಟ ಅಗೆದು ಇಲಿ ಹುಡುಕಿದಂತೆ ಒಳ ಮೀಸಲಾತಿ ಕುರಿತ ನಿರ್ಧಾರ ನ್ಯಾ.ನಾಗಮೋಹನ್‍ದಾಸ್ ಅವರ ವರದಿ ಅವೈಜ್ಞಾನಿಕ ಎಂದು ತಿರಸ್ಕರಿಸಿದ್ದೀರಾ? : ಗೋವಿಂದ ಕಾರಜೋಳ

ಬೆಂಗಳೂರು: ಸಿದ್ದರಾಮಯ್ಯನವರೇ, ನೀವೇ ನೇಮಿಸಿದ ನ್ಯಾ.ನಾಗಮೋಹನ್‍ದಾಸ್ ಅವರ ವರದಿ ಅವೈಜ್ಞಾನಿಕ ಎಂಬ ಕಾರಣಕ್ಕೆ ತಿರಸ್ಕರಿಸಿದ್ದೀರಾ ಎಂದು ಮಾಜಿ ಉಪ ಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಅವರು ಪ್ರಶ್ನಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೀವೇ ರಚಿಸಿದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ವರದಿ ವೈಜ್ಞಾನಿಕ ಎಂದು ಒಪ್ಪಿಕೊಂಡಿದ್ದೀರಾ ಎಂದು ಸ್ಪಷ್ಟಪಡಿಸಲು ಒತ್ತಾಯಿಸಿದರು. ನಾಗಮೋಹನ್‍ದಾಸ್ ಅವರ ವರದಿಯಲ್ಲಿ ಶೇ 17 ಎಂದಿದ್ದರೂ ಶೇ 15ಕ್ಕೆ ಸೀಮಿತ ಮಾಡಿ ಕೊಡಬಹುದಾಗಿತ್ತು. ಯಾಕೆ ಕೊಟ್ಟಿಲ್ಲ ಎಂದು ಕೇಳಿದರು. ನಿನ್ನೆ ದಿನ ಬೆಟ್ಟ ಅಗೆದು ಇಲಿ ಹುಡುಕಿದಂತೆ ಸಿದ್ದರಾಮಯ್ಯನವರು ಒಳ ಮೀಸಲಾತಿಯನ್ನು ಜಾರಿ ನಿರ್ಧಾರ ಪ್ರಕಟಿಸಿ ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಂಡಿದ್ದಾರೆ ಎಂದು ಟೀಕಿಸಿದರು.
ಸಾಮಾಜಿಕ ನ್ಯಾಯ, ಸರ್ವರಿಗೂ ಸಮಪಾಲು, ಸಮಬಾಳು ಎಂದು ನಿರಂತರ ಭಾಷಣ ಮಾಡಿದಿರಲ್ಲವೇ? ಇದು ಕೇವಲ ಭಾಷಣದ ಸರಕೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಸಿದ್ದರಾಮಯ್ಯನವರೇ, ಅಹಿಂದ ವರ್ಗದ ಕುರಿತು ನಿಮಗೇನಾದರೂ ಬದ್ಧತೆ ಇದೆಯೇ? ಬದ್ಧತೆ ಇದ್ದರೆ ನೀವು ಸಾವಿರಾರು ಕೋಟಿ ಖರ್ಚು ಮಾಡಿ ವರದಿ ತರಿಸಿದ್ದೀರಿ. ಕೆಂಪರಾಜ್ ವರದಿ ಮೂಲೆಗುಂಪು ಮಾಡಿದ್ದೀರಿ. ಅದಾದ ಬಳಿಕ ಜಯಪ್ರಕಾಶ್ ಹೆಗ್ಡೆ ಅವರ ವರದಿ ಮೂಲೆಗುಂಪಾಗಿದೆ. ಮಧುಸೂದನ ನಾಯಕ್ ವರದಿ ಹೊರಗೆ ಬರಲೇ ಇಲ್ಲ ಎಂದು ಆಕ್ಷೇಪಿಸಿದರು.

ಸಿದ್ದರಾಮಯ್ಯನವರು ಮಹಾ ಮೋಸಗಾರ
ಸಿದ್ದರಾಮಯ್ಯನವರೇ, ನಿಮಗೆ ಬದ್ಧತೆ ಎಲ್ಲಿದೆ? ಜನರಿಗೆ ಮೋಸ ಮಾಡಿ, ಬಡವರನ್ನು ದಾರಿ ತಪ್ಪಿಸಿ ಬಡವರಿಗೆ ಅಹಿಂದ ನಾಯಕ ಎಂದು ಹೇಳಿ ಅಧಿಕಾರಕ್ಕೆ ಬರುವುದೊಂದೇ ನಿಮ್ಮ ಗುರಿ. ಕುರ್ಚಿ ಉಳಿಸಿಕೊಳ್ಳಲು ನೀವು ಮಾಡುವುದನ್ನು ನೋಡಿದರೆ ಇದಕ್ಕಿಂತ ಹೆಚ್ಚಿನ ಮೋಸವನ್ನು ಪ್ರಪಂಚದಲ್ಲಿ ಬೇರೆ ಯಾರೂ ಮಾಡಲು ಸಾಧ್ಯ ಇಲ್ಲ ಅನಿಸುವುದಾಗಿ ತಿಳಿಸಿದರು. ಸಿದ್ದರಾಮಯ್ಯನವರು ಮಹಾ ಮೋಸಗಾರ ಎಂದು ಗೋವಿಂದ ಕಾರಜೋಳ ಅವರು ಟೀಕಿಸಿದರು.
ಸಿದ್ದರಾಮಯ್ಯನವರು ಈಚೆಗೆ ಕೇವಲ ಹೊಂದಾಣಿಕೆಯ ರಾಜಕಾರಣಿ ಆಗಿದ್ದಾರೆಂದು ಅವರ ಸಂಪುಟದ ಸಚಿವ ಸತೀಶ್ ಜಾರಕಿಹೊಳಿ ಅವರೇ ಹೇಳಿದ್ದಾರೆ. ಅದು ಅಸತ್ಯವೇ ಸತ್ಯವೇ ಎಂದು ಮುಖ್ಯಮಂತ್ರಿಗಳೇ ಹೇಳಲಿ ಎಂದು ಒತ್ತಾಯಿಸಿದರು. ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು, ಸಿದ್ದರಾಮಯ್ಯನವರಿಗೆ ಬದ್ಧತೆ ಇಲ್ಲ ಎನ್ನುತ್ತಿದ್ದಾರೆ ಎಂದರು.

ಯಾವುದನ್ನೂ ಪರಿಗಣಿಸದೇ ಖಾಜಿ ನ್ಯಾಯ
ಸಿದ್ದರಾಮಯ್ಯನವರ ಸರಕಾರ ಯಾವುದೇ ಆಯೋಗಕ್ಕೆ ನೇಮಿಸಿದರೆ ದಯವಿಟ್ಟು ಒಪ್ಪಿಕೊಳ್ಳಬೇಡಿ. ನಿಮಗೆ ಅವಮಾನ ಮಾಡುವ ಕೆಲಸವನ್ನು ಸಿದ್ದರಾಮಯ್ಯನವರು ಮಾಡುತ್ತಾರೆ ಎಂದು ಮನವಿ ಮಾಡಿದರು. ಮೀಸಲಾತಿ ವಿಷಯದಲ್ಲಿ ನಿನ್ನೆಯ ಅವರ ನಿರ್ಧಾರವನ್ನು ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು. ಸದಾಶಿವಯ್ಯ ವರದಿ, ನಾಗಮೋಹನ್‍ದಾಸ್ ವರದಿ, ನಮ್ಮದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಂಪುಟ ಉಪ ಸಮಿತಿ ವರದಿ ಇತ್ತು. ಸುಪ್ರೀಂ ಕೋರ್ಟ್ ಆದೇಶ ಇತ್ತು. ಯಾವುದನ್ನೂ ಪರಿಗಣಿಸದೇ ಖಾಜಿ ನ್ಯಾಯ ಮಾಡಿದ್ದಾರೆ. ಸಿದ್ದರಾಮಯ್ಯನವರು ಕೆಲವರನ್ನು ಸಾಕಿದ್ದಾರೆ ಎಂದು ತಿಳಿಸಿದರು.

ನಾವು ವೈಜ್ಞಾನಿಕವಾಗಿ ಮೀಸಲಾತಿ ಕೊಟ್ಟಿದ್ದೆವು...
ನಾವು ವೈಜ್ಞಾನಿಕವಾಗಿ ಶೇ 17ಕ್ಕೆ ಹೆಚ್ಚಿಸಿ ಮೀಸಲಾತಿ ಕೊಟ್ಟಿದ್ದೆವು. ಅಂದಿನ ಕಾನೂನು ಸಚಿವ ಮಾಧುಸ್ವಾಮಿ ಅವರ ವರದಿ ಪಡೆದು ವೈಜ್ಞಾನಿಕವಾಗಿ ಹಂಚಿದ್ದೆವು. ಎ- ಶೇ 6, ಬಿ- ಶೇ 5.5, 4.5, ಶೇ 1 ಅಲೆಮಾರಿಗಳಿಗೆ ಕೊಟ್ಟಿದ್ದೆವು. 2013ರ ಚುನಾವಣಾ ಪ್ರಣಾಳಿಕೆಯಲ್ಲಿ ಅಧಿಕಾರ ಸಿಕ್ಕಿದರೆ ಒಳ ಮೀಸಲಾತಿ ಜಾರಿ ಮಾಡುವುದಾಗಿ ಸಿದ್ದರಾಮಯ್ಯನವರು ಹೇಳಿದ್ದರು. ಬಳಿಕ ಸಿದ್ದರಾಮಯ್ಯನವರು ಬೀದಿಯಲ್ಲಿ ಜನರನ್ನು ಬಡಿದಾಡಲು ಬಿಟ್ಟು ಅವರು ಆನಂದವಾಗಿ ವಿಧಾನಸೌಧದಲ್ಲಿ ಕಾಲ ಕಳೆದಿದ್ದರು ಎಂದು ಟೀಕಿಸಿದರು.

3 ವರ್ಷ ಹಾಗೇ ಬಿಟ್ಟರು..
2018ರಲ್ಲಿ ಸೋತಾಗ ಒಳ ಮೀಸಲಾತಿ ಕೊಡದ ಕಾರಣ ಎಡಗೈಯವರು ಮತ ಹಾಕದ ಕಾರಣ ಸೋತಿದ್ದಾಗಿ ಸೋನಿಯಾ ಗಾಂಧಿಯವರಿಗೆ ವರದಿ ನೀಡಿದ್ದರು. 2023ರಲ್ಲಿ ಅಧಿಕಾರಕ್ಕೆ ಬಂದರೆ ಮೊದಲನೇ ಅಧಿವೇಶನದಲ್ಲೇ ಒಳ ಮೀಸಲಾತಿ ಜಾರಿ ಬಗ್ಗೆ ಆಶ್ವಾಸನೆ ನೀಡಿದ್ದರು. ಅದನ್ನು ಮಾಡಿಲ್ಲ; ಈಗ 3 ವರ್ಷವಾಗಿದೆ. ಹಿಂದಿನ ಅಧಿವೇಶನದಲ್ಲಿ 6, 6, 5 ಎಂದು 3 ಕೆಟಗರಿ ಮಾಡಲಾಗಿತ್ತು. ಮಸೂದೆ ಅನುಮೋದಿಸಿ, ಮಾನ್ಯ ರಾಜ್ಯಪಾಲರ ಬಳಿ ಕಾಡಿಬೇಡಿ ನೀವು ಅನುಮೋದನೆ ಮಾಡಿಸಿದ್ದೀರಿ. ಅದನ್ನು ಹಾಗೇ ಬಿಟ್ಟಿದ್ದಾಗಿ ಆಕ್ಷೇಪಿಸಿದರು.

ಸಿದ್ದರಾಮಯ್ಯನವರೇ ಮೋಸದಾಟ ಬಿಡಿ..
ಎಸ್‍ಸಿ ಉಪ ಜಾತಿಗಳಲ್ಲಿ ಹೊಡೆÀದಾಟ ಹಚ್ಚುವುದು, ಕೋರ್ಟಿನಲ್ಲಿ ಬಿದ್ದು ಹೋಗಬೇಕೆಂಬ ಉದ್ದೇಶ ನಿಮ್ಮದು ಎಂದು ಟೀಕಿಸಿದರು. ನಾನು ಮಾಡಿದ್ದೆ; ಕೋರ್ಟಿನಲ್ಲಿ ನಿಲ್ಲಲಿಲ್ಲ ಮುನಿಯಪ್ಪ; ಮಹದೇವಪ್ಪ ಎನ್ನುವುದು. ಇಂಥ ಮೋಸದಾಟವನ್ನು ಸಿದ್ದರಾಮಯ್ಯನವರು ಬಿಡಲಿ ಎಂದು ಒತ್ತಾಯಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಶಾಸಕ ಮಾನಪ್ಪ ಡಿ ವಜ್ಜಲ್, ರಾಜ್ಯ ವಕ್ತಾರ ಹೆಚ್. ವೆಂಕಟೇಶ್ ದೊಡ್ಡೇರಿ ಅವರು ಉಪಸ್ಥಿತರಿದ್ದರು.

ಪರಿಶಿಷ್ಟ ಜಾತಿಯ 101 ಜಾತಿಗಳಿಗೂ ರಾಜ್ಯ ಸರಕಾರದಿಂದ ಅನ್ಯಾಯ: ಪಿ.ರಾಜೀವ್ಬೆಂಗಳೂರು: ಈ ಸರಕಾರವು 50 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತ...
25/04/2026

ಪರಿಶಿಷ್ಟ ಜಾತಿಯ 101 ಜಾತಿಗಳಿಗೂ ರಾಜ್ಯ ಸರಕಾರದಿಂದ ಅನ್ಯಾಯ: ಪಿ.ರಾಜೀವ್

ಬೆಂಗಳೂರು: ಈ ಸರಕಾರವು 50 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಆಗಬಾರದೆಂಬ ದುರುದ್ದೇಶದಿಂದ ಮೇಲಿಂದ ಮೇಲೆ ತಪ್ಪು ಮಾಡುತ್ತಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು ಆರೋಪಿಸಿದ್ದಾರೆ. ಮೀಸಲಾತಿ ವಿಚಾರದಲ್ಲಿ ಪರಿಶಿಷ್ಟ ಜಾತಿಯ 101 ಜಾತಿಗಳಿಗೂ ಈ ಸರಕಾರ ಅನ್ಯಾಯ ಮಾಡಿದೆ ಎಂದು ದೂರಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರಕಾರ ನೇಮಕಾತಿ ಮಾಡಲು ಸಿದ್ಧವಿತ್ತು. ಆದರೆ, ಕೋರ್ಟಿನ ತಡೆಯಾಜ್ಞೆ ಇದ್ದುದರಿಂದ ನೇಮಕಾತಿ ಆಗಿಲ್ಲ ಎಂದು ಯುವಜನತೆಗೆ ತಿಳಿಸಲು ಸರಕಾರ ಯೋಜಿಸಿದಂತಿದೆ ಎಂದು ಟೀಕಿಸಿದರು. 50 ಸಾವಿರಕ್ಕೂ ಹೆಚ್ಚು ಹುದ್ದೆಗೆ ನೇಮಕಾತಿ ಪ್ರಕಟಿಸಿದ್ದರೂ ವೇತನ ಕೊಡಲು ಹಣವನ್ನು ಬಜೆಟ್‍ನಲ್ಲಿ ಇಟ್ಟಿಲ್ಲ ಎಂದು ಆಕ್ಷೇಪಿಸಿದರು.
ದಲಿತರ ವಿಷಯ ಬಂದಾಗ ಅಡ್ವೊಕೇಟ್ ಜನರಲ್ ಅನ್ನು ಕೋರ್ಟಿಗೆ ಕಳಿಸುವ ಬದ್ಧತೆಯನ್ನು ಈ ಸರಕಾರ ತೋರಿಸಿಲ್ಲ ಎಂದು ಟೀಕಿಸಿದರು. ಮಧ್ಯಂತರ ತಡೆಯಾಜ್ಞೆ ಇದ್ದಾಗಲೇ ಅಧಿವೇಶನದಲ್ಲಿ ಮಸೂದೆ ಅಂಗೀಕಾರ ಮಾಡಿದ್ದಾರೆ. ಆಗ ಇವರ ತಲೆಯಲ್ಲಿ ಮಿದುಳು ಇರಲಿಲ್ಲವೇ ಎಂದು ಪ್ರಶ್ನಿಸಿದರು. ಶೇ 17 ಮೀಸಲಾತಿ ಮಾಡುವುದಾಗಿ ಹೇಳಿದ್ದರು. ನಿನ್ನೆ 15 ಶೇಕಡಾಕ್ಕೆ ಇಳಿಸಿದ್ದಾರೆ. ಹಾಗಿದ್ದರೆ ಸದನದ ಗೌರವ ಏನು ಉಳಿಯಿತು ಎಂದು ಪ್ರಶ್ನೆ ಹಾಕಿದರು.
ಬಸವರಾಜ ಬೊಮ್ಮಾಯಿಯವರ ಸರಕಾರವು ಮಾಧುಸ್ವಾಮಿ ಉಪ ಸಮಿತಿ ವರದಿಯನ್ನು ಆಧರಿಸಿ ವೈಜ್ಞಾನಿಕವಾಗಿ ಹಂಚಿಕೆ ಮಾಡಿತ್ತು. ಅವೆಲ್ಲವನ್ನೂ ಕಡಿಮೆ ಮಾಡಿದ್ದಾರೆ. ಎಡ, ಬಲ ಸೇರಿ ಎಲ್ಲರಿಗೂ ಅನ್ಯಾಯ ಮಾಡಿದ್ದಾರೆ. ಬೊಮ್ಮಾಯಿಯವರ ಸರಕಾರವು ಅಲೆಮಾರಿಗಳ ಪ್ರತ್ಯೇಕ ಗುಂಪು ಮಾಡಿದ್ದರು. ಇಲ್ಲಿ ಆ ಪ್ರತ್ಯೇಕ ಗುಂಪನ್ನು ಉಳಿಸಿಲ್ಲ ಎಂದು ತಿಳಿಸಿದರು. ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರವೇ ಮಾಡಿ ಮುಗಿಸಬೇಕೆಂದು ಒತ್ತಾಯಿಸಿದರು.

ಸರಕಾರದ ತೀರ್ಮಾನ ಒಪ್ಪಲು ಸಾಧ್ಯವಿಲ್ಲ- ಮಾನಪ್ಪ ವಜ್ಜಲ್
ಶಾಸಕ ಮಾನಪ್ಪ ವಜ್ಜಲ್ ಅವರು ಮಾತನಾಡಿ, ಸರಕಾರದ ನಿರ್ಣಯದಿಂದ ಪರಿಶಿಷ್ಟ ಜಾತಿ, ಪಂಗಡಗಳ ಮೇಲೆ ಪೆಟ್ಟು ಬೀಳಲಿದೆ ಎಂದು ಆಕ್ಷೇಪಿಸಿದರು. ಬೋವಿ, ಬಂಜಾರ ಸಮುದಾಯಕ್ಕೂ ಅನ್ಯಾಯ ಆಗಲಿದೆ ಎಂದು ತಿಳಿಸಿದರು. ಬೋವಿ, ಬಂಜಾರ, ಕೊರಮ, ಕೊರಚ ಸಮುದಾಯದ ಜಿಲ್ಲಾ ಮುಖಂಡರು ಮುಂದಿನ ಪೀಳಿಗೆಗೂ ಇದರಿಂದ ಅನ್ಯಾಯ ಆಗಲಿದ್ದು, ಕಾಂಗ್ರೆಸ್ ಸರಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ ಎಂದು ಗಮನ ಸೆಳೆದರು. ನಮ್ಮದೂ ಇದಕ್ಕೆ ಬೆಂಬಲ ಇದೆ ಎಂದು ಪ್ರಕಟಿಸಿದರು.
ಕಾಂಗ್ರೆಸ್ ಸರಕಾರದ ತೀರ್ಮಾನವನ್ನು ಒಪ್ಪಲು ಸಾಧ್ಯವಿಲ್ಲ. ಕೋರ್ಟ್ ಆದೇಶವನ್ನೂ ಬದಿಗಿಟ್ಟು ಸರಕಾರ ತೀರ್ಮಾನ ಮಾಡಿದೆ ಎಂದು ಟೀಕಿಸಿದರು.

ಕ್ಯಾಬಿನೆಟ್ ಸಭೆಗೆ ಚಕ್ಕರ್ ಹಾಕಿ ಹೈಕಮಾಂಡ್ ಗೇಟ್ ಕಾದರೂ ಪ್ರಯೋಜನವಿಲ್ಲ: ಬಿಜೆಪಿ...ಬೆಂಗಳೂರು: ಕ್ಯಾಬಿನೆಟ್ ಸಭೆಗೆ ಚಕ್ಕರ್ ಹಾಕಿ ಹೈಕಮಾಂಡ್ ...
25/04/2026

ಕ್ಯಾಬಿನೆಟ್ ಸಭೆಗೆ ಚಕ್ಕರ್ ಹಾಕಿ ಹೈಕಮಾಂಡ್ ಗೇಟ್ ಕಾದರೂ ಪ್ರಯೋಜನವಿಲ್ಲ: ಬಿಜೆಪಿ...

ಬೆಂಗಳೂರು: ಕ್ಯಾಬಿನೆಟ್ ಸಭೆಗೆ ಚಕ್ಕರ್ ಹಾಕಿ ಹೈಕಮಾಂಡ್ ಮನೆ ಗೇಟ್ ಕಾದರೂ ಪ್ರಯೋಜನವಾಗಿಲ್ಲ ಎಂದು ಕರ್ನಾಟಕ ಬಿಜೆಪಿ ಘಟಕ ಟ್ವೀಟ್ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಗೆ ಟಾಂಗ್ ಕೊಟ್ಟಿದೆ.

ಡಿಕೆ ಶಿವಕುಮಾರ್ ನಿನ್ನೆ ದೆಹಲಿ ಪ್ರವಾಸ ಮಾಡಿದ್ದರು. ಕೇಂದ್ರ ಸಚಿವ ರಾಜನಾಥ್ ಸಿಂಗ್ ಭೇಟಿ ಬಳಿಕ ಹೈಕಮಾಂಡ್ ನಾಯಕ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಇದರ ಬಗ್ಗೆ ಬಿಜೆಪಿ ವ್ಯಂಗ್ಯ ಮಾಡಿದೆ.ಡಿಕೆ ಶಿವಕುಮಾರ್ ಸಿಎಂ ಪದವಿಗಾಗಿ ಹೈಕಮಾಂಡ್ ನಾಯಕರನ್ನು ಪದೇ ಪದೇ ಭೇಟಿ ನೀಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ತಿವಿದಿದೆ. ರಾಜ್ಯದಲ್ಲಿ ಕ್ಯಾಬಿನೆಟ್ ಸಭೆಯಿತ್ತು. ಆದರೆ ಇದನ್ನು ಬಿಟ್ಟು ದೆಹಲಿಗೆ ತರಾತುರಿಯಲ್ಲಿ ಹೋಗಿರುವುದನ್ನು ವ್ಯಂಗ್ಯ ಮಾಡಿದೆ.
ಅತ್ಯಂತ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಬೇಕಿದ್ದ ಕ್ಯಾಬಿನೆಟ್ ಸಭೆಗೆ ಚಕ್ಕರ್ ಹಾಕಿ, ದೆಹಲಿಯ ಹೈಕಮಾಂಡ್ ನಾಯಕರ ಮನೆಯ ಗೇಟ್ ಕಾಯುವುದೆಂದರೆ, ಡಿಸಿಎಂ
ಡಿಕೆ ಶಿವಕುಮಾರ್ ಅವರಿಗೆ ಬಲು ಇಷ್ಟ ಅಲ್ವಾ’ ಎಂದು ಟಾಂಗ್ ಕೊಟ್ಟಿದೆ.

ಒಳ ಮೀಸಲಾತಿ ವಿಚಾರಕ್ಕೆ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾಕೆಂಬ ರೀತಿಯ ತೀರ್ಮಾನ: ಛಲವಾದಿ ನಾರಾಯಣಸ್ವಾಮಿಬೆಂಗಳೂರು: ಒಳ ಮೀಸಲಾತಿಗೆ ಸಂಬಂ...
25/04/2026

ಒಳ ಮೀಸಲಾತಿ ವಿಚಾರಕ್ಕೆ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾಕೆಂಬ ರೀತಿಯ ತೀರ್ಮಾನ: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಒಳ ಮೀಸಲಾತಿಗೆ ಸಂಬಂಧಿಸಿ ಎಲ್ಲರನ್ನೂ ಬೀದಿಯಲ್ಲಿ ನಿಲ್ಲಿಸಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾಕೆಂಬ ರೀತಿಯಲ್ಲಿ ತೀರ್ಮಾನವನ್ನು ಕಾಂಗ್ರೆಸ್ಸಿನ ಸಿದ್ದರಾಮಯ್ಯನವರ ಸರಕಾರ ಮಾಡಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ತೀರ್ಮಾನ ಮಾಡುವಾಗ ಉಪ ಮುಖ್ಯಮಂತ್ರಿಗಳು ಊರಲ್ಲೇ ಇರಲಿಲ್ಲ; ಬಹುಶಃ ಅವರಿಗೂ ಇದು ತೃಪ್ತಿಕರ ಅಲ್ಲ ಎಂಬುದು ಗೊತ್ತಿತ್ತು ಎಂದು ವಿಶ್ಲೇಷಿಸಿದರು. ಈ ಒಂದು ತೀರ್ಮಾನಕ್ಕೆ ಬರಲು ಇವರಿಗೆ 3 ವರ್ಷ ಬೇಕಾಗಿದೆ. ಮೂರೇ ತಿಂಗಳಲ್ಲಿ ಮಾಡಬಹುದಿತ್ತಲ್ಲವೇ ಎಂದು ಕೇಳಿದರು.
4 ಲಕ್ಷ ಹುದ್ದೆ ತುಂಬಲು ಒಳ ಮೀಸಲಾತಿ ಆಗಬೇಕಿತ್ತು. ಎರಡು ಗಂಡಾಂತರಕ್ಕೆ ಸರಕಾರ ಸಿಕ್ಕಿ ಹಾಕಿಕೊಂಡಿತ್ತು. ಒಂದು ಖಾಜಿ ನ್ಯಾಯದ ತೀರ್ಮಾನ ಇದು; ಪರಿಶಿಷ್ಟ ಜಾತಿಗಳು ಬೀದಿಗೆ ಬಿದ್ದ ಹಾಗಾಗಿದೆ ಎಂದು ತಿಳಿಸಿದರು. ಯುವಜನರು 56 ಸಾವಿರಕ್ಕೂ ಹೆಚ್ಚು ಹುದ್ದೆ ಭರ್ತಿಯ ನಿರೀಕ್ಷೆಯಲ್ಲಿದ್ದಾರೆ ಎಂದು ವಿವರಿಸಿದರು.
ಸಚಿವರು ಜನಾಂಗದ ಪರವಾಗಿ ನಿಲ್ಲಬೇಕಿತ್ತು. ಕಾಂಗ್ರೆಸ್ಸಿನ ಪರವಾಗಿ ಅಲ್ಲ; ಮೀಸಲಾತಿ ಕೇಳುವಲ್ಲಿ ಕಾಂಗ್ರೆಸ್ ಸಚಿವರು ಸಂಪೂರ್ಣವಾಗಿ ಎಡವಿದ್ದಾರೆ. ಇವರು ಸಮಾಜಗಳಿಗೆ ಅನ್ಯಾಯ, ದೋಖಾ ಮಾಡಿದ್ದಾರೆ ಎಂದು ಆಕ್ಷೇಪಿಸಿದರು. ಇದು ಕೋರ್ಟಿನಲ್ಲಿ ನಿಲ್ಲುವುದಿಲ್ಲ; ನಾವಿದನ್ನು ವಿರೋಧಿಸುತ್ತೇವೆ ಎಂದರು.
ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಅವರು ಮಾತನಾಡಿ, ಒಳ ಮೀಸಲಾತಿ ವಿಚಾರಕ್ಕೆ ಕೊನೆ ಮೊಳೆಯನ್ನು 3 ವರ್ಷಗಳ ಬಳಿಕ ಹೊಡೆದಿದ್ದಾರೆ ಎಂದರು. ದಲಿತರ ದಿಕ್ಕು ತಪ್ಪಿಸುವ ತೀರ್ಮಾನ ಮಾಡಿದ್ದಾರೆ ಎಂದು ಆಕ್ಷೇಪಿಸಿದರು. ಇದನ್ನು ವಿರೋಧಿಸಿ ಬಿಜೆಪಿ ಹೋರಾಟ ಮಾಡಲಿದೆ ಎಂದರು.
ಸಿದ್ದರಾಮಯ್ಯನವರು ಅನೇಕ ಆಯೋಗ ರಚಿಸಿ, ವರದಿ ಪಡೆದು ಅವೆಲ್ಲವನ್ನೂ ತಿರಸ್ಕರಿಸಿದ ದಾಖಲೆ ಬರೆದ ಮುಖ್ಯಮಂತ್ರಿ ಎಂದು ಟೀಕಿಸಿದರು. ಯಾವುದೇ ನ್ಯಾಯಮೂರ್ತಿಗಳು ಈ ಸರಕಾರದ ಆಯೋಗದ ಹುದ್ದೆಯನ್ನು ಸ್ವೀಕರಿಸಬಾರದು ಎಂದು ಮನವಿ ಮಾಡಿದರು.
ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಅವರು ಮಾತನಾಡಿ, ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದಾಗ 2022ರಲ್ಲಿ ಎಸ್‍ಸಿ, ಎಸ್‍ಟಿ ಮೀಸಲಾತಿಯನ್ನು ಹೆಚ್ಚಿಸಿದ್ದರು. ಅಲ್ಲಿಂದ 4 ಶೈಕ್ಷಣಿಕ ವರ್ಷಗಳಲ್ಲಿ ಎಸ್‍ಸಿ, ಎಸ್‍ಟಿ ಮಕ್ಕಳಿಗೆ ಇಂಜಿನಿಯರಿಂಗ್, ಮೆಡಿಕಲ್ ಸೀಟುಗಳು ಹೆಚ್ಚುವರಿ ಮೀಸಲಾತಿ ಆಧಾರದಲ್ಲಿ ಲಭಿಸಿವೆ ಎಂದು ಗಮನಕ್ಕೆ ತಂದರು. ಉದ್ಯೋಗ ಮೀಸಲಾತಿಗೆ ಇದ್ದ ತಡೆಯಾಜ್ಞೆ ತೆರವಿಗೆ ನೀವೇನು ಪ್ರಯತ್ನ ಮಾಡಿದ್ದೀರಿ ಎಂದು ಕೇಳಿದರು.
ಮಾಜಿ ಉಪ ಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ, ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಶಾಸಕ ಮಾನಪ್ಪ ಡಿ ವಜ್ಜಲ್, ರಾಜ್ಯ ವಕ್ತಾರ ಹೆಚ್. ವೆಂಕಟೇಶ್ ದೊಡ್ಡೇರಿ ಅವರು ಉಪಸ್ಥಿತರಿದ್ದರು.

ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ್ದು ಖಂಡನೀಯ: ನಿಖಿಲ್ ಕುಮಾರಸ್ವಾಮಿ ಆಕ್ರೋಶರಾಮನಗರ: ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ...
25/04/2026

ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ್ದು ಖಂಡನೀಯ: ನಿಖಿಲ್ ಕುಮಾರಸ್ವಾಮಿ ಆಕ್ರೋಶ

ರಾಮನಗರ: ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಿದ ಘಟನೆಯನ್ನು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ.

ಚನ್ನಪಟ್ಟಣದ ಬಿ.ವಿ.ಹಳ್ಳಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಇಂತಹ ಘಟನೆಗಳು ಅತ್ಯಂತ ವಿಷಾದನೀಯ. ಕಳೆದ ವರ್ಷವೂ ಇದೇ ರೀತಿಯ ಘಟನೆ ನಡೆದಿತ್ತು. ಈಗಲೂ ಅಂತಹದ್ದೇ ಘಟನೆ ಮರುಕಳಿಸೋದುಈ ಸರ್ಕಾರದ ನಾಚಿಕೆಗೇಡಿನ ಸಂಗತಿ.ಐದು ವಿದ್ಯಾರ್ಥಿಗಳ ಜನಿವಾರ ತೆಗೆಸಿರೋದು ಸಂಪೂರ್ಣ ಖಂಡನೀಯ. ವಿದ್ಯಾರ್ಥಿಗಳಲ್ಲಿ ಒಡಕು ಮೂಡಿಸುವ ಕೆಲಸವನ್ನು ಯಾರೂ ಮಾಡಬಾರದು" ಎಂದು ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಿಮ್ಮ ಗ್ಯಾರಂಟಿ ಬೇಡ, ರೈತರ ಜೀವಕ್ಕೆ ಗ್ಯಾರಂಟಿ ಕೊಡಿ : ನಿಖಿಲ್ ಕುಮಾರಸ್ವಾಮಿ ಆಕ್ರೋಶ..ಚನ್ನಪಟ್ಟಣ: ಇಲ್ಲಿನ ಶಾಸಕರು ಅಸಹಾಯಕರು, ಅರಣ್ಯ ಸಚಿ...
25/04/2026

ನಿಮ್ಮ ಗ್ಯಾರಂಟಿ ಬೇಡ, ರೈತರ ಜೀವಕ್ಕೆ ಗ್ಯಾರಂಟಿ ಕೊಡಿ : ನಿಖಿಲ್ ಕುಮಾರಸ್ವಾಮಿ ಆಕ್ರೋಶ..

ಚನ್ನಪಟ್ಟಣ: ಇಲ್ಲಿನ ಶಾಸಕರು ಅಸಹಾಯಕರು, ಅರಣ್ಯ ಸಚಿವರು ಇಲ್ಲಿಗೆ ಬಂದಿಲ್ಲ. ಸರ್ಕಾರ ಗ್ಯಾರಂಟಿ ಕೊಡುತ್ತೆ ಆದ್ರೆ ರೈತರಿಗೆ ಬೆಳೆ ಗ್ಯಾರಂಟಿ ಇಲ್ಲ. ಸಿಎಂ, ಡಿಸಿಎಂಗೆ ರೈತರ ಬಗ್ಗೆ ಕಾಳಜಿಯೇ ಇಲ್ಲ ಎಂದು ರಾಜ್ಯ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಶ್ರೀ ನಿಖಿಲ್ ಕುಮಾರಸ್ವಾಮಿ ಅವರು ಕಿಡಿಕಾರಿದರು.

ಬಿ.ವಿ.ಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಸಂಕಷ್ಟಕ್ಕೀಡಾಗಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಭೇಟಿ ಮಾಡಿ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ರಾಮನಗರ ಜಿಲ್ಲೆಯಲ್ಲಿ ಕಾಡಾನೆ ಸಮಸ್ಯೆ ತಾಂಡವವಾಡುತ್ತಿದೆ. ಜಿಲ್ಲೆಗೆ 120 ಕಿ.ಮೀ ರೈಲ್ವೇ ಬ್ಯಾರಿಕೇಡ್ ಬೇಕಿದ್ದು, ಆದರೆ ಬಜೆಟ್‌ನಲ್ಲಿ ಕಾಡಾನೆ ನಿಯಂತ್ರಣಕ್ಕೆ ಕೊಟ್ಟಿರುವ ಹಣ ಯಾವುದಕ್ಕೂ ಸಾಕಾಗುವುದಿಲ್ಲ. ಸರ್ಕಾರ ಇಡೀ ರಾಜ್ಯಕ್ಕೆ ಮೀಸಲಿಟ್ಟಿರುವುದು ಕೇವಲ 260 ಕೋಟಿ ರೂ. ಮಾತ್ರ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

*ಕಾಡಾನೆ ಹಾವಳಿ ನಿಯಂತ್ರಿಸುವಲ್ಲಿ ಸ್ಥಳೀಯ ಶಾಸಕರು ಅಸಹಾಯಕರಾಗಿದ್ದಾರೆ*

ಈ ಜಿಲ್ಲೆಯನ್ನು ಸ್ವತಃ ಉಪ ಮುಖ್ಯಮಂತ್ರಿಗಳೇ ಪ್ರತಿನಿಧಿಸುತ್ತಿದ್ದರೂ ರೈತರಿಗೆ ರಕ್ಷಣೆ ಸಿಕ್ಕಿಲ್ಲ. ಆದರೆ ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಅರಣ್ಯ ಸಚಿವರನ್ನು ಕರೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

*'ಬೆಳೆ ಗ್ಯಾರಂಟಿ' ಇಲ್ಲ, 'ಜೀವದ ಗ್ಯಾರಂಟಿ' ಇಲ್ಲ*

ಸರ್ಕಾರದ ಅರಣ್ಯ ಸಚಿವರನ್ನು ಇಲ್ಲಿಗೆ ಕರೆತರುವ ಕೆಲಸ ಆಗುತ್ತಿಲ್ಲ. ಇಲ್ಲಿಗೆ ಬಂದು ರೈತರ ಕಷ್ಟ ಕೇಳುವ ಸೌಜನ್ಯವೂ ಸಚಿವರಿಗೆ ಇಲ್ಲ. ನಿತ್ಯ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಸರ್ಕಾರ 'ಗ್ಯಾರಂಟಿಗಳನ್ನು ಕೊಡುತ್ತಿದ್ದೇವೆ' ಎನ್ನುತ್ತದೆ, ಆದರೆ ಅನ್ನದಾತರಿಗೆ ಯಾವ ಗ್ಯಾರಂಟಿ ಇಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಿಗೆ ಈ ಸಮಸ್ಯೆಗಳ ಬಗ್ಗೆ ಗಮನಹರಿಸಲು ಸಮಯವೇ ಇಲ್ಲ ಎಂದು ಅವರು ಕಿಡಿಕಾರಿದರು.

ರೈತರ ಈ ನ್ಯಾಯಯುತ ಹೋರಾಟಕ್ಕೆ ಪಕ್ಷತೀತವಾಗಿ ನಮ್ಮ ಸಂಪೂರ್ಣ ಬೆಂಬಲವಿದೆ. ಸರ್ಕಾರ ಈ ಕೂಡಲೇ ಎಚ್ಚೆತ್ತು ಇದಕ್ಕೆ ಶಾಶ್ವತ ಪರಿಹಾರ ಕೊಡಬೇಕೇಂಬುದು ನಿಖಿಲ್ ಕುಮಾರಸ್ವಾಮಿ ಅವರು ಆಗ್ರಹಿಸಿದರು.

*ರೈತರು ಬೀದಿಗೆ ಬಂದು ಕೂರುವುದು ನಮಗೆ ಇಷ್ಟವಿಲ್ಲ - ಹೆಚ್‌ಡಿಕೆ*

ಚನ್ನಪಟ್ಟಣ ತಾಲ್ಲೂಕಿನ ಬಿ.ವಿ.ಹಳ್ಳಿಯಲ್ಲಿ ಕಾಡಾನೆ ದಾಳಿ ವಿರುದ್ಧ ರೈತರು ನಡೆಸುತ್ತಿದ್ದ ಅಹೋರಾತ್ರಿ ಪ್ರತಿಭಟನೆ, ಕೇಂದ್ರ ಸಚಿವ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರ ಮನವಿ ಹಿನ್ನೆಲೆಯಲ್ಲಿ ಅಂತ್ಯಗೊಂಡಿತು.

ಪ್ರತಿಭಟನಾ ಸ್ಥಳದಲ್ಲಿದ್ದ ಶ್ರೀ ನಿಖಿಲ್ ಕುಮಾರಸ್ವಾಮಿ ಅವರ ಮೊಬೈಲ್‌ಗೆ ಕರೆ ಮಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು, ಲೌಡ್‌ಸ್ಪೀಕರ್ ಮೂಲಕ ರೈತರೊಂದಿಗೆ ನೇರವಾಗಿ ಮಾತುಕತೆ ನಡೆಸಿದರು.

"ರೈತರು ಬೀದಿಗೆ ಬಂದು ಕೂರುವುದು ನಮಗೆ ಇಷ್ಟವಿಲ್ಲ. ನಿಮ್ಮ ನೋವು, ಸಂಕಷ್ಟ ನನಗೆ ಸಂಪೂರ್ಣವಾಗಿ ಅರ್ಥವಾಗಿದೆ. ಶೀಘ್ರದಲ್ಲೇ ಕೇಂದ್ರ ಅರಣ್ಯ ಸಚಿವರನ್ನು ಕರ್ನಾಟಕಕ್ಕೆ ಕರೆತಂದು, ರಾಜ್ಯದ ಕಾಡಾನೆ ಸಮಸ್ಯೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸುತ್ತೇನೆ. ತಕ್ಷಣಕ್ಕೆ ಅರಣ್ಯ ಇಲಾಖೆಗೆ ತಾತ್ಕಾಲಿಕ ಕ್ರಮಕ್ಕೆ ಸೂಚಿಸಿದ್ದೇನೆ. ಈ ಬಿಸಿಲಿನಲ್ಲಿ ಪ್ರತಿಭಟನೆ ಬೇಡ, ದಯವಿಟ್ಟು ಕೈಬಿಡಿ" ಎಂದು ಸಚಿವರು ಮನವಿ ಮಾಡಿದರು.ಕೇಂದ್ರ ಸಚಿವರ ಮಾತಿಗೆ ಗೌರವ ನೀಡಿದ ರೈತರು ತಮ್ಮ ಅಹೋರಾತ್ರಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದರು.

ಅಂಬೇಡ್ಕರ್ ರವರ ಚಿಂತನೆಗಳು ಸರ್ವಕಾಲಿಕ ಪ್ರಸ್ತುತ: ಚಾಮರಾಜನಗರ ವಿವಿಯ ಕುಲಪತಿ ಪ್ರೊ. ಬಿ.ಎಲ್. ಗಂಗಾಧರ್ ಅಭಿಮತಅಂಬೇಡ್ಕರ್ ರವರ ಸಂವಿಧಾನದಿಂದ ...
25/04/2026

ಅಂಬೇಡ್ಕರ್ ರವರ ಚಿಂತನೆಗಳು ಸರ್ವಕಾಲಿಕ ಪ್ರಸ್ತುತ: ಚಾಮರಾಜನಗರ ವಿವಿಯ ಕುಲಪತಿ ಪ್ರೊ. ಬಿ.ಎಲ್. ಗಂಗಾಧರ್ ಅಭಿಮತ

ಅಂಬೇಡ್ಕರ್ ರವರ ಸಂವಿಧಾನದಿಂದ ಮಾತ್ರ ರಾಷ್ಟ್ರದ ಮಹತ್ತರ ಬೆಳವಣಿಗೆಗೆ ಸಾಕ್ಷಿ: ಕುಲಪತಿ ಪ್ರೊ. ಬಿ. ರಮೇಶ್

ಡಾ. ಬಿ.ಆರ್. ಅಂಬೇಡ್ಕರ್ ರವರ 135ನೇ ಜಯಂತ್ಯುತ್ಸವ ಹಾಗೂ "ಮನ ಮನೆಗೆ ಸಂವಿಧಾನ" ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು.

ಬೆಂಗಳೂರು: ಏ.24: ನಗರದ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ರಾಷ್ಟ್ರೀಯ ಅಂಬೇಡ್ಕರ್ ಸೇನೆ, ಡಾ.ಮನಮೋಹನ್ ಸಿಂಗ್ ನಗರ ವಿವಿಯ ಆಶ್ರಯದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಅವರ 135ನೇ ಜಯಂತಿ ಮತ್ತು ಮನ ಮನೆಗೆ ಸಂವಿಧಾನ ಎಂಬ ವಿಶೇಷ ರಾಷ್ಟ್ರೀಯ ವಿಚಾರ ಸಂಕಿರಣವನ್ನು ​ಉದ್ಘಾಟಿಸಿ ಮಾತನಾಡಿದ ಚಾಮರಾಜನಗರ ವಿವಿಯ ಕುಲಪತಿ ಪ್ರೊ. ಬಿ.ಎಲ್. ಗಂಗಾಧರ್ ಅವರು ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳುವ ಮೂಲಕ ಉನ್ನತ ಸ್ಥಾನಕ್ಕೇರಬೇಕು ಎಂದು ಸಲಹೆ ನೀಡಿದರು.

ನಂತರದಲ್ಲಿ ಮಾತನಾಡಿದ ಅವರು ರಾಷ್ಟ್ರ ನಿರ್ಮಾಣದ ಹರಿಕಾರ ಬಾಬಾಸಾಹೇಬರು, ಎಲ್ಲಾ ಕ್ಷೇತ್ರಗಳಲ್ಲಿಯೂ ಅವರ ಕೊಡುಗೆ ಇದೆ. ಅಂಬೇಡ್ಕರ್ ರವರ ಚಿಂತನೆಗಳು ಸರ್ವಕಾಲಿಕ ಪ್ರಸ್ತುತವಾಗಿದ್ದು, ಹಾಗೆ ವಿವಾಹ ಕಾಯಿದೆಗಳಲ್ಲಿ ಸಹ ಇವರ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಕೊಂಡರೆ ಮಾತ್ರ ಅಂಬೇಡ್ಕರ್ ಅವರಿಗೆ ಗೌರವ ನೀಡಿದಂತೆ ಎಂದು ತಿಳಿಸಿದರು.

ನಂತರದಲ್ಲಿ ಬೆಂಗಳೂರು ನಗರ ವಿವಿಯ ಕುಲಪತಿಯಾದ ಪ್ರೊ. ಬಿ. ರಮೇಶ್ ಅವರು ಮಾತನಾಡಿ, 'ಅಂಬೇಡ್ಕರ್ ಅವರು ಮಹಿಳಾ ಶಿಕ್ಷಣಕ್ಕೆ ನೀಡಿದ ಆದ್ಯತೆ ರಾಷ್ಟ್ರದಲ್ಲಿ ಮಹತ್ತರ ಬೆಳವಣಿಗೆಗೆ ಕಾರಣವಾಗಿದೆ. ಪ್ರತಿಯೊಬ್ಬರೂ ಕೂಡ ಭಾರತೀಯರು ಸಂವಿಧಾನದ ಮೌಲ್ಯಗಳನ್ನು ಅಳವಡಿಸಿಕೊಂಡರೆ ಮಾತ್ರ ಇಂತಹ ವಿಚಾರ ಸಂಕಿರಣಗಳು ಆಶಯ ಈಡೇರುವುದು ಎಂಬ ಅಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಬೆಂವಿವಿಯ ಗಣಕಯಂತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಬಿ.ಎಲ್. ಮುರಳೀಧರ್ ಅವರು ಇದೇ ವೇಳೆಯಲ್ಲಿ ಮಾತನಾಡಿದರು. ಪ್ರಾಸ್ತಾವಿಕ ನುಡಿಯನ್ನು ಡಾ. ಅರ್ಜುನ್ ಗೋಪಾಲಯ್ಯ, ಡಾ.ಸುಲೋಚನಾ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರು ವಿವಿಯ ಗಣಕಯಂತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಬಿ.ಎಲ್. ಮುರಳೀಧರ್, ಕರ್ನಾಟಕ ನ್ಯೂಸ್ ಬೀಟ್ ನ ಸಂಪಾದಕರು ಹಾಗೂ ಮುಖ್ಯಸ್ಥ ನಾಗರಾಜ್ ಅರೆಹೊಳೆ, ಸಿಂಡಿಕೇಟ್ ಸದಸ್ಯ ಡಾ. ಎಚ್. ಕೃಷ್ಣರಾಮ್, ಸಮತಾ ಸೈನಿಕ ದಳದ ಕಾರ್ಯಧ್ಯಕ್ಷ ಡಾ. ಗೋವಿಂದಯ್ಯ ಜಿ, ನಿವೃತ್ತ ಗ್ರಂಥಪಾಲಕ ಶ್ರೀ ನರೇಂದ್ರ, ದಲಿತ ಚಳುವಳಿ ನಾಯಕ ಡಾ.ಎಂ.ನಾಗೇಶ್, ದಲಿತ ಟೈಗರ್ಸ್ ಅರುಣ್, ಮಹಿಳಾ ಅಧ್ಯಕ್ಷರು ಕಮಲಮ್ಮ, ಮಹಾರಾಣಿ ಕಾಲೇಜಿನ ಪ್ರಾಂಶುಪಾಲರು ಪ್ರೊ.ಅಶೋಕ್, ಸಿಂಡಿಕೇಟ್ ಸದಸ್ಯ ಡಾ. ವೆಂಕಟಾಚಲ ವಿ.ಎಸ್, ಸಾಹಿತಿ ಸತ್ಯಮೂರ್ತಿ, ಎಸ್ ಕೆಂಚಯ್ಯ, ನವೀನ್, ಮುನಿರಾಜು, ಯಂಕೋಬ ಜೂರಟಗಿ, ಬೆಂಗಳೂರು ವಿವಿ ಪದಾಧಿಕಾರಿಗಳು ಮತ್ತು ರಾಷ್ಟ್ರೀಯ ಅಂಬೇಡ್ಕರ್ ಸೇನೆಯ ಸರ್ವ ಸದಸ್ಯರು ಮತ್ತಿತರರು ಈ ವಿಚಾರ ಸಂಕಿರಣದಲ್ಲಿ ಮತ್ತಿತರರು ಉಪಸ್ಥಿತರಿದ್ದರು.

ಪೋಟೋ ಕ್ಯಾಪ್ಶನ್:
ಜ್ಞಾನ ಜ್ಯೋತಿ ಸಭಾಂಗಣದಲ್ಲಿ ರಾಷ್ಟ್ರೀಯ ಅಂಬೇಡ್ಕರ್ ಸೇನೆ, ಡಾ.ಮನಮೋಹನ್ ಸಿಂಗ್ ನಗರ ವಿವಿಯ ಆಶ್ರಯದಲ್ಲಿ ನಡೆದ ಅಂಬೇಡ್ಕರ್ ಅವರ 135ನೇ ಜಯಂತಿ ಮತ್ತು ಮನ ಮನೆಗೆ ಸಂವಿಧಾನ ಎಂಬ ವಿಶೇಷ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಚಾಮರಾಜನಗರ ವಿವಿ ಕುಲಪತಿ ಪ್ರೊ. ಬಿ.ಎಲ್. ಗಂಗಾಧರ್, ಕರ್ನಾಟಕ ನ್ಯೂಸ್ ಬೀಟ್ ನ ಸಂಪಾದಕ ನಾಗರಾಜ್ ಅರೆಹೊಳೆ,ಡಾ. ಎಚ್. ಕೃಷ್ಣರಾಮ್, ಡಾ. ಗೋವಿಂದಯ್ಯ, ಪ್ರಾಧ್ಯಾಪಕ ಪ್ರೊ. ಬಿ.ಎಲ್. ಮುರಳೀಧರ್, ಡಾ.ಎಂ.ನಾಗೇಶ್, ಡಾ. ಸತ್ಯಮೂರ್ತಿ, ಎಸ್.ಕೆಂಚಯ್ಯ, ಡಾ. ಅರ್ಜುನ ಗೋಪಾಲಯ್ಯ ಮತ್ತಿತರ ಗಣ್ಯರು ಉದ್ಘಾಟಿಸಿದರು.

ಕೋಟ್:
ದೇಶದ ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಸಂವಿಧಾನದ ಮೌಲ್ಯಗಳನ್ನು ಪ್ರತಿಯೊಬ್ಬ ನಾಗರೀಕರಿಗೂ ತಲುಪಿಸುವುದು ಇಂತಹ ವಿಚಾರ ಸಂಕಿರಣಗಳ ಕಾರ್ಯಕ್ರಮದ ಮುಖ್ಯವಾಗಬೇಕು.
- ಪ್ರೊ. ಬಿ. ರಮೇಶ್, ಕುಲಪತಿಗಳು, ಡಾ. ಮನಮೋಹನ್ ಸಿಂಗ್ ನಗರ ವಿಶ್ವವಿದ್ಯಾಲಯ, ಬೆಂಗಳೂರು.

ಕೋಟ್:
ಸಹಸ್ರಾರು ವರ್ಷಗಳಿಂದ ಕೇವಲ ನಾಲ್ಕು ಗೋಡೆಯೊಳಗೆ ಸೀಮಿತವಾಗಿದ್ದ ಮಹಿಳೆಗೆ ಇಂದು ಮತದಾನ, ಶಿಕ್ಷಣ, ಆಸ್ತಿ ಎಲ್ಲ ರೀತಿಯ ಹಕ್ಕು, ಮಹಿಳೆಯರಿಗೆ ಉನ್ನತ ಹುದ್ದೆಗಳನ್ನು ಅಲಂಕರಿಸಿ, ಸಮಾಜದ ಮುಖ್ಯವಾಹಿನಿಯಲ್ಲಿ ಇರುವುದಕ್ಕೆ ಪ್ರಮುಖ ಕಾರಣವೇ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ.
- ಪ್ರೊ. ಬಿ.ಎಲ್. ಗಂಗಾಧರರ್, ಕುಲಪತಿಗಳು, ಚಾಮರಾಜನಗರ ವಿವಿ.

ರಜನೀಕಾಂತ್ ಮತದಾನ ಮಾಡುವಾಗ ಹಿಂದೆಯೇ ನಿಂತಿದ್ದ ಮಹಿಳೆ ಚೆನ್ನೈ: ತಮಿಳುನಾಡು  ವಿಧಾನಸಭೆ ಚುನಾವಣೆಯಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ಮತ ಚಲಾಯಿಸ...
25/04/2026

ರಜನೀಕಾಂತ್ ಮತದಾನ ಮಾಡುವಾಗ ಹಿಂದೆಯೇ ನಿಂತಿದ್ದ ಮಹಿಳೆ

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ಮತ ಚಲಾಯಿಸಿದ್ದು ಅವರು ಮತದಾನ ಮಾಡುವಾಗ ಹಿಂದೆ, ಮುಂದೆಯೇ ಜನರಿದ್ದರು.

ಇಂದು ತಮಿಳುನಾಡು ವಿಧಾನಸಭೆ ಮತದಾನ ಪ್ರಕ್ರಿಯೆ ಜಾರಿಯಲ್ಲಿದೆ. ಚೆನ್ನೈನಲ್ಲಿ ಇಂದು ಬೆಳಿಗ್ಗೆಯೇ ಸೂಪರ್ ಸ್ಟಾರ್ ರಜನೀಕಾಂತ್ ತಮ್ಮ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ. ರಜನೀಕಾಂತ್ ಮತ ಚಲಾಯಿಸುತ್ತಾರೆ ಎಂದು ತಿಳಿದು ಸಾಕಷ್ಟು ಮಾಧ್ಯಮ ಪ್ರತಿನಿಧಿಗಳೂ ಕ್ಯಾಮರಾ ಸಮೇತ ಅಲ್ಲಿದ್ದರು.ಇನ್ನು, ಮತಗಟ್ಟೆಯ ಸಿಬ್ಬಂದಿಗಳು, ಭದ್ರತಾ ಸಿಬ್ಬಂದಿಗಳೂ ನೆರೆದಿದ್ದರು. ರಜನೀಕಾಂತ್ ಮತ ಯಂತ್ರದ ಮುಂದೆ ನಿಂತು ಮತ ಚಲಾಯಿಸುವಾಗ ಮಾಧ್ಯಮಗಳು ಪಕ್ಕದಲ್ಲೇ ನಿಂತು ಫೋಟೋ, ವಿಡಿಯೋ ತೆಗೆಯಲು ನೂಕುನುಗ್ಗಲು ನಡೆಸಿದ್ದರು.ಇದು ಒಂದೆಡೆಯಾದರೆ ರಜನಿ ಪಕ್ಕದಲ್ಲೇ ಮಹಿಳೆಯೊಬ್ಬರು ನಿಂತಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದು ಗೌಪ್ಯ ಮತದಾನ ಹೇಗಾಗುತ್ತದೆ? ಇಷ್ಟೊಂದು ಜನ ಸೇರಲು ಅವಕಾಶ ನೀಡಿದ್ದು ಯಾಕೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.

Address

Bangalore

Alerts

Be the first to know and let us send you an email when VT NEWS KANNADA posts news and promotions. Your email address will not be used for any other purpose, and you can unsubscribe at any time.

Contact The Establishment

Send a message to VT NEWS KANNADA:

Share