Vikas.Tv

Vikas.Tv Contact information, map and directions, contact form, opening hours, services, ratings, photos, videos and announcements from Vikas.Tv, ANEKAL, Bangalore.

31/12/2025

208ನೇ ಬೀಮಾ ಕೋರೆಗಾವ್ ವಿಜಯೋತ್ಸವ ಪ್ರಯುಕ್ತ ಸಮತಾ ಸೈನಿಕ ದಳ ಹಾಗೂ ಬೋದಿಸತ್ವ ಟ್ರಸ್ಟ್ ವತಿಯಿಂದ ಮಕ್ಕಳಿಗೆ ಸೈನಿಕ ಮತ್ತು ಬೌದ್ದಿಕ ತರಬೇತಿ ಶಿಭಿರ

26/12/2025

ಅತ್ತಿಬೆಲೆಯಲ್ಲಿ ಜಯಭಾರತಿ ಶಾಲೆ ಹಿಂಭಾಗ ಭಗವದ್ಗೀತೆ ಕಾರ್ಯಕ್ರಮವನ್ನು ಯಶಸ್ಸು ಪಡಿಸಿದರು

26/12/2025

ವೈಟ್ ಅಕಾಡೆಮಿ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಆನೇಕಲ್ ದೊಡ್ಡಯ್ಯರವರ ಅಧ್ಯಕ್ಷತೆಯಲ್ಲಿ ನಡೆದ ೨೦೨೫-೨೬ನೇ ಸಾಲಿನ ಶಾಲಾ ವಾರ್ಷಿಕೋತ್ಸವ
ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ನಗರಸಭೆ ವ್ಯಾಪ್ತಿಯ ತಿರುಪಾಳ್ಯ ಗ್ರಾಮದ ಬಳಿಯಿರುವ ವೈಟ್ ಅಕಾಡೆಮಿ ಶಾಲೆಯ 2025-26ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭ ಸಡಗರ ಸಂಭ್ರಮದಿAದ ನೆರವೇರಿತು.
ಇನ್ನು ವಾರ್ಷಿಕೋತ್ಸವ ಸಮಾರಂಭ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ. ಹಾಡು. ನಾಟಕ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ಹಾಗೆಯೇ ವಿದ್ಯಾರ್ಥಿಗಳಿಗೆ ಪ್ರತಿಬಾ ಪುರಸ್ಕಾರ ವಿತರಣೆ ಮಾಡಲಾಯಿತು. ಇನ್ನು ಇದೇ ಸಂಧರ್ಭದಲ್ಲಿ ಕಾರ್ಯಕ್ರಮಕಕ್ಕೆ ಆಗಮಿಸಿ ಗಣ್ಯರು ವೈಟ್ ಅಕಾಡೆಮಿಯ ಶಾಲೆಯ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು.
ಇನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವೈಟ್ ಅಕಾಡೆಮಿ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಆನೇಕಲ್ ದೊಡ್ಡಯ್ಯರವರು ಮಾತನಾಡಿ ವೈಟ್ ಅಕಾಡೆಮಿ ಶಾಲೆಯಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣ ಕಲ್ಪಿಸಲಾಗಿದೆ ಜೊತೆಗೆ ಪಠ್ಯದ ಜೊತೆಗೆ ಕ್ರೀಡೆಗಳು ಸಹ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಇನ್ನು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ರಾಜ್ಯ ಚುನಾವಣಾ ಆಯೋಗದ ಆಯುಕ್ತರಾದ ಜೆ.ಎಸ್. ಸಂಗ್ರೇಶಿ ರವರು, ಬಿಎಂಟಿಸಿ ಕರ್ನಾಟಕ ಸರ್ಕಾರದ ಉಪಾಧ್ಯಕ್ಷರಾದ ನಿಕೇತ್ ರಾಜ್ ಮೌರ್ಯ, ಸಮಾಜ ಸೇವಕರಾದ ಕೆ.ಪಿ. ರಾಜಣ್ಣ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರಾದ ಬಿಎಸ್. ರಾಜ್ ಶೇಖರ್. ವೈಟ್ ಅಕಾಡೆಮಿಯ ಕಾರ್ಯದರ್ಶಿ ಶ್ರೀಮತಿ ಅರುಣಾ ಕುಮಾರಿರವರು. ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಪೂರ್ಣಿಮಾ ಹೆಗಡೆ ಹಾಗೂಶಿಕ್ಷಕರು ಹಾಗೂ ಪೋಷಕರು. ವಿದ್ಯಾರ್ಥಿಗಳು ಹಾಜರಿದ್ದರು

18/12/2025

ಮಾಯಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಾರಾಯಣಪ್ಪ ರವರ ಅಧ್ಯಕ್ಷತೆಯಲ್ಲಿ ನಡೆದ ೨೦೨೫-೨೬ನೇ ಸಾಲಿನ ಮಕ್ಕಳ ಗ್ರಾಮಸಭೆ

ಆನೇಕಲ್ ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಮಾಯಸಂದ್ರ ಗ್ರಾಮ ಪಂಚಾಯಿತಿಯ ವತಿಯಿಂದ
೨೦೨೫-೨೬ ನೇ ಸಾಲಿನ ಮಕ್ಕಳ ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು.
ಇನ್ನು ಮಕ್ಕಳ ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಮಾಯಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಾರಾಯಣಪ್ಪ ರವರು ವಹಿಸಿದ್ದರು.

ಇನ್ನು ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳು ತಮ್ಮ ಮತ್ತು ತಮ್ಮ ಗ್ರಾಮಗಳಲ್ಲಿನ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳ ಮತ್ತು ಇಲಾಖೆ ಅದಿಕಾರಿಗಳ ಮುಂದೆ ಹೇಳಿಕೊಂಡ ದೃಶ್ಯ ಕಂಡು ಬಂತು.

ಇನ್ನು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳು. ಪಿಡಿಒ ಶ್ರೀಮತಿ ವಿಜೇತ ಹಾಗೂ ವಿದ್ಯಾರ್ಥಿಗಳು. ಇಲಾಖೆ ಅದಿಕಾರಿಗಳು. ಶಿಕ್ಷಕರು ಭಾಗವಹಿಸಿದ್ದರು.

17/12/2025

ಡಿ. 20 ರಂದು ಅತ್ತಿಬೆಲೆಯಲ್ಲಿ ಜಯ ಕರ್ನಾಟಕ ಸಂಘಟನೆ ವತಿಯಿಂದ ಗಡಿನಾಡು ಕಲಾ ಉತ್ಸವ ಕಾರ್ಯಕ್ರಮ ಆಯೋಜನೆ

ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ವೃತ್ತದಲ್ಲಿ ಡಿಸೆಂಬರ್ ೨೦. ಶನಿವಾರ ರಂದು ಬೆಳಿಗ್ಗೆ ೧೦ ಗಂಟೆಗೆ ಜಯಕರ್ನಾಟಕ ಸಂಘಟನೆ ವತಿಯಿಂದ ೭೦ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಗಡಿನಾಡು ಕಲಾ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಕಿರಣ್ ಪ್ರಬಾಕರ್ ರೆಡ್ಡಿ ಮತ್ತು ಪದಾದಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇನ್ನು ಗಡಿನಾಡು ಕಲಾ ಉತ್ಸವ ಕಾರ್ಯಕ್ರಮ ಅಂಗವಾಗಿ ಅತ್ತಿಬೆಲೆ ಎಟುಬಿಯಿಂದ ಅತ್ತಿಬೆಲೆ ಗಡಿವರೆಗೆ ಮಹಿಳೆಯರು ತಲೆ ಮೇಲೆ ೧೦೧ ಕಳಸ ಹೋತ್ತು, ಹಲವು ಕಲಾತಂಡಗಳೊAದಿಗೆ ಮತ್ತು ಭುವನೇಶ್ವರಿ ರಥದ ಮೂಲಕ ಬೃಹತ್ ಕಾಲ್ನಡಿಗೆ ಜಾಥ ನಡೆಸಿ ನಂತರ ಗಡಿ ಗೋಪುರಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಇನ್ನು ಅತ್ತಿಬೆಲೆ ವೃತ್ತದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಸಾದಕರಿಗೆ ಸನ್ಮಾನ. ಮನರಂಜನೆ ಕಾರ್ಯಕ್ರಮ. ಅನ್ನದಾಸೋಹ ಕಾರ್ಯಕ್ರಮ ಆಯೋಜಿಸಲಾಗಿದ್ದು ಹಾಗೆಯೇ ಈ ಒಂದು ಕಾರ್ಯಕ್ರಮಕಕ್ಕೆ ಜಯಕರ್ನಾಟಕ ಸಂಘಟನೆಯ ಪ್ರಮುಖರು ಮತ್ತು ಜನಪ್ರತಿನಿಧಿಗಳು. ಹೋರಾಟಗಾರರು ಬಾಗವಹಿಸಲಿದ್ದು ಸಕಾಲಕ್ಕೆ ತಾಲ್ಲೂಕಿನ ಜನತೆ ಮತ್ತು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.ಜಯಕರ್ನಾಟಕ ಸಂಘಟನೆಯ ರಾಜ್ಯ ಉಪಾಧ್ಯಕ್ಷರದ ನಾಗನಾಯಕನಹಳ್ಳಿ ಅಂಬರೀಶ್. ಆನೇಕಲ್ ತಾಲ್ಲೂಕು ಅಧ್ಯಕ್ಷರಾದ ರವಿಕುಮಾರ್. ಮಹಿಳಾ ಘಟಕದ ಅಧ್ಯಕ್ಷ ಯಾಸ್ಮೀನ್ ತಾಜ್. ಮೂರ್ತಿ. ಲಷ್ಮೀ. ಬಂಗಾರ ಬಾಬು. ರಮೇಶ್. ಯುವ ಘಟಕ ಕಿಶೋರ್ ಮತ್ತಿತರು ಹಾಜರಿದ್ದರು.

15/12/2025

ಸರ್ಜಾಪುರ ಟೌನ್ ಆಸ್ಪತ್ರೆ ಯಲ್ಲಿ ಯಶಸ್ವಿಯಾಗಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಉಚಿತ ಮಧು ಮೇಹ ಮಾಸಿಕ ಶಿಬಿರ

ಆನೇಕಲ್ ತಾಲ್ಲೂಕಿನ ಸರ್ಜಾಪುರ ಗ್ರಾಮದಲ್ಲಿರುವ ಟೌನ್ ಆಸ್ಪತ್ರೆಯ ಆವರಣದಲ್ಲಿ ಸರ್ಜಾಪುರ ಲಯನ್ಸ್ ಕ್ಲಬ್ ಮತ್ತು ಟೌನ್ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಉಚಿತ ಮಧು ಮೇಹ ಮಾಸಿಕ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಇನ್ನು ಉಚಿತ ಮಧುಮೇಹ ಮಾಸಿಕ ಶಿಬಿರವನ್ನು ಟೌನ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ.||ರಾಧಿಕ ದೇವಿ ಡಾ.||ಪರಮೇಶ್ ದಂಪತಿಗಳು ಮತ್ತು ಚಲನ ಚಿತ್ರ ನಿರ್ಮಾಪಕರಾದ ಬಿ.ಎನ್ ಗೋವಿಂದ್ ರಾಜ್ ರವರು ಉದ್ಘಾಟಿಸಿ ಶುಭ ಹಾರೈಸಿದರು.

ಈ ವೇಳೆ ಟೌನ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ|| ಪರಮೇಶ್ ರವರು ಮಾತನಾಡಿ ಆಸ್ಪತ್ರೆಗಳು ಎಂದರೇ ರೋಗಿಗಳ ಅನಾರೋಗ್ಯವನ್ನು ಸುಧಾರಿಸಿ ಮರಳಿ ಆರೋಗ್ಯವಂತರಾಗಿ ಮಾಡಿ ಮನೆಗೆ ಹಿಂತಿರುಗಿಸುವುದು ಸರ್ವೇ ಸಾಮಾನ್ಯವಾದ ಸಂಗತಿಯಾಗಿದೆ. ಅದರೇ ಸರ್ಜಾಪುರ ಟೌನ್ ಆಸ್ಪತ್ರೆಯಲ್ಲಿ ರೋಗಿಗಳ ಅನಾರೋಗ್ಯವನ್ನು ವಾಸಿ ಮಾಡುವುದರ ಜೊತೆಗೆ ಅವರ ಮನಸ್ಸುನ್ನು ಮೃದುಗೊಳಿಸಿ, ಆತ್ಮಸ್ಥೈರ್ಯವನ್ನು ತುಂಬಿ ಅವರೊಂದಿಗೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಖೇನ ಅವರ ಬಾಳಲ್ಲಿ ನವ ಚೈತನ್ಯವನ್ನು ತುಂಬುವ ಕೆಲಸವನ್ನು ಮಾಡಲಾಗುತ್ತಿದ್ದು ಈ ನಿಟ್ಟಿನಲ್ಲಿ ಪ್ರತಿ ತಿಂಗಳಿನ ೧೫ನೇ ತಾರೀಖಿನಂದು ಮಾಸಿಕ ಮಧುಮೇಹ ಶಿಬಿರವನ್ನು ಹಮ್ಮಿಕೊಳ್ಳುವ ಜೊತೆಗೆ ಅವರೊಂದಿಗೆ ಭೋಜನವನ್ನು ಸಹ ಸವಿಯುತ್ತೇವೆ ಎಂದು ಹೇಳಿದರು.

15/12/2025

ಟೈಗರ್ ಕ್ಲಾಸಿಕ್ ೨.೦ ವತಿಯಿಂದ ಮಿಸ್ಟರ್ ಸೌತ್ ಇಂಡಿಯಾ ದೇಹ ದಾಡ್ಯ ಸ್ವರ್ದೇಯನ್ನು ಆಯೋಜಿಸಲಾಗಿತ್ತು.

ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಪುರಸಭೆ ವ್ಯಾಪ್ತಿಯ ಕಿತ್ತಗಾನಹಳ್ಳಿ ಗ್ರಾಮದಲ್ಲಿ ಟೈಗರ್ ಕ್ಲಾಸಿಕ್ ೨.೦ ವತಿಯಿಂದ ಮಿಸ್ಟರ್ ಸೌತ್ ಇಂಡಿಯಾ ದೇಹ ದಾಡ್ಯ ಸ್ವರ್ದೇಯನ್ನು ಆಯೋಜಿಸಲಾಗಿತ್ತು.
ಇನ್ನು ಯುವ ಪ್ರತಿಭೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಒಂದು ದೇಹ ದಾಡ್ಯ ಸ್ವರ್ದೇಯನ್ನು ಆಯೋಜಿಸಲಾಗಿತ್ತು. ಇನ್ನು ತಮಿಳುನಾಡು. ಆಂದ್ರ. ಕೇರಳ. ಕರ್ನಾಟಕ ಸೇರಿದಂತೆ ಐದು ರಾಜ್ಯದ ಸರ್ದೇಗಳು ಈ ಒಂದು ದೇಹ ದಾಡ್ಯ ಸ್ವರ್ದೇಯಲ್ಲಿ ಬಾಗವಹಿಸಿದ್ದರು. ಸುಮಾರು ೧೫೦ಕ್ಕೂ ಹೆಚ್ಚು ಸ್ವರ್ದಿಗಳು ಬಾಗವಹಿಸಿದ್ದು ರೋಮಾಂಚನವಾಗಿತ್ತು. ಇನ್ನು ಮೊದಲನೆ ವರ್ಷ ಮಿಸ್ಟರ್ ಕರ್ನಾಟಕ ಆಯೋಜಿಸಲಾಗಿತ್ತು ಎರಡನೇ ವರ್ಷ ಮಿಸ್ಟರ್ ಸೌತ್ ಇಂಡಿಯಾ ದೇಹ ದಾಡ್ಯ ಸ್ವರ್ದೇಯನ್ನು ಏರ್ಪಡಿಸಲಾಗಿತ್ತು. ಇನ್ನು ಗೆದ್ದಂತಹವರಿಗೆ ಗಣ್ಯರು ಹಾಗೂ ಆಯೋಜಕರು ಬಹುಮಾನವನ್ನು ವಿತರಣೆ ಮಾಡಲಾಯಿತು.
ಇನ್ನು ಈ ಒಂದು ದೇಹ ದಾಡ್ಯ ಸ್ವರ್ದೇಯನ್ನು ವಿವೇಕ್. ಅರುಣ್. ಗೋಫಿ. ಅಜಯ್. ಸಂದೀಪ್, ಮುರಳಿ. ಅಂಕಿತ್, ವಿಜಯ್ ಮತ್ತು ಅವರ ತಂಡದವರು ಆಯೋಜಿಸಲಾಗಿತ್ತು.
ಇನ್ನು ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ರಾಮೋಜಿ ಗೌಡರು ಯುವ ನಾಯಕರಾದ ಉಮಾಪತಿ ಶ್ರೀನಿವಾಸ್ ಗೌಡ. ಆರ್.ಕೆ.ರಮೇಶ್. ಹುಸ್ಕೂರು ಮದ್ದೂರಣ್ಣ. ಉಲ್ಲಾಸ್ ಶಿವಣ್ಣ. ವಿಧಾನ ಪರಿಷತ್ ಸದಸ್ಯ ರಾಮೋಜಿ ಗೌಡರು ಬಿ.ಎಂ. ರಾಮಚಂದ್ರ. .ಚೂಡಸಂದ್ರ ರಘು. ಕಾಚನಾಯಕನಹಳ್ಳಿ ಕಿರಣ್. ಬೊಮ್ಮಸಂದ್ರ ಗೋಪಾಲ್. ಆನಂದ್ ಬಾಬು. ರಘು . ಸರ್ಕಲ್ ವೆಂಕಿ. ಗೂಳಿಮಂಗಲ ನಾಗೇಶ್. ಮನೋಹರ್. ಸೂರ್ಯ. ಗುಡ್ಟಹಟ್ಟಿ ಅನಿಲ್. ಜಿಗಳ ಬಾಬು. ಬಿದರಗುಪ್ಪೆ ಅಶೋಕ್. ಸುಮನ್ ರೆಡ್ಡಿ. ಮಂಜುಳ. ಲಷ್ಮೀ. ಸುದರ್ಶನ್. ರಾಮ್ ಕುಮಾರ್. ಕೆ.ಎಂ. ರಾಜು. ನವೀನ್ ಮತ್ತಿತರು ಹಾಜರಿದ್ದರು.

13/12/2025

ಓಂ ಶಕ್ತಿ ದೇವಿ ನೂತನ ದೇವಾಲಯದಲ್ಲಿ ಶ್ರದ್ದಾಭಕ್ತಿಯಿಂದ ನಡೆದ ೪೮ನೇ ದಿನದ ಮಂಡಲ ಪೂಜಾ ಕಾರ್ಯಕ್ರಮ

11/12/2025

ನಟ ದರ್ಶನ್ ರವರ ಡೆವಿಲ್ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಕಲಿಕಾ ಸಾಮಾಗ್ರಿ ವಿತರಣೆ ಮತ್ತು ಬಿರಿಯಾನಿ ಊಟ ಆಯೋಜನೆ

ಚಾಲೆಂಜಿಗ್ ಸ್ಟಾರ್ ದರ್ಶನ್ ರವರ ಡೆವಿಲ್ ಕನ್ನಡ ಸಿನಿಮಾ ಇಂದು ರಾಜ್ಯದ ಹಲವು ಚಿತ್ರ ಮಂದಿರಗಳಲ್ಲಿ ಬಿಡುಗಡೆ ಗೊಂಡಿದ್ದು ಇನ್ನು ಡೆವಿಲ್ ಚಿತ್ರವನ್ನು ವೀಕ್ಷಣೆ ಮಾಡಿದ ಪೇಕ್ಷಕರು ಹಾಗೂ ದರ್ಶನ್ ಅಭಿಮಾನಿಗಳು ಪುಲ್ ಪಿದಾ ಆಗಿದ್ದಾರೆ. ಇನ್ನು ಡೆವಿಲ್ ಚಿತ್ರವು ಶತದಿನೋತ್ಸವ ಪೂರೈಸಲಿ ಎಂದು ಶುಭ ಹಾರೈಸಿ ಇಂದು ಆನೇಕಲ್ ತಾಲ್ಲೂಕಿನ ಬಿದರಗುಪ್ಪೆ ಗೇಟ್ ಬಳಿಯಲ್ಲಿ ಬಿದರಗುಪ್ಪೆ ದರ್ಶನ್ ಪ್ಯಾನ್ಸ್ ಮತ್ತು ಬಿದರಗುಪ್ಪೆ ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಆರ್.ಮೂರ್ತಿ ರವರ ನೇತೃತ್ವದಲ್ಲಿ ಶಾಲಾ ಮಕ್ಕಳಿಗೆ ಕಲಿಕಾ ಸಾಮಾಗ್ರಿ ವಿತರಣೆ, ಸಾರ್ವಜನಿಕರಿಗೆ ಬಿರಿಯಾನಿ ಊಟ. ಸಿಹಿ ವಿತರಣೆ ಸೇರಿದಂತೆ ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಇನ್ನು ಇದೇ ಸಂಧರ್ಭದಲ್ಲಿ ಚಾಲೆಂಜಿಗ್ ಸ್ಟಾರ್ ದರ್ಶನ್ ರವರ ಅಭಿಮಾನಿಗಳು ಬಾಸ್ ಬಾಸ್ ಡಿ ಬಾಸ್ ಎಂದು ಘೋಷಣೆ ಕೂಗಿದ ದೃಶ್ಯ ಕಂಡು ಬಂತು.

ಇನ್ನು ಕಾರ್ಯಕ್ರಮದಲ್ಲಿ ಬಿದರಗುಪ್ಪೆ ಡಿ ಬಾಸ್ ಅಭಿಮಾನಿ ಬಳಗದ ಗೋವರ್ಧನ್. ಶಿವರಾಜ್. ಕೃಷ್ಣಮೂರ್ತಿ. ಯಲ್ಲಪ್ಪ . ಶರೀಫ್. ರಾಜು. ಪವನ್. ಮುಗಳೂರು ಆನಂದ್ ಹಿತೇಶ್. ರಾಹುಲ್. ದಿಲೀಪ್ ಹಾಗೂ ಬಿದರಗುಪ್ಪೆ ಡಿ.ಬಾಸ್ ಅಭಿಮಾನಿ ಬಳಗದವರು ಮತ್ತು ಸಾರ್ವಜನಿಕರು ಬಾಗವಹಿಸಿದ್ದರು.

04/12/2025

ದಲಿತರ ಪರ ಇರುವ ಸಿದ್ದರಾಮಯ್ಯರವರು ದಲಿತರಿಗೆ ಸಿಎಂ ಸ್ಥಾನ ನೀಡುವಂತೆ ಆಗ್ರಹಿಸಿದ ಮರಸೂರು ಡಾ|| ಎಂ.ಕೃಷ್ಣಪ್ಪ

ರಾಜ್ಯದಲ್ಲಿ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿ ಡಿ.08 ರಂದು ಡಾ|| ಬಿ.ಆರ್.ಅಂಬೇಡ್ಕರ್ ಯುವಕರ ಸಂಘದಿಂದ ಪ್ರತಿಭಟನೆ

ರಾಜ್ಯದಲ್ಲಿ ಕಾಂಗ್ರೆಸ್ ರ‍್ಕಾರ ಬರಲು ಪ್ರಮುಖ ಕಾರಣ ರ‍್ತರಾದ ದಲಿತ ಸಮುದಾಯಕ್ಕೆ ಮುಖ್ಯ ಮಂತ್ರಿ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಒತ್ತಾಯಿಸಿ ಆನೇಕಲ್ ಡಾ|| ಬಿ.ಆರ್. ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ಡಿಸೆಂಬರ್ 08 ರಂದು ಆನೇಕಲ್ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು ಈ ಒಂದು ಪ್ರತಿಭಟನೆಗೆ ದಲಿತಪರ ಸಂಘಟನೆಯ ಮುಖಂಡರು ಮತ್ತು ದಲಿತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಡಾ|| ಬಿ.ಆರ್. ಅಂಬೇಡ್ಕರ್ ರವರು ಸಂವಿದಾನ ಬದ್ದವಾಗಿ ನಮಗೆ ನೀಡಿರುವ ನಮ್ಮ ಹಕ್ಕುಗಳನ್ನು ನಾವು ಪಡೆದು ಕೊಳ್ಳುವ ಅವಶ್ಯಕತೆ ಇದೆ ಎಂದು ಆನೇಕಲ್ ಡಾ|| ಬಿ.ಆರ್. ಅಂಬೇಡ್ಕರ್ ಯುವಕರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಮರಸೂರು ಡಾ|| ಎಂ.ಕೃಷ್ಣಪ್ಪ ಹಾಗೂ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಬೊಮ್ಮಸಂದ್ರ ರೇಣುಕಾ ರವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.ಇನ್ನು ಪತ್ರಿಕಾ ಗೋಷ್ಠಿಯಲ್ಲಿ ಆನೇಕಲ್ ಡಾ|| ಬಿ.ಆರ್. ಅಂಬೇಡ್ಕರ್ ಯುವಕರ ಸಂಘದ ರಾಜ್ಯ ಗೌರವಾಧ್ಯಕ್ಷ ಕಾಳಯ್ಯ. ರಾಜ್ಯ ಉಪಾಧ್ಯಕ್ಷ ಮೀಸೆ ರಾಮಣ್ಣ. ರಾಜ್ಯ ಸಂಘಟನಾ ಕರ‍್ಯರ‍್ಶಿ ಭದ್ರಯ್ಯ ಮತ್ತಿತರು ಹಾಜರಿದ್ದರು.

04/12/2025

ಆನೇಕಲ್ ತಾಲ್ಲೂಕಿನಲ್ಲಿ ೧೫ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದನ್ನು ಖಂಡಿಸಿದ ಜಯ ಕರ್ನಾಟಕ ಸಂಘಟನೆ

Address

ANEKAL
Bangalore
562107

Website

Alerts

Be the first to know and let us send you an email when Vikas.Tv posts news and promotions. Your email address will not be used for any other purpose, and you can unsubscribe at any time.

Share